ಪ್ರವಾಹ ಮುನ್ನೆಚ್ಚರಿಕೆಯಾಗಿ ಕಾವೇರಿ ನದಿ ತಟ ಪರಿಶೀಲನೆ ನಡೆಸಿದ ಅಪ್ಪಚ್ಚುರಂಜನ್
ಕೊಡಗು

ಪ್ರವಾಹ ಮುನ್ನೆಚ್ಚರಿಕೆಯಾಗಿ ಕಾವೇರಿ ನದಿ ತಟ ಪರಿಶೀಲನೆ ನಡೆಸಿದ ಅಪ್ಪಚ್ಚುರಂಜನ್

March 9, 2020

ಕುಶಾಲನಗರ,ಮಾ.8-ಪಟ್ಟಣದ ಬೈಚನಹಳ್ಳಿ, ಮುಳ್ಳುಸೋಗೆ ಕೂಡುಮಂಗ ಳೂರು ವ್ಯಾಪ್ತಿಯ ಕಾವೇರಿ ನದಿ ತಟಗಳಿಗೆ ಭೇಟಿ ನೀಡಿದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ನದಿಯ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಮಳೆಗಾಲದಲ್ಲಿ ಅತಿವೃಷ್ಠಿ ಸಂದರ್ಭ ಮುಳುಗಡೆಯಾಗಿದ್ದ ಪ್ರದೇಶಗಳಾದ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾ ಲಯ, ಬೈಚನಹಳ್ಳಿಯ ಮುತ್ತಪ್ಪ ದೇವಾ ಲಯ, ಮುಳ್ಳುಸೋಗೆ ಕುವೆಂಪು ಬಡಾ ವಣೆ, ಕೂಡ್ಲೂರು ಕೈಗಾರಿಕಾ ಪ್ರದೇಶದ ನದಿ ತಟಗಳಿಗೆ ಭೇಟಿ ನೀಡಿ ಅವರು ಪರಿಶೀಲಿಸಿದರು. ನದಿಯಲ್ಲಿ ಬೆಳೆದಿರುವ ಕಾಡು, ಮಣ್ಣಿನ ದಿಣ್ಣೆಗಳ ಬಗ್ಗೆ ಕುಶಾಲ ನಗರದ ಕಾವೇರಿ ನದಿ ಪ್ರವಾಹ ಸಂತ್ರಸ್ತರ ರಕ್ಷಣಾ ವೇದಿಕೆ ಪ್ರಮುಖರು ಶಾಸಕರ ಗಮನಕ್ಕೆ ತಂದರು.

ಪಟ್ಟಣ ಪಂಚಾಯ್ತಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ನಂತರ ಕುಶಾಲ ನಗರದಲ್ಲಿ ಬಡಾವಣೆಗಳಿಗೆ ನೀರು ನುಗ್ಗುವು ದನ್ನು ತಪ್ಪಿಸಲು ಉನ್ನತ ಮಟ್ಟದ ತಂತ್ರಜ್ಞಾನ ದೊಂದಿಗೆ ತಡೆಗೋಡೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಲ್ಲಿಸಲು ನೀರಾವರಿ ನಿಗಮದ ಅಧಿಕಾರಿ ಗಳಿಗೆ ಶಾಸಕರು ನಿರ್ದೇಶನ ನೀಡಿದರು. ಕುಶಾಲನಗರ ಒಳಚರಂಡಿ ಯೋಜನೆಯ ಕಾಮಗಾರಿಯನ್ನು ಕೂಡಲೆ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು.

ಕುಶಾಲನಗರದ ಪಟ್ಟಣದ ವ್ಯಾಪ್ತಿಯಲ್ಲಿ ನದಿ ಪ್ರವಾಹದಿಂದ ಬಡಾವಣೆಗಳು ಜಲಾವೃತವಾಗುವುದನ್ನು ತಪ್ಪಿಸಲು ನಬಾರ್ಡ್ ಸಹಾಯದೊಂದಿಗೆ ನದಿ ಅಭಿ ವೃದ್ಧಿ ಯೋಜನೆ ಕೈಗೊಳ್ಳಲಾಗುವುದು.

ಕಳೆದ ಎರಡು ವರ್ಷಗಳಿಂದ ಕುಶಾಲ ನಗರದಿಂದ ಕಣಿವೆ ತನಕ ಮಳೆಗಾಲ ಸಂದರ್ಭ ನದಿಯ ಪ್ರವಾಹ ಉಂಟಾಗಿ ನೂರಾರು ಮನೆಗಳು ಜಲಾವೃತಗೊಂಡು ಜನಜೀವನ ಏರುಪೇರಾಗಿತ್ತು. ಈ ಹಿನ್ನಲೆ ಯಲ್ಲಿ ಕುಶಾಲನಗರದ ಬೈಚನಹಳ್ಳಿ ಯಿಂದ ಕಣಿವೆ ತನಕ ನದಿ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊ ಳ್ಳಲು ನಬಾರ್ಡ್ ಮೂಲಕ 100 ಕೋಟಿ ಅನುದಾನಕ್ಕೆ ಸರಕಾರವನ್ನೂ ಕೋರ ಲಾಗುವುದು. ಕೆಲವೆಡೆ ನದಿಯಿಂದ ನೀರು ಬಡಾವಣೆಗೆ ನುಗ್ಗದಂತೆ ತಡೆಗೋಡೆ ನಿರ್ಮಿಸಲಾಗುವುದು. ಹಾರಂಗಿ ಮತ್ತು ಚಿಕ್ಲಿಹೊಳೆ ನಾಲೆಗಳ ದುರಸ್ಥಿ ಕಾರ್ಯ ಮಳೆಗಾಲಕ್ಕೆ ಮುನ್ನ ನಡೆಯಲಿದೆ ಎಂದು ತಿಳಿಸಿದ ರಂಜನ್, ಕೊಡಗಿನಲ್ಲಿ ಸರ್ವ ಋತು ರಸ್ತೆ ಕಾಮಗಾರಿಗೆ ಕ್ರಮಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭ ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪಪಂ ಮುಖ್ಯಾ ಧಿಕಾರಿ ಸುಜಯ್‍ಕುಮಾರ್, ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿ ಗಳಾದ ರಾಜೇಗೌಡ, ಮಹೇಂದ್ರ, ನಾಗ ರಾಜ್, ಪಪಂ ಸದಸ್ಯರಾದ ಅಮೃತ್ ರಾಜ್, ಜಯವರ್ಧನ್, ಮಾಜಿ ಸದಸ್ಯ ಎಂ.ಎಂ.ಚರಣ್, ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು, ಪ್ರಮುಖರಾದ ಎಂ.ಎನ್. ಕುಮಾರಪ್ಪ, ಬಿ.ಡಿ.ಮಂಜುನಾಥ್, ಕಾವೇರಿ ನದಿ ಪ್ರವಾಹ ಸಂತ್ರಸ್ತರ ರಕ್ಷಣಾ ವೇದಿಕೆ ಪ್ರಮುಖರಾದ ಎಂ.ಎನ್.ಚಂದ್ರ ಮೋಹನ್, ತೋರೆರ ಉದಯಕುಮಾರ್, ಕೊಡಗನ ಹರ್ಷ, ಮಂಡೇಪಂಡ ಬೋಸ್ ಮೊಣ್ಣಪ್ಪ ಮತ್ತಿತರರು ಇದ್ದರು.

Translate »