ಕೊಡವ ಸಮಾಜಗಳ ಒಕ್ಕೂಟದ 12ನೇ ವಾರ್ಷಿಕ ಮಹಾಸಭೆ ಒಕ್ಕೂಟದಿಂದಲೇ ಕೋವಿ ಹಕ್ಕಿನ ಹೋರಾಟ ನಿರ್ಧಾರ
ಕೊಡಗು

ಕೊಡವ ಸಮಾಜಗಳ ಒಕ್ಕೂಟದ 12ನೇ ವಾರ್ಷಿಕ ಮಹಾಸಭೆ ಒಕ್ಕೂಟದಿಂದಲೇ ಕೋವಿ ಹಕ್ಕಿನ ಹೋರಾಟ ನಿರ್ಧಾರ

June 8, 2018

ಮಡಿಕೇರಿ:  ಕೊಡವರ ಕೋವಿ ಹಕ್ಕಿನ ಕುರಿತು ಉಂಟಾಗಿರುವ ಗೊಂದಲ ನಿವಾರಣೆಗೆ ಕೊಡವ ಸಮಾಜಗಳ ಒಕ್ಕೂಟದ ಮೂಲಕವೇ ನ್ಯಾಯಯುತ ಹೋರಾಟ ನಡೆಸಲು ಜೂನ್ 5ರಂದು ಒಕ್ಕೂಟದ 12ನೇ ವಾರ್ಷಿಕ ಮಹಾಸಭೆ ನಿರ್ಣಯ ಕೈಗೊಂಡಿದೆ. ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ಬಾಳುಗೋಡುವಿನÀ ಸಭಾಂಗಣದಲ್ಲಿ ನಡೆಯಿತು.

ಚೇತನ್ ಎಂಬುವವರು ನ್ಯಾಯಾಲಯದಲ್ಲಿ ಕೋವಿ ಹಕ್ಕಿನ ಬಗ್ಗೆ ಪ್ರಶ್ನಿಸಿರುವುದಕ್ಕೆ ಸಭೆ ಖಂಡನೆ ಮತ್ತು ವಿಷಾದವನ್ನು ವ್ಯಕ್ತಪಡಿಸಿತು. ಕೋವಿ ಹಕ್ಕಿನ ವಿವಾದವನ್ನು ಸರಿಪಡಿಸಿ ನ್ಯಾಯ ಪಡೆಯಲು ಕಾನೂನು ಹೋರಾಟವನ್ನು ಒಕ್ಕೂಟದ ಮೂಲ ಕವೇ ನಡೆಸಲು ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪದಾ ಧಿಕಾರಿಗಳು ಒಪ್ಪಿಗೆ ನೀಡಿದರು.
ಮುಂದಿನ ದಿನಗಳಲ್ಲಿ ಕೊಡಗಿಗೆ ಮತ್ತು ಕೊಡವರಿಗೆ ಆಗುವ ಅನ್ಯಾಯದ ವಿರುದ್ಧ ಕೊಡವ ಸಮಾಜಗಳ ಒಕ್ಕೂಟದ ಮೂಲಕ ಹೋರಾಟ ನಡೆಸಲು ಸಭೆ ನಿರ್ಣಯ ಕೈಗೊಂಡಿತು. ಜೂ.18 ಮತ್ತು 19 ರಂದು ತಲಕಾವೇರಿಯಲ್ಲಿ ನಡೆಯುವ ಅಷ್ಟಮಂಗಲ ಪ್ರಶ್ನೆಯ ಪರಿಹಾರ ಸೂಚಕ ಕಾರ್ಯಕ್ರಮದಲ್ಲಿ ಎಲ್ಲಾ ಕೊಡವ ಸಮಾಜಗಳ ಪ್ರತಿನಿಧಿಗಳು ಪಾಲ್ಗೊಳ್ಳಬೇಕೆಂದು ಒಕ್ಕೂಟದ ಪ್ರಮುಖರು ಮನವಿ ಮಾಡಿಕೊಂಡರು.

ಮುಂಬರುವ ಸಾಲಿನಲ್ಲಿ ಹರಿಹರ ಮುಕ್ಕಾಟಿರ ಕುಟುಂಬ ನಡೆಸುವ ಕೊಡವ ಹಾಕಿ ಹಬ್ಬ ಸೇರಿದಂತೆ ಎಲ್ಲಾ ಕೊಡವ ಕುಟುಂಬದ ಹಾಕಿ ಹಬ್ಬದ ಆಯೋಜನೆಗೆ ಒಕ್ಕೂಟ ಸಂಪೂರ್ಣ ಸಹಕಾರ ನೀಡಲು ಸಿದ್ಧವಿದೆ ಎಂದು ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಭರವಸೆ ನೀಡಿದರು. ಎಲ್ಲಾ ಕೊಡವ ಸಮಾಜಗಳ ಸದಸ್ಯರು ಕೊಡವ ಸಮಾಜಗಳ ಒಕ್ಕೂಟದ ಸದಸ್ಯರಾಗಿರುತ್ತಾರೆ ಎಂದು ಅವರು ಇದೇ ಸಂದರ್ಭ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಇಲ್ಲಿಯವರೆಗೆ ನಡೆದ ಒಕ್ಕೂಟದ ಸಾಧನೆ ಹಾಗೂ ಮುಂದಿನ ಕಾರ್ಯ ಸಾಧನೆಗಳ ವಿವರವನ್ನು ನೀಡಲಾಯಿತು.
ಪರಿಸರ ದಿನಾಚರಣೆ: ಸಭೆಗೂ ಮುನ್ನ ಕೊಡವ ಸಮಾಜದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸೇರಿದಂತೆ ಎಲ್ಲಾ ಸದಸ್ಯರು ಗಿಡ ನೆಡುವ ಮೂಲಕ ಪರಿಸರ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಿದರು.

ವೇದಿಕೆಯಲ್ಲಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಡ ರವಿ ಉತ್ತಪ್ಪ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೆ.ಎಸ್. ದೇವಯ್ಯ, ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಮಾಲೇಟಿರ ಅಭಿಮನ್ಯು ಕುಮಾರ್, ಬಾಳೆಲೆ ಕೊಡವ ಸಮಾಜದ ಅಧ್ಯಕ್ಷರಾದ ಮಲಚ್ಚೀರ ಬೋಸ್ ಚಿಟ್ಟಿಯಪ್ಪ, ಜಂಟಿ ಕಾರ್ಯದರ್ಶಿ ಕೋದಂಡ ಸನ್ನು ಉತ್ತಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಚೇರಿಯ ಪಂಡ ಕಶ್ಯಪ್ಪ ಹಾಗೂ ಪೋಷಕ ಸದಸ್ಯರಾದ ಎಂ.ಸಿ. ನಾಣಯ್ಯ, ಮಲ್ಲೆಂಗಡ ದಾದ ಬೆಳ್ಳಿಯಪ್ಪ, ದಾನಿ ಸದಸ್ಯರಾದ ಬೊಟ್ಟೋಳಂಡ ಮಿಟ್ಟು ಚಂಗಪ್ಪ, ಪೊಮ್ಮಕ್ಕಡ ಸಂಘದ ಅಧ್ಯಕ್ಷರಾದ ಚೆರಿಯಪಂಡ ಇಮ್ಮಿ ಉತ್ತಪ್ಪ ಸೇರಿದಂತೆ ಹಲವು ದಾನಿ ಸದಸ್ಯರು, ಕೊಡವ ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಒಕ್ಕೂಟದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಕಳ್ಳಿಚಂಡ ಶಾಲಿನಿ ಕಾರ್ಯಪ್ಪ ಪ್ರಾರ್ಥಿಸಿ, ವಾಟೇರಿರ ಶಂಕರಿ ಪೂವಯ್ಯ ವಂದಿಸಿದರು.

Translate »