ವೀರಾಜಪೇಟೆ,ಮಾ.9-ಮುಂದಿನ ಏಪ್ರಿಲ್ ತಿಂಗಳ 19 ರಿಂದ ಮೇ, 17ರ ವರೆಗೆ ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗಿನ ಬೆಳ್ಳೂರು-ಹರಿಹರ ಗ್ರಾಮದ ಮುಕ್ಕಾಟೀರ ಫ್ಯಾಮಿಲಿ ಅಸೋಸಿಯೇಶನ್‍ನ ಮುಕ್ಕಾಟೀರ ಕುಟುಂಬದ ಹಾಕಿ ಉತ್ಸವ ನಡೆಯಲಿದೆ ಎಂದು ಕುಟುಂಬದ ಅಧ್ಯಕ್ಷ ಮುಕ್ಕಾಟೀರ ಉತ್ತಯ್ಯ ತಿಳಿಸಿದರು.
ಮುಕ್ಕಾಟೀರ ಹಾಕಿ ಕಪ್ ಉತ್ಸವದ ಅಂಗವಾಗಿ ಕೊಡವ ಸಮಾಜಗಳ ಒಕ್ಕೂ ಟದ ಮೈದಾನದಲ್ಲಿ ಭೂಮಿ ಪೂಜೆ ನೆರ ವೇರಿಸಿದ ಬಳಿಕ ಮಾತನಾಡಿದ ಉತ್ತಯ್ಯ, ಈ ಬಾರಿ ಕುಟುಂಬದ ಹಾಕಿ ಉತ್ಸವದಲ್ಲಿ ಸುಮಾರು 350 ತಂಡಗಳು ಭಾಗವಹಿ ಸುವ ನಿರೀಕ್ಷೆ ಇದೆ. ಹಾಕಿ ಉತ್ಸವಕ್ಕೆ ಅಂದಾಜು ಒಂದು ಕೋಟಿಗೂ ಅಧಿಕ ವೆಚ್ಚವಾಗಲಿದ್ದು. ಹಾಕಿ ಪಂದ್ಯಾಟಕ್ಕಾಗಿ ಒಕ್ಕೂಟದ ಮೂರು ಮೈದಾನಗಳನ್ನು ಬಳಸಲಾಗುವುದು ಹಾಗೂ ಹಾಕಿ ಉತ್ಸವ ವನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲ ಸಿದ್ಧತೆಗಳು ನಡೆದಿದೆ ಎಂದರು.
ಮುಕ್ಕಾಟೀರ ಹಾಕಿ ಉತ್ಸವ ಸಮಿತಿಯ ಶಿವು ಮಾದಪ್ಪ ಮಾತನಾಡಿ, ಹಾಕಿ ಆಟದ ಪ್ರೇಮಿಗಳಿಗೆ ವೀರಾಜಪೇಟೆ ಹಾಗೂ ಗೋಣಿಕೊಪ್ಪಲಿನಿಂದ ಬಸ್ಸು ಸೌಲಭ್ಯ ಹಾಗೂ ಮೈದಾನದಲ್ಲಿ ಸದ್ಭಳಕೆಯಾಗು ವಂತೆ ಖಾಸಗಿ ಇಂಟರ್ ನೆಟ್ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ರೋಹಿತ್ ಸುಬ್ಬಯ್ಯ ಮಾತನಾಡಿ ಕೊಡವ ಸಮಾಜಗಳ ಒಕ್ಕೂಟದ ಮೈದಾ ನವನ್ನು ಆಧುನಿಕ ಕ್ರೀಡಾಂಗಣವಾಗಿ ಮಾರ್ಪಡಿಸಲು ರಾಜ್ಯ ಸರಕಾರ ರೂ.5 ಕೋಟಿ ಮಂಜೂರು ಮಾಡಿದೆ. ಸಧ್ಯದ ಲ್ಲಿಯೇ ಕಾಮಗಾರಿ ಆರಂಭವಾಗಲಿದ್ದು ಮುಂದಿನ ಸಾಲಿನಲ್ಲಿ ಕ್ರೀಡೋತ್ಸವಕ್ಕಾಗಿ ಕ್ರೀಡಾಂಗಣ ಸಜ್ಜಾಗಲಿದೆ. ಇದರಿಂದ ಎಲ್ಲ ಪ್ರತಿಷ್ಠಿತ ಪಂದ್ಯಾಟಗಳಿಗೆ ಆಧುನಿಕ ಕ್ರೀಡಾಂಗಣ ಒಂದು ಉತ್ತಮ ಸೌಲಭ್ಯ ವಾಗಲಿದೆ ಎಂದು ಹೇಳಿದರು.
ಭೂಮಿ ಪೂಜೆ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಪೂಮಣಿ, ಖಜಾಂಚಿ ರಿತೇಶ್ ಬಿದ್ದಪ್ಪ, ಅಸೋಶಿ ಯೇಟೆಡ್ ಕಾರ್ಯದರ್ಶಿ ಲಕ್ಷ್ಮಣ್, ಮೈದಾನಗಳ ಮೇಲ್ವಿಚಾರಕರಾದ ಶುಭ, ಕೊಡವ ಸಮಾಜಗಳ ಒಕ್ಕೂಟದ ಕಾರ್ಯ ದರ್ಶಿ ವಾಟೇರಿರ ಶಂಕರಿ, ವ್ಯವಸ್ಥಾಪಕ ಚರ್ಮಣ್ಣ ಇತರರು ಹಾಜರಿದ್ದರು.