ಮಕ್ಕಳ ಕೊಡವ ಜನಪದ ಸಾಂಸ್ಕøತಿಕ ನಮ್ಮೆ
ಕೊಡಗು

ಮಕ್ಕಳ ಕೊಡವ ಜನಪದ ಸಾಂಸ್ಕøತಿಕ ನಮ್ಮೆ

January 8, 2020

ಗೋಣಿಕೊಪ್ಪ, ಜ.7- ಇಲ್ಲಿನ ಟಿ.ಶೆಟ್ಟಿ ಗೇರಿ ರೂಸ್ಟ್ ವಿದ್ಯಾಸಂಸ್ಥೆಯಲ್ಲಿ ಕರ್ನಾ ಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಮಕ್ಕಡ ಕೂಟದಿಂದ 5ನೇ ವರ್ಷದ ‘ಮಕ್ಕಳÀ ಕೊಡವ ಜನಪದ ಸಾಂಸ್ಕ್ರತಿಕ ನಮ್ಮೆ’ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಟ್ರಸ್ಟ್‍ನ ಮಲ್ಲಂಗಡ ಕೆ.ನಿರನ್ ಉತ್ತಪ್ಪ ಮಾತನಾಡಿ, ಮಕ್ಕಳಿಗೆ ಕೊಡವ ಸಂಸ್ಕøತಿ ಪರಿಚಯಿಸುವ ಉದ್ದೇಶದಿಂದ ಕಳೆದ 5 ವರ್ಷಗಳಿಂದ ಕೊಡವ ಮಕ್ಕಡ ಸಾಂಸ್ಕø ತಿಕ ಹಬ್ಬವನ್ನು ಆಚರಿಸಿಕೊಂಡು ಬರ ಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಕೊಡವ ಭಾಷೆಯಲ್ಲಿ ಹೆಚ್ಚಿನ ಪುಸ್ತಕಗಳು ಪ್ರಕಟಗೊಂಡರೆ ಮಾತ್ರ ಕೊಡವ ಸಾಹಿತ್ಯ ಇನ್ನಷ್ಟು ಬೆಳೆಯಲು ಸಾಧ್ಯ. ಕೊಡಗಿನ ನೆಲ, ಜಲ, ಸಂಸ್ಕ್ರತಿ ಯೊಂದಿಗೆ ಅವಿನಾಭಾವ ಸಂಬಂಧವಿದೆ. ಕೊಡವ ಸಂಸ್ಕ್ರತಿ ಇನ್ನಷ್ಟು ಪರಿಚಯಿಸ ಬೇಕಾದರೆ ಸಂಶೋಧನೆಯ ಅವಶ್ಯಕತೆ ಇದ್ದು ಕೊಡವ ಸಾಹಿತ್ಯ ಅಕಾಡೆಮಿಯು ಹೆಚ್ಚು ಒತ್ತು ನೀಡಲಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊಡವ ಮಕ್ಕಡ ಕೂಟದ ಅಧÀ್ಯಕ್ಷ ಬೊಳ್ಳ ಜಿರ ಬಿ.ಅಯ್ಯಪ್ಪ ಮಾತನಾಡಿ, ಕೂಟವು ಕಳೆದ 7 ವರ್ಷಗಳಿಂದ ಕೊಡವ ಸಂಸ್ಕøತಿಗೆ ಸಂಬಂಧಿಸಿದ ಆಟ್‍ಪಾಟ್ ಸೇರಿದಂತೆ ಹಲವು ತರಬೇತಿ ಶಿಬಿರ ಹಮ್ಮಿಕೊಳ್ಳುವ ಮೂಲಕ ಸಂಸ್ಕøತಿಯ ಬೆಳೆವಣಿಗೆಗೆ ಪ್ರಾಮಾ ಣಿಕ ಪ್ರಯತ್ನ ಮಾಡಲಾಗಿದೆ ಎಂದರು.

ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ ಅಪ್ಪಣ್ಣ, ಶಿಕ್ಷಣ ಸಂಯೋಜಕ ಪೋಯಂಗಡ ಅಯ್ಯಪ್ಪ, ಕೊಡಗು ಜಿಲ್ಲಾ ಐರಿ ಕೊಡವ ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್, ಕೊಡಗು ಜಿಲ್ಲಾ ಕೊಯವ ಸಮಾಜದ ಅಧ್ಯಕ್ಷ ಚಿಲ್ಲಂಡ ದಾದು ಮಾದಪ್ಪ ಮಾತನಾಡಿದರು.

ಅಕಾಡೆಮಿ ಸದಸ್ಯ ಪಡಿಞರಂಡ ಪ್ರಭು ಕುಮಾರ್, ರೂಟ್ಸ್ ವಿದ್ಯಾಸಂಸ್ಥೆಯ ಶಿಕ್ಷಕಿ ನಿರ್ಮಲಾ ಹರೀಶ್, ಕೂಟದ ನಿರ್ದೇಶಕಿ ಬಾಳೆಯಡ ದಿವ್ಯ ಮಂದಪ್ಪ ಹಾಗೂ ಅಕಾಡೆಮಿ ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕೊಡವ ಅಕಾಡೆÀಮಿ ಸದಸ್ಯರು, ಕೊಡವ ಮಕ್ಕಡ ಕೂಟದ ಪದಾಧಿ ಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಬೊಳಕಾಟ್, ಉಮ್ಮತಾಟ್, ಕೋಲಾಟ್, ಉರ್‍ಟಿಕೊಟ್ಟ್ ಆಟ್, ಬಾಳೋಪಾಟ್, ಕೊಡವ ಪಾಟ್, ವಾಲಗತಾಟ್, ಪರೆಕಳಿ, ಕೊಡವ ನಾಟಕ, ಕೊಡವ ಕವಿಗೋಷ್ಠಿ, ಕೊಡವ ವಿಚಾರಗೋಷ್ಠಿ ನಡೆಯಿತು.

Translate »