ಮಡಿಕೇರಿ: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೇಕರಿಯೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಮಡಿಕೇರಿಯಲ್ಲಿ ಸಂಭವಿಸಿದೆ.
ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿಯಿರುವ ಶೆಟ್ಟಿ ಸ್ವೀಟ್ಸ್ ಆ್ಯಂಡ್ ಬೇಕರಿಯಲ್ಲಿ ಬೆಳಗಿನ 4 ಗಂಟೆ ಸಮ ಯದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂ ಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ. ಪ್ಲಾಸ್ಟಿಕ್ ಮತ್ತು ಪೇಪರ್ ಬಾಕ್ಸ್‍ಗಳಿಗೆ ಬೆಂಕಿಯ ಕಿಡಿ ತಗುಲಿದ ಪರಿಣಾಮ ಕ್ಷಣಾರ್ಧದಲ್ಲೇ ಬೆಂಕಿ ಬೇಕರಿಯನ್ನು ಸಂಪೂರ್ಣವಾಗಿ ಆಪೋಷನ ಪಡೆ ದಿದೆ. ಬೇಕರಿಯಿಂದ ದಟ್ಟ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ಸಾರ್ವ ಜನಿಕರು ತಕ್ಷಣವೇ ಅಗ್ನಿಶಾಮಕ ಇಲಾ ಖೆಗೆ ಮಾಹಿತಿ ನೀಡಿದ್ದಾರೆ.
ಬೇಕರಿಗೆ ಹೊಂದಿಕೊಂಡಂತೆ ಪೆಟ್ರೋಲ್ ಬಂಕ್ ಇದ್ದು ಘಟನೆಯ ಗಂಭೀರತೆ ಅರಿತ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಬೇಕರಿ ಒಳ ಗಿದ್ದ ತಿಂಡಿ ತಿನಿಸುಗಳು, ರೆಫ್ರೀಜರೇ ಟರ್, ಓವನ್ ಸೇರಿದಂತೆ ಅಲು ಮೀನಿಯಂ ಪರಿಕರಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಅವಘಡದಿಂದ ಅಂದಾಜು 3ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದ್ದು ಈ ಕುರಿತು ಬೇಕರಿ ಮಾಲೀಕ ಕೃಷ್ಣ ಶೆಟ್ಟಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.