ಕೊಡವ ಸಮಾಜಗಳ ಒಕ್ಕೂಟದ ವಾರ್ಷಿಕ ಮಹಾಸಭೆ: ಸಭೆಯಲ್ಲಿ ಕೊಡಗು ಜಿಲ್ಲಾಧಿಕಾರಿಗಳ ಬಳಿ ಕೊಡವರ, ಕೊಡಗಿನ ಸಮಸ್ಯೆಗಳನ್ನು ಕೊಂಡೊಯ್ಯುವ ನಿರ್ಣಯ
ಕೊಡಗು

ಕೊಡವ ಸಮಾಜಗಳ ಒಕ್ಕೂಟದ ವಾರ್ಷಿಕ ಮಹಾಸಭೆ: ಸಭೆಯಲ್ಲಿ ಕೊಡಗು ಜಿಲ್ಲಾಧಿಕಾರಿಗಳ ಬಳಿ ಕೊಡವರ, ಕೊಡಗಿನ ಸಮಸ್ಯೆಗಳನ್ನು ಕೊಂಡೊಯ್ಯುವ ನಿರ್ಣಯ

June 7, 2018

ಮಡಿಕೇರಿ: ಕೊಡಗು ಜಿಲ್ಲೆ, ವಿರಾಜಪೇಟೆ ತಾಲೂಕು, ಬಾಳಗೋಡುವಿ ನಲ್ಲಿ ಜೂ. 5 ರಂದು ಕೊಡವ ಸಮಾಜ ಗಳ ಒಕ್ಕೂಟದ 2017-18ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು. ಒಕ್ಕೂಟದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸ್ಥಾಪಕ ಸದಸ್ಯರೂ ಆದ ಮಾಜಿ ಸಚಿವ ಎಂ.ಸಿ.ನಾಣಯ್ಯ, ದಾದಾ ಬೆಳ್ಯಪ್ಪ ಸೇರಿದಂತೆ ಸುಮಾರು 140 ಸದಸ್ಯರು ಭಾಗವಹಿಸಿದ್ದರು. ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರಿಯಪ್ಪ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಒಕ್ಕೂಟದ ಸದಸ್ಯರ ಸಂಖ್ಯೆಯನ್ನು ಹೆಚ್ಚಿ ಸುವ ಉದ್ದೇಶದಿಂದ ಸದಸ್ಯರ ನೋಂದಣ ಅಭಿಯಾನವನ್ನು ಮೂರು ವಿಭಾಗಗಳಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಕೊಡವ ಸಮಾಜ ಸದಸ್ಯತ್ವ, ದೇಣ ಗೆ ಸದಸ್ಯತ್ವ ಮತ್ತು ಕೊಡವ ಒಕ್ಕ (ಕುಟುಂಬ) ಸದಸ್ಯತ್ವ ಅಭಿ ಯಾನದ ಮೂಲಕ ಒಕ್ಕೂಟ ಬಲಗೊಳಿ ಸುವ ಉದ್ದೇಶವಿದೆ ಎಂದು ವಿವರ ನೀಡಿದರು.

ಒಕ್ಕೂಟದ ಕೆಲವು ಸದಸ್ಯರು ಜಂಟಿ ಯಾಗಿ ದಿನಾಂಕ 25.5.2018 ರಂದು ಮನವಿ ಪತ್ರ ಸಲ್ಲಿಸಿದ್ದು, ಒಕ್ಕೂಟದ 2017- 18ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಕೆಲ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಅವುಗಳ ಚರ್ಚೆ ನಡೆಸಿ, ಸೂಕ್ತ ನಿರ್ಧಾರ ತೆಗೆದು ಕೊಂಡು ಸಭೆಯಲ್ಲಿ ನಿರ್ಣಯ ಕೈಗೊಳ್ಳು ವಂತೆ ಕೋರಿದ್ದಾರೆ. ಆ ಮನವಿ ಪತ್ರದಲ್ಲಿ ಪ್ರಸ್ತಾಪಿಸಿರುವ ವಿಚಾರಗಳು ಕೆಳಕಂಡಂತಿವೆ:

  • ಸದಸ್ಯರಿಂದ ದೂರುಗಳು ಮತ್ತು ಮನವಿ ಪತ್ರಗಳನ್ನು ಸ್ವೀಕರಿಸಿ, ಅವುಗಳಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ಪರಿ ಹಾರಕ್ಕೆ ಬಂದು ಆಡಳಿತ ವಿಭಾಗವನ್ನು (ಸೆಕ್ರೇಟರಿಯೇಟ್) ಸ್ಥಾಪನೆ, ಅದಕ್ಕೆ ಒಬ್ಬ ಸಮರ್ಥ ಆಡಳಿತಗಾರನ ನೇಮಿಸುವುದು. ಈ ಅಂಗವು ವಿವಿಧ ಸರ್ಕಾರಿ ಇಲಾಖೆ ಯೊಂದಿಗೆ ವ್ಯವ ಹರಿಸುವುದರ ಜೊತೆಗೆ ಅಗತ್ಯಬಿದ್ದಲ್ಲಿ, ಸಾಮಾನ್ಯ ಮಂಡಳಿ ಅಥವಾ ಅಧ್ಯಕ್ಷರು ಇಲ್ಲವೇ ಒಕ್ಕೂಟದ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸುವುದು.
  • ಕೊಡವರಿಗೆ, ಭಾಷಾವಾರು ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಒಕ್ಕೂ ಟವು ಪ್ರಯತ್ನಿಸಬೇಕು.
  • ಕೊಡವರಿಗೆ ಸಾಂವಿಧಾನಿಕವಾಗಿ ಸಿಗ ಬೇಕಾದ ಬುಡಕಟ್ಟು ಪಂಗಡ ಸ್ಥಾನಮಾನಕ್ಕೆ ಒಕ್ಕೂಟ ಪ್ರಯತ್ನಿಸಬೇಕು.
  • ಕೊಡವರ ಪ್ರಮುಖ ದೇವಾಲಯ ಗಳಾದ ಕಕ್ಕಬೆ ಶ್ರೀಪಾಡಿ ಇಗ್ಗುತಪ್ಪ ದೇವಸ್ಥಾನ, ಭಾಗಮಂಡಲದ ಭಗಂ ಡೇಶ್ವರಿ ದೇವಸ್ಥಾನ, ಬಾಡಗದ ಮೃತ್ಯುಂ ಜಯ ಇತ್ಯಾದಿ ದೇವಸ್ಥಾನಗಳ ಪಾವಿತ್ರ್ಯತೆ ಯನ್ನು ಕಾಯ್ದುಕೊಂಡು ಹೋಗಲು ಅನು ವಾಗುವಂತೆ ಇವುಗಳ ಸಮೀಪ ಇನ್ನಿತರೆ ಯಾವುದೇ ಹೊಸ ಪೂಜಾ ಸ್ಥಳಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು.
  • ಕೊಡವರಿಗೆ ಜಾತಿ ಪ್ರಮಾಣ ಪತ್ರ ವನ್ನು ವಿತರಿಸುವ ಸಂಬಂಧವೂ ಗಮನ ಹರಿಸಬೇಕು. ಪ್ರಸ್ತುತ, ತಹಸೀಲ್ದಾರ್ ಅವರು `ಕೊಡವ’ ಎಂಬುದರ ಬದಲಾಗಿ `ಕೊಡಗರು’ ಎಂದು ಪ್ರಮಾಣಪತ್ರವನ್ನು ವಿತರಿಸು ತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆ ಗಳ ಸವಲತ್ತುಗಳನ್ನು ಪಡೆಯುವ ಸಂದ ರ್ಭದಲ್ಲಿ ಈ ರೀತಿಯ ಜಾತಿ ಪ್ರಮಾಣ ಪತ್ರದಿಂದ ಸಮಸ್ಯೆ ಉದ್ಭವವಾಗುತ್ತಿದೆ. ಇದರ ಬಗ್ಗೆಯೂ ಒಕ್ಕೂಟ ಗಮನಹರಿಸಬೇಕು.
  • ಪುಕೋಲ, ಬೀರುನಾಣ ಯಿಂದ ವೀರಾಜಪೇಟೆಗೆ ಕೋಟಿಯಾಲ ಮಾರ್ಗ ವಾಗಿ ಕೈಗೆತ್ತಿಕೊಂಡಿರುವ ಬಾಕಿ 600 ಮೀಟರ್ ಗಳ ರಸ್ತೆ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಸಂಬಂಧಪಟ್ಟ ಸರ್ಕಾರಿ ಇಲಾಖೆಯೊಂದಿಗೆ ಒಕ್ಕೂಟವು ಚರ್ಚಿಸ ಬೇಕು. ಇದರಿಂದ ವಿವಿಧ ಗ್ರಾಮಸ್ಥರಿಗೆ ವಿರಾಜಪೇಟೆ ತಾಲೂಕು ಕೇಂದ್ರ ಸ್ಥಾನಕ್ಕೆ ಬರಲು ಸುಮಾರು 28 ಕಿಲೋ ಮೀಟರ್ ಅಂತರ ಕಡಿಮೆಯಾಗುತ್ತದೆ.
  • ದಕ್ಷಿಣ ಕೊಡಗಿನ ಮೂಲಕ ಕೇರಳಕ್ಕೆ ಹಾದು ಹೋಗಿರುವ ಹೈಟೆನ್ಷನ್ ಪವರ್ ಲೈನ್ ವಿರುದ್ಧ ಪ್ರತಿಭಟನೆ ಹಾಗೂ ಚಳುವಳಿ ಯಲ್ಲಿ ಭಾಗವಹಿಸಿದ್ದವರ ವಿರುದ್ಧ ಹೂಡಿ ರುವ ಮೊಕದ್ದಮೆಗಳನ್ನು ಹಿಂಪಡೆಯುವ ಸಂಬಂಧ ಒಕ್ಕೂಟ ಸರ್ಕಾರದೊಂದಿಗೆ ಚರ್ಚಿಸಬೇಕು.

ಈ ಎಲ್ಲಾ ವಿಚಾರಗಳನ್ನು ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಈಗಾಗಲೇ ಒಕ್ಕೂಟದ ಕಾರ್ಯಕಾರಿ ಮಂಡಳಿ ಎಲ್ಲಾ ಕೊಡವ ಸಮಾಜಗಳ ಪ್ರತಿನಿಧಿಗಳ ವಿಶೇಷ ಸಭೆ ಕರೆದು, ನಿರ್ಣಯ ಕೈಗೊಂಡಿದೆ ಎಂದು ಅಧ್ಯಕ್ಷರು ತಿಳಿಸಿದರು.

ಇದೇ ವೇಳೆ ಮೈಸೂರು ಕೊಡವ ಸಮಾಜ ಮತ್ತು ಕೊಡಗಿನ ಇನ್ನಿತರ ಕೊಡವ ಸಮಾಜ ಗಳ ಸಹಕಾರದೊಂದಿಗೆ ಕೊಡಗು ಮಾರ್ಗ ವಾಗಿ ಹಾದು ಹೋಗುವ ಪ್ರಸ್ತಾಪಿತ ರೈಲ್ವೆ ಮಾರ್ಗದ ವಿರುದ್ಧ ಮೈಸೂರಿನಲ್ಲಿ ಬೃಹತ್ ಹೋರಾಟ ನಡೆಸಿದ ಸಂಬಂಧ ಅಚ್ಚರಿ ವ್ಯಕ್ತಪಡಿಸಿದ ಒಕ್ಕೂಟದ ಹಿರಿಯ ಸದಸ್ಯರೊಬ್ಬರು, ಇಂತಹ ವಿಚಾರಗಳಲ್ಲಿ ಮೊದಲು ಒಕ್ಕೂಟದಲ್ಲಿ ಪ್ರಸ್ತಾಪಿಸಿ, ಚರ್ಚಿಸಿದ ನಂತರವೇ ಹೋರಾಟ ವನ್ನು ಕೊಡಗಿನಲ್ಲೇ ಹಮ್ಮಿಕೊಳ್ಳುವಂತಾಗ ಬೇಕೆಂದು ಅಭಿಪ್ರಾಯಪಟ್ಟರು.
ಈ ಮಧ್ಯೆ, ಇಲ್ಲಿವರೆಗೆ ತರಾತುರಿಯಲ್ಲಿ ನಡೆದಂತಹ ಕೆಲವೊಂದು ಹೋರಾಟ ಗಳಲ್ಲಿ ಒಕ್ಕೂಟವು ನಾಯಕತ್ವ ವಹಿಸಲು ಸಾಧ್ಯವಾಗಲಿಲ್ಲ ಎಂದು ಅಧ್ಯಕ್ಷರು ಸಮಜಾ ಯಿಷಿ ನೀಡಿದರು. ವಂದನಾರ್ಪಣೆ ಹಾಗೂ ಭೋಜನದೊಂದಿಗೆ ಸಭೆ ಸಮಾಪ್ತಿಗೊಂಡಿತು.

Translate »