ರಸ್ತೆ ಅಭಿವೃದ್ಧಿಗೆ ಈ ಬಾರಿ ಹೆಚ್ಚು ಅನುದಾನ
ಕೊಡಗು

ರಸ್ತೆ ಅಭಿವೃದ್ಧಿಗೆ ಈ ಬಾರಿ ಹೆಚ್ಚು ಅನುದಾನ

March 9, 2020

ವೀರಾಜಪೇಟೆ,ಮಾ,8-ಕೊಡಗಿನ ರಸ್ತೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿ ಗಳಿಗಾಗಿ ಹಿಂದಿನ ವರ್ಷಗಳಿಗಿಂತಲೂ ಈ ಸಾಲಿನಲ್ಲಿ ಹೆಚ್ಚು ಅನುದಾನ ದೊರ ಕಿದ್ದು, ಮಳೆಗಾಲಕ್ಕ್ಕೂ ಮುಂಚೆ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವೀರಾಜಪೇಟೆ ಸಮೀಪದ ಚೆಂಬೆ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮಂಗಲ-ಚೆಂಬೆಬೆಳ್ಳೂರು ಸಂಪರ್ಕ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ರೂ,35 ಲಕ್ಷ ಅನು ದಾನದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈ ವ್ಯಾಪ್ತಿಯಲ್ಲಿ ಉಳಿದಿರುವ ಆರು ಗ್ರಾಮಗಳ ರಸ್ತೆ ಅಭಿ ವೃದ್ಧಿಗೆ ಕೊಡಗು ಪ್ಯಾಕೇಜ್‍ನಲ್ಲಿ ರೂ, 60 ಲಕ್ಷ ನೀಡಲಾಗಿದ್ದು, ಈ ಭಾಗದಲ್ಲಿ ಒಟ್ಟು ರೂ,2 ಕೋಟಿ 38 ಲಕ್ಷ ಅನು ದಾನದ ಕಾಮಗಾರಿಗೆ ಚಾಲನೆ ನೀಡಲಾ ಗಿದೆ. ಗ್ರಾಮಸ್ಥರು ಸರಕಾರದ ಅನುದಾನ ವನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ನೀಡುವಂತಾಗಬೇಕು. ತೋಟದ ಮಾಲಿ ಕರು ರಸ್ತೆಗೆ ಜಾಗಬಿಟ್ಟು ಕೊಡುವುದ ರೊಂದಿಗೆ ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ನೀಡುವಂತಾಗಬೇಕು ಎಂದರು.

ಅ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ ಮಾತನಾಡಿ, ಚೆಂಬೆ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದುಕೋಟೆ-ಬೆಳ್ಳರಿಮಾಡು ರಸ್ತೆ ಅಭಿ ವೃದ್ಧಿಗೆ ರೂ,10 ಲಕ್ಷ, ಪುದುಕೋಟೆ ರಸ್ತೆಗೆ ತಡೆಗೋಡೆ ನಿರ್ಮಾಣ ರೂ,20 ಲಕ್ಷ , ಐಮಂಗಲ ಚೆಂಬೆಬೆಳ್ಳೂರು ರಸ್ತೆ ಸೇರಿ ದಂತೆ ಬೆಳ್ಳರಿಮಾಡು ಸಂಪರ್ಕ ರಸ್ತೆ, ಪುದುಕೋಟೆ ಮಚ್ಚಮಾಡ ರಸ್ತೆ, ದೇವಣ ಗೇರಿ-ಬಟ್ಟಮಕ್ಕಿ ಪುಗ್ಗೇರ ರಸ್ತೆ, ದೇವಣ ಗೇರಿ ಮೂಕಂಡ ಕುಟುಂಬಸ್ಥರ ರಸ್ತೆ, ದೇವಣಗೇರಿ ಬೆಳ್ಳರಿಮಾಡು ರಸ್ತೆ, ಕುಕ್ಲೂರು ಮಂಡೇಪಂಡ ಸಂಪರ್ಕ ರಸ್ತೆ, ಪುಗ್ಗೇರ ಅಂಬಲ ರಸ್ತೆ, ತಾತೆಟ್ಟಿ ಮೂಕಂಡ ಕುಟುಂಬಸ್ತರ ರಸ್ತೆ, ವೈಪಡ ಪ.ಜಾತಿ ಕಾಲೋನಿ ರಸ್ತೆ, ಐಮಂಗಲ ಪ.ಜಾತಿ ಕಾಲೋನಿ ರಸ್ತೆ, ಚೀರಣೆ ಪ.ಜಾತಿ ಕಾಲೋನಿ ರಸ್ತೆ, ದೇವಣಗೇರಿ ಐಚಂಡ ಕುಟುಂಬ ಸ್ಥರ ಐನ್‍ಮನೆ ರಸ್ತೆ, ಮಗ್ಗುಲ ಚೆರಿಯ ಮಟ್ಟು ರಸ್ತೆ, ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ತಡೆ ಗೋಡೆ, ಚೆಂಬೆಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಕೊಡಗು ದಂತ ಕಾಲೇಜು ರಸ್ತೆ ಸೇರಿದಂತೆ ಒಟ್ಟು ರೂ,143 ಲಕ್ಷದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಭೂಮಿ ಪೂಜೆ ಸಂದರ್ಭ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಯತೀಶ್, ವೀರಾಜಪೇಟೆ ಪ.ಪಂ.ಮಾಜಿ ಅಧ್ಯಕ್ಷ ಇ.ಸಿ.ಜೀವನ್, ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಟೆರಿರ ನಾಣಯ್ಯ, ಸದಸ್ಯರಾದ ತಾತಂಡ ಬಿಫಿನ್, ಮೆಕತಂಡ ರಘು, ಸುಬ್ಬಯ್ಯ , ಗ್ರಾಮಸ್ಥ ರಾದ ಮಂಡೆಪಂಡ ಮುತ್ತಪ್ಪ, ಚಾರಿ ಮಂಡ ಬಾನು ಬೋಪಣ್ಣ, ಗುತ್ತಿಗೆದಾರ ಪ್ರವೀಣ್ ಹಾಗೂ ಇತರರು ಹಾಜರಿದ್ದರು.

Translate »