ಪೆರುಂಬಾಡಿ-ಮಾಕುಟ್ಟ ರಸ್ತೆ ಕಾಮಗಾರಿ ತ್ವರಿತ ಆರಂಭಕ್ಕೆ ಹೆಚ್.ಡಿ.ರೇವಣ್ಣ ಸೂಚನೆ
ಕೊಡಗು

ಪೆರುಂಬಾಡಿ-ಮಾಕುಟ್ಟ ರಸ್ತೆ ಕಾಮಗಾರಿ ತ್ವರಿತ ಆರಂಭಕ್ಕೆ ಹೆಚ್.ಡಿ.ರೇವಣ್ಣ ಸೂಚನೆ

June 21, 2018

ಮಡಿಕೇರಿ: ಕೊಣನೂರು-ಮಾಕುಟ್ಟ ರಸ್ತೆ ದುರಸ್ಥಿಗೆ ಅಗತ್ಯವಿರುವ ಹಣ ಬಿಡುಗಡೆ ಮಾಡಲು ಲೋಕೋ ಪಯೋಗಿ ಇಲಾಖೆ ಸಿದ್ದವಿದ್ದು ಹಣಕ್ಕಾಗಿ ಕಾಯದೆ ತುರ್ತು ಕೆಲಸ ನಿರ್ವಹಿಸು ವಂತೆ ಜಿಲ್ಲಾಡಳಿತಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ.ರೇವಣ್ಣ ಸೂಚಿಸಿದ್ದಾರೆ.

ಮಡಿಕೇರಿ ಜಿಲ್ಲಾಡಳಿತ ಭವನದಲ್ಲಿ ಮಳೆ ಹಾನಿಗೆ ಸಂಭಂಧಿಸಿದಂತೆ ಸಭೆ ನಡೆಸಿದ ಸಚಿವ ರೇವಣ್ಣ ಮಾಕುಟ್ಟ ವ್ಯಾಪ್ತಿ ಯಲ್ಲಿ ಮಳೆಯಿಂದ ಹಾನಿಗೀಡಾದ ರಸ್ತೆಯ ಮಾಹಿತಿ ಪಡೆದರು. ಒಂದು ಸೇತುವೆ ಮತ್ತು ನಾಲ್ಕು ಕಡೆ ರಸ್ತೆಗೆ ಭಾರಿ ಹಾನಿಯಾದ ಕುರಿತು ಅಧಿಕಾರಿಗಳು ಸಚಿವರ ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಮಾಕುಟ್ಟ ರಸ್ತೆ ದುರಸ್ಥಿಗೆ ಕನಿಷ್ಠ 40 ಕೋಟಿ ಆಗತ್ಯವಿದೆ ಹಲವು ಕಡೆ ಹೊಸ ರಸ್ತೆಯನ್ನೆ ನಿರ್ಮಿಸಬೇಕಾದ ಅನಿ ವಾರ್ಯತೆ ಇದೆ ರಸ್ತೆ ಆಭಿವೃದ್ದಿಗೆ ಅರಣ್ಯ ಇಲಾಖೆ ತಡೆಒಡ್ಡುತ್ತಿದೆ ಎಂದು ಸಚಿವರ ಗಮನ ಸೆಳೆದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಮಡಿಕೇರಿ, ಸೋಮವಾರಪೇಟೆಯಲ್ಲೂ ಹಲವು ರಸ್ತೆಗಳು ಹಾನಿಯಾಗಿವೆ ಹಿಂದಿನ ಬಿಜೆಪಿ ಸರ್ಕಾರ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿತ್ತು. ಈಗಿನ ಸರ್ಕಾರ ಕೂಡಾ ರಸ್ತೆಗಳ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಬಿಡುಗಡೆ ಗೊಳಿಸು ವಂತೆ ಆಗ್ರಹಿಸಿದರು ಎಂಎಲ್‍ಸಿ ಸುನಿಲ್ ಸುಭ್ರಮಣಿ ಮಾತನಾಡಿ, ರಸ್ತೆಗಳ ದುಸ್ಥಿತಿ ಯನ್ನು ಖುದ್ದಾಗಿ ನೋಡಿದರೆ ಮಾತ್ರ ವಾಸ್ತವಂಶ ಅರಿವಾಗುತ್ತದೆ ಎಂದು ರೇವಣ್ಣ ಅವರಿಗೆ ಹೇಳಿದರು.

ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಜನರು ಇಂದಿಗೂ ಹೊಳೆ ದಾಟಲು ಮರದ ಪಾಲಗಳನ್ನು ಅವಲಂಭಿಸಿದ್ದಾರೆ ತಕ್ಷಣವೇ ಸೇತುವೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಮನವಿ ಮಾಡಿದರು.

ಬಳಿಕ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ರೇವಣ್ಣ ಮಾಕುಟ್ಟ ರಸ್ತೆಯ ದುರಸ್ಥಿಗೆ ಜಿಲ್ಲಾಡಳಿತ 8.25 ಕೋಟಿ ಅನುದಾನ ಕೇಳಿದೆ ತಕ್ಷಣವೇ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇನೆ, ಹಣಕ್ಕಾಗಿ ಕಾಯದೆ ತುರ್ತು ಕಾಮಗಾರಿ ಪ್ರಾರಂಭಿಸಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ದರು. ಮುಂದಿನ 15 ದಿನಗಳ ಒಳಗೆ ರಸ್ತೆ ವ್ಯವಸ್ಥೆ ಸುಗಮಗೊಳಿಸಬೇಕು ಇದಕ್ಕಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳನ್ನು ಒಳ ಗೊಂಡ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು. ಹೆದ್ದಾರಿ ಸಮಸ್ಯೆಗೆ ಸಂಬಂಧಿಸಿದಂತೆ ಆಧಿಕಾರಿಗಳು ಸಂಪ ರ್ಕಕ್ಕೆ ಸಿಗುತ್ತಿಲ್ಲ ಹೀಗಾಗಿ ತಕ್ಷಣಕ್ಕೆ ಸ್ಪಂದನೆ ದೊರಕುತ್ತಿಲ್ಲ ಎಂದು ಶಾಸಕರುಗಳು ಅಸಮಾಧಾನ ವ್ಯಕ್ತ ಪಡಿಸಿದರು. ಮಾಕುಟ್ಟ ಹೆದ್ಧಾರಿಯಲ್ಲಿ ಮರ ತೆರವು ಅನಿವಾರ್ಯವಾದರೆ ಮರ ಕಡಿದು ರಸ್ತೆ ವ್ಯವಸ್ತೆ ಸುಗಮಗೊಳಿಸಿ ಎಂದು ಡಿಎಫ್‍ಒ ಗಳಿಗೆ ಸಚಿವ ರೇವಣ್ಣ ಸೂಚಿಸಿದರು. ಕುಶಾಲನಗರ ಮಾಣಿ ಹೆದ್ದಾರಿಯ ಎರಡು ಬದಿಗಳಲ್ಲಿ ಕಾಡು ಕಡಿದು ಒಳ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಲೋಕೋ ಪಯೋಗಿ ಇಲಾಖೆ ಆಧಿಕಾರಿಗಳಿಗೆ ಸಚಿವ ರೇವಣ್ಣ ಸೂಚಿಸಿದರು.

ಗ್ರಾಮೀಣ ಭಾಗಗಳಲ್ಲಿ 50ಕ್ಕೊ ಹೆಚ್ಚು ಮನೆಗಳು ಇದ್ದ ಕಡೆ ಸಂಪರ್ಕ ಸೇತುವೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಆಧಿಕಾರಿ ಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಎಸ್‍ಪಿ ರಾಜೇಂದ್ರ ಪ್ರಸಾದ್, ಉಪ ವಿಭಾಗಧಿಕಾರಿ ರಮೇಶ್ ಕೋನರೆಡ್ಡಿ, ಸಿಇಓ ಪ್ರಶಾಂತ್ ಕುಮಾರ್ ಮಿಶ್ರ, ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಉಪಾದ್ಯಕ್ಷೆ ಲೋಕೇ ಶ್ವರಿ ಗೋಪಾಲ್ ಸೇರಿದಂತೆ ವಿವಿಧ ಇಲಾಖಾ ಆಧಿಕಾರಿಗಳು ಹಾಜರಿದ್ದರು.

Translate »