ದಕ್ಷಿಣ ಕೊಡಗಲ್ಲಿ ಮತ್ತೆ ಹುಲಿ ದಾಳಿ; ಹಸು ಬಲಿ
ಕೊಡಗು

ದಕ್ಷಿಣ ಕೊಡಗಲ್ಲಿ ಮತ್ತೆ ಹುಲಿ ದಾಳಿ; ಹಸು ಬಲಿ

June 21, 2018

ಗೋಣಿಕೊಪ್ಪಲು:  ಶ್ರೀಮಂಗಲ ಗ್ರಾಪಂ ವ್ಯಾಪ್ತಿಯ ಬೀರುಗ ಗ್ರಾಮದ ನಿವಾಸಿ ಅಜ್ಜಮಾಡ ವಿಜು ಕಾರ್ಯಪ್ಪನವರ ಎರಡು ಹಾಲು ಕರೆಯುವ ಹಸು ವಿನ ಮೇಲೆ ದಾಳಿ ನಡೆಸಿರುವ ಹುಲಿಯು ಎರಡು ಹಸುಗಳನ್ನು ಕೊಂದು ಹಾಕಿದೆ. ಮನೆಯ ಅನತಿ ದೂರದಲ್ಲಿರುವ ಕೊಟ್ಟಿಗೆ ಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿ ಒಂದು ಹಸುವನ್ನು ಕೊಟ್ಟಿಗೆಯಲ್ಲಿ ಕೊಂದು ಹಾಕಿದೆ. ಮತ್ತೊಂದು ಹಾಲು ಕರೆಯುವ ಹಸುವನ್ನು ಕೊಟ್ಟಿಗೆಯಿಂದ ಎಳೆದೊಯ್ದು ಸಮೀಪದ ಗದ್ದೆ ಬಯ ಲಿನ ಪೊದೆಯಲ್ಲಿ ಅರ್ಧ ಭಾಗವನ್ನು ತಿಂದು ಹಾಕಿದೆ.

ಮುಂಜಾನೆ ಕೊಟ್ಟಿಗೆಗೆ ಆಗಮಿಸಿದ್ದ ಮನೆ ಮಾಲೀಕರಿಗೆ ಕೊಟ್ಟಿಗೆಯ ಬಾಗಿ ಲಿನಲ್ಲಿಯೇ ಹಸು ಸತ್ತು ಬಿದ್ದಿರುವುದು ಕಂಡು ಬಂದಿದೆ. ಕೊಟ್ಟಿಗೆಯಲ್ಲಿದ್ದ ಉಳಿದ ಹಸುಗಳು ರೋಧಿಸುತ್ತಿದ್ದವು. ಹಾಲು ಕರೆ ಯುವ ಹಸುವಾಗಿದ್ದರಿಂದ ಕೆಚ್ಚಲಿನಲ್ಲಿ ಹಾಲು ತೊಟ್ಟಿಕ್ಕುತ್ತಿತ್ತು. ಹಸುಗಳನ್ನು ಲೆಕ್ಕ ಹಾಕಿದಾಗ ಮತ್ತೊಂದು ಹಸು ಕಾಣೆಯಾಗಿ ರುವ ಬಗ್ಗೆ ಹುಡುಕಾಟ ನಡೆಸಿದಾಗ ಸಮೀ ಪದ ಗದ್ದೆಯ ಬಯಲಿನ ತೋಡಿನ ಸಮೀಪ ಮತ್ತೊಂದು ಹಸುವು ಸತ್ತು ಬಿದ್ದಿರುವುದು ಗೋಚರಿಸಿದೆ. ಬೆಂಗಳೂರಿನಲ್ಲಿ ಉದ್ಯೋಗ ದಲ್ಲಿದ್ದ ವಿಜು ಅವರು ತಮ್ಮ ಉದ್ಯೋಗ ತ್ಯಜಿಸಿ ಗ್ರಾಮಕ್ಕೆ ಆಗಮಿಸಿ ಹೈನುಗಾರಿಕೆ ಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಅಲ್ಲದೆ ಹೆಚ್ಚಾಗಿ ತನ್ನ ಹಸು, ಕರುಗಳನ್ನು ಪ್ರೀತಿಸುತ್ತಿದ್ದರು. ರೈತರಾದ ವಿಜು ಅವರು ತನ್ನ ಕೊಟ್ಟಿಗೆಯಲ್ಲಿ 30ಕ್ಕೂ ಅಧಿಕ ಹಸು ಗಳನ್ನು ಸಾಕಾಣೆ ಮಾಡುತ್ತಿದ್ದರು. ಇದ ರಿಂದ ಪ್ರತಿನಿತ್ಯ ನೂರಾರು ಲೀಟರ್ ಹಾಲನ್ನು ಮಾರಾಟ ಮಾಡುತ್ತಿದ್ದರು. ಬ್ರಹ್ಮ ಗಿರಿ ಮೀಸಲು ಅರಣ್ಯದಿಂದ ಹುಲಿಯು ಈ ಭಾಗಕ್ಕೆ ಆಗಮಿಸಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆ ಸಿದರು. ಹುಲಿ ಸೆರೆ ಹಿಡಿಯಲು ಬೋನ್ ಅನ್ನು ಸ್ಥಳದಲ್ಲಿ ಇಡುವ ಭರವಸೆ ನೀಡಿ ಮಧ್ಯಾಹ್ನದ ವೇಳೆಗೆ ಬೋನ್ ಅನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳದಲ್ಲಿ ಇಡುವ ಮೂಲಕ ಹುಲಿ ಸೆರೆ ಹಿಡಿ ಯುವ ಪ್ರಯತ್ನ ಮಾಡಿದರು.

ಮಾಹಿತಿ ತಿಳಿದ ಜೆಡಿಎಸ್‍ನ ಜಿಲ್ಲಾಧ್ಯಕ್ಷ ರಾದ ಮೇರಿಯಂಡ ಸಂಕೇತ್ ಪೂವಯ್ಯ ಬೀರುಗ ಗ್ರಾಮಕ್ಕೆ ತೆರಳಿ ಹಸು ಕಳೆದು ಕೊಂಡ ಕುಟುಂಬದವರನ್ನು ಮಾತನಾಡಿಸಿ ದರು. ಅರಣ್ಯ ಇಲಾಖಾ ಹಿರಿಯ ಅಧಿ ಕಾರಿಗಳ ಕಾರ್ಯ ವೈಖರಿ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯ ಸಿಸಿಎಫ್ ಆಗಿರುವ ಲಿಂಗರಾಜ್ ಅವರು ದಕ್ಷಿಣ ಕೊಡಗಿನಲ್ಲಿ ನಿರಂತರ ಹುಲಿ ಹಾವಳಿಯಿಂದ ರೈತರ ಜಾನುವಾರು ಗಳು ಬಲಿಯಾಗುತ್ತಿದ್ದರೂ ಇದರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ತಕ್ಷಣ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಕಿರಿಯ ಅರಣ್ಯ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ತಂತ್ರಜ್ಞಾನದ ಮೂಲಕ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಇಂತಹ ಅಧಿಕಾರಿಗಳ ಮೇಲೆ ಸಚಿವರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ಕಳೆದ ನಾಲ್ಕು ದಿನಗಳ ಹಿಂದೆ ಸಮೀ ಪದ ಕುರ್ಚಿ ಗ್ರಾಮದ ಕುಪ್ಪಂಡ ಸಂಜು ರವರ ಜಾನುವಾರನ್ನು ಹುಲಿಯು ಬಲಿ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸ್ಥಳದಲ್ಲಿದ್ದ ರೈತ ಮುಖಂಡರಾದ ಅಯ್ಯ ಮಾಡ ಹ್ಯಾರಿ ಸೋಮೇಶ್, ಅರಣ್ಯ ಇಲಾ ಖೆಯ ಕೆಲವು ಅಧಿಕಾರಿಗಳು ರೈತ ರೊಂದಿಗೆ ಉತ್ತಮ ಬಾಂಧವ್ಯದಲ್ಲಿದ್ದಾರೆ. ಈ ಭಾಗದ ಕೆಲವು ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ ಇಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಕೊಡಗಿನ ಕೊಟ್ಟಗೇರಿ, ಧನುಗಾಲ, ಮಾಯಮುಡಿ, ಕುರ್ಚಿ, ಬೆಸಗೂರು, ಭಾಗ ಗಳಲ್ಲಿ ಜಾನುವಾರುಗಳನ್ನು ಬಲಿ ತೆಗೆದು ಕೊಂಡ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿಗಳು ಹರಸಾಹಸ ಪಟ್ಟರೂ ಹುಲಿ ಸೆರೆ ಆಗಲಿಲ್ಲ. ಇದೀಗ ಬೀರುಗ ಗ್ರಾಮದಲ್ಲಿ ಹುಲಿ ಸೆರೆಗೆ ಅರಣ್ಯ ಸಿಬ್ಬಂದಿ ಗಳು ಪ್ರಯತ್ನ ಮಾಡುತ್ತಿದ್ದಾರೆ. ಈ ಭಾಗದ ರೈತರ ಕೊಟ್ಟಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಸು ಸಾಕಾಣೆ ನಡೆಯುತ್ತಿದೆ.ಮಡಿಕೇರಿ ವನ್ಯ ಜೀವಿ ವಿಭಾಗದ ಎಸಿಎಫ್ ದಯಾನಂದ, ಶ್ರೀಮಂಗಲ ಎಸಿಎಫ್ ಶ್ರೀನಿವಾಸ ನಾಯಕ, ಸಿಬ್ಬಂದಿಗಳಾದ ಸಂಜು ಹಾಗೂ ಗ್ರಾಮ ಸ್ಥರು ಸ್ಥಳದಲ್ಲಿ ಹಾಜರಿದ್ದರು.

Translate »