ಮೈಸೂರು-ಕಲಬುರ್ಗಿ ವಿಮಾನ ಬೆಂಗಳೂರಲ್ಲಿ ಸುರಕ್ಷಿತ ಭೂ ಸ್ಪರ್ಶ
ಮೈಸೂರು

ಮೈಸೂರು-ಕಲಬುರ್ಗಿ ವಿಮಾನ ಬೆಂಗಳೂರಲ್ಲಿ ಸುರಕ್ಷಿತ ಭೂ ಸ್ಪರ್ಶ

March 9, 2020

ಮೈಸೂರು,ಮಾ.8(ಆರ್‍ಕೆ)-ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಏರ್ ಅಲಯನ್ಸ್ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು.

ಬೆಂಗಳೂರಿನಿಂದ ಮೈಸೂರಿಗೆ ಬರಬೇಕಾ ಗಿದ್ದ ಮೈಸೂರು-ಕಲಬುರ್ಗಿ ಮಾರ್ಗದ ಅಲ ಯನ್ಸ್ ಏರ್ ವಿಮಾನದಲ್ಲಿ ಮಾರ್ಗ ಮಧ್ಯೆ ತಾಂತ್ರಿಕ ದೋಷ ಕಂಡು ಬಂದ ಕಾರಣ ಮರಳಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳಿ, ಅಲ್ಲಿ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿತು. ಅಲ್ಲಿನ ತಾಂತ್ರಿಕ ವರ್ಗ ಸುಮಾರು ಎರಡು ಗಂಟೆ ಪರಿಶೀಲಿಸಿ, ದೋಷ ಸರಿಪಡಿಸಿದರು ಎಂದು ತಿಳಿದು ಬಂದಿದೆ.

ಕಲಬುರ್ಗಿಯಿಂದ ಬೆಳಿಗ್ಗೆ 11.50ಕ್ಕೆ ಹೊರಟ ವಿಮಾನ ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಿ, ಅಲ್ಲಿಂದ ಮಧ್ಯಾಹ್ನ 2 ಗಂಟೆಗೆ ಪ್ರಯಾಣ ಆರಂ ಭಿಸಿತಾದರೂ, ಮಾರ್ಗ ಮಧ್ಯೆ ತಾಂತ್ರಿಕ ದೋಷ (ಲ್ಯಾಂಡಿಂಗ್ ಆಗಲು ಸಾಧ್ಯವಾಗದಂತಹ) ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನವು ಮತ್ತೆ ಬೆಂಗ ಳೂರಿಗೆ ಹಿಂದಿರುಗಿ ಅಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು ಎಂದು ಕೆಲ ಮೂಲಗಳು ತಿಳಿಸಿದರೆ, ಅಲಯನ್ಸ್ ಏರ್ ವಿಮಾನ ಮೈಸೂರಿಗೆ ಇಂದು ಬರಲೇ ಇಲ್ಲ ಎಂದು ಮತ್ತೊಂದು ಮೂಲ ತಿಳಿಸಿದೆ.

ಅದರಿಂದಾಗಿ ಮೈಸೂರಿಗೆ ಬರಬೇಕಾಗಿದ್ದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾ ಯಿತು. ಹಾಗೆಯೇ ಮೈಸೂರಿಂದ ಗೋವಾ ಹಾಗೂ ಹೈದರಾಬಾದ್‍ಗೆ ಸೀಟ್ ಬುಕ್ ಮಾಡಿ ದ್ದವರೂ ವಿಮಾನ ವಿಳಂಬದಿಂದ ಪರದಾ ಡಿದರು ಎಂದು ಹೇಳಲಾಗಿದೆ.

ಈ ಕುರಿತು `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿ ಸಿದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ, ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಮೈಸೂರಿಗೆ ವಿಮಾನ ಟೇಕ್ ಆಫ್ ಆಗ ಲಿಲ್ಲ ಎಂದಷ್ಟೇ ತಿಳಿಯಿತು. ಮುಂದೆ ಏನಾಯಿತು ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದರು.

ಅಲಯನ್ಸ್ ಏರ್‍ನ ಏರ್ ಸ್ಟೇಷನ್ ಮ್ಯಾನೇಜರ್ ರಾಜೀವ್ ಮಾತನಾಡಿ, ತೊಂದರೆ ಆಗಿರುವುದು ನಿಜ, ನಮ್ಮ ತಾಂತ್ರಿಕ ವರ್ಗ ಪರಿಶೀಲಿಸಿ, ದೋಷ ಸರಿ ಮಾಡಿದ್ದಾರೆ. ಇಂತಹ ಸಮಸ್ಯೆ ಆಗಿಂದಾಗ್ಗೆ ಬರುತ್ತಿರುತ್ತವೆ. ಆ ಬಗ್ಗೆ ನಾನೇನೂ ಹೆಚ್ಚಿಗೆ ಹೇಳಲಾಗದು ಎಂದು ತಿಳಿಸಿದರು.

ಬೆಳಿಗ್ಗೆ 11.50ಕ್ಕೆ ಕಲಬುರ್ಗಿಯಿಂದ ಹೊರಟು ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಿ, ಅಲ್ಲಿಂದ ಮಧ್ಯಾಹ್ನ 2 ಗಂಟೆಗೆ ಟೇಕ್ ಆಫ್ ಆಗಿ ಮಧ್ಯಾಹ್ನ 2.50 ಗಂಟೆಗೆ ಈ ವಿಮಾನ ಮೈಸೂರು ತಲುಪ ಬೇಕಾಗಿತ್ತು. ನಂತರ ಅದೇ ಏರ್ ಅಲಯನ್ಸ್ ವಿಮಾನವು ಮಧ್ಯಾಹ್ನ 3.20 ಗಂಟೆಗೆ ಹೊರಟು, ಸಂಜೆ 4.20 ಗಂಟೆಗೆ ಗೋವಾ ತಲುಪಿ, ಸಂಜೆ 5.20ಕ್ಕೆ ಗೋವಾದಿಂದ ಟೇಕ್ ಆಫ್ ಆಗಿ ಸಂಜೆ 6.50ಕ್ಕೆ ಮೈಸೂರಿಗೆ ಬಂದು ಅದೇ ದಿನ ರಾತ್ರಿ 7.20ಕ್ಕೆ ಮೈಸೂರಿನಿಂದ ಹೊರಟು ರಾತ್ರಿ 9 ಗಂಟೆಗೆ ಹೈದರಾಬಾದ್‍ಗೆ ಹೋಗುವ ಸಮಯ ನಿಗದಿಯಾಗಿತ್ತು. ಆದರೆ ಅದರಲ್ಲಿ ದೋಷ ಉಂಟಾದ ಪರಿಣಾಮ ಎಲ್ಲಾ ಟ್ರಿಪ್‍ಗಳೂ 2ರಿಂದ 3 ತಾಸು ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.

Translate »