7ನೇ ಆರ್ಥಿಕ ಗಣತಿಗೆ ಮೊಬೈಲ್ ಆ್ಯಪ್ ಬಿಡುಗಡೆ
ಕೊಡಗು

7ನೇ ಆರ್ಥಿಕ ಗಣತಿಗೆ ಮೊಬೈಲ್ ಆ್ಯಪ್ ಬಿಡುಗಡೆ

January 8, 2020

ಜಿಲ್ಲೆಯಲ್ಲಿ ಜನವರಿಯಿಂದ ಮಾರ್ಚ್‍ವರೆಗೆ ಗಣತಿ ಕಾರ್ಯ, ಕಾರ್ಯಕ್ರಮ ಯಶಸ್ವಿಗೆ ಜಿಲ್ಲಾಧಿಕಾರಿ ಸೂಚನೆ
ಮಡಿಕೇರಿ, ಜ.7- ಜಿಲ್ಲೆಯಾದ್ಯಂತ 7ನೇ ಆರ್ಥಿಕ ಗಣತಿಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ಕೇಂದ್ರ ಸರ್ಕಾ ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ 7ನೇ ಆರ್ಥಿಕ ಗಣತಿ ‘ಡಿಜಿಟಲ್ ಇಂಡಿಯಾ’ ಕಾರ್ಯ ಕ್ರಮದಡಿ ಜಿಲ್ಲಾ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಮಾಹಿತಿ ಸಂಗ್ರಹಿಸಲು ಹೊರ ತಂದಿರುವ ‘ಮೊಬೈಲ್ ಆ್ಯಪ್’ ಅನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಗಣತಿಯು ಜನವರಿಯಿಂದ ಮಾರ್ಚ್ ವರೆಗೆ ಒಟ್ಟು 3 ತಿಂಗಳು ನಡೆಯಲಿದೆ. ಜಿಲ್ಲೆಯಲ್ಲಿನ ಪ್ರತಿ ಕಟ್ಟಡಕ್ಕೆ ಸಮೀಕ್ಷಾ ಗಾರರು ಭೇಟಿ ನೀಡಿ ಅದರಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ನಡೆಯುತ್ತಿದ್ದಲ್ಲಿ ಅವುಗಳ ವಿವರಗಳನ್ನು ಗಣತಿ ಕಾರ್ಯ ದಲ್ಲಿ ಸಂಗ್ರಹಿಸುತ್ತಾರೆ. ಈ ಸಂಬಂಧ ಗಣತಿದಾರರಿಗೆ ಸೂಕ್ತ ತರಬೇತಿ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯಿಂದ 2019 ರ ಜುಲೈ 11ರಂದು ನೀಡಲಾಗಿದೆ. ಅಲ್ಲದೆ ಸಿಎಸ್‍ಸಿಯಿಂದ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ. ಈವರೆಗೆ 25 ಮೇಲ್ವಿಚಾರಕರು ಹಾಗೂ 86 ಗಣತಿ ದಾರರನ್ನು ನೇಮಕಾತಿ ಮಾಡಿಕೊಳ್ಳ ಲಾಗಿದೆ ಎಂದು ವಿವರಿಸಿದರು.

ಗಣತಿ ಕಾರ್ಯವೈಖರಿ: ಗಣತಿ ಕಾರ್ಯ ಕೈಗೊಳ್ಳಬಹುದಾದ, ಕೈಗೊಳ್ಳಬಾರದ ಉದ್ದಿಮೆಗಳ ವಿವರ ಇಂತಿದ್ದು, ಪ್ಲಾಂಟೇ ಷನ್ ಬೆಳೆಗಳನ್ನು ಸೇರಿದಂತೆ, ಋತು ಕಾಲಿಕ, ವಾರ್ಷಿಕ/ಬಹು ವಾರ್ಷಿಕ ಬೆಳೆ ಗಳನ್ನು ಬೆಳೆಯುವ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾರ್ವಜನಿಕ ಇಲಾಖೆಗಳ ಆಡಳಿತ ಕಚೇರಿಗಳು, ರಕ್ಷಣಾ ಮಂತ್ರಾ ಲಯದ ಕಚೇರಿಗಳು, ಸ್ಥಳೀಯ ಸಂಸ್ಥೆಗಳ ಆಡಳಿತ ಕಚೇರಿಗಳು ಮುಂತಾದವು ಗಳನ್ನು ಹಾಗೂ ಸರ್ಕಾರದಿಂದ ಕಾನೂನು ಬಾಹಿರ ಎಂದು ಘೋಷಿಸಲ್ಪಟ್ಟ ಮತ್ತು ಪಂದ್ಯ ಕಟ್ಟುವ ಚಟುವಟಿಕೆಗಳಲ್ಲಿ ತೊಡಗಿ ರುವ ಉದ್ದಿಮೆಗಳನ್ನು ಗಣತಿ ವ್ಯಾಪ್ತಿ ಯಿಂದ ಹೊರಗಿಡಲಾಗಿದೆ. ಸದರಿ ಗಣತಿ ಯಲ್ಲಿ ಕೃಷಿ/ಪ್ಲಾಂಟೇಷನ್ ಮೂಲಕ ಬೆಳೆ ಗಳನ್ನು ಬೆಳೆಯುವುದನ್ನು ಉದ್ದಿಮೆ ಎಂದು ಪರಿಗಣಿಸಿರುವುದಿಲ್ಲ. ಆದರೆ ಬೆಳೆ ಗಳನ್ನು ಕೊಂಡು ಮಾರಾಟ ಮಾಡುವು ದನ್ನು ಉದ್ದಿಮೆ ಎಂದು ಪರಿಗಣಿಸಲಾಗಿದೆ.

ಉದ್ದಿಮೆಗಳನ್ನು ಗಣತಿ ಮಾಡುವಾಗ ಕಟ್ಟಡಗಳಲ್ಲಿ ನಡೆಯುತ್ತಿರುವ ಉದ್ದಿಮೆ ಗಳನ್ನು ಆಯಾಯ ಸ್ಥಳದಲ್ಲಿಯೇ ಗಣತಿ ಮಾಡಲಾಗುವುದು. ರಸ್ತೆ ಬದಿಯಲ್ಲಿ, ಬೀದಿ ಗಳಲ್ಲಿ, ಬಯಲು ಪ್ರದೇಶದಲ್ಲಿ ಮುಂತಾದ ಯಾವುದೇ ಕಟ್ಟಡವಲ್ಲದ ಪ್ರದೇಶಗಳಲ್ಲಿ ನಡೆಯುತ್ತಿರುವ ಉದ್ದಿಮೆಗಳನ್ನು ಉದ್ದಿ ಮೆಯ ಮಾಲೀಕನ ಮನೆಯಲ್ಲಿಯೇ ಗಣತಿ ಮಾಡಲಾಗುವುದು.

ಮನೆಗಳಿಗೆ, ಉದ್ದಿಮೆಗಳಿಗೆ ಭೇಟಿ ನೀಡಿದಾಗ ಉದ್ದಿಮೆಯ ಮಾಲೀಕರು ಹಾಗೂ ಸಾರ್ವಜನಿಕರು ಅಗತ್ಯವಾದ ಎಲ್ಲಾ ವಿವರಗಳನ್ನು ಒದಗಿಸಬೇಕು. ಗಣತಿಯಲ್ಲಿ ಸಂಗ್ರಹಿಸಲಾಗುವ ಮಾಹಿತಿ ಗಳು ಮುಂದಿನ ವರ್ಷಗಳಲ್ಲಿ ಯೋಜನೆ ಗಳನ್ನು ತಯಾರಿಸಲು ಹಾಗೂ ಹಾಲಿ ಇರುವ ಉದ್ದಿಮೆಗಳ ಸ್ಥಿತಿಗತಿಗಳನ್ನು ಅರಿತು ಅವುಗಳಿಗೆ ಪ್ರೋತ್ಸಾಹ, ಮಾರು ಕಟ್ಟೆ, ಆರ್ಥಿಕ ಸಹಾಯ ಮುಂತಾದ ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಅನುಕೂಲವಾಗುತ್ತದೆ. ಇದರಿಂದ ಸಾರ್ವ ಜನಿಕರಿಗೆ ಬಹಳಷ್ಟು ಅನುಕೂಲಕರ ವಾಗುವುದರಿಂದ ಸಾರ್ವಜನಿಕರು ಆದಷ್ಟು ನಿಖರವಾದ ಮಾಹಿತಿಗಳನ್ನು ಒದಗಿಸಲು ಸಲಹೆ ನೀಡಿದರು.

ಕೃಷಿ ಕಂದಾಯ, ಶಿಕ್ಷಣ ಮುಂತಾದ ಇಲಾಖೆಗಳ ಗ್ರಾಮ ಮಟ್ಟದ ಇಲಾಖಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿಯವರು ಗಣತಿ ಕಾರ್ಯದಲ್ಲಿ ಸಂಪೂರ್ಣವಾಗಿ ಸಹಕಾರ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಅಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ದಿಮೆಗಳನ್ನು ಗುರುತಿಸಲು ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ನಗರ, ಪಟ್ಟಣ ಪ್ರದೇಶಗಳಲ್ಲಿ ನಗರಸಭೆ, ಪಟ್ಟಣ ಪಂಚಾ ಯಿತಿ ಅಧಿಕಾರಿಗಳು, ಬಿಲ್ ಕಲೆಕ್ಟರ್‍ಗಳು ಸಮೀಕ್ಷೆ ನಡೆಸುವ ಗಣತಿದಾರರಿಗೆ, ಮೇಲ್ವಿ ಚಾರಕರಿಗೆ ಸಂಪೂರ್ಣ ಸಹಕಾರ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.

Common Service Centre (CSC)  ರವರು ಗಣತಿಗಾಗಿ ಸಮರ್ಥ ರಾದ ಸಿಬ್ಬಂದಿಯನ್ನು ನೇಮಿಸಿ, ತರಬೇತಿ ನೀಡಿ ಜಿಲ್ಲೆಯಲ್ಲಿ ಯಾವುದೇ ಕಟ್ಟಡ, ಉದ್ದಿಮೆ ಬಿಟ್ಟು ಹೋಗದಂತೆ ನಿಖರ ವಾಗಿ ಗಣತಿ ಕಾರ್ಯವನ್ನು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನು ಷ್ಟಾನ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಸಕಾಲದಲ್ಲಿ ಕೈಗೊಳ್ಳಲು ಜಿಲ್ಲಾಧಿ ಕಾರಿಗಳು ಸೂಚನೆ ನೀಡಿದರು.

ಗುರುತಿನ ಪತ್ರ ಮತ್ತು ಭದ್ರತೆ: ಗಣತಿ ಕಾರ್ಯವನ್ನು ಕೈಗೊಳ್ಳುವ ಗಣತಿ ದಾರರು, ಮೇಲ್ವಿಚಾರಕರಿಗೆ Common Service Centre (CSC) ರವರು ಕಡ್ಡಾಯವಾಗಿ ಗುರುತಿನ ಪತ್ರವನ್ನು ನೀಡಲು ಮತ್ತು ಸಮೀಕ್ಷಾ ಸಮಯದಲ್ಲಿ ಗಣತಿದಾರರು ಗುರುತಿನ ಪತ್ರವನ್ನು ಧರಿಸಲು ಸೂಚಿಸಲಾಗಿದೆ.

ಸಭೆಯಲ್ಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾ ಧಿಕಾರಿ ಎಂ.ಪ್ರಕಾಶ್, ಸಹಾಯಕ ಸಾಂಖ್ಯಿಕ ಅಧಿಕಾರಿ ಟಿ.ವೆಂಕಟೇಶ್, ಸಿಎಸ್‍ಸಿ ಸಂಸ್ಥೆಯ ವ್ಯವಸ್ಥಾಪಕರಾದ ಮಹೇಶ್, ಇತರರು ಇದ್ದರು.

ಆರ್ಥಿಕ ಗಣತಿ ಆ್ಯಪ್ ಪರಿಚಯ
ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯ ಇವರು ರಾಜ್ಯಾದ್ಯಂತ 7ನೇ ಆರ್ಥಿಕ ಗಣತಿಯನ್ನು ಜನವರಿಯಿಂದ ಮಾರ್ಚ್ ವರೆಗಿನ ಅವಧಿಯಲ್ಲಿ ಕೈಗೊಳ್ಳಲು ತೀರ್ಮಾನಿಸಿದ್ದು, ಅದರಂತೆ 2019ರ ನ.6 ರಂದು ಮುಖ್ಯಮಂತ್ರಿಗಳು 7ನೇ ಆರ್ಥಿಕ ಗಣತಿಗೆ ಸ್ವಯಂ ಮಾಹಿತಿ ನೀಡುವ ಮೂಲಕ ರಾಜ್ಯ ಮಟ್ಟದಲ್ಲಿ ಚಾಲನೆ ನೀಡಿದ್ದರು.

ಪ್ರಸ್ತುತ ಗಣತಿಯಲ್ಲಿ ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಖಾಸಗಿ ಸಿಬ್ಬಂದಿಯಿಂದ ಸಮೀಕ್ಷೆ ನಡೆಸ ಲಾಗುತ್ತಿದೆ. ಗಣತಿದಾರರು ಪ್ರತಿ ಕಟ್ಟಡಕ್ಕೆ ಭೇಟಿ ನೀಡಿ ಮೊಬೈಲ್ ಆ್ಯಪ್ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತಾರೆ.

ಪ್ರತಿ 5 ವರ್ಷಗಳಿಗೊಮ್ಮೆ ಆರ್ಥಿಕ ಗಣತಿಯನ್ನು ನಡೆಸಲಾಗುತ್ತಿದೆ. ಈ ಹಿಂದಿನ ಗಣತಿಗಳನ್ನು ಸರ್ಕಾರಿ, ಅರೆ ಸರ್ಕಾರಿ ಸಿಬ್ಬಂದಿಯವರಿಂದ ನಡೆಸಲಾ ಗಿದ್ದು, 2014ರಲ್ಲಿ ನಡೆದ 6ನೇ ಆರ್ಥಿಕ ಗಣತಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು. 12,627 (ಗ್ರಾಮೀಣ 5,668 ಮತ್ತು ಪಟ್ಟಣ, ನಗರ 6,959) ಉದ್ದಿಮೆಗಳನ್ನು ಗುರುತಿಸಲಾಗಿದೆ.

ಅನುಷ್ಟಾನ ಇಲಾಖೆ: ಕೇಂದ್ರ ಸರ್ಕಾ ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವಾಲಯ (MOSPI) ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (NSSO) ಮತ್ತು ಕೇಂದ್ರ ಸರ್ಕಾರದ ಇ- ಆಡಳಿತ (Ministry of Electronics & Information Technology) ಅಡಿಯಲ್ಲಿ ನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ (Common Service Centre) ಸಹಯೋಗದಲ್ಲಿ ಖಾಸಗಿ ಗಣತಿ ದಾರರನ್ನು ನೇಮಕಾತಿ ಮಾಡಿ ಮೊಬೈಲ್ ಆಪ್ ಮೂಲಕ ಕೈಗೊಳ್ಳಲಾಗುತ್ತಿದೆ.

ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣೆ
ಜಿಲ್ಲೆಯಲ್ಲಿ ಸಮೀಕ್ಷೆ ಸುಗಮವಾಗಿ ನಡೆಸಲು ಅಗತ್ಯ ಸೂಚನೆ ಹಾಗೂ ಸಲಹೆ ನೀಡಲು ಮತ್ತು ಕ್ಷೇತ್ರ ಕಾರ್ಯದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಂಗ್ರಹಿಸಿದ ಮಾಹಿತಿ ಪರಿಶೀಲಿಸಿ ದೃಢೀಕರಿಸಲು ಜಿಲ್ಲಾ ಹಂತದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದೆ.

ಜಿಲ್ಲಾ ಸಮಿತಿಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೈಗಾರಿಕೆ, ಕಾರ್ಮಿಕ, ಕೃಷಿ, ತೋಟಗಾರಿಕೆ, ವಾಣಿಜ್ಯ ತೆರಿಗೆ, ಪೊಲೀಸ್, ಶಿಕ್ಷಣ, ಕಾರ್ಖಾನೆ ಮತ್ತು ಬಾಯ್ಲರ್, ಸಹಕಾರ ಮುಂತಾದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.

ಇವರೊಂದಿಗೆ ಉಪವಿಭಾಗಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕು ತಹಶೀ ಲ್ದಾರರು, ತಾಪಂ ಇಓ, ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು, ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಸದಸ್ಯರಾಗಿರುತ್ತಾರೆ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

Translate »