ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಕಾರ್ಯಗಾರಕ್ಕೆ ಚಾಲನೆ
ಕೊಡಗು

ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಕಾರ್ಯಗಾರಕ್ಕೆ ಚಾಲನೆ

June 21, 2018

ವಿರಾಜಪೇಟೆ: ಕಠಿಣ ಪ್ರರಿಶ್ರಮ ಹಾಗೂ ಏಕಾಗ್ರತೆಯಿಂದ ವಿದ್ಯಾರ್ಥಿಗಳು ತಮ್ಮ ಬದುಕಿನ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಹುಣಸೂರಿನ ತಹಶೀಲ್ದಾರ್ ಅಹಮದ್ ಕುಂಞ ಅಭಿಪ್ರಾಯಪಟ್ಟರು.

ಪಟ್ಟಣದ ಜೈನರ ಬೀದಿಯಲ್ಲಿನ ಚಾಣಕ್ಯ ಕೋಚಿಂಗ್ ಸೆಂಟರ್ ಭಾನು ವಾರ ಆಯೋಜಿಸಿದ್ದ ಸಿಇಟಿ, ಜೆಇಇ ಹಾಗೂ ನೀಟ್ ಪರೀಕ್ಷೆ ಉಚಿತ ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶ್ರದ್ಧೆ ಯಿಂದ ತಮ್ಮ ಹೆಚ್ಚಿನ ಅವಧಿಯಲ್ಲಿ ಗುರಿಯ ಕಡೆ ಗಮನಹರಿಸಬೇಕು. ಛಲ ದಿಂದ ಗುರಿಯೆಡೆ ಮುನ್ನಡೆದರೆ ಅಸಾಧ್ಯವಾದುದು ಯಾವುದು ಇಲ್ಲ. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳಿಗೆ ಸಾಕಷ್ಟು ಮಾಹಿತಿ ಕೊರತೆಯುಂಟಾಗುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತರಬೇತಿ ಕಾರ್ಯಗಾರಗಳಲ್ಲಿ ಭಾಗವಹಿಸುವುದರಿಂದ ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು.

ಕಲ್ಪವೃಕ್ಷ ಆರ್ಕೇಡ್‍ನ ಮಾಲೀಕ ಚಂದ್ರಪ್ರಸಾದ್ ಮಾತನಾಡಿ, ತರಬೇತಿ ಕೇಂದ್ರ ಗಳು ವಿದ್ಯಾರ್ಥಿಗಳ ಶೈಕ್ಷಣ ಕ ಗುರಿಯನ್ನು ಈಡೇರಿಸಲು ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರಿನ ವಿಜಯವಿಠಲ ಕಾಲೇಜಿನ ಪ್ರಾಧ್ಯಾಪಕರಾದ ರಾಜೇಶ್, ಶರತ್ ಕುಮಾರ್, ನವೀನ್ ಕುಮಾರ್ ಹಾಗೂ ಕಾವೇರಿ ಕಾಲೇಜಿನ ಬಿ.ಎಸ್. ಸುದೇಶ್ ಭಾಗವಹಿಸಿ ಆಕಾಂಕ್ಷಿ ಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಚಾಣಕ್ಯ ಟ್ರಸ್ಟ್‍ನ ಅಧ್ಯಕ್ಷೆ ಕವಿತಾ, ಕಾರ್ಯದರ್ಶಿ ಮಾಚಮ್ಮ, ನಿರ್ದೇಶಕರಾದ ವಿನೋದ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Translate »