ಶಾರ್ಟ್ ಸಕ್ರ್ಯೂಟ್; ಮನೆಗೆ ಹಾನಿ
ಕೊಡಗು

ಶಾರ್ಟ್ ಸಕ್ರ್ಯೂಟ್; ಮನೆಗೆ ಹಾನಿ

June 21, 2018

ಮಡಿಕೇರಿ: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮನೆಯೊಂದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಮಡಿಕೇರಿ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಈ ಘಟನೆ ನಡೆದಿದ್ದರಿಂದ ಭಾರೀ ಅನಾ ಹುತವೊಂದು ತಪ್ಪಿದಂತಾಗಿದೆ. ಚಾಮುಂ ಡೇಶ್ವರಿ ನಗರದ ನಿವಾಸಿ ಪ್ರಮೀಳಾ ಎಂಬು ವರಿಗೆ ಸೇರಿದ ಮನೆಯೇ ಬೆಂಕಿಗೆ ಆಹುತಿ ಯಾಗಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯೊಳಗಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಂದಾಜು 2 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಮನೆ ಮಾಲಕಿ ಪ್ರಮೀಳಾ ಅವರಿಗೆ ಕೆಲ ದಿನಗಳ ಹಿಂದೆ ಅಪಘಾತ ಸಂಭವಿಸಿದ್ದು, ವಿಶ್ರಾಂತಿ ಗಾಗಿ ತಮ್ಮ ಮಗಳ ಮನೆಯಲ್ಲಿ ವಾಸವಾಗಿದ್ದರು.

ಮಂಗಳವಾರ ರಾತ್ರಿ 12ಗಂಟೆಯ ಸಮ ಯದಲ್ಲಿ ಮನೆಯಿಂದ ಬೆಂಕಿ ಸಹಿತ ದಟ್ಟ ಹೊಗೆ ಬರುತ್ತಿರುವುದನ್ನು ಗಮನಿಸಿದ, ಸ್ಥಳೀಯ ನಿವಾಸಿಗಳು ತಕ್ಷಣವೇ ಪೊಲೀಸರ ಮೂಲಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾದರು.

ಈ ಹೊತ್ತಿಗಾಗಲೇ ಮನೆಯ ಮೇಲ್ಚಾವಣಿ , ಹಾಸಿಗೆ, ದಿನ ಬಳಕೆಯ ವಸ್ತು ಗಳೆಲ್ಲ ಸುಟ್ಟು ಬೂದಿಯಾಗಿದ್ದವು. ವಿಷಯ ಅರಿತ ನಗರಸಭಾ ಸದಸ್ಯೆ ಜುಲೇಕಾಬಿ ಮತ್ತು ನಗರಸಭಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

Translate »