ಮಂಡ್ಯ

ಖಾಸಗಿ ಕಾಲೇಜಿಗೆ ಸೇರಿಸಲಿಲ್ಲವೆಂದು ನೇಣಿಗೆ ಶರಣಾದ ವಿದ್ಯಾರ್ಥಿನಿ
ಮಂಡ್ಯ

ಖಾಸಗಿ ಕಾಲೇಜಿಗೆ ಸೇರಿಸಲಿಲ್ಲವೆಂದು ನೇಣಿಗೆ ಶರಣಾದ ವಿದ್ಯಾರ್ಥಿನಿ

June 21, 2021

ಮಳವಳ್ಳಿ, ಜೂ.20-ವೈದ್ಯೆಯಾಗುವ ಕನಸು ಕಂಡಿದ್ದ ಯುವತಿಯೋರ್ವಳು ಆರ್ಥಿಕ ಮುಗ್ಗಟ್ಟಿನಿಂದಾಗಿ ತನ್ನನ್ನು ಖಾಸಗಿ ಕಾಲೇಜಿಗೆ ಸೇರಿಸಲಿಲ್ಲವೆಂದು ಖಿನ್ನತೆಗೊಳಗಾಗಿ ನೇಣಿಗೆ ಶರಣಾಗಿದ್ದು, ಮಗಳ ದುರಂತ ಅಂತ್ಯದಿಂದಾಗಿ ಹೃದಯಾ ಘಾತದಿಂದ ತಂದೆಯೂ ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಾಲೂಕಿನ ತಳಗವಾಡಿ ಗ್ರಾಮದಿಂದ ವರದಿಯಾಗಿದೆ. ಗ್ರಾಮದ ಯುವತಿ ಟಿ.ಆರ್.ಬಾಂಧವ್ಯ(17) ನೇಣಿಗೆ ಶರಣಾ ದವಳಾಗಿದ್ದು, ಆಕೆಯ ತಂದೆ ಕೆ.ರಾಜು ಹೃದಯಾಘಾತ ದಿಂದ ಮೃತಪಟ್ಟವರು. ತಂದೆ-ಮಗಳ ದುರಂತ ಅಂತ್ಯದಿಂ ದಾಗಿ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ರಾಜು ಅವರಿಗೆ ನಾಲ್ವರು ಪುತ್ರಿಯರು, ಓರ್ವ ಪುತ್ರ…

ಕೆಆರ್‍ಎಸ್‍ನಿಂದ ತ.ನಾಡಿಗೆ 5191 ಕ್ಯೂಸೆಕ್ ನೀರು
ಮಂಡ್ಯ

ಕೆಆರ್‍ಎಸ್‍ನಿಂದ ತ.ನಾಡಿಗೆ 5191 ಕ್ಯೂಸೆಕ್ ನೀರು

June 21, 2021

ಶ್ರೀರಂಗಪಟ್ಟಣ, ಜೂ.20 (ವಿನಯ್ ಕಾರೇಕುರ)- ತಾಲೂಕಿನ ಕೃಷ್ಣರಾಜ ಸಾಗರ ಅಣೆಕಟ್ಟೆ ಭರ್ತಿ ಯಾಗುವ ಮುನ್ನವೇ ಅಣೆಕಟ್ಟೆಯಿಂದ ತಮಿಳು ನಾಡಿಗೆ ನೀರು ಹರಿಸಲಾ ಗುತ್ತಿದೆ ಎಂದು ರೈತರು ಆರೋಪ ಮಾಡಿದ್ದಾರೆ. ಜಲಾಶಯದ ಒಳಹರಿವು ಹೆಚ್ಚಾಗಿ ನೀರಿನಮಟ್ಟ ಏರಿಕೆ ಯಾಗುತ್ತಿದ್ದಂತೆ ಜಲಾ ಶಯದಿಂದ ಕಾವೇರಿ ನದಿಗೆ 5191 ಕ್ಯೂಸೆಕ್ ನೀರು ಹರಿಸಲಾಗಿದೆ. ಮುಂಗಾರು ಮಳೆ ಚುರುಕುಗೊಂಡಿದ್ದು, ತಮಿಳುನಾಡಿಗೆ ಕಾವೇರಿ ನದಿ ಮೂಲಕ ಪ್ರತಿದಿನ ಜಲಾಶಯ ದಿಂದ 5191 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಸದ್ಯಜಲಾಶಯದಲ್ಲಿ 91 ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯದ…

ಅಧಿಕಾರಕ್ಕೇರಿ ವರ್ಷ ಕಳೆದರೂ ನಗರಸಭೆ, ಪುರಸಭೆಗೆ ನಾಮನಿರ್ದೇಶನ ಮಾಡದ ಸರ್ಕಾರ
ಮಂಡ್ಯ

ಅಧಿಕಾರಕ್ಕೇರಿ ವರ್ಷ ಕಳೆದರೂ ನಗರಸಭೆ, ಪುರಸಭೆಗೆ ನಾಮನಿರ್ದೇಶನ ಮಾಡದ ಸರ್ಕಾರ

May 27, 2021

ಬಿಜೆಪಿ ಕಾರ್ಯಕರ್ತರ ಕನಸು ‘ಕನ್ನಡಿಯ ಗಂಟು’ ಮಂಡ್ಯ ಮೇ 26- ತಾವು ಪ್ರತಿನಿಧಿಸುವ ಪಕ್ಷಗಳು ರಾಜ್ಯದಲ್ಲಿ ಚುಕ್ಕಾಣಿ ಹಿಡಿದರೆ ಸ್ಥಳೀಯ ಸಂಸ್ಥೆ ಗಳಿಂದ ನಾಮನಿರ್ದೇಶನ ಸದಸ್ಯತ್ವ ಪಡೆದು ಅಧಿ ಕಾರ ಅನುಭವಿಸಬಹುದು ಎಂಬುದು ಕಾರ್ಯ ಕರ್ತರ ಆಸೆ. ಅದರಂತೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಒಂದು ನಗರಸಭೆ, ಆರು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿಯ ಪೈಕಿ ಆಡಳಿತಾರೂಢ ಬಿಜೆಪಿ ಸರ್ಕಾರ ಎರಡು ಸ್ಥಳೀಯ ಸಂಸ್ಥೆಗಳಿಗೆ ನಾಮನಿರ್ದೇಶಿತ ಸದಸ್ಯರನ್ನು ಘೋಷಿಸಿದ್ದರೆ, ಉಳಿದ ಆರು ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರ…

ನಾಗಮಂಗಲದಲ್ಲಿ ಮೂವರು ಸರಗಳ್ಳರ ಬಂಧನ
ಮಂಡ್ಯ

ನಾಗಮಂಗಲದಲ್ಲಿ ಮೂವರು ಸರಗಳ್ಳರ ಬಂಧನ

May 27, 2021

ಮಂಡ್ಯ, ಮೇ 26(ಮೋಹನ್‍ರಾಜ್)- ಮೋಜು, ಮಸ್ತಿಗಾಗಿ ಹಣ ಹೊಂದಿಸಲು ಗ್ರಾಮೀಣ ಪ್ರದೇಶದ ನಿರ್ಜನ ಪ್ರದೇಶ ಗಳಲ್ಲಿ ಬೈಕ್‍ಗಳಲ್ಲಿ ಹಾಗೂ ನಡೆದುಕೊಂಡು ಹೋಗುವ ಒಂಟಿ ಮಹಿಳೆ ಹಾಗೂ ದಂಪತಿ ಗಳನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಸುಲಿಗೆ ಮಾಡುತ್ತಿದ್ದ ಮೂವರು ಅಂತರ್ ಜಿಲ್ಲಾ ಸರಗಳ್ಳರನ್ನು ನಾಗಮಂಗಲ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಶ್ರೀನಗರದ ಎಸ್.ಕುಮಾರ (20), ಕುಮಾರಸ್ವಾಮಿ ಲೇಔಟ್‍ನ ವಿ.ಲಿಖಿತ್ (23) ಹಾಗೂ ಮಾಗಡಿ ರಸ್ತೆಯ ಪಿ.ನಿಖಿಲ್ (19) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಇನ್ನೂ ಮೂವ ರನ್ನು ಬಂಧಿಸಲು…

ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲ
ಮಂಡ್ಯ

ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲ

May 6, 2021

ಶ್ರೀರಂಗಪಟ್ಟಣ, ಮೇ 5(ವಿನಯ್ ಕಾರೇಕುರ)- ಕೊರೊನಾ ನಿರ್ವ ಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಸಂಪೂರ್ಣವಾಗಿ ಎಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಶಾಸಕ ರವೀಂದ್ರಶ್ರೀಕಂಠಯ್ಯ ಏರ್ಪಡಿಸಿದ್ದ ಕ್ಷೇತ್ರದ 25 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. “ಬೆಂದ ಮನೆಯಲ್ಲಿ ಗಳ ಹಿರಿಯುವ” ಕೆಲಸ ಮಾಡಬಾರದು ಎಂದು ವಿರೋಧ ಪಕ್ಷದ ಮುಖಂಡರಿಗೆ ಮಾತಿನಲ್ಲೇ ತಿವಿದರು. ಆಕ್ಸಿಜನ್ ಇಲ್ಲದೆ ಬಡವರು ಸಾವನ್ನಪ್ಪು ತ್ತಿದ್ದಾರೆ. ರಾಜ್ಯದಲ್ಲಿ ಕರುಣಾಜನಕ…

ಕೆ.ಆರ್.ಪೇಟೆಯಲ್ಲಿ ಕಪ್ಪುಪಟ್ಟಿ ಧರಿಸಿ ಧರಣಿ
ಮಂಡ್ಯ

ಕೆ.ಆರ್.ಪೇಟೆಯಲ್ಲಿ ಕಪ್ಪುಪಟ್ಟಿ ಧರಿಸಿ ಧರಣಿ

May 6, 2021

ಕೆ.ಆರ್.ಪೇಟೆ, ಮೇ 5(ಶ್ರೀನಿವಾಸ್)- ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಅಲ್ಲಿನ ಬಿಜೆಪಿ ಕಾರ್ಯ ಕರ್ತರು ಹಾಗೂ ಜನಸಾಮಾನ್ಯರ ಮೇಲೆ ನಡೆ ಸುತ್ತಿರುವ ರಾಜಕೀಯ ವೈಷಮ್ಯದ ದಬ್ಬಾಳಿಕೆ ಯನ್ನು ಖಂಡಿಸಿ ತಾಲೂಕು ಬಿಜೆಪಿ ಕಾರ್ಯ ಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ಎ.ಜಿ. ಪರಮೇಶ್ ಅರವಿಂದ್ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಪಶ್ಚಿಮಬಂಗಾಳ ರಾಜ್ಯ ದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿ ಸಬೇಕು…

ಮಂಡ್ಯದಲ್ಲಿ ಬಿಜೆಪಿ ಮೌನ ಪ್ರತಿಭಟನೆ
ಮಂಡ್ಯ

ಮಂಡ್ಯದಲ್ಲಿ ಬಿಜೆಪಿ ಮೌನ ಪ್ರತಿಭಟನೆ

May 6, 2021

ಮಂಡ್ಯ, ಮೇ 5(ಮೋಹನ್‍ರಾಜ್)- ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣಾ ಫಲಿತಾಂಶದ ವೇಳೆ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಹತ್ಯೆಗೈ ದಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾ ಯಿಸಿದ ಕಾರ್ಯಕರ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ವಿಜಯ ಕುಮಾರ್ ಮಾತನಾಡಿ, ಪಶ್ಚಿಮ ಬಂಗಾಳ ದಲ್ಲಿ ನಡೆದ ವಿಧಾನ ಸಭಾ ಚುನಾವಣೆ ವೇಳೆ ಬಿಜೆಪಿ…

ಕೊರೊನಾ ತಡೆಗೆ ಸಂಪೂರ್ಣ ಲಾಕ್‍ಡೌನ್ ಅಗತ್ಯ
ಮಂಡ್ಯ

ಕೊರೊನಾ ತಡೆಗೆ ಸಂಪೂರ್ಣ ಲಾಕ್‍ಡೌನ್ ಅಗತ್ಯ

May 6, 2021

ಮಂಡ್ಯ, ಮೇ 5(ಮೋಹನ್‍ರಾಜ್)- ಪ್ರಸ್ತುತ ಸರ್ಕಾರ ನಡೆಸುತ್ತಿರುವ ಲಾಕ್ ಡೌನ್ ನಿಯಮಾವಳಿಗಳಿಂದ ಯಾವುದೇ ಪ್ರಯೋಜನವಿಲ್ಲ. ಕೊರೊನಾ ಸರಪಳಿ ತುಂಡರಿಸಬೇಕಾದರೆ ಸಂಪೂರ್ಣ ಲಾಕ್‍ಡೌನ್ ಆಗಲೇಬೇಕು. ಇಲ್ಲದಿದ್ದರೆ ಬಲು ಕಷ್ಟದ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಜನರ ಜೀವಕ್ಕಿಂತ ಆದಾಯ ಮೂಲಗಳತ್ತಲೇ ಹೆಚ್ಚು ಆದ್ಯತೆ ಯಿದೆ. ಆದರೆ, ಸಂಪೂರ್ಣ ಲಾಕ್‍ಡೌನ್ ಆಗಿದ್ದರೂ ಕಳೆದ ಬಾರಿ ರಾಜ್ಯದ ಜನತೆ ಖಜಾನೆ ತುಂಬಿಸಿರಲಿಲ್ಲವೇ ಎಂದು ಪ್ರಶ್ನಿಸಿದರು….

ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಕೈ ಕಾರ್ಯಕರ್ತರಿಗೆ ಕರೆ
ಮಂಡ್ಯ

ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಕೈ ಕಾರ್ಯಕರ್ತರಿಗೆ ಕರೆ

May 5, 2021

ಮಳವಳ್ಳಿ, ಮೇ 4- ಕೋವಿಡ್ ಸೋಂಕಿನ ಬಗ್ಗೆ ಎಚ್ಚರಿಕೆ ಇರಬೇಕು. ಅಲ್ಲದೇ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದರು. ಪಟ್ಟಣದ ಅನಂತರಾಮ್ ಸರ್ಕಲ್ ಬಳಿ ಬೆಂಗಳೂರಿನಿಂದ ಚಾಮರಾಜನಗರಕ್ಕೆ ತೆರಳುವ ಮಾರ್ಗಮಧ್ಯೆ ಪಕ್ಷದ ಮುಖಂ ಡರು ಹಾಗೂ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಡಿಕೆಶಿ, ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಹಾಗೆಯೇ ನಿಮ್ಮ ಅಕ್ಕಪಕ್ಕದ ಜನರಲ್ಲಿ ಅರಿವು ಮೂಡಿಸಿ,…

ಇಂದು 15 ಸಾವಿರ ಬಡವರಿಗೆ ಆಹಾರ ಕಿಟ್ ವಿತರಣೆ
ಮಂಡ್ಯ

ಇಂದು 15 ಸಾವಿರ ಬಡವರಿಗೆ ಆಹಾರ ಕಿಟ್ ವಿತರಣೆ

May 5, 2021

ಶ್ರೀರಂಗಪಟ್ಟಣ, ಮೇ 4(ವಿನಯ್ ಕಾರೇಕುರ)- ಶ್ರೀರಂಗಪಟ್ಟಣದ ಕ್ಷೇತ್ರದ 15 ಸಾವಿರಕ್ಕೂ ಹೆಚ್ಚು ಪಕ್ಷಾತೀತವಾಗಿ ಕಡು ಬಡವರಿಗೆ ದಿನಸಿ, ತರಕಾರಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಂದ ನಾಳೆ (ಮೇ5) ವಿತರಿಸ ಲಾಗುವುದು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು. ಪಟ್ಟಣದ ಶಾಸಕ ಕಚೇರಿಯಲ್ಲಿ ಮಾತ ನಾಡಿದ ಶಾಸಕರು ನಾಳೆ(ಮೇ.5) ಶ್ರೀರಂಗ ಪಟ್ಟಣ ಕ್ಷೇತ್ರದ ಯಾವುದೇ ಜಮೀನು ಇಲ್ಲದ ಬಿಪಿಎಲ್ ಕಾರ್ಡನ್ನೇ ನಂಬಿ ಕೊಂಡಿರುವ ಕಡು ಬಡತನದ ಸುಮಾರು 15 ಸಾವಿರ ಕುಟುಂಬ…

1 14 15 16 17 18 108
Translate »