ಟಾಟಾ ಏಸ್ ಮೇಲೆ ಮರ ಬಿದ್ದು ಕಾರ್ಮಿಕ ಸಾವು
ಕೊಡಗು

ಟಾಟಾ ಏಸ್ ಮೇಲೆ ಮರ ಬಿದ್ದು ಕಾರ್ಮಿಕ ಸಾವು

June 20, 2018

ಗೋಣಿಕೊಪ್ಪಲು:  ಕಾರ್ಮಿ ಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಮರ ಬಿದ್ದು ಓರ್ವ ಕಾರ್ಮಿಕ ಸಾವನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಪಾಲಿಬೆಟ್ಟ ಸಮೀಪದ ಹೊಸಳ್ಳಿ ಎಂಬಲ್ಲಿ ನಡೆದಿದೆ. ಸಿದ್ದಾಪುರ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಹುಣಸೂರು ತಾಲೂಕಿನ ಹನುಗೋಡು ಗ್ರಾಮದ ರಾಜು (35) ಮೃತ ಕಾರ್ಮಿಕ. ಹನುಗೋಡುವಿನ ಸುನಿಲ್ (28), ಸ್ವಾಮಿ (35) ಗಾಯಾಳುಗಳು. ಸುನಿಲ್ ಅವ ರನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸ್ವಾಮಿ ಅವರಿಗೆ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ.

ಪಾಲಿಬೆಟ್ಟ ತೋಟದಲ್ಲಿ ಕೆಲಸ ಮುಗಿಸಿ ತಿತಿಮತಿ ಮಾರ್ಗವಾಗಿ ಟಾಟಾ ಏಸ್ ವಾಹನದಲ್ಲಿ ತೆರಳುತ್ತಿದ್ದಾಗ ವಾಹನದ ಮೇಲೆ ತೋಟದಿಂದ ಸಿಲ್ವರ್ ಮರ ಬಿದ್ದಿದೆ. ಇದರಿಂದ ಎದುರು ಕುಳಿತಿದ್ದ ರಕ್ತಸ್ರಾವ ವಾಗಿ ರಾಜು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.

Translate »