ರೈತರೊಂದಿಗೆ ಪ್ರಧಾನಿ ಸಂವಾದ ಪ್ರಸಾರ
ಕೊಡಗು

ರೈತರೊಂದಿಗೆ ಪ್ರಧಾನಿ ಸಂವಾದ ಪ್ರಸಾರ

June 21, 2018

ಗೋಣಿಕೊಪ್ಪಲು:  ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ರೈತರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮವನ್ನು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪರದೆ ಮುಖಾಂತರ ಬಿತ್ತರಿಸಲಾಯಿತು.

ಪ್ರೊಜೆಕ್ಟರ್ ಮೂಲಕ ಎಲ್‍ಸಿಡಿ ಪರದೆ ಯಲ್ಲಿ ನೇರ ಪ್ರಸಾರವನ್ನು ನೀಡಲಾಯಿತು. ಕೊಡಗಿನ ಸುಮಾರು 113 ಬೆಳೆಗಾರರು ವೀಕ್ಷಿಸಿದರು. ವಿರಾಜಪೇಟೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ತಜ್ಞ ರುಗಳು ಪಾಲ್ಗೊಂಡಿದ್ದರು. ಕೆವಿಕೆ ಮುಖ್ಯಸ್ಥ ಸಾಜು ಜಾರ್ಜ್, ರೈತ ಸಂಘ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಕೃಷಿ ಪಂಡಿತ ಪ್ರಶಸಸ್ತಿ ಪುರಸ್ಕøತ ಸೋಮೇಂಗಡ ಗಣೇಶ್ ತಿಮ್ಮಯ್ಯ, ಕೃಷಿಕರುಗಳಾದ ರಾಣಾ ನಂಜಪ್ಪ, ಸೋಮಯ್ಯ, ರಾಬಿನ್ ಸುಬ್ಬಯ್ಯ ಸೇರಿ ದಂತೆ ರೈತರು ವೀಕ್ಷಿಸಿದರು.

Translate »