ಕೊಡಗು

ಕೊಡವ ಸಮಾಜಗಳ ಒಕ್ಕೂಟದ 12ನೇ ವಾರ್ಷಿಕ ಮಹಾಸಭೆ ಒಕ್ಕೂಟದಿಂದಲೇ ಕೋವಿ ಹಕ್ಕಿನ ಹೋರಾಟ ನಿರ್ಧಾರ
ಕೊಡಗು

ಕೊಡವ ಸಮಾಜಗಳ ಒಕ್ಕೂಟದ 12ನೇ ವಾರ್ಷಿಕ ಮಹಾಸಭೆ ಒಕ್ಕೂಟದಿಂದಲೇ ಕೋವಿ ಹಕ್ಕಿನ ಹೋರಾಟ ನಿರ್ಧಾರ

June 8, 2018

ಮಡಿಕೇರಿ:  ಕೊಡವರ ಕೋವಿ ಹಕ್ಕಿನ ಕುರಿತು ಉಂಟಾಗಿರುವ ಗೊಂದಲ ನಿವಾರಣೆಗೆ ಕೊಡವ ಸಮಾಜಗಳ ಒಕ್ಕೂಟದ ಮೂಲಕವೇ ನ್ಯಾಯಯುತ ಹೋರಾಟ ನಡೆಸಲು ಜೂನ್ 5ರಂದು ಒಕ್ಕೂಟದ 12ನೇ ವಾರ್ಷಿಕ ಮಹಾಸಭೆ ನಿರ್ಣಯ ಕೈಗೊಂಡಿದೆ. ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ಬಾಳುಗೋಡುವಿನÀ ಸಭಾಂಗಣದಲ್ಲಿ ನಡೆಯಿತು. ಚೇತನ್ ಎಂಬುವವರು ನ್ಯಾಯಾಲಯದಲ್ಲಿ ಕೋವಿ ಹಕ್ಕಿನ ಬಗ್ಗೆ ಪ್ರಶ್ನಿಸಿರುವುದಕ್ಕೆ ಸಭೆ ಖಂಡನೆ ಮತ್ತು ವಿಷಾದವನ್ನು ವ್ಯಕ್ತಪಡಿಸಿತು. ಕೋವಿ ಹಕ್ಕಿನ ವಿವಾದವನ್ನು ಸರಿಪಡಿಸಿ ನ್ಯಾಯ ಪಡೆಯಲು ಕಾನೂನು ಹೋರಾಟವನ್ನು…

ಕೊಡವ ಸಮಾಜಗಳ ಒಕ್ಕೂಟದ ವಾರ್ಷಿಕ ಮಹಾಸಭೆ: ಸಭೆಯಲ್ಲಿ ಕೊಡಗು ಜಿಲ್ಲಾಧಿಕಾರಿಗಳ ಬಳಿ ಕೊಡವರ, ಕೊಡಗಿನ ಸಮಸ್ಯೆಗಳನ್ನು ಕೊಂಡೊಯ್ಯುವ ನಿರ್ಣಯ
ಕೊಡಗು

ಕೊಡವ ಸಮಾಜಗಳ ಒಕ್ಕೂಟದ ವಾರ್ಷಿಕ ಮಹಾಸಭೆ: ಸಭೆಯಲ್ಲಿ ಕೊಡಗು ಜಿಲ್ಲಾಧಿಕಾರಿಗಳ ಬಳಿ ಕೊಡವರ, ಕೊಡಗಿನ ಸಮಸ್ಯೆಗಳನ್ನು ಕೊಂಡೊಯ್ಯುವ ನಿರ್ಣಯ

June 7, 2018

ಮಡಿಕೇರಿ: ಕೊಡಗು ಜಿಲ್ಲೆ, ವಿರಾಜಪೇಟೆ ತಾಲೂಕು, ಬಾಳಗೋಡುವಿ ನಲ್ಲಿ ಜೂ. 5 ರಂದು ಕೊಡವ ಸಮಾಜ ಗಳ ಒಕ್ಕೂಟದ 2017-18ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು. ಒಕ್ಕೂಟದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸ್ಥಾಪಕ ಸದಸ್ಯರೂ ಆದ ಮಾಜಿ ಸಚಿವ ಎಂ.ಸಿ.ನಾಣಯ್ಯ, ದಾದಾ ಬೆಳ್ಯಪ್ಪ ಸೇರಿದಂತೆ ಸುಮಾರು 140 ಸದಸ್ಯರು ಭಾಗವಹಿಸಿದ್ದರು. ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಒಕ್ಕೂಟದ ಸದಸ್ಯರ ಸಂಖ್ಯೆಯನ್ನು ಹೆಚ್ಚಿ ಸುವ ಉದ್ದೇಶದಿಂದ ಸದಸ್ಯರ…

ಶಾರ್ಟ್ ಸಕ್ರ್ಯೂಟ್; ಬೇಕರಿಗೆ ಬೆಂಕಿ
ಕೊಡಗು

ಶಾರ್ಟ್ ಸಕ್ರ್ಯೂಟ್; ಬೇಕರಿಗೆ ಬೆಂಕಿ

June 7, 2018

ಮಡಿಕೇರಿ: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೇಕರಿಯೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಮಡಿಕೇರಿಯಲ್ಲಿ ಸಂಭವಿಸಿದೆ. ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿಯಿರುವ ಶೆಟ್ಟಿ ಸ್ವೀಟ್ಸ್ ಆ್ಯಂಡ್ ಬೇಕರಿಯಲ್ಲಿ ಬೆಳಗಿನ 4 ಗಂಟೆ ಸಮ ಯದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂ ಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ. ಪ್ಲಾಸ್ಟಿಕ್ ಮತ್ತು ಪೇಪರ್ ಬಾಕ್ಸ್‍ಗಳಿಗೆ ಬೆಂಕಿಯ ಕಿಡಿ ತಗುಲಿದ ಪರಿಣಾಮ ಕ್ಷಣಾರ್ಧದಲ್ಲೇ ಬೆಂಕಿ ಬೇಕರಿಯನ್ನು ಸಂಪೂರ್ಣವಾಗಿ ಆಪೋಷನ ಪಡೆ ದಿದೆ. ಬೇಕರಿಯಿಂದ ದಟ್ಟ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ಸಾರ್ವ ಜನಿಕರು ತಕ್ಷಣವೇ…

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಜೆಡಿಎಸ್ ಅಭ್ಯರ್ಥಿ ಪರ ಹಣ ಹಂಚುತ್ತಿದ್ದ ಪ್ರಾಂಶುಪಾಲ ಸೇರಿ ಇಬ್ಬರ ಬಂಧನ
ಕೊಡಗು

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಜೆಡಿಎಸ್ ಅಭ್ಯರ್ಥಿ ಪರ ಹಣ ಹಂಚುತ್ತಿದ್ದ ಪ್ರಾಂಶುಪಾಲ ಸೇರಿ ಇಬ್ಬರ ಬಂಧನ

June 7, 2018

ಕುಶಾಲನಗರ: ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಪರ ಮತದಾರ ಶಿಕ್ಷಕರಿಗೆ ಹಣ ಹಂಚುತ್ತಿದ್ದ ಇಬ್ಬರು ಜೆಡಿಎಸ್ ಬೆಂಬಲಿತರನ್ನು ಚುನಾವಣಾ ಧಿಗಳು ಬುಧವಾರ ಬಂಧಿಸಿ ರೂ.40 ಸಾವಿರ ನಗದು ವಶ ಪಡಿಸಿಕೊಂಡಿದ್ದಾರೆ. ಸಮೀಪದ ಹೆಬ್ಬಾಲೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎನ್. ಧರ್ಮಪ್ಪ ಹಾಗೂ ಕೂಡಿಗೆ ಗ್ರಾಪಂ ಸದಸ್ಯ ಟಿ.ಕೆ.ವಿಶ್ವನಾಥ್ ಎಂಬುವವರೇ ಹಣ ಹಂಚುತ್ತಿದ್ದವರಾಗಿದ್ದು, ಇವರಿಬ್ಬರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಮೊಕ ದ್ದಮೆ ದಾಖಲಾಗಿದೆ. ಇವರು ಶಿರಂಗಾಲ ಮತ್ತು ಹೆಬ್ಬಾಲೆ…

ಲಾರಿ ಡಿಕ್ಕಿ ಹೊಡೆದು ಚಾಲಕ ಸಾವು: ಅಪಘಾತಕ್ಕೀಡಾದ ಲಾರಿ ಚಾಲಕನ ಸಹಾಯಕ್ಕೆ ಬಂದಿದ್ದವನು ಮೃತ ಪಟ್ಟ
ಕೊಡಗು

ಲಾರಿ ಡಿಕ್ಕಿ ಹೊಡೆದು ಚಾಲಕ ಸಾವು: ಅಪಘಾತಕ್ಕೀಡಾದ ಲಾರಿ ಚಾಲಕನ ಸಹಾಯಕ್ಕೆ ಬಂದಿದ್ದವನು ಮೃತ ಪಟ್ಟ

June 7, 2018

ಸುಂಟಿಕೊಪ್ಪ: ಅಪಘಾತಕ್ಕೆ ತುತ್ತಾಗಿ ರಸ್ತೆಗಡ್ಡಲಾಗಿ ಮಗುಚಿಕೊಂಡ ಲಾರಿಯಲ್ಲಿದ್ದವರ ನೆರವಿಗೆಂದು ಧಾವಿಸಿದ ಚಾಲಕ, ಬೇರೊಂದು ಲಾರಿಯ ಡಿಕ್ಕಿ ಯಿಂದ ದುರ್ಮರಣಕ್ಕೀಡಾದ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ. ಮೂಲತಃ ಚೇರಂಬಾಣೆಯವರಾಗಿದ್ದು, ಕುಶಾಲನಗರದ ಸುಂದರನಗರದಲ್ಲಿ ನೆಲೆಸಿರುವ ರಾಜನ್ ಸಾವನ್ನಪ್ಪಿರುವ ದುರ್ದೈವಿ. ಸೋಮವಾರ ರಾತ್ರಿ 10.45ರ ಸುಮಾರಿಗೆ ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ಯತ್ತ ಸಾಗುತ್ತಿದ್ದ ಕಾಂಕ್ರಿಟ್ ತುಂಬಿದ್ದ ಲಾರಿ, ಚಾಲಕನ ಹತೋಟಿ ತಪ್ಪಿ ಗದ್ದೆಹಳ್ಳದ ಆರ್‍ಆರ್ ಕಾರ್ ಗ್ಯಾರೇಜ್ ಸಮೀಪದ ತಿರುವಿನಲ್ಲಿ ರಸ್ತೆಗಡ್ಡಲಾಗಿ ಮಗುಚಿಕೊಂಡಿತ್ತು. ಈ ಸಂದರ್ಭ ಅಪಘಾತ್ಕಕೀಡಾದ ಲಾರಿಯ ಮಾಲೀಕರಿಗೆ ಸೇರಿದ ಬೇರೊಂದು…

ಕಂದಾಯ ನಿಗದಿಗೆ ಜಮಾಬಂದಿ ಕಡ್ಡಾಯ ಕ್ರಮ ಸರಿಯಲ್ಲ
ಕೊಡಗು

ಕಂದಾಯ ನಿಗದಿಗೆ ಜಮಾಬಂದಿ ಕಡ್ಡಾಯ ಕ್ರಮ ಸರಿಯಲ್ಲ

June 5, 2018

ಪೊನ್ನಂಪೇಟೆ:  ಜಾಗದ ಕಂದಾಯ ನಿಗದಿಪಡಿಸಲು ಮತ್ತು ಪರಿವರ್ತನೆ ಗೊಳಿಸಲು ಇದೀಗ ಕಂದಾಯ ಇಲಾಖೆ 1912 ನೇ ಇಸವಿಯ ಜಮಾ ಬಂದಿಯನ್ನು ಕಡ್ಡಾಯಗೊಳಿಸಿರುವ ಕ್ರಮ ಸರಿಯಲ್ಲ. ಕಂದಾಯ ನಿಗದಿ ಮತ್ತು ಜಾಗ ಪರಿವರ್ತನೆ ಕಡತಗಳನ್ನು ಜಮಾ ಬಂದಿಯ ನೆಪ ಹೇಳಿ ಉಪ ವಿಭಾಗಾಧಿಕಾರಿಗಳು ಹಿಂತಿರುಗಿಸುತ್ತಿ ದ್ದಾರೆ. ಇದೊಂದು ಜನವಿರೋಧಿ ನೀತಿ ಯಾಗಿದ್ದು, ಇದನ್ನು ತಕ್ಷಣ ಹಿಂಪಡೆಯು ವಂತೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಆಗ್ರಹಿಸಿದ್ದಾರೆ. ಸೋಮವಾರ ಪೊನ್ನಂಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013ರಲ್ಲಿ ರಾಜ್ಯದಲ್ಲಿ ಬಿಜೆಪಿ…

ಮಡಿಕೇರಿಯಲ್ಲಿ ಇಬ್ಬರು ಚೋರರ ಬಂಧನ ಎರಡು ಬಂದೂಕು, ಚಿನ್ನಾಭರಣ ವಶ
ಕೊಡಗು

ಮಡಿಕೇರಿಯಲ್ಲಿ ಇಬ್ಬರು ಚೋರರ ಬಂಧನ ಎರಡು ಬಂದೂಕು, ಚಿನ್ನಾಭರಣ ವಶ

June 5, 2018

ಮಡಿಕೇರಿ: ಇಬ್ಬರು ಚೋರರನ್ನು ಬಂಧಿಸಿರುವ ಮಡಿಕೇರಿ ಪೊಲೀಸರು ರೂ.2 ಲಕ್ಷ ಮೌಲ್ಯದ ಎರಡು ಬಂದೂಕು ಹಾಗೂ 34 ಗ್ರಾಂ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ. ಕಕ್ಕಬ್ಬೆ ಗ್ರಾಮದ ನಿವಾಸಿ ಕೆ.ಸಿ.ಅಶೋಕ ಹಾಗೂ ನಾಣಯ್ಯ (ವಿಜು) ಬಂಧಿತ ಆರೋಪಿಗಳು. ಕಾಲೂರು ಗ್ರಾಮದ ಜಂಕ್ಷನ್ ಬಳಿ ಬಸ್ ತಂಗುದಾಣದಲ್ಲಿ ಸಂಶಯಾಸ್ಪದವಾಗಿ ಬಂದೂಕು ಹಿಡಿದು ನಿಂತಿದ್ದ ಕೆ.ಸಿ.ಅಶೋಕನನ್ನು ವಿಚಾರಣೆ ನಡೆಸಿದಾಗ ಮಡಿಕೇರಿಯ ಶ್ರೀಓಂಕಾರೇಶ್ವರ ದೇವಾಲಯದ ಬಳಿಯ ಮನೆಯೊಂದ ರಿಂದ ಎರಡು ಬಂದೂಕು ಹಾಗೂ ಚಿನ್ನಾ ಭರಣ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ತಕ್ಷಣ…

ಟ್ಯಾಂಕರ್ ಚಾಲಕನ ಅತಿವೇಗ : ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಕೊಡಗು

ಟ್ಯಾಂಕರ್ ಚಾಲಕನ ಅತಿವೇಗ : ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

June 5, 2018

ಮಡಿಕೇರಿ:  ಆಯಿಲ್ ಟ್ಯಾಂಕರ್‍ವೊಂದು ಕೆಎಸ್‍ಆರ್‍ಟಿಸಿ ಬಸ್‍ಗೆ ಮುಖಾಮುಖಿ ಡಿಕ್ಕಿಯಾಗುವುದು ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು, ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣ ಕರ ಜೀವ ಉಳಿದಿದೆ.ಮಡಿಕೇರಿ-ಮಂಗಳೂರು ಹೆದ್ದಾರಿಯ ಕೊಯನಾಡು ಬಳಿ ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಮಡಿಕೇರಿ ಗ್ರಾಮಾಂ ತರ ಪೊಲೀಸರು ಟ್ಯಾಂಕರ್ ಚಾಲಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಮಂಗಳೂರು, ಸುಬ್ರಹ್ಮಣ್ಯ ಮಾರ್ಗ ವಾಗಿ ಬೆಂಗಳೂರು ತಲುಪಬೇಕಿದ್ದ ಸುಳ್ಯ ಡಿಪೋಗೆ ಸೇರಿದ ಕೆಎಸ್‍ಆರ್‍ಟಿಸಿ ಬಸ್‍ಗೆ ಕೊಯನಾಡು ಹೆದ್ದಾರಿಯಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ಆಯಿಲ್ ಟ್ಯಾಂಕರ್ ಅತಿವೇಗವಾಗಿ ನುಗ್ಗಿದ್ದು, ಸಾರಿಗೆ…

ನಿವೃತ್ತ ಪೊಲೀಸರ ‘ಆರೋಗ್ಯ ಭಾಗ್ಯ’ಕ್ಕೆ ಅನುಮೋದನೆ
ಕೊಡಗು

ನಿವೃತ್ತ ಪೊಲೀಸರ ‘ಆರೋಗ್ಯ ಭಾಗ್ಯ’ಕ್ಕೆ ಅನುಮೋದನೆ

June 5, 2018

ಮಡಿಕೇರಿ: ನಿವೃತ್ತ ಪೊಲೀಸ್ ಸಿಬ್ಬಂದಿಗಳ ಬಹುದಿನಗಳ ಬೇಡಿಕೆಯಾಗಿ ರುವ ಆರೋಗ್ಯ ಭಾಗ್ಯ ಯೋಜನೆಗೆ ಸರಕಾರ ಅನುಮೋದನೆ ನೀಡಿದ್ದು, ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿರುವವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹು ದಾಗಿದೆ ಎಂದು ಕೊಡಗು ಜಿಲ್ಲಾ ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎ.ಅಪ್ಪಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಯೋಜನೆಗೆ ಸರಕಾರದಿಂದ 50ಕೋಟಿ ರೂ.ಗಳನ್ನು ಮೀಸಲಿಡುವಂತೆ ಬೇಡಿಕೆ ಸಲ್ಲಿಸಲಾಗಿತ್ತಾ ದರೂ, ಸರಕಾರ 20 ಕೋಟಿ ರೂ. ನೀಡುವ ಭರವಸೆ ನೀಡಿತ್ತು. ಆದರೆ…

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಕಾರ್ಮಿಕರಿಗೆ ಸಲಹೆ
ಕೊಡಗು

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಕಾರ್ಮಿಕರಿಗೆ ಸಲಹೆ

June 5, 2018

ವಿರಾಜಪೇಟೆ: ಕಾರ್ಮಿಕರಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಾರ್ಮಿಕರು ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ ಹೇಳಿದರು. ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜ ಪೇಟೆ ವಕೀಲರ ಸಂಘ, ಕಾರ್ಮಿಕ ಇಲಾಖೆ ಮತ್ತು ಪಾಲಿಬೆಟ್ಟದ ಹೊಸಳ್ಳಿ ಟಾಟಾ ಕಾಫಿ ಎಸ್ಟೇಟ್‍ನ ಸಂಯುಕ್ತ ಆಶ್ರಯದಲ್ಲಿ ಎಸ್ಟೇಟ್ ಸಭಾಂಗಣದಲ್ಲಿ ”ವಿಶ್ವ ಕಾರ್ಮಿಕರ ದಿನಾಚರಣೆ ಹಾಗೂ ತಂಬಾಕು ನಿಷೇಧ ದಿನಾಚರಣೆ ಪ್ರಯುಕ್ತ ಕಾರ್ಮಿಕರಿಗಾಗಿ ಆಯೋಜಿಸಲಾಗಿದ್ದ ಕಾನೂನು…

1 175 176 177 178 179 187
Translate »