ನಿಯಮ ಬಾಹಿರವಾಗಿ ಕರಿಮೆಣಸು ಆಮದು ಬೆಂಗಳೂರಲ್ಲಿ ನಾಳೆ ಬೆಳೆಗಾರರ ಪ್ರತಿಭಟನೆ
ಕೊಡಗು

ನಿಯಮ ಬಾಹಿರವಾಗಿ ಕರಿಮೆಣಸು ಆಮದು ಬೆಂಗಳೂರಲ್ಲಿ ನಾಳೆ ಬೆಳೆಗಾರರ ಪ್ರತಿಭಟನೆ

June 20, 2018

ಬೆಂಗಳೂರು:  ಕೇಂದ್ರ ವಾಣಿಜ್ಯ ಸಚಿವಾಲಯ ಭಾರತಕ್ಕೆ ಆಮದು ಕರಿ ಮೆಣಸಿನ ಸಾಗಾಣೆಗೆ ಕೆಲವು ನಿಯಮ ಗಳ ಮೂಲಕ ಸಾಕಷ್ಟು ನಿರ್ಬಂಧ ವಿದಿ ಸಿದ್ದರೂ, ಕೆಲವು ವರ್ತಕರು ನಿಯಮ ಗಾಳಿಗೆ ತೂರಿ ಕರಿಮೆಣಸನ್ನು ದೇಶಕ್ಕೆ ಆಮದು ಮಾಡಿಕೊಳ್ಳುವ ಮೂಲಕ ವಾಣ ಜ್ಯ ಸಚಿವಾಲಯಕ್ಕೆ ವಂಚಿಸುತ್ತಿದ್ದಾರೆ. ಇಂತಹ ಉದ್ಯಮಿಗಳ ವಿರುದ್ಧ ಜೂನ್ 21 ರಂದು ಬೆಂಗಳೂರಿನಲ್ಲಿ ಕರ್ನಾಟಕದ ಕರಿಮೆಣಸು ಬೆಳೆಗಾರ ಜಿಲ್ಲೆಗಳ ಬೆಳೆ ಗಾರರಿಂದ ಪ್ರತಿಭಟನೆ ಆಯೋಜಿಸಲಾ ಗಿದೆ ಎಂದು ಕರಿಮೆಣಸು ಬೆಳೆಗಾರರ ಸಮನ್ವಯ ಸಮಿತಿ ತಿಳಿಸಿದೆ.

ಸಮನ್ವಯ ಸಮಿತಿಯ ಪ್ರಧಾನ ಸಂಚಾ ಲಕ ಕೊಂಕೋಡಿ ಪದ್ಮನಾಭ ಮತ್ತು ಸಂಚಾಲಕ ಕೆ.ಕೆ.ವಿಶ್ವನಾಥ್ ಈ ಕುರಿತು ಮಾಹಿತಿ ನೀಡಿದ್ದಾರೆ.

ವಿಯೆಟ್ನಾಂನಿಂದ ಈ ವರ್ಷದ ಮೇನಲ್ಲಿ ಬೆಂಗಳೂರಿನ ‘ಇಂಡಿಯಾ ಪ್ರಾಡಕ್ಟ್ಸ್’ ಹೆಸರಿನ ಸಂಸ್ಥೆಯೊಂದು ದೇಶಕ್ಕೆ ಆಮದಾದ ಕರಿಮೆಣಸು ಪೈಕಿ ಶೇ.28 ರಷ್ಟು ಕರಿಮೆಣಸನ್ನು ಆ ದೇಶದಲ್ಲಿ ಸಿಗುತ್ತಿರುವ ಬೆಲೆಗಿಂತ ಹೆಚ್ಚುವರಿ ದರ ನಮೂದಿಸಿ, ಭಾರತದ ವಾಣ ಜ್ಯ ಸಚಿವಾಲಯದ ನಿಯಮಗಳನ್ನೇ ಗಾಳಿಗೆ ತೂರಿ ಭಾರತಕ್ಕೆ ಆಮದು ಮಾಡಿಕೊಂಡು ವಹಿವಾಟು ನಡೆಸಿದೆ. ಕರಿಮೆಣಸು ಬೆಳೆಗಾರರಿಗೆ ಕಂಟಕ ವಾಗಿರುವ. ಇಂತಹ ಉದ್ಯಮಿ ವಿರುದ್ಧ ಕರಿಮೆಣಸು ಬೆಳೆಗಾರರು ಒಂದಾಗಿ ಹೋರಾ ಟದ ಮೂಲಕ ಎಚ್ಚರಿಕೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಜೂನ್ 21 ರಂದು ಗುರು ವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಬೆಳೆಗಾರರು ಸೇರಿ ಇಂಡಿಯಾ ಪ್ರಾಡಕ್ಟ್ಸ್ ಸಂಸ್ಥೆಯ ವಿರುದ್ದ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಿ ಪ್ರತಿಭಟನೆಗೆ ಮುಂದಾಗಲಿದ್ದಾರೆ ಎಂದು ಸಮನ್ವಯ ಸಮಿತಿ ಪ್ರಕಟಣೆ ತಿಳಿಸಿದೆ. ಇಂಡಿಯಾ ಪ್ರಾಡಕ್ಟ್ಸ್ ಸಂಸ್ಥೆಯ ಕಾನೂನು ಬಾಹಿರ ವಹಿವಾಟಿಗೆ ಸಂಬಂಧಿಸಿದಂತೆ ಇದೇ ಸಂದರ್ಭ ಎಚ್ಚರಿಕೆಯನ್ನೂ ನೀಡಿ ನಿಯಮಬಾಹಿರ ಕರಿಮೆಣಸು ಆಮದು ವಹಿವಾಟನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಲಾಗುತ್ತದೆ

ಕಳೆದ ವರ್ಷ ಇದೇ ಅವಧಿಯಲ್ಲಿ ಕೆ.ಜಿ.ಗೆ 550 ರೂ. ಬೆಲೆಯಿದ್ದ ಕರಿಮೆಣಸಿಗೆ ಪ್ರಸ್ತುತ, 330 ರೂ. ಮಾತ್ರವಿದೆ. ಈ ದರ ಕುಸಿತದ ಬಗ್ಗೆ ಕಳೆದ ನವಂಬರ್‍ನಲ್ಲಿ ವಾಣಿಜ್ಯ ಸಚಿವಾಲಯದ ಗಮನ ಸೆಳೆದ ಸಂದರ್ಭ ಕೂಡಲೇ ಮಧ್ಯ ಪ್ರವೇಶಿಸಿದ ಸಚಿವಾಲ ಯವು ಆಮದಾದ ಕರಿಮೆಣಸಿನ ಮೇಲೆ ಕೆ.ಜಿ ಗೆ 500 ರೂ. ಕನಿಷ್ಟ ಆಮದು ಶುಲ್ಕ ವಿಧಿಸುವ ತೀರ್ಮಾನ ಕೈಗೊಂಡಿತ್ತು. ಅಂತೆಯೇ ಈವರೆಗೂ 3 ಪ್ರಮುಖ ಆದೇಶ ಗಳನ್ನೂ ಈ ಸಂಬಂಧಿತ ಜಾರಿಗೊಳಿ ಸಿತ್ತು. ಹೀಗಿದ್ದರೂ ಬೆಂಗಳೂರಿನ ಇಂಡಿಯಾ ಪ್ರಾಡಕ್ಟ್ಸ್ ಸಂಸ್ಥೆ ನಿಯಮ ಮೀರಿ ಆಮದು ಕರಿಮೆಣಸನ್ನು ಭಾರತಕ್ಕೆ ತರುತ್ತಿದೆ. ಹೀಗಾಗಿ ಬೆಳೆಗಾರರು ಸೂಕ್ತ ಬೆಲೆ ಸಿಗದೇ ಸಂಕಷ್ಟದಲ್ಲಿಯೇ ಇರುವಂತಾಗಿದೆ.

ಭಾರತದಲ್ಲಿ ಬೆಳೆಯಲ್ಪಡುವ ಕರಿಮೆಣಸು ವಿಶ್ವದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಕರಿಮೆಣಸಾಗಿದ್ದು, ಹೀಗಿದ್ದರೂ ವಿದೇ ಶದಿಂದ ಕಡಮೆ ಬೆಲೆಗೆ ಕಳಪೆ ಗುಣ ಮಟ್ಟದ ಕರಿಮೆಣಸನ್ನು ಭಾರತಕ್ಕೆ ಆಮದು ಮಾಡಿಕೊಂಡು ಭಾರತದ ಉತ್ಕ್ರಷ್ಟ ದರ್ಜೆಯ ಕರಿಮೆಣಸಿನೊಂದಿಗೆ ಮಿಶ್ರಣ ಗೊಳಿಸಿ ಮಾರಾಟ ಮಾಡುವ ದಂಧೆಗೆ ಕಡಿವಾಣ ಹಾಕಲೇ ಬೇಕಾಗಿದೆ. ಈ ನಿಟ್ಟಿ ನಲ್ಲಿ ಕರಿಮೆಣಸು ಬೆಳೆಗಾರರು ಒಂದಾಗಿ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಭಾರತದ ಕರಿಮೆಣಸು ಉದ್ಯಮಕ್ಕೇ ಸಂಚ ಕಾರ ತರುತ್ತಿರುವ ಉದ್ಯಮಿಗಳಿಗೆ ಎಚ್ಚರಿಕೆ ನೀಡಬೇಕಾದ ಅನಿವಾರ್ಯತೆ ಬಂದೊದ ಗಿದೆ ಎಂದು ಪ್ರಕಟಣೆಯಲ್ಲಿ ಕರಿಮೆಣಸು ಸಮನ್ವಯ ಸಮಿತಿ ತಿಳಿಸಿದೆ.

ವಾಣಿಜ್ಯ ಸಚಿವಾಲಯ ರೂಪಿಸಿದ ನಿಯಮಗಳಲ್ಲಿನ ಕೆಲವೊಂದು ಸಣ್ಣ ಪುಟ್ಟ ಲೋಪಗಳನ್ನು ಉಪಯೋಗಪಡಿಸಿಕೊಂಡು ಇಂತಹ ಸಂಸ್ಥೆಗಳು ವಿದೇಶದಲ್ಲಿನ ದರಕ್ಕಿಂತ ಹೆಚ್ಚಿನ ದರವನ್ನು ನಮೂದಿಸಿ ಭಾರತಕ್ಕೆ ಆಮದು ಕರಿಮೆಣಸು ತರಿಸಿಕೊಂಡು ವಹಿ ವಾಟನ್ನು ಎಗ್ಗಿಲ್ಲದೇ ನಡೆಸುತ್ತಿವೆ. ಇಂತಹ ನಿಯಮಬಾಹಿರ ವಹಿವಾಟಿಗೆ ಕಡಿವಾಣ ಹಾಕದೇ ಇದ್ದಲ್ಲಿ ಕರಿಮೆಣಸು ಬೆಳೆಗೆ ಸೂಕ್ತ ಬೆಲೆ ದೊರಕುವುದು ಕಷ್ಟ ಸಾಧ್ಯ ಎಂದು ಸಮನ್ವಯ ಸಮಿತಿ ಪ್ರಕಟಣೆ ತಿಳಿಸಿದೆ.

ಕರಿಮೆಣಸು ಬೆಳೆಗಾರರ ಸಮನ್ವಯ ಸಮಿತಿ- ಕರಿಮೆಣಸು ಸಮಸ್ಯೆ ಸಂಬಂ ಧಿತ ದಕ್ಷಿಣ ಭಾರತದ ವಿವಿಧ ಬೆಳೆಗಾರ ಸಂಘಟನೆ ಗಳು ಸಮನ್ವಯ ಸಮಿತಿ ಎಂಬ ವೇದಿಕೆ ಯನ್ನು ಕಳೆದ ವರ್ಷದ ನವಂಬರ್‍ನಲ್ಲಿ ರಚಿಸಿದ್ದು, ಈ ವೇದಿಕೆ ಯಡಿ ಒಂದಾಗಿ ಸಮಸ್ಯೆ ಪರಿಹಾರಕ್ಕಾಗಿ ಪ್ರಯತ್ನ ಕೈಗೊಂಡಿದೆ. ಈಗಾಗಲೇ ಸಮನ್ವಯ ಸಮಿತಿ ವತಿಯಿಂದ ಕೇಂದ್ರ ವಾಣಿಜ್ಯ ಸಚಿವರನ್ನೂ ಮೂರು ಬಾರಿ ಭೇಟಿಯಾಗಿ ಸಮಸ್ಯೆ ಬಗ್ಗೆ ಮನ ವರಿಕೆ ಮಾಡಿಕೊಡಲಾಗಿದೆ. ಅಂತೆಯೇ, ಆರ್ಥಿಕ ಹಾಗೂ ವಾಣಿಜ್ಯ ಸಚಿವಾಲಯ ಸೇರಿದಂತೆ ಕೇಂದ್ರದ ವಿವಿಧ ಸಚಿವಾ ಲಾಯಗಳ ಉನ್ನತಾಧಿಕಾರಿಗಳನ್ನೂ ಹಲವಾರು ಬಾರಿ ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲಾಗಿದೆ.

ಹೀಗಾಗಿಯೇ ಕೇಂದ್ರ ವಾಣಿಜ್ಯ ಸಚಿವರ ಸೂಚನೆಯಂತೆ ಆಮದು ಕರಿಮೆಣಸಿನ ಮೇಲೆ 500 ರೂ. ಆಮದು ಶುಲ್ಕ ವಿಧಿಸಲಾಗಿದ್ದು ಹೀಗಿದ್ದರೂ ಪರ್ಯಾಯ ಮಾರ್ಗೋಪಾಯ ಕಂಡುಕೊಂಡ ನಿಯಮ ಬಂಜಕರು ಭಾರತಕ್ಕೆ ಕರಿಮೆಣಸನ್ನು ಆಮದು ಮಾಡುತ್ತಾ, ಭಾರತೀಯ ಕರಿಮೆಣಸಿನ ಬೆಲೆ ಕುಸಿತಕ್ಕೆ ಕಾರಣ ವಾಗುತ್ತಿದ್ದಾರೆ.

ಕಾಫಿ ಬೆಳೆಯ ಬೆಲೆ ಕೂಡ ಕುಸಿದಿರುವ ಇಂದಿನ ದಿನಗಳಲ್ಲಿ ಬೆಳೆಗಾರರ ಪಾಲಿಗೆ ಪರ್ಯಾಯ ಆರ್ಥಿಕ ಕೃಷಿ ಚೈತನ್ಯವಾದ ಕರಿಮೆಣಸಿಗೂ ಬೆಲೆ ಹೆಚ್ಚಳ ವಾಗದೇ ಇರುವುದರಿಂದಾಗಿ ಕರಿಮೆಣಸು ಬೆಳೆಗಾರರು ಚಿಂತಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕರಿಮೆಣಸು ಬೆಳೆಗಾರರ ಸಮನ್ವಯ ಸಮಿತಿ ಕರಿಮೆಣಸು ಬೆಳೆ ಗಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿಯೂ ಹೋರಾಟ ಕೈಗೊಳ್ಳಲಿದೆ ಎಂದು ಸಮಿತಿ ಪ್ರಕಟಣೆ ಯಲ್ಲಿ ತಿಳಿಸಿದೆ.

Translate »