ಭಾರೀ ಮಳೆಗೆ ಮನೆ ಕುಸಿತ
ಕೊಡಗು

ಭಾರೀ ಮಳೆಗೆ ಮನೆ ಕುಸಿತ

June 22, 2018

ವಿರಾಜಪೇಟೆ: ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಪಟ್ಟಣದ ಅರಸು ನಗರದ ಶಶಿಕಲಾ ಎಂಬವರ ಮನೆ ರಾತ್ರಿ 12 ಗಂಟೆಗೆ ಕುಸಿದು ಬಿದ್ದಿದೆ.

ರೂ.3 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಮನೆ ಬೀಳುವ ಸಂದರ್ಭ ಶಶಿಕಲಾ ಅವರು ಸಂಭಂದಿಕರ ಮದುವೆಗೆ ತೆರಳಿದ್ದರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹೇಮಕುಮಾರ್, ಸದಸ್ಯ ರಾಜೇಶ್ ಪಧ್ಮನಾಭ, ಕಂದಾಯ ಇಲಾಖೆಯ ಅಧಿಕಾರಿ ಪಳಂಗಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಕುಸಿದಿರುವಬಗ್ಗೆ ತಹಶಿಲ್ದಾರ್‍ಗೆ ದೂರು ನೀಡಿದ್ದಾರೆ.

Translate »