ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಜೆಡಿಎಸ್ ಅಭ್ಯರ್ಥಿ ಪರ ಹಣ ಹಂಚುತ್ತಿದ್ದ ಪ್ರಾಂಶುಪಾಲ ಸೇರಿ ಇಬ್ಬರ ಬಂಧನ
ಕೊಡಗು

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಜೆಡಿಎಸ್ ಅಭ್ಯರ್ಥಿ ಪರ ಹಣ ಹಂಚುತ್ತಿದ್ದ ಪ್ರಾಂಶುಪಾಲ ಸೇರಿ ಇಬ್ಬರ ಬಂಧನ

June 7, 2018

ಕುಶಾಲನಗರ: ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಪರ ಮತದಾರ ಶಿಕ್ಷಕರಿಗೆ ಹಣ ಹಂಚುತ್ತಿದ್ದ ಇಬ್ಬರು ಜೆಡಿಎಸ್ ಬೆಂಬಲಿತರನ್ನು ಚುನಾವಣಾ ಧಿಗಳು ಬುಧವಾರ ಬಂಧಿಸಿ ರೂ.40 ಸಾವಿರ ನಗದು ವಶ ಪಡಿಸಿಕೊಂಡಿದ್ದಾರೆ.

ಸಮೀಪದ ಹೆಬ್ಬಾಲೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎನ್. ಧರ್ಮಪ್ಪ ಹಾಗೂ ಕೂಡಿಗೆ ಗ್ರಾಪಂ ಸದಸ್ಯ ಟಿ.ಕೆ.ವಿಶ್ವನಾಥ್ ಎಂಬುವವರೇ ಹಣ ಹಂಚುತ್ತಿದ್ದವರಾಗಿದ್ದು, ಇವರಿಬ್ಬರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಮೊಕ ದ್ದಮೆ ದಾಖಲಾಗಿದೆ.

ಇವರು ಶಿರಂಗಾಲ ಮತ್ತು ಹೆಬ್ಬಾಲೆ ಹಾಗೂ ಕುಶಾಲನಗರ ಮತ್ತಿತರರ ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿ ಬೋಜೇಗೌಡ ಅವರ ಪರವಾಗಿ ತಲಾ ರೂ.100 ಸಾವಿರ ಹಣ ವನ್ನು ಕವರ್ ನಲ್ಲಿ ಹಾಕಿ ಅದರ ಜೊತೆ ಕರಪತ್ರವನ್ನು ವಿತರಣೆ ಮಾಡುವ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಕ್ಕಿಬಿದ್ದಿದ್ದಾರೆ.

ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಶಿಕ್ಷಕರಿಗೆ ಹಣದ ಕವರ್ ನೀಡು ತ್ತಿದ್ದ ಇಬ್ಬರನ್ನೂ ಹಿಡಿದ ಕಾರ್ಯಕರ್ತರು ಹಣದ ಕವರ್ ಸಮೇತ ಚುನಾವಣಾಧಿಕಾರಿ ಗಳಿಗೆ ದೂರ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿ ಧರ್ಮ ರಾಜ್ ಮತ್ತು ಸಹಾಯಕ ಅಧಿಕಾರಿ ಸತ್ಯ ಕಾರು ಪರಿಶೀಲಿಸಿ ಹಣ ಹಂಚಲು ತಂದಿದ್ದ ಕವರ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಧರ್ಮಪ್ಪ ಮತ್ತು ವಿಶ್ವನಾಥ್ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳ ಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿ ಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಗೌರವಯುತ ಸ್ಥಾನದಲ್ಲಿರುವ ಶಿಕ್ಷಕರಿಗೆ ಹಣ ಹಂಚುವ ಮೂಲಕ ಅವರ ಘÀನತೆ, ಗೌರವಕ್ಕೆ ಕಪ್ಪುಚುಕ್ಕೆ ತರಲು ಹೋರಟಿರುವ ಜೆಡಿಎಸ್ ಅಭ್ಯರ್ಥಿ ಬೋಜೇಗೌಡ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬೋಜೇಗೌಡ ತಮ್ಮ ಬೆಂಬಲಿತರ ಮೂಲಕ ಶಿಕ್ಷಕರಿಗೆ ಹಣ ಹಂಚಿಸಲು ಮುಂದಾಗಿರುವ ಕ್ರಮ ಖಂಡನೀಯ ಇಂತಹ ಅಭ್ಯರ್ಥಿಯನ್ನು ಕೂಡಲೇ ಚುನಾವಣಾ ಕಣದಿಂದ ಅನರ್ಹಗೊಳಿಸ ಬೇಕು. ನೈರುತ್ಯ ಶಿಕ್ಷಕರ ಕ್ಷೇತ್ರ ಇದು ವರೆಗೂ ತನ್ನ ಪವಿತ್ರ್ಯತೆಯನ್ನು ಉಳಿಸಿ ಕೊಂಡಿತ್ತು.ಆದರೆ ಇಂತಹ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸಿ ಮತದಾರರಿಗೆ ಆಮಿಷ ತೋರಿಸಿ ಭ್ರಷ್ಟಾರನ್ನಾಗಿಸಲು ವಿಫಲ ಯತ್ನ ನಡೆಸಿದ್ದಾರೆ.ಆದರೆ ಗೌರವಯುತ ಶಿಕ್ಷಕರು ಈ ಆಮಿಷವನ್ನು ತಿರಸ್ಕರಿದ್ದಾರೆ. ಆದರೂ ಜೆಡಿಎಸ್ ಕಾರ್ಯಕರ್ತರು ಬಲವಂತ ವಾಗಿ ಈ ಹಣವನ್ನು ಅನಾಥಾಶ್ರಮಕ್ಕೆ ನೀಡಿ ಎಂದು ಉದ್ದಾಟನ ತೋರಿ ಹಣ ವನ್ನು ಅವರ ಕುರ್ಚಿ ಬಳಿ ಇಟ್ಟು ಬಂದಿ ದ್ದಾರೆ. ವಿಷಯ ತಿಳಿದ ಸಾರ್ವಜನಿಕರು ಹಣ ಹಂಚುತ್ತಿದ್ದವರನ್ನು ಹಿಡಿದು ಚುನಾವಣಾಧಿಕಾರಿಗಳಿಗೆ ಒಪ್ಪಿದ್ದಾರೆ. ಇದು ಸ್ವಾಗತಾರ್ಹ ಎಂದರು. ಎಐಸಿಸಿ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ವಿಧಾನಸಭಾ ಚುನಾಚಣೆ ಯಲ್ಲಿ ಬಿಜೆಪಿ ಅವರು ಹಣ ಹಂಚುತ್ತಿ ದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಅವರ ಕೈಗೊಂಬೆಯಂತೆ ವರ್ತಿಸಿದ್ದರು.

ಆದರೆ ಶಿಕ್ಷಕರ ಕ್ಷೇತ್ರದಲ್ಲಿ ಯೂ ಹಣ ಹಂಚುವ ಕೆಟ್ಟಚಾಳಿಯನ್ನು ಮಾಡು ತ್ತಿರುವ ಜೆಡಿಎಸ್ ಅಭ್ಯರ್ಥಿ ಬೋಜೇ ಗೌಡ ವಿರುದ್ಧ ಸೂಕ್ತ ಕ್ರಮಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.

Translate »