ನವೋದಯ ಶಾಲೆಗೆ ಸಂಸದ ಪ್ರತಾಪ್ ಸಿಂಹ ಭೇಟಿ ಆರು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ
ಕೊಡಗು

ನವೋದಯ ಶಾಲೆಗೆ ಸಂಸದ ಪ್ರತಾಪ್ ಸಿಂಹ ಭೇಟಿ ಆರು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ

January 9, 2020

ಮಡಿಕೇರಿ, ಜ.8- ನಗರದ ಹೊರ ವಲಯದಲ್ಲಿರುವ ಜವಾಹರ್ ನವೋ ದಯ ವಸತಿ ಶಾಲೆಯಲ್ಲಿ ಸೃಷ್ಟಿಯಾಗಿ ರುವ ಸಮಸ್ಯೆಯನ್ನು 6 ತಿಂಗಳೊಳಗೆ ಪರಿಹರಿಸಲಾಗುವುದು. ಕಟ್ಟಡ ನವೀ ಕರಣ ಹಾಗೂ ಮರು ನಿರ್ಮಾಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು.

ಕಾರ್ಯಕ್ರಮದ ನಿಮಿತ್ತ ಮಡಿಕೇರಿಗೆ ಆಗಮಿಸಿದ್ದ ಸಂಸದ ಪ್ರತಾಪ್ ಸಿಂಹ, ಶಾಲೆಯ ವಾಸ್ತವ ಪರಿಸ್ಥಿತಿ, ವಿದ್ಯಾರ್ಥಿ ನಿಲಯದಲ್ಲಿರುವ ಸಮಸ್ಯೆಗಳನ್ನು ಖುದ್ದು ವೀಕ್ಷಿಸಿ ಶಾಲಾ ಪ್ರಾಂಶುಪಾಲರು, ಪೋಷ ಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

ನವೋದಯ ಶಾಲೆಯ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಭೇಟಿ ನೀಡಿ ವ್ಯವಸ್ಥೆ ಗಳನ್ನು ಪರಿಶೀಲನೆ ನಡೆಸಿ, ಬೇಸರ ವ್ಯಕ್ತ ಪಡಿಸಿದರು. ಶಾಲೆಯಲ್ಲಿ ಸೂಕ್ತ ಪೈಪ್ ಲೈನ್ ವ್ಯವಸ್ಥೆ ಇಲ್ಲ, ಶೌಚಾಲಯದಲ್ಲಿ ಶುಚಿತ್ವ ಕಾಪಾಡಿಲ್ಲ, ವಸತಿ ನಿಲಯ ಕಟ್ಟಡ ಶಿಥಿಲಗೊಂಡ ಬಗ್ಗೆ ಪೋಷಕರು ದೂರುಗಳನ್ನು ನೀಡಿದರು.

MP Pratap Simha visits Navodaya school

ಬಳಿಕ ಸುದ್ದಿಗಾರರೊಂದಿಗೆ ಮಾತನಾ ಡಿದ ಸಂಸದ ಪ್ರತಾಪ್ ಸಿಂಹ, 1987ರಲ್ಲಿ ಆರಂಭಗೊಂಡ ಶಾಲೆ ಇದೀಗ ಸಮಸ್ಯೆ ಯಲ್ಲಿದೆ. ಶೌಚಾಲಯಗಳು ಸರಿ ಇಲ್ಲ. ಮಳೆಗಾಲದಲ್ಲಿ ಕಟ್ಟಡದ ಮೇಲ್ಛಾವಣಿ ಸೋರಿಕೆಯಾಗುತ್ತಿದೆ. ಮೂಲಭೂತ ಸಮಸ್ಯೆಗಳನ್ನು ಶಾಲೆ ಎದುರಿಸುತ್ತಿದ್ದು, ತಂದೆ ಸ್ಥಾನದಲ್ಲಿ ನಿಂತು ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆ. 6 ತಿಂಗಳಿನೊಳಗೆ ಮೂಲಭೂತ ಸಮಸ್ಯೆ ಪರಿಹರಿಸಿ, ಕಟ್ಟಡ ನಿರ್ಮಾಣ, ನವೀಕರಣದ ಬಗ್ಗೆ ಮೇಲಧಿ ಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು. ಶಾಲೆಯಿಂದ ರೂ.6.92 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದು ಈ ಬಗ್ಗೆ ಕೂಡ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭ ವಿದ್ಯಾರ್ಥಿಗಳು ಸಿಇಟಿ ಹಾಗೂ ನೀಟ್ ತರಬೇತಿಗಳು ಬೇಕೆಂದು ಮನವಿ ಮಾಡಿದರು. ಈ ಬಗ್ಗೆಯೂ ಸೂಕ್ತ ವ್ಯವಸ್ಥೆ ಮಾಡುತ್ತೇನೆ. ವಿದ್ಯಾರ್ಥಿ ಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸುವಂತೆ ಕಿವಿಮಾತು ಹೇಳಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ನಗರ ಬಿಜೆಪಿ ಪ್ರಮುಖರಾದ ಸುಕುಮಾರ್, ಅಪ್ಪಣ್ಣ, ನವೋದಯ ಶಾಲೆಯ ಪ್ರಾಂಶುಪಾಲರು, ವಿವಿಧ ವಿಭಾಗಗಳ ಶಿಕ್ಷಕ ಶಿಕ್ಷಕಿಯರು, ಪೋಷಕರು ಹಾಜರಿದ್ದರು.

ಸಂಸದರ ಭೇಟಿ ವೇಳೆ ಪೋಷಕರ ನಡುವೆ ವಾಗ್ವಾದ ನಡೆದ ಘಟನೆಯೂ ನಡೆಯಿತು. ಮಡಿಕೇರಿ ನಗರಸಭೆ ಮಾಜಿ ಸದಸ್ಯ ಕೆ.ಎಸ್. ರಮೇಶ್ ಅವರು ಶಾಲೆಯ ವಸ್ತುಸ್ಥಿತಿಯನ್ನು ಪ್ರತಾಪ್ ಸಿಂಹ ಅವರಿಗೆ ವಿವರಿಸುತ್ತಿರುವ ವೇಳೆಯಲ್ಲಿ ಮಧ್ಯ ಪ್ರವೇಶಿಸಿದ ಪೋಷಕರೋರ್ವರು ನೈಜ್ಯ ಸಮಸ್ಯೆ ಅರಿಯಬೇಕಾಗಿದೆ. ಪೈಪ್‍ಲೈನ್ ಸಮಸ್ಯೆಯಿಂದ ನೀರು ಪೂರೈಕೆಯಾಗುತ್ತಿಲ್ಲ. ಎಂದು ವಿವರಿಸಿದರು. ಈ ವೇಳೆ ವಾಗ್ವಾದವಾದಾಗ ‘ಬಕೆಟ್ ಹಿಡಿಯುವವರು’ ಎಂಬ ಪದ ಬಳಕೆಯಾಯಿತು. ಈ ಸಂದರ್ಭ ರಮೇಶ್ ಅವರು ಸಂಸದರ ಎದುರೆ ಏರುಧ್ವನಿಯಲ್ಲಿ ನೀವು ಹೇಳಿದ ಪದದ ಅರ್ಥವೇನು? ಯಾರಿಗೆ ಹೇಳಿದಿರಿ ಎಂದು ಆಕ್ರೋಶ ಭರಿತವಾಗಿ ಪ್ರಶ್ನಿಸಿದರು. ಈ ಸಂದರ್ಭ ಸಂಸದ ಪ್ರತಾಪ್ ಸಿಂಹ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Translate »