ಮಡಿಕೇರಿ, ಮಾ.9(ಪ್ರಸಾದ್)- ಅರಸರ ಆಳ್ವಿಕೆಯ ಕುರುಹಾಗಿ ಇಂದಿನ ಮತ್ತು ಮುಂದಿನ ಪೀಳಿಗೆ ಪಾಲಿಗೆ ಸ್ಮಾರಕವಾಗಿ ಉಳಿದಿರುವ ಮಡಿಕೇರಿ ಕೋಟೆಯನ್ನು ಸಂರಕ್ಷಿಸುವ ಕಾರ್ಯವನ್ನು ರಾಜ್ಯ ಪುರಾತತ್ವ ಇಲಾಖೆ ಆರಂಭಿಸಿದೆ. ಈ ಹಿಂದೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ತುತ್ತಾಗಿ ಶಿಥಿಲಾವಸ್ಥೆ ತಲುಪಿದ್ದ ಕೋಟೆ ಸ್ಮಾರಕವನ್ನು ಪುರಾತತ್ವ ಇಲಾಖೆ ಮೂಲಕ ಸಂರಕ್ಷಿಸುವ ಕಾರ್ಯ ಆರಂಭವಾಗಿದ್ದು, ಹೈಕೋರ್ಟ್ ನಿರ್ದೇಶನದಂತೆ ಆರಂಭವಾಗಿರುವ ಪುನಶ್ಚೇತನ ಕಾಮಗಾರಿ ಏ.18ಕ್ಕೆ ಪೂರ್ಣಗೊಳಿಸಬೇಕಿದೆ. ರಾಜ್ಯ ಹೈಕೋರ್ಟ್ ನಿರ್ದೇಶನದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಉಸ್ತುವಾರಿ ಯಲ್ಲಿ ಕಾಮಗಾರಿ ಆರಂಭವಾಗಿದ್ದು, ಇದಕ್ಕಾಗಿ ರಾಜ್ಯ…
ಶಿರಂಗಾಲದಲ್ಲಿ ಶ್ರೀ ಉಮಾಮಹೇಶ್ವರ ದೇವರ ರಥೋತ್ಸವ
March 10, 2020ಕುಶಾಲನಗರ,ಮಾ.9-ಸೋಮವಾರ ಪೇಟೆ ತಾಲೂಕಿನ ಅರೆಮಲೆನಾಡು ಹಾಗೂ ಬಯಲುಸೀಮೆ ಪ್ರದೇಶವಾದ ಶಿರಂಗಾಲ ಗ್ರಾಮದಲ್ಲಿ ಸೋಮವಾರ ಶ್ರೀ ಉಮಾ ಮಹೇಶ್ವರ ದೇವರ ರಥೋತ್ಸವ ವೈಭವ ಯುತವಾಗಿ ನಡೆಯಿತು. ಗ್ರಾಮದ ಕಾವೇರಿ ನದಿ ದಂಡೆಯ ಮೇಲೆ ಇರುವ ಶ್ರೀ ಉಮಾಮಹೇಶ್ವರ ದೇವಸ್ಥಾನವನ್ನು 9 ನೇ ಶತಮಾನದಲ್ಲಿ ಚೋಳರ ಒಂದನೇ ರಾಜ ರಾಜ ಜೋಳ ನಿರ್ಮಾಣ ಮಾಡಿದರು. ಪ್ರತಿ ಶಿವರಾತ್ರಿ ಯಂದು ವಿಶೇಷ ಪೂಜಾ ಕಾರ್ಯ ನಡೆ ಯುವುದರೊಂದಿಗೆ ಆ ದಿನದಂದು ಸೂರ್ಯೋದಯದ ಸೂರ್ಯನ ಕಿರಣಗಳು ನೇರವಾಗಿ ಉಮಾಮಹೇಶ್ವರ ದೇವ ಸ್ಥಾನದ ವಿಗ್ರಹದ…
ಅಕ್ರಮ ಮರಳು ಸಾಗಣೆ: ಇಬ್ಬರ ಬಂಧನ
March 10, 2020ಮಡಿಕೇರಿ,ಮಾ.9-ಯಾವುದೇ ಅಧಿಕೃತ ರಹದಾರಿ ಪಡೆಯದೇ ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದ ಕಡೆಯಿಂದ ಸೋಮವಾರ ಪೇಟೆ ಪಟ್ಟಣದ ಕಡೆಗೆ ಅಕ್ರಮ ವಾಗಿ ಮರಳು ಸಾಗಿಸು ತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ, ಮರಳು ತುಂಬಿದ್ದ ಲಾರಿ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ವಿವರ: ಕೂತಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಮಾ.7ರಂದು ಡಿಸಿಐಬಿ ಪೊಲೀಸರು ಸೋಮವಾರಪೇಟೆ…
ಸಿವಿಲ್, ಜಿಲ್ಲಾ ಸಶಸ್ತ್ರ ಪಡೆ ಸಿಬ್ಬಂದಿಗಳ ನೇಮಕಾತಿಗೆ ಚಾಲನೆ
March 10, 2020ಮಡಿಕೇರಿ,ಮಾ.9-ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 79 ಸಿವಿಲ್ ಮತ್ತು 54 ಜಿಲ್ಲಾ ಸಶಸ್ತ್ರ ಪೊಲೀಸ್ ಸಿಬ್ಬಂದಿಗಳ ನೇಮಕಾತಿಗಾಗಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಒಟ್ಟು ಮೂರು ದಿನಗಳ ಕಾಲ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, 2019ರ ನವೆಂಬರ್‍ನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಪಾಸಾಗಿರುವ ಅಭ್ಯರ್ಥಿಗಳು ನೇಮ ಕಾತಿಯಲ್ಲಿ ಪಾಲ್ಗೊಂಡಿದ್ದಾರೆ. 79 ಸಿವಿಲ್ ಪೊಲೀಸ್ ಹುದ್ದೆಗೆ ನಡೆಸ ಲಾದ ಪರೀಕ್ಷೆಯಲ್ಲಿ ಒಟ್ಟು 395 ಅಭ್ಯರ್ಥಿ ಗಳು ಮತ್ತು 54 ಸಶಸ್ತ್ರ…
ಅಧಿಕಾರಿಯನ್ನೇ ಹಿಮ್ಮೆಟ್ಟಿಸಿದ ಕಾಡಾನೆಗಳು…!
March 10, 2020ಮಡಿಕೇರಿ,ಮಾ.9-ಕಾಡಾನೆಗಳನ್ನು ಕಾಫಿ ತೋಟದೊಳಗಿ ನಿಂದ ಓಡಿಸಲು ಹೋದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೇ ಕಾಡಾನೆಗಳು ಹಿಮ್ಮೆಟ್ಟಿಸಿದ ಘಟನೆ ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ಚೆಟ್ಟಳ್ಳಿ ವ್ಯಾಪ್ತಿಯ ಮೋದೂರು, ಹೊರೂರು ಹಾಗೂ ಈರಳೆ ವಳಮುಡಿ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯಾಧಿಕಾರಿ ಸುಬ್ರಾಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆಯ ಸಂದರ್ಭ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಕಾಫಿ ತೋಟದಿಂದ ಕಾಡಾನೆಗಳನ್ನು ಓಡಿಸಲು ಪಟಾಕಿ ಸಿಡಿಸಿದರು. ಈ ವೇಳೆ ಕಾಡಾನೆಗಳ ಹಿಂಡಿನ ಪೈಕಿ 2 ಹೆಣ್ಣಾನೆಗಳು…
ಬಾಳುಗೋಡಿನಲ್ಲಿ ಮುಕ್ಕಾಟೀರ ಹಾಕಿ ಕಪ್ ಉತ್ಸವಕ್ಕೆ ಭೂಮಿ ಪೂಜೆ
March 10, 2020ವೀರಾಜಪೇಟೆ,ಮಾ.9-ಮುಂದಿನ ಏಪ್ರಿಲ್ ತಿಂಗಳ 19 ರಿಂದ ಮೇ, 17ರ ವರೆಗೆ ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗಿನ ಬೆಳ್ಳೂರು-ಹರಿಹರ ಗ್ರಾಮದ ಮುಕ್ಕಾಟೀರ ಫ್ಯಾಮಿಲಿ ಅಸೋಸಿಯೇಶನ್‍ನ ಮುಕ್ಕಾಟೀರ ಕುಟುಂಬದ ಹಾಕಿ ಉತ್ಸವ ನಡೆಯಲಿದೆ ಎಂದು ಕುಟುಂಬದ ಅಧ್ಯಕ್ಷ ಮುಕ್ಕಾಟೀರ ಉತ್ತಯ್ಯ ತಿಳಿಸಿದರು. ಮುಕ್ಕಾಟೀರ ಹಾಕಿ ಕಪ್ ಉತ್ಸವದ ಅಂಗವಾಗಿ ಕೊಡವ ಸಮಾಜಗಳ ಒಕ್ಕೂ ಟದ ಮೈದಾನದಲ್ಲಿ ಭೂಮಿ ಪೂಜೆ ನೆರ ವೇರಿಸಿದ ಬಳಿಕ ಮಾತನಾಡಿದ ಉತ್ತಯ್ಯ, ಈ ಬಾರಿ ಕುಟುಂಬದ ಹಾಕಿ ಉತ್ಸವದಲ್ಲಿ ಸುಮಾರು 350…
ಮಡಿಕೇರಿಯಲ್ಲಿ ಬ್ರಿಟೀಷರ ಗೋರಿಗಳ ದುಸ್ಥಿತಿ
March 9, 2020ಮಡಿಕೇರಿ.ಫೆ,23-ಕೊಡಗು ಜಿಲ್ಲೆ ಯಲ್ಲೂ ಬ್ರಿಟಿಷರು ಆಳ್ವಿಕೆ ನಡೆಸಿದ್ದ ರೆಂಬುದು ಇತಿಹಾಸವಾಗಿದೆ. ತಮ್ಮದೇ ಆರ್ಮಿಯನ್ನು ಹೊಂದಿದ್ದ ಬ್ರಿಟಿಷರು ಅದರ ಸಹಾಯದಿಂದಲೇ ಜಿಲ್ಲೆಯಲ್ಲಿ ಆಡಳಿತ ನಡೆಸಿದ್ದರು. ಇಂತಹ ನೂರಾರು ಸೈನಿಕರ ಮತ್ತು ಸೈನ್ಯಾಧಿಕಾರಿಗಳ ಗೋರಿಗಳು ಮಡಿ ಕೇರಿಯ ಕೈಗಾರಿಕಾ ತರಬೇತಿ ಕೇಂದ್ರದ ಹಿಂಭಾಗದ ಪ್ರದೇಶದಲ್ಲಿ ಶಿಥಿಲ ಸ್ಥಿತಿ ಯಲ್ಲಿವೆ. ಕೆಲವು ಗೋರಿಗಳು ಅಮೃತ ಶಿಲೆಗಳಿಂದ ಮಾಡಲ್ಪಟ್ಟಿದ್ದರೆ, ಮತ್ತೆ ಕೆಲವು ಗೋರಿಗಳು ಕಲ್ಲಿನಿಂದ ಪಿರ ಮಿಡ್ ಆಕಾರದಲ್ಲಿ ನಿರ್ಮಿಸಲಾಗಿದೆ. ಬಹುತೇಕ ಗೋರಿಗಳು ಕಿಡಿಗೇಡಿಗಳ ಕಲ್ಲೇಟಿಗೆ ಧ್ವಂಸವಾಗಿದ್ದರೆ ಕೆಲವು ಸಂಪೂರ್ಣ ವಾಗಿ ಮಣ್ಣಿನಡಿ…
ಪ್ರವಾಹ ಮುನ್ನೆಚ್ಚರಿಕೆಯಾಗಿ ಕಾವೇರಿ ನದಿ ತಟ ಪರಿಶೀಲನೆ ನಡೆಸಿದ ಅಪ್ಪಚ್ಚುರಂಜನ್
March 9, 2020ಕುಶಾಲನಗರ,ಮಾ.8-ಪಟ್ಟಣದ ಬೈಚನಹಳ್ಳಿ, ಮುಳ್ಳುಸೋಗೆ ಕೂಡುಮಂಗ ಳೂರು ವ್ಯಾಪ್ತಿಯ ಕಾವೇರಿ ನದಿ ತಟಗಳಿಗೆ ಭೇಟಿ ನೀಡಿದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ನದಿಯ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಮಳೆಗಾಲದಲ್ಲಿ ಅತಿವೃಷ್ಠಿ ಸಂದರ್ಭ ಮುಳುಗಡೆಯಾಗಿದ್ದ ಪ್ರದೇಶಗಳಾದ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾ ಲಯ, ಬೈಚನಹಳ್ಳಿಯ ಮುತ್ತಪ್ಪ ದೇವಾ ಲಯ, ಮುಳ್ಳುಸೋಗೆ ಕುವೆಂಪು ಬಡಾ ವಣೆ, ಕೂಡ್ಲೂರು ಕೈಗಾರಿಕಾ ಪ್ರದೇಶದ ನದಿ ತಟಗಳಿಗೆ ಭೇಟಿ ನೀಡಿ ಅವರು ಪರಿಶೀಲಿಸಿದರು. ನದಿಯಲ್ಲಿ ಬೆಳೆದಿರುವ ಕಾಡು, ಮಣ್ಣಿನ ದಿಣ್ಣೆಗಳ ಬಗ್ಗೆ ಕುಶಾಲ ನಗರದ…
ರಸ್ತೆ ಅಭಿವೃದ್ಧಿಗೆ ಈ ಬಾರಿ ಹೆಚ್ಚು ಅನುದಾನ
March 9, 2020ವೀರಾಜಪೇಟೆ,ಮಾ,8-ಕೊಡಗಿನ ರಸ್ತೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿ ಗಳಿಗಾಗಿ ಹಿಂದಿನ ವರ್ಷಗಳಿಗಿಂತಲೂ ಈ ಸಾಲಿನಲ್ಲಿ ಹೆಚ್ಚು ಅನುದಾನ ದೊರ ಕಿದ್ದು, ಮಳೆಗಾಲಕ್ಕ್ಕೂ ಮುಂಚೆ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವೀರಾಜಪೇಟೆ ಸಮೀಪದ ಚೆಂಬೆ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮಂಗಲ-ಚೆಂಬೆಬೆಳ್ಳೂರು ಸಂಪರ್ಕ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ರೂ,35 ಲಕ್ಷ ಅನು ದಾನದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈ ವ್ಯಾಪ್ತಿಯಲ್ಲಿ ಉಳಿದಿರುವ ಆರು ಗ್ರಾಮಗಳ ರಸ್ತೆ…
ಕೊಡವ ಮಹಿಳೆಯರಿಗೆ ಆಂತರಿಕ ಮೀಸಲಾತಿ ಖಾತ್ರಿಗೆ ಒತ್ತಾಯ
March 8, 2020ಮಡಿಕೇರಿ,ಮಾ.7-ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಸಂದರ್ಭ ಕೊಡವ ಮಹಿಳೆಯರಿಗೆ ಆಂತರಿಕ ಮೀಸಲಾತಿ ಖಾತ್ರಿ ಪಡಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ಒತ್ತಾಯಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿ ರುವ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಕೊಡವ ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚು ಆಸಕ್ತಿ ತೋರಿ ಸಿಎನ್‍ಸಿ ಸಂಘಟನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಳಿ ಆಂತರಿಕ ಮೀಸಲಾತಿ ಗಾಗಿ ಒತ್ತಾಯಿಸುತ್ತಿರುವುದಾಗಿ ತಿಳಿಸಿದ್ದಾರೆ. ದೇಶದ ಸಂವಿಧಾನ ವಿವಿಧ…