ತ್ಯಾಜ್ಯ ಸುರಿಯುತ್ತಿದ್ದವರಿಗೆ 5 ಸಾವಿರ ದಂಡ
ಕೊಡಗು

ತ್ಯಾಜ್ಯ ಸುರಿಯುತ್ತಿದ್ದವರಿಗೆ 5 ಸಾವಿರ ದಂಡ

January 9, 2020

ನಾಪೋಕ್ಲು, ಜ.8- ಚೆರಿಯಪರಂಬು ಕಾವೇರಿ ನದಿ ದಡದ ಸಮೀಪದಲ್ಲಿ ಮಡಿಕೇರಿಯ ಹೋಂಸ್ಟೇವೊಂದರ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದವರಿಗೆ ಗ್ರಾಮ ಪಂಚಾಯಿತಿ ಆಡಳಿತ 5,000 ರೂ. ದಂಡ ವಿಧಿಸಿದ ಘಟನೆ ನಡೆದಿದೆ.

ಮಡಿಕೇರಿಯ ಹೋಂ ಸ್ಟೇವೊಂದರ ತ್ಯಾಜ್ಯಗಳನ್ನು ದೊಡ್ಡ, ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಟಾಟಾ ಏಸ್ ವಾಹನದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ಪಂಚಾಯಿತಿ ಕಸ ವಿಲೇವಾರಿ ಜಾಗದಲ್ಲಿ ತಂದು ಸುರಿಯಲಾಗುತ್ತಿತ್ತು. ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ ಹಾಗೂ ಪಂಚಾಯಿತಿ ಸಿಬ್ಬಂದಿಗಳು, ಆರ್‍ಟಿಐ, ಕಾರ್ಯಕರ್ತ ಹ್ಯಾರೀಸ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ತ್ಯಾಜ್ಯವನ್ನು ತಂದು ಸುರಿಯುತ್ತಿದ್ದವರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮತ್ತೆ ಕಸವನ್ನು ವಾಹನಕ್ಕೆ ತುಂಬಿಸಿ, ವಾಪಾಸ್ ಕಳುಹಿಸುವುದರ ಜೊತೆಗೆ, 5000 ದಂಡ ವಸೂಲಿ ಮಾಡಲಾಯಿತು.

ಇದೇ ರೀತಿ ಕಳೆದೆರಡು ದಿನಗಳ ಹಿಂದೆ ಪಟ್ಟಣದ ಕೋಳಿ ಅಂಗಡಿಯೊಂದರ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದವರ ವಿರುದ್ಧ ಕ್ರಮ ಕೈಗೊಂಡು 2,000 ರೂ. ದಂಡವನ್ನು ವಸೂಲಾತಿ ಮಾಡುವ ಮೂಲಕ ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವವರಿಗೆ ಗಾಪಂ ಆಡಳಿತ ಎಚ್ಚರಿಕೆಯ ಸಂದೇಶ ರವಾನಿಸಿದೆ.

Translate »