ಮಂಡ್ಯ

ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ
ಮಂಡ್ಯ

ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ

May 3, 2018

ಶ್ರೀರಂಗಪಟ್ಟಣ: ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರ ನೀಡಿರುವ ಜನಪರ ಯೋಜನೆಗಳು ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಮತದಾರರು ಒಲವು ತೋರುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಲಿಂಗರಾಜು ಹೇಳಿದರು. ತಾಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಂಡಿ ಸಿದ್ದೇಗೌಡ ಅವರ ಜತೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಯೋಜನೆಗಳನ್ನು ಜಾರಿಗೆ ತಂದು ಪ್ರತಿಯೊಂದು ಸಮಾಜದ ಒಳಿತಿಗಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಸಮಾಜಗಳ ಏಳ್ಗೆಗೆ ಶ್ರಮಿಸಿದ್ದಾರೆ….

ಯುವ ಜನರಿಗೆ ಉದ್ಯೋಗ ನೀಡುವಲ್ಲಿ ಕಾಂಗ್ರೆಸ್ ವಿಫಲ
ಮಂಡ್ಯ

ಯುವ ಜನರಿಗೆ ಉದ್ಯೋಗ ನೀಡುವಲ್ಲಿ ಕಾಂಗ್ರೆಸ್ ವಿಫಲ

May 3, 2018

ಭಾರತೀನಗರ: ಯುವ ಜನರಿಗೆ ಉದ್ಯೋಗ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಆರೋಪಿಸಿದರು. ಇಲ್ಲಿಗೆ ಸಮೀಪದ ಬೊಪ್ಪಸಮುದ್ರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಆಳುವವರಿಗೆ ದೂರದೃಷ್ಟಿಯ ಕೊರತೆ ಇದ್ದಲ್ಲಿ ಯಾವುದೇ ಹೊಸ ಯೋಜನೆ ಗಳನ್ನು ರೂಪಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿಯೇ ಇಂದು ವಿಶ್ವಮಾನ್ಯವಾ ಗಿರುವ ಬೆಂಗಳೂರು ನರಕ ಸದೃಶವಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಬರುತ್ತಿದ್ದರೂ ಅದು ಕೇವಲ ಬೆಂಗಳೂರಿಗೆ ಮಾತ್ರ…

ಗವಿರಂಗಪ್ಪನ ಮೇಲಾಣೆ ಗ್ರಾಮದ ಅಭಿವೃದ್ಧಿ ಖಚಿತ: ಸಿಎಸ್‍ಪಿ
ಮಂಡ್ಯ

ಗವಿರಂಗಪ್ಪನ ಮೇಲಾಣೆ ಗ್ರಾಮದ ಅಭಿವೃದ್ಧಿ ಖಚಿತ: ಸಿಎಸ್‍ಪಿ

April 25, 2018

ಪಾಂಡವಪುರ: ಗವಿರಂಗಪ್ಪನ ಮೇಲಾಣೆ ನಾನು ಗ್ರಾಮದ ಅಭಿವೃದ್ಧಿ ಮಾಡುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು. ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ತೊಣ್ಣೂರು ಕೆರೆಯಿಂದ ವಡ್ಡರ ಹಳ್ಳಿ ಗ್ರಾಮಕ್ಕೆ ನೀರು ಹರಿಸುವ ಯೋಜನೆ ಮತ್ತು ವಡ್ಡರಹಳ್ಳಿ ಮೇಲ್ಭಾಗದಲ್ಲಿ ಕೆರೆ ಕಟ್ಟಿಸುವ ಯೋಜನೆ ರೂಪಿಸಿದ್ದೆ. ಆದರೆ ನನ್ನ ನಂತರ ಬಂದ ಶಾಸಕರು ಇದಕ್ಕೆ ಅಡ್ಡಗಾಲು ಹಾಕಿದರು. ಇದು ನಿಮಗೆ ಗೊತ್ತಿರುವ ವಿಚಾರವಾಗಿದ್ದು, ಎಂದಿಗೂ ನಾನು ನೀತಿಗೆಟ್ಟ ರಾಜಕಾರಣ ಮಾಡಿಲ್ಲ ಧೈರ್ಯವಾಗಿ ನನ್ನನ್ನು ಗೆಲ್ಲಿಸಿ,…

ವಿಧಾನಸಭಾ ಚುನಾವಣೆ: ಕಡೇ ದಿನ 82 ನಾಮಪತ್ರ ಸಲ್ಲಿಕೆ
ಮಂಡ್ಯ

ವಿಧಾನಸಭಾ ಚುನಾವಣೆ: ಕಡೇ ದಿನ 82 ನಾಮಪತ್ರ ಸಲ್ಲಿಕೆ

April 25, 2018

ಮಂಡ್ಯ: ಸಾರ್ವತ್ರಿಕ ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೇ ದಿನವಾದ ಏ.24 ರಂದು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 71 ಅಭ್ಯರ್ಥಿಗಳಿಂದ 82 ನಾಮಪತ್ರಗಳು ಸಲ್ಲಿಕೆಯಾಗಿವೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರ: ಸಮಾಜವಾದಿ ಪಕ್ಷದಿಂದ ರೋಹಿಣ 1 ನಾಮಪತ್ರ, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಆರ್.ಎಸ್.ಹನುಮಂತೇ ಗೌಡ 2 ನಾಮಪತ್ರ, ಬಿಜೆಪಿಯಿಂದ ಸುಂಡಹಳ್ಳಿ ಸೋಮಶೇಖರ್ 1 ನಾಮ ಪತ್ರ, ಕರ್ನಾಟಕ ಜನತಾ ಪಕ್ಷದಿಂದ ಜಿ.ಎಂ. ರಮೇಶ್ 1 ನಾಮಪತ್ರ, ಪಕ್ಷೇತರ ಅಭ್ಯರ್ಥಿಗಳಾಗಿ ಎಂ.ರಮೇಶ 1 ನಾಮಪತ್ರ, ಕೆ.ಎಸ್….

ಸಿ.ಫಾರಂ ಮೇಲೆ ನಾರಾಯಣಗೌಡ, ದೇವರಾಜು ನಾಮಪತ್ರ ಸಲ್ಲಿಕೆ: ಗೊಂದಲ
ಮಂಡ್ಯ

ಸಿ.ಫಾರಂ ಮೇಲೆ ನಾರಾಯಣಗೌಡ, ದೇವರಾಜು ನಾಮಪತ್ರ ಸಲ್ಲಿಕೆ: ಗೊಂದಲ

April 25, 2018

ಕೆ.ಆರ್.ಪೇಟೆ: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯುವಂತೆ ಶಾಸಕ ಕೆ.ಸಿ.ನಾರಾಯಣಗೌಡ ಮತ್ತು ಜಿಪಂ ಸದಸ್ಯ ಬಿ.ಎಲ್.ದೇವರಾಜು ಅವರಿಗೆ ಸಿ.ಫಾರಂ ನೀಡಿದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಕೆ.ಸಿ.ನಾರಾಯಣಗೌಡರು ಜೆಡಿಎಸ್ ವರಿಷ್ಠರಿಂದ ಬಿ.ಫಾರಂ ಪಡೆದು ಏ.23ರಂದು ಸಾವಿರಾರು ಕಾರ್ಯಕರ್ತ ರೊಂದಿಗೆ ಪಟ್ಟಣದ ಮಿನಿ ವಿಧಾನಸೌಧ ದಲ್ಲಿ ನಾಮಪತ್ರ ಸಲ್ಲಿಸಿದ್ದರು. ಆದರೆ ಜಿಪಂ ಸದಸ್ಯ ಬಿ.ಎಲ್.ದೇವರಾಜು ಸೋಮವಾರ ಸಂಜೆ ಜೆಡಿಎಸ್ ವರಿಷ್ಠ…

ರೈತರಿಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ: ಡಿಸಿಟಿ
ಮಂಡ್ಯ

ರೈತರಿಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ: ಡಿಸಿಟಿ

April 25, 2018

ಭಾರತೀನಗರ: ರಾಜ್ಯದ ರೈತರಿಗೆ ರೈತಪರ ನಿಲುವು ಹೊಂದಿರುವ ಪ್ರಾದೇಶಿಕ ಪಕ್ಷ ಜೆಡಿಎಸ್‍ನ ಅನಿವಾರ್ಯತೆ ಇದೆ ಎಂದು ಜೆಡಿಎಸ್ ಅಭ್ಯರ್ಥಿ ಡಿ.ಸಿ. ತಮ್ಮಣ್ಣ ತಿಳಿಸಿದರು. ಕ್ಷೇತ್ರದ ಚಿಕ್ಕರಸಿನಕೆರೆ ಹೋಬಳಿ ವ್ಯಾಪ್ತಿಯ ಕಾಡುಕೊತ್ತನಹಳ್ಳಿ, ಭುಜವಳ್ಳಿ, ಕಪರನಕೊಪ್ಪಲು ಇನ್ನಿತರೆ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, 20 ತಿಂಗಳ ಅಧಿಕಾರಾವಧಿಯಲ್ಲಿ ರೈತಪರ ಕೆಲಸ ಮಾಡಿದ್ದ ಹೆಚ್.ಡಿ.ಕುಮಾರ ಸ್ವಾಮಿ ಈ ಬಾರಿ ಮುಖ್ಯಮಂತ್ರಿಯಾಗಲಿ ದ್ದಾರೆ ಎಂದರು. ಇಸ್ರೇಲ್ ಮಾದರಿ ಕೃಷಿ ಜಾರಿಗೊಳಿ ಸುವ ಇಚ್ಛಾಶಕ್ತಿ ಜೆಡಿಎಸ್ ವರಿಷ್ಠರಿಗಿದೆ. ರೈತರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಂಕಷ್ಟ…

ಬಿಜೆಪಿ ತೊರೆದು ‘ಕೈ’ ಸೇರಿದ ಲಕ್ಷ್ಮಣ್‍ಕುಮಾರ್
ಮಂಡ್ಯ

ಬಿಜೆಪಿ ತೊರೆದು ‘ಕೈ’ ಸೇರಿದ ಲಕ್ಷ್ಮಣ್‍ಕುಮಾರ್

April 25, 2018

ಮದ್ದೂರು: ತಾಲೂಕು ಬಿಜೆಪಿ ಅಧ್ಯಕ್ಷ ಲಕ್ಷ್ಮಣ್‍ಕುಮಾರ್ ಬಿಜೆಪಿ ತೊರೆದು ಮಧು ಜಿ.ಮಾದೇಗೌಡರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಲಕ್ಷ್ಮಣ್ ಕುಮಾರ್, ಕಳೆದ 2 ವರ್ಷದಿಂದ ತಾಲೂಕಿ ನಾದ್ಯಂತ ತಳಮಟ್ಟದಿಂದ ಬಿಜೆಪಿಯನ್ನು ಸಂಘಟಿಸಿದ್ದೇನೆ. ಪ್ರತಿ ಹಳ್ಳಿಯಲ್ಲೂ ಬಿಜೆಪಿ ಕಾರ್ಯಕರ್ತರನ್ನು ಹುಟ್ಟು ಹಾಕಿ, ಹೋಬಳಿಗಳಲ್ಲಿ ಉಚಿತ ಆರೋಗ್ಯ ತಪಾ ಸಣಾ ಶಿಬಿರ ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ಮಾಡಿ ಪಕ್ಷಕ್ಕೆ ಉತ್ತಮ ಹೆಸರು ತಂದಿದ್ದೆ. ಆದರೆ ಇಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವ ಉದ್ದೇಶದಿಂದ ನನ್ನಂತ ನಿಷ್ಠಾವಂತನಿಗೆ ಟಿಕೆಟ್ ನೀಡದೇ…

ದೇವೇಗೌಡರಿಂದ ಬೆಳೆದ ಸ್ವಾರ್ಥಿಗಳಿಂದ ನನ್ನನ್ನು ಸೋಲಿಸಲು ಕುತಂತ್ರ
ಮಂಡ್ಯ

ದೇವೇಗೌಡರಿಂದ ಬೆಳೆದ ಸ್ವಾರ್ಥಿಗಳಿಂದ ನನ್ನನ್ನು ಸೋಲಿಸಲು ಕುತಂತ್ರ

April 24, 2018

ಪಾಂಡವಪುರ: ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಂದ ಬೆಳೆದ ಕೆಲ ಸ್ವಾರ್ಥಿಗಳು ಇಂದು ಅವರ ಕೈ ಕಡಿಯುವ ನಿಟ್ಟಿನಲ್ಲಿ ನನ್ನನ್ನು ಸೋಲಿಸಲು ಇನ್ನಿಲ್ಲದ ಕುತಂತ್ರ ನಡೆಸಿದ್ದಾರೆ. ಆದರೆ ಈ ಧರ್ಮ ಯುದ್ಧದಲ್ಲಿ ಪುಟ್ಟರಾಜುನನ್ನು ಉಳಿಸಿಕೊಳ್ಳುವುದು ಕ್ಷೇತ್ರದ ಮತದಾರರ ಕೈಯಲ್ಲಿದೆ ಎಂದು ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಬಾವುಕರಾಗಿ ನುಡಿದರು. ಪಟ್ಟಣದ ತಮ್ಮ ನಿವಾಸದ ಮುಂಭಾಗದ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ನನ್ನ ತಂದೆ ಸಣ್ಣತಮ್ಮೇಗೌಡರು ದೈಹಿಕವಾಗಿ ಜನ್ಮ ನೀಡಿದರೆ ಹೆಚ್.ಡಿ.ದೇವೇಗೌಡರು ನನ್ನನ್ನು ಒಬ್ಬ…

ಚುನಾವಣೆ: 33 ಅಭ್ಯರ್ಥಿಗಳಿಂದ 50 ನಾಮಪತ್ರ ಸಲ್ಲಿಕೆ
ಮಂಡ್ಯ

ಚುನಾವಣೆ: 33 ಅಭ್ಯರ್ಥಿಗಳಿಂದ 50 ನಾಮಪತ್ರ ಸಲ್ಲಿಕೆ

April 24, 2018

ಮಂಡ್ಯ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಘಟಾನುಘಟಿ ನಾಯಕರು ಸೇರಿದಂತೆ ಸುಮಾರು 33 ಅಭ್ಯರ್ಥಿಗಳಿಂದ 50 ನಾಮಪತ್ರಗಳು ಸಲ್ಲಿಕೆಯಾಗಿವೆ. ಪಾಂಡವಪುರದಲ್ಲಿ ಸಿ.ಎಸ್.ಪುಟ್ಟರಾಜು, ಮಂಡ್ಯದಲ್ಲಿ ಎಂ.ಶ್ರೀನಿವಾಸ್, 5 ರೂ. ಡಾ.ಎಸ್.ಸಿ.ಶಂಕರೇಗೌಡ, ಶ್ರೀರಂಗಪಟ್ಟಣದಲ್ಲಿ ಕೆ.ಎಸ್.ನಂಜುಂಡೇಗೌಡ, ಮಳವಳ್ಳಿಯಲ್ಲಿ ಪಿ.ಎಂ.ನರೇಂದ್ರಸ್ವಾಮಿ, ಡಾ. ಕೆ. ಅನ್ನದಾನಿ, ಮದ್ದೂರಿನಲ್ಲಿ ಮಧು ಜಿ.ಮದೇಗೌಡ, ಕೆ.ಆರ್.ಪೇಟೆಯಲ್ಲಿ ಕೆ.ಸಿ.ನಾರಾಯಣಗೌಡ, ನಾಗಮಂಗಲದಲ್ಲಿ ಕೆ.ಸುರೇಶ್‍ಗೌಡ ಸೇರಿದಂತೆ ಘಟನಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಮಂಡ್ಯ ವಿಧಾನಸಭಾ ಕ್ಷೇತ್ರ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಶ್ರೀನಿವಾಸ್, ಪಕ್ಷೇತರ…

ಸಕ್ರಿಯ ರಾಜಕಾರಣದಿಂದ ಮಾಜಿ ಸ್ಪೀಕರ್ ಕೃಷ್ಣ ನಿವೃತ್ತಿ
ಮಂಡ್ಯ

ಸಕ್ರಿಯ ರಾಜಕಾರಣದಿಂದ ಮಾಜಿ ಸ್ಪೀಕರ್ ಕೃಷ್ಣ ನಿವೃತ್ತಿ

April 19, 2018

ಕೆ.ಆರ್.ಪೇಟೆ: ಕಳೆದ 40 ವರ್ಷಗಳಿಂದ ಶುದ್ಧ ಮತ್ತು ಪ್ರಾಮಾಣಿಕ ರಾಜಕಾರಣ ಮಾಡಿದ ನನಗೆ ಇತ್ತೀಚೆಗೆ ಹಣ ಹಂಚಿಕೆ ಮಾಡಿ ಚುನಾವಣೆಯ ಎದುರಿಸಬೇಕಾದ ಸ್ಥಿತಿಯನ್ನು ನಿರ್ಮಾಣ ಮಾಡಿರುವ ಶ್ರೀಮಂತ ರಾಜಕಾರಣಿಗಳ ನಡೆ ಬೇಸರವ ನ್ನುಂಟು ಮಾಡಿದೆ. ಹಾಗಾಗಿ ಇಂತಹ ಕಲುಷಿತ ರಾಜಕಾರಣ ದಲ್ಲಿ ಮುಂದುವರೆಯಲು ನನಗೆ ಮನಸ್ಸಿಲ್ಲ. ಹಾಗಾಗಿ ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಹೇಳಿದರು. ಪಟ್ಟಣದ ರಾಮದಾಸ್–ಸುಲೋಚನಮ್ಮ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1978ರಲ್ಲಿ ತಾಲೂಕು ಬೋರ್ಡ್ ಚುನಾವಣೆಯಲ್ಲಿ…

1 105 106 107 108
Translate »