ವೈದ್ಯಕೀಯ ಅಧೀಕ್ಷಕ ಡಾ.ಲೋಕೇಶ್ ಭರವಸೆ ಮಡಿಕೇರಿ, ಜ.9- ಅಪ್ರಾಪ್ತ ಬಾಲಕಿಗೆ ಹೆರಿಗೆ ಮಾಡಿಸಿ, ಮಗುವನ್ನು 1.50 ಲಕ್ಷ ರೂ. ಹಣಕ್ಕೆ ಮಾರಾಟ ಮಾಡಿದ ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯ ದಂಪತಿಯ ವಿರುದ್ದ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಆರೋಗ್ಯ ಇಲಾಖೆಯ ಮೇಲ ಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಲೋಕೇಶ್ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಲೋಕೇಶ್, ಮಡಿಕೇರಿ ನಗರ ಪೊಲೀಸ್ ಠಾಣೆ ಯಲ್ಲಿ ಸರಕಾರಿ…
ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲರಾಗಿ ಉಜ್ವಲ್ ಘೋರ್ಮಡೆ ಅಧಿಕಾರ ಸ್ವೀಕಾರ
January 10, 2020ಕುಶಾಲನಗರ, ಜ.9- ಸಮೀಪದ ಕೂಡಿಗೆ ಕೊಡಗು ಸೈನಿಕ ಶಾಲೆಯ ನೂತನ ಪ್ರಾಂಶು ಪಾಲರಾಗಿ ಗ್ರೂಪ್ ಕ್ಯಾಪ್ಟನ್ ಉಜ್ವಲ್ ಘೋರ್ಮಡೆಯವರು ಬುಧವಾರ ಅಧಿಕಾರ ಸ್ವೀಕರಿಸಿದರು. ಶಾಲೆಯ ಉಪ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ ನೂತನ ಪ್ರಾಂಶುಪಾಲರನ್ನು ಬರಮಾಡಿಕೊಂಡರು. ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸುವು ದರ ಮೂಲಕ ಉಜ್ವಲ್ ಘೋರ್ಮಡೆ ಗೌರವ ಸಲ್ಲಿಸಿದರು. ನಂತರ ಶಾಲೆಯ ಜೆಡಿ ಎನ್‍ಸಿಸಿ ಘಟಕದ ವತಿಯಿಂದ ಪೆರೇಡ್ ನಾಯಕ ಕೆಡೆಟ್ ನರೇಂದ್ರ ರೋಡಗಿ ಹಾಗೂ ವಿದ್ಯಾರ್ಥಿಗಳಿಂದ ಗೌರವ ವಂದನೆ…
ಕೊಡಗಿನ ಹಲವೆಡೆ ಕಾರ್ಮಿಕರ ಪ್ರತಿಭಟನೆ ಮಡಿಕೇರಿಯಲ್ಲಿ ಬಸ್ ಮೇಲೆ ಕಲ್ಲು ತೂರಾಟ
January 9, 2020ಮಡಿಕೇರಿ, ಜ.8- ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಅನು ಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಜಿಲ್ಲೆಯಾ ದ್ಯಂತ ಪ್ರತಿಭಟನೆ ನಡೆಸಿದವು. ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜ ಪೇಟೆ ತಾಲೂಕಿನಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ದರು. ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು. ಮಡಿಕೇರಿ ನಗರದ ಫೀ.ಮಾ. ಕಾರ್ಯಪ್ಪ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾ ವೇಶಗೊಂಡು…
ನವೋದಯ ಶಾಲೆಗೆ ಸಂಸದ ಪ್ರತಾಪ್ ಸಿಂಹ ಭೇಟಿ ಆರು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ
January 9, 2020ಮಡಿಕೇರಿ, ಜ.8- ನಗರದ ಹೊರ ವಲಯದಲ್ಲಿರುವ ಜವಾಹರ್ ನವೋ ದಯ ವಸತಿ ಶಾಲೆಯಲ್ಲಿ ಸೃಷ್ಟಿಯಾಗಿ ರುವ ಸಮಸ್ಯೆಯನ್ನು 6 ತಿಂಗಳೊಳಗೆ ಪರಿಹರಿಸಲಾಗುವುದು. ಕಟ್ಟಡ ನವೀ ಕರಣ ಹಾಗೂ ಮರು ನಿರ್ಮಾಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು. ಕಾರ್ಯಕ್ರಮದ ನಿಮಿತ್ತ ಮಡಿಕೇರಿಗೆ ಆಗಮಿಸಿದ್ದ ಸಂಸದ ಪ್ರತಾಪ್ ಸಿಂಹ, ಶಾಲೆಯ ವಾಸ್ತವ ಪರಿಸ್ಥಿತಿ, ವಿದ್ಯಾರ್ಥಿ ನಿಲಯದಲ್ಲಿರುವ ಸಮಸ್ಯೆಗಳನ್ನು ಖುದ್ದು ವೀಕ್ಷಿಸಿ ಶಾಲಾ ಪ್ರಾಂಶುಪಾಲರು, ಪೋಷ ಕರು ಹಾಗೂ…
ತ್ಯಾಜ್ಯ ಸುರಿಯುತ್ತಿದ್ದವರಿಗೆ 5 ಸಾವಿರ ದಂಡ
January 9, 2020ನಾಪೋಕ್ಲು, ಜ.8- ಚೆರಿಯಪರಂಬು ಕಾವೇರಿ ನದಿ ದಡದ ಸಮೀಪದಲ್ಲಿ ಮಡಿಕೇರಿಯ ಹೋಂಸ್ಟೇವೊಂದರ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದವರಿಗೆ ಗ್ರಾಮ ಪಂಚಾಯಿತಿ ಆಡಳಿತ 5,000 ರೂ. ದಂಡ ವಿಧಿಸಿದ ಘಟನೆ ನಡೆದಿದೆ. ಮಡಿಕೇರಿಯ ಹೋಂ ಸ್ಟೇವೊಂದರ ತ್ಯಾಜ್ಯಗಳನ್ನು ದೊಡ್ಡ, ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಟಾಟಾ ಏಸ್ ವಾಹನದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ಪಂಚಾಯಿತಿ ಕಸ ವಿಲೇವಾರಿ ಜಾಗದಲ್ಲಿ ತಂದು ಸುರಿಯಲಾಗುತ್ತಿತ್ತು. ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ…
ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಎಡವಟ್ಟು ಗ್ರಾಹಕರ ಕೈ ಸೇರಿತು ಐದು ಪಟ್ಟು ಹಣ
January 9, 2020ಪೊಲೀಸರಿಗೆ ದೂರು ನೀಡಿ ಗ್ರಾಹಕರಿಂದ ಹಣ ವಸೂಲಿ ಮಾಡಿದ ಬ್ಯಾಂಕ್ ಮಡಿಕೇರಿ, ಜ.8- ನಗರದ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರ ಒಂದರಲ್ಲಿ ಅದಕ್ಕೆ ಹಣ ತುಂಬುವ ಸಿಬ್ಬಂದಿ ಮಾಡಿದ್ದ ಎಡವಟ್ಟಿನಿಂದ ಹತ್ತು ಹಲವು ಮಂದಿ ತಾವು ಪಡೆಯಬೇಕಿದ್ದ ಹಣಕ್ಕಿಂತ ಐದು ಪಟ್ಟು ಹೆಚ್ಚು ಹಣವನ್ನು ಪಡೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ಗ್ರಾಹಕರು ಹಣವನ್ನು ಹಿಂದಿರುಗಿಸಲು ಹಿಂದೇಟು ಹಾಕಿದ್ದರಿಂದ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇ ರಿತ್ತು. ಹಣವನ್ನು ಡ್ರಾ ಮಾಡಿದ್ದ ವ್ಯಕ್ತಿಗಳು ಪೊಲೀಸ ರಿಗೆ ಹೆದರಿ…
7ನೇ ಆರ್ಥಿಕ ಗಣತಿಗೆ ಮೊಬೈಲ್ ಆ್ಯಪ್ ಬಿಡುಗಡೆ
January 8, 2020ಜಿಲ್ಲೆಯಲ್ಲಿ ಜನವರಿಯಿಂದ ಮಾರ್ಚ್‍ವರೆಗೆ ಗಣತಿ ಕಾರ್ಯ, ಕಾರ್ಯಕ್ರಮ ಯಶಸ್ವಿಗೆ ಜಿಲ್ಲಾಧಿಕಾರಿ ಸೂಚನೆ ಮಡಿಕೇರಿ, ಜ.7- ಜಿಲ್ಲೆಯಾದ್ಯಂತ 7ನೇ ಆರ್ಥಿಕ ಗಣತಿಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ಕೇಂದ್ರ ಸರ್ಕಾ ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ 7ನೇ ಆರ್ಥಿಕ ಗಣತಿ ‘ಡಿಜಿಟಲ್ ಇಂಡಿಯಾ’ ಕಾರ್ಯ ಕ್ರಮದಡಿ ಜಿಲ್ಲಾ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಮಾಹಿತಿ ಸಂಗ್ರಹಿಸಲು ಹೊರ ತಂದಿರುವ ‘ಮೊಬೈಲ್ ಆ್ಯಪ್’…
ಪೆರ್ಪಣ ನೋಡಿ ಚಿರತೆ ಎಂದು ಬೆಚ್ಚಿದ ಗ್ರಾಮಸ್ಥರು
January 8, 2020ಗೋಣಿಕೊಪ್ಪಲು, ಜ.7- ಚಿರತೆಯನ್ನೇ ಹೋಲುವ ಅಪರೂಪದ ವನ್ಯಜೀವಿ ಪೆರ್ಪಣ ಅಥವಾ ಲಿಪರ್ಡ್ ಕ್ಯಾಟ್ ಅನ್ನು ಕಂಡು ಚಿರತೆ ಎಂದು ಭಾವಿಸಿ ಗ್ರಾಮಸ್ಥರು ಆತಂಕಗೊಂಡ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ದ.ಕೊಡಗಿನ ಭಾಗದಲ್ಲಿ ರೈತರ ಭತ್ತದ ಗದ್ದೆ, ಕಾಫಿ ತೋಟಗಳಲ್ಲಿ ಕಂಡು ಬರುತ್ತಿದ್ದ ವನ್ಯ ಜೀವಿಗಳ ಸಾಲಿಗೆ ಇದೀಗ ಚಿರತೆ ಮಾದರಿಯ ಪೆರ್ಪಣ(ಆಡು ಭಾಷೆ) ಸೇರಿಕೊಂಡಿದೆ. ಸಮೀಪದ ಅರಣ್ಯದಿಂದ ಪೆರ್ಪಣ ನೀರನ್ನು ಅರಸುತ್ತ ಕಾಫಿ ತೋಟದ ಮಧ್ಯೆ ಇರುವ ರೈತನ ಮನೆಯ ಬಳಿ ತೆರಳಿದೆ. ಈ ವೇಳೆ ಮನೆಯ…
ಮಕ್ಕಳ ಕೊಡವ ಜನಪದ ಸಾಂಸ್ಕøತಿಕ ನಮ್ಮೆ
January 8, 2020ಗೋಣಿಕೊಪ್ಪ, ಜ.7- ಇಲ್ಲಿನ ಟಿ.ಶೆಟ್ಟಿ ಗೇರಿ ರೂಸ್ಟ್ ವಿದ್ಯಾಸಂಸ್ಥೆಯಲ್ಲಿ ಕರ್ನಾ ಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಮಕ್ಕಡ ಕೂಟದಿಂದ 5ನೇ ವರ್ಷದ ‘ಮಕ್ಕಳÀ ಕೊಡವ ಜನಪದ ಸಾಂಸ್ಕ್ರತಿಕ ನಮ್ಮೆ’ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಟ್ರಸ್ಟ್‍ನ ಮಲ್ಲಂಗಡ ಕೆ.ನಿರನ್ ಉತ್ತಪ್ಪ ಮಾತನಾಡಿ, ಮಕ್ಕಳಿಗೆ ಕೊಡವ ಸಂಸ್ಕøತಿ ಪರಿಚಯಿಸುವ ಉದ್ದೇಶದಿಂದ ಕಳೆದ 5 ವರ್ಷಗಳಿಂದ ಕೊಡವ ಮಕ್ಕಡ ಸಾಂಸ್ಕø ತಿಕ ಹಬ್ಬವನ್ನು ಆಚರಿಸಿಕೊಂಡು ಬರ ಲಾಗುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಕೊಡವ ಸಾಹಿತ್ಯ…
ಸೋಮವಾರಪೇಟೆ: ಮತದಾರರ ಮಿಂಚಿನ ನೋಂದಣಿ
January 8, 2020ಸೋಮವಾರಪೇಟೆ, ಜ.7- ಸಮೀ ಪದ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಚುನಾವಣಾ ಸಾಕ್ಷರತಾ ಕ್ಲಬ್‍ನಿಂದ ‘ಮತದಾರರ ಮಿಂಚಿನ ನೋಂದಣಿ’ ಕಾರ್ಯಕ್ರಮ ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ. ಶ್ರೀಧರ್ ಮಾತನಾಡಿ, ಚುನಾವಣೆ ಪ್ರತಿಯೊಬ್ಬ ಭಾರತೀಯರ ಹಕ್ಕು. 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿ ಕೊಂಡು ತಪ್ಪದೇ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದರು. ಈ ವೇಳೆ 18 ವರ್ಷ ತುಂಬಿದ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು…










