ವ್ಯಾನ್ ಡಿಕ್ಕಿ: ಬೈಕ್ ಸವಾರ ಸಾವು – ಇದೊಂದು ಹತ್ಯೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರ ಪ್ರತಿಭಟನೆ
ಚಾಮರಾಜನಗರ

ವ್ಯಾನ್ ಡಿಕ್ಕಿ: ಬೈಕ್ ಸವಾರ ಸಾವು – ಇದೊಂದು ಹತ್ಯೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರ ಪ್ರತಿಭಟನೆ

June 7, 2018

ಗುಂಡ್ಲುಪೇಟೆ: ಬೈಕ್‍ಗೆ ವ್ಯಾನ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ತ್ರಿಯಂಬಕಪುರ ಗ್ರಾಮದಲ್ಲಿ ನಡೆದಿದ್ದು, ಕುಟುಂಬದವರು ಇದೊಂದು ಹತ್ಯೆ ಎಂದು ಆರೋಪಿಸಿದ್ದಾರೆ.

ತ್ರಿಯಂಬಕಪುರ ಗ್ರಾಮದ ಗ್ರಾಪಂ ಸದಸ್ಯ ವೆಂಕಟೇಶ್ ಎಂಬುವರ ಮಗ ಶಿವಮೂರ್ತಿ (26) ಮೃತಪಟ್ಟ ಬೈಕ್ ಸವಾರ.
ಶಿವಮೂರ್ತಿ ತನ್ನ ಬೈಕ್‍ನಲ್ಲಿ ತೆರಕ ಣಾಂಬಿ ಕಡೆಗೆ ಬರುತ್ತಿದ್ದಾಗ ಹಿಂದಿನಿಂದ ಬಂದ ಪಿಕಪ್ ವ್ಯಾನ್ ಶಿವಮೂರ್ತಿ ಬೈಕ್‍ಗೆ ಡಿಕ್ಕಿ ಹೊಡೆದಿದೆನ್ನಲಾಗಿದೆ. ಇದರಿಂದ ತೀವ್ರ ವಾಗಿ ಗಾಯಗೊಂಡ ಶಿವಮೂರ್ತಿ ಸ್ಥಳ ದಲ್ಲೇ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ತೆರಕಣಾಂಬಿ ಠಾಣಾ ಸಬ್ ಇನ್ಸ್‍ಪೆಕ್ಟರ್ ರವಿಕಿರಣ್, ಎಎಸ್‍ಐ ಶಿವಣ್ಣ ಅವರು ಪರಿಶೀಲನೆ ನಡೆಸಿದ್ದು, ಎರಡೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪ: ಕಳೆದ ಗ್ರಾಪಂ ಚುನಾವಣೆ ವೇಳೆ ಗ್ರಾಪಂ ಮಾಜಿ ಸದಸ್ಯ ಗುರು ಮಲ್ಲಪ್ಪ, ಅವರ ಸಹೋದರ ನಾಗರಾಜಪ್ಪ ಜೊತೆ ಮನಸ್ತಾಪವಿದ್ದು, ಈ ದ್ವೇಷ ದಿಂದಲೇ ನನ್ನ ಮಗನನ್ನು ಹತ್ಯೆ ಮಾಡಿ ದ್ದಾರೆ ಎಂದು ಹಾಲಿ ಸದಸ್ಯ, ಮೃತನ ತಂದೆ ವೆಂಕಟೇಶ್ ಪೊಲೀಸರಿಗೆ ನೀಡಿ ರುವ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರತಿಭಟನೆ: ತೆರಕಣಾಂಬಿ ಸಮೀಪ ಮಂಗಳವಾರ ಸಂಜೆ ನಡೆದ ರಸ್ತೆ ಅಪ ಘಾತದಲ್ಲಿ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡರು ಪಟ್ಟ ಣದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಬಳಿ ಯಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ದವರೆಗೆ ಮೆರವಣ ಗೆ ನಡೆಸಿದ ಕಾರ್ಯ ಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲೂಕಿನ ತ್ರಿಯಂಬಕಪುರ ಗ್ರಾಮದ ಬಿಜೆಪಿ ಕಾರ್ಯಕರ್ತ ಹಾಗೂ ಗ್ರಾಪಂ ಮಾಜಿ ಸದಸ್ಯ ನಾಗರಾಜಪ್ಪ ಹಾಗೂ ಗ್ರಾಪಂ ಕಾಂಗ್ರೆಸ್ ಸದಸ್ಯ ವೆಂಕಟೇಶ್ ಕುಟುಂ ಬದ ನಡುವೆ ಗಲಾಟೆ ನಡೆದಿದ್ದು, ಈ ಬಗ್ಗೆ ವೆಂಕಟೇಶ್ ಅವರ ಮಗ ಶಿವ ಮೂರ್ತಿ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಲು ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ನಾಗರಾಜಪ್ಪ ಕುಟುಂಬ ದವರು ಪಿಕಪ್ ವಾಹನದಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಮುಖಂಡರು ಆರೋಪಿಸಿದರು.

ಈ ಘಟನೆಗೆ ಬಿಜೆಪಿ ಮುಖಂಡರ ಕುಮ್ಮಕ್ಕಿದ್ದು, ಆರೋಪಿಗಳು ತಲೆಮರೆಸಿ ಕೊಂಡಿದ್ದಾರೆ. ಆದ್ದರಿಂದ ಪೊಲೀಸ್ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿ ಗಳನ್ನು ಬಂಧಿಸಿ ನ್ಯಾಯ ಒದಗಿಸಬೇಕು ಮತ್ತು ಗೂಂಡಾಗಿರಿ ನಿಲ್ಲಬೇಕು ಎಂದು ಆಗ್ರಹಿ ಸಿರುವ ಮನವಿ ಪತ್ರವನ್ನು ತಹಸೀಲ್ದಾರ್ ಚಂದ್ರಶೇಖರ್ ಅವರಿಗೆ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಯುವ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್, ಜಿಪಂ ಸದಸ್ಯರಾದ ಬಿ.ಕೆ. ಬೊಮ್ಮಯ್ಯ, ಪಿ.ಚನ್ನಪ್ಪ, ಕೆ.ಎಸ್. ಮಹೇಶ್, ಪುರಸಭೆ ಸದಸ್ಯ ಬಿ.ವೆಂಕಟಾಚಲ, ಅಂಗಡಿ ಶಿವಕುಮಾರ್, ಮುಖಂಡರಾದ ಪಿ.ಚಂದ್ರಪ್ಪ, ಎಚ್.ಎನ್.ಬಸವರಾಜು, ಮುನಿರಾಜು, ಎಸ್.ಆರ್.ಎಸ್.ರಾಜು, ಕೆಂಪರಾಜು, ವಿಶ್ವ, ಎಲ್.ಸುರೇಶ್ ಸೇರಿದಂತೆ ಹಲವರು ಇದ್ದರು.

Translate »