ಶಿಷ್ಟಾಚಾರ ಉಲ್ಲಂಘನೆ ವಿರುದ್ಧ ಕ್ರಮಕ್ಕೆ ಶಾಸಕ ಅನ್ನದಾನಿ ಆಗ್ರಹ
ಮಂಡ್ಯ

ಶಿಷ್ಟಾಚಾರ ಉಲ್ಲಂಘನೆ ವಿರುದ್ಧ ಕ್ರಮಕ್ಕೆ ಶಾಸಕ ಅನ್ನದಾನಿ ಆಗ್ರಹ

January 8, 2020
  • ಜಿಪಂ ಸದಸ್ಯರ ವಿರುದ್ಧ ಹಕ್ಕುಚ್ಯುತಿ ಮಂಡನೆ ಎಚ್ಚರಿಕೆ
  • ಜ.18, 19ರಂದು ಗಗನಚುಕ್ಕಿ ಜಲಪಾತೋತ್ಸವ

ಮಂಡ್ಯ, ಜ.7(ನಾಗಯ್ಯ)- ಮಳವಳ್ಳಿ ತಾಲೂಕಿನ ಬೆಳಕವಾಡಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ವಿವಿಧ ಗ್ರಾಮಗಳ ಕುಡಿಯುವ ನೀರಿನ ಕಾಮ ಗಾರಿ ಉದ್ಘಾಟನೆಯಲ್ಲಿ ಶಿಷ್ಟಾಚಾರ ಪಾಲಿಸ ದಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಶಾಸಕ ಕೆ.ಅನ್ನದಾನಿ ಎಚ್ಚರಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜ.5ರಂದು ಬೆಳಕವಾಡಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಪಂ ಸದಸ್ಯೆ ಜಯಕಾಂತ ಅವರು ಉಪ ವಿಭಾಗಕ್ಕೆ ಯಾವುದೇ ಮಾಹಿತಿ ನೀಡದೆ ಕಾಮಗಾ ರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಯಾವುದೇ ಶಿಷ್ಟಾ ಚಾರ ಪಾಲಿಸದೆ, ಶಾಸಕರ ಗಮನಕ್ಕೂ ತರದೆ ಜಿಪಂ ಸದಸ್ಯರು, ತಾಪಂ ಅಧ್ಯಕ್ಷ ಹಾಗೂ ಇತರೆ ಚುನಾಯಿತ ಜನಪ್ರತಿ ನಿಧಿಗಳೊಂದಿಗೆ ನೆರವೇರಿಸಲಾಗಿದೆ ಎಂದು ಆರೋಪಿಸಿದರು.

ತಮ್ಮ ಗಮನಕ್ಕೆ ತರದೆ ಶಿಷ್ಟಾಚಾರ ಉಲ್ಲಂಘಿಸಿರುವ ಬೆಳಕವಾಡಿ ಜಿಪಂ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು, ಜಿಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಸರ್ಕಾರವನ್ನು ಆಗ್ರಹಿಸಿದರು.

ಮೇಲ್ಜಾತಿಯವರಿಗೆ ನಕಲಿ ಜಾತಿ ಪ್ರಮಾಣ ಪತ್ರ: ಗೋಕಾಕ್ ತಾಲೂಕಿನ ಮೂಡಲಗಿ ಗ್ರಾಮದ 24 ಮಂದಿ ವೀರಶೈವ ಸಮುದಾಯದವರಿಗೆ ಅಲ್ಲಿನ ತಾಲೂಕು ದಂಡಾಧಿಕಾರಿ ಪರಿಶಿಷ್ಟ ಜಾತಿ, ಪಂಗಡದ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಅಕ್ರಮವೆಸಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಪ.ಜಾತಿ ಮತ್ತು ಪ.ಪಂಗಡದ ಸಮು ದಾಯಗಳಿಗೆ ಹಿಂದಿನಿಂದಲೂ ಅನ್ಯಾಯ ವಾಗುತ್ತಿದೆ. ಎಸ್ಸಿ, ಎಸ್ಟಿ ಸಮುದಾಯಗಳ ಸಂವಿಧಾನ ಬದ್ಧವಾಗಿ ಸವಲತ್ತುಗಳನ್ನು ಕಸಿಯುವ ಸಲುವಾಗಿ ವೀರಶೈವ ಸಮು ದಾಯದ 24 ಮಂದಿಗೆ ಬೇಡ ಜಂಗ ಮರ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರ ನೀಡಲಾಗಿದೆ ಎಂದರು.

ಈ ಅಕ್ರಮಕ್ಕೆ ಸಂಬಂಧಿಸಿದಂತೆ ಪ.ಜಾತಿ ಮತ್ತು ಪಂಗಡ ಸಮುದಾಯದ ಮುಖಂ ಡರು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದು, ತಹಸೀಲ್ದಾರ್ ವಿರುದ್ಧ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿರುವ ಯಾವುದೇ ವ್ಯಕ್ತಿಯಾದರೂ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಜಲಪಾತೋತ್ಸವ: ಜ.18, 19ರಂದು ಗಗನ ಚುಕ್ಕಿ ಜಲಪಾತೋತ್ಸವ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ದಿನಾಂಕ ಸೂಚಿಸಿ ದ್ದಾರೆ. ಈ ಸಂಬಂಧ ಶೀಘ್ರದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ನಿವೇಶನ ಹಂಚಿಕೆಗೆ ಕ್ರಮ ವಹಿಸಿ: ಮಳ ವಳ್ಳಿ ಪಟ್ಟಣದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್‍ನಿಂದ ನಿವೇಶನ ನೀಡುವು ದಾಗಿ ಜನತೆಗೆ ಆಸೆ ಮೂಡಿಸಿದ್ದು, 2430 ಮಂದಿ ವಿಜಯಾ ಬ್ಯಾಂಕ್‍ನಲ್ಲಿ ಹಣ ಕಟ್ಟಿದ್ದಾರೆ. ಸರ್ಕಾರ ಕೂಡಲೇ ಅರ್ಹರಿಗೆ ನಿವೇಶನ ನೀಡಲು ಕ್ರಮ ಒದಗಿಸುವಂತೆ ಆಗ್ರಹಿಸಿದರು.

ಅನಗತ್ಯ ಆರೋಪ: ಮಳವಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಈ ಹಿಂದೆ ಮಂಜೂರಾ ಗಿರುವ ಕಾಮಗಾರಿಗೆ ಹಾಲಿ ಶಾಸಕರಿಂದ ತಡೆ ಒಡ್ಡಲಾಗುತ್ತಿದೆ ಎಂಬ ಆರೋಪ ಮಾಡ ಲಾಗುತ್ತಿದ್ದು, ಇದು ಕೆಲವರ ಗುಂಪುಗಳು ನಡೆಸುತ್ತಿರುವ ಕುತಂತ್ರವೇ ವಿನಃ ಬೇರೇನೂ ಇಲ್ಲಾ, ಬೇರೆಯವರ ಅಧಿಕಾರಾವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೆ ಹಾಲಿ ಶಾಸಕನಾದ ನಾನು ತಡೆಯೊಡ್ಡುತ್ತಿರುವು ದಕ್ಕೆ ದಾಖಲೆಗಳಿದ್ದಲ್ಲಿ ಸಾಕ್ಷಿ ಸಮೇತ ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಎಸ್ಸಿ, ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಡಿ.ಜಯ ರಾಮ್, ಎಂ.ಬಿ.ಶ್ರೀನಿವಾಸ್, ಶ್ರೀಧರ್, ಸಿದ್ದಾ ಚಾರಿ, ಗುರುಸ್ವಾಮಿ, ಸಿದ್ದರಾಜು ಇದ್ದರು.

Translate »