ತಿ.ನರಸೀಪುರ,ಏ.25(ಎಸ್‍ಕೆ)- ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕರೆ ನೀಡಿದ್ದ ವೀಕೆಂಡ್ ಕಫ್ರ್ಯೂಗೆ ಎರಡನೇ ದಿನವಾದ ಭಾನು ವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆ 8 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ನಿಗದಿ ಪಡಿಸಿದ್ದ ಸಮಯದಲ್ಲಿ ಸಾರ್ವಜನಿಕರು ಪಟ್ಟಣಕ್ಕೆ ದೌಡಾಯಿಸಿ ಅಗತ್ಯ ವಸ್ತುಗಳನ್ನು ಖರೀದಿ ಸಿದರು. ಶನಿವಾರ ಕಫ್ರ್ಯೂ ಜಾರಿಯಲ್ಲಿ ದ್ದರೂ, ಕೆಲವು ಮಂದಿ ಸಾರ್ವಜನಿಕರು ಕುತೂಹಲಕ್ಕಾಗಿ ಪಟ್ಟಣದಲ್ಲಿ ಸುತ್ತಾಟ ನಡೆಸಿದರಾದರೂ, ಇಂದು ಪೆÇಲೀಸರ ಬಿಗಿ ಕ್ರಮದಿಂದಾಗಿ ಯಾರೊಬ್ಬರೂ ಮನೆಯಿಂದ ಹೊರ ಬರಲಿಲ್ಲ. ಭಾನುವಾರ ವಾರಾಂತ್ಯವಾದ್ದ…
ರಸಗೊಬ್ಬರಕ್ಕೆ ಹೆಚ್ಚಿನ ಬೆಲೆ ಕೇಳಿದರೆ ರೈತ ಸಂಪರ್ಕ ಕೇಂದ್ರಕ್ಕೆ ದೂರು ನೀಡಿ
April 26, 2021ಹನಗೋಡು, ಏ. 25(ಮಹೇಶ್)- ರೈತರು ರಸಗೊಬ್ಬರ ಅಂಗಡಿಗಳಲ್ಲಿ ದಾಸ್ತಾನು ಇರುವ ರಸಗೊಬ್ಬರವನ್ನು ಹಳೇ ಎಂಆರ್‍ಪಿ ದರದಲ್ಲೇ ಕೊಂಡುಕೊಳ್ಳÀಬೇಕು. ಅಂಗಡಿ ಯವರು ಹೆಚ್ಚಿನ ಬೆಲೆ ಕೇಳಿದರೆ ರೈತ ಸಂಪರ್ಕ ಕೇಂದ್ರಕ್ಕೆ ದೂರು ನೀಡಬೇಕೆಂದು ಹುಣಸೂರು ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶ್ ತಿಳಿಸಿದರು. ಹನಗೊಡು ರೈತ ಸಂಪರ್ಕ ಕೇಂದ್ರದಲ್ಲಿ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ರೈತರಿಗೆ ಟಾರ್ಪಾಲ್ ವಿತರಣೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗೊಬ್ಬರ ಅಂಗಡಿಗಳಲ್ಲಿ ಹಾಲಿ ಲಭ್ಯವಿರುವ ರಸಗೊಬ್ಬರವನ್ನು ಗೊಬ್ಬರ ಚೀಲಗಳಲ್ಲಿ ನಮೂದಿಸಿರುವ ಬೆಲೆಯನ್ನಷ್ಟೆ ನೀಡಬೇಕು. ಕೆಲ…
ಎರಡನೇ ದಿನದ ವೀಕೆಂಡ್ ಕಫ್ರ್ಯೂಗೆ ಮಂಡ್ಯ ಸ್ತಬ್ಧ
April 26, 2021ಭಾನುವಾರವಾಗಿದ್ದರಿಂದ ಮಾಂಸದಂಗಡಿ ಮುಂದೆ ಜನರ ಕ್ಯೂ ಸಾಮಾಜಿಕ ಅಂತರ ಕಾಪಾಡದ ಅಂಗಡಿ ಮಾಲೀಕರಿಗೆ ದಂಡ ಮಂಡ್ಯ ನಗರ ಸೇರಿ ಬಹುತೇಕ ಕಡೆ ಸಂಪೂರ್ಣ ಬಂದ್ ಜನರಿಲ್ಲದ ಕಾರಣ ಸಾರಿಗೆ ಬಸ್ ಸಂಚಾರ ಸ್ತಬ್ಧ ಗ್ರಾಮೀಣ ಪ್ರದೇಶದಲ್ಲಿ ಎಂದಿನಂತೆ ಜನ ಸಂಚಾರ ಮಂಡ್ಯ, ಏ.25(ಮೋಹನ್‍ರಾಜ್)- ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜಾರಿಯಲ್ಲಿರುವ ವೀಕೆಂಡ್ ಕಫ್ರ್ಯೂ ಎರಡನೇ ದಿನವಾದ ಭಾನು ವಾರವು ಸಹ ಮಂಡ್ಯ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು. ಸಕ್ಕರೆ ನಗರಿಯ ಜನರು ಮನೆಯಲ್ಲಿದ್ದುಕೊಂಡೇ ಕಫ್ರ್ಯೂಗೆ ಬೆಂಬಲ ನೀಡಿದರೆ, ಬೆಳಿಗ್ಗೆ…
ಮಂಡ್ಯದಲ್ಲಿ ವೀಕೆಂಡ್ ಕಫ್ರ್ಯೂ ಯಶಸ್ವಿ
April 25, 2021ಬೆಳಗ್ಗೆ 10ಗಂಟೆ ಬಳಿಕ ಜಿಲ್ಲೆಯಲ್ಲಿ ಎಲ್ಲವೂ ಬಂದ್ ಆಸ್ಪತ್ರೆ, ಮೆಡಿಕಲ್, ಹಾಲು, ಪೆಟ್ರೋಲ್‍ಗಿತ್ತು ಅವಕಾಶ ರಸ್ತೆಗಿಳಿದ ಜನರಿಗೆ ಪೊಲೀಸರಿಂದ ಲಾಠಿ ರುಚಿ ಮಂಡ್ಯದಲ್ಲಿ ಹೆದ್ದಾರಿ ಹೊರತು ರಸ್ತೆ ಸಂಚಾರ ಭಾಗಶಃ ಸ್ತಬ್ಧ ಗ್ರಾಮೀಣ ಪ್ರದೇಶದಲ್ಲಿ ಎಂದಿನಂತೆ ಜನ-ಜೀವನ ಮಂಡ್ಯ ಏ.24(ಮೋಹನ್‍ರಾಜ್)-ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ವೀಕೆಂಡ್ ಕಫ್ರ್ಯೂ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಭಾಗಶಃ ಯಶಸ್ವಿಯಾಗಿದ್ದು, ವೀಕೆಂಡ್ ಕಫ್ರ್ಯೂ ಲಾಕ್‍ಡೌನ್‍ನಂತೆ ಭಾಸವಾಯಿತು. ಮಂಡ್ಯ ನಗರ ಸೇರಿದಂತೆ ಜಿಲ್ಲೆಯೆಲ್ಲೆಡೆ ಶನಿವಾರ ಬೆಳಗ್ಗೆ 10 ಗಂಟೆಯವರೆಗೆ ದಿನಸಿ,…
ಕೆ.ಆರ್.ಪೇಟೆಯಲ್ಲೂ ಕಫ್ರ್ಯೂಗೆ ಉತ್ತಮ ಪ್ರತಿಕ್ರಿಯೆ
April 25, 2021ಕೆ.ಆರ್.ಪೇಟೆ,ಏ.24(ಶ್ರೀನಿವಾಸ್)-ಪಟ್ಟಣ ಸೇರಿದಂತೆ ತಾಲೂಕಿನ ಬೂಕನಕೆರೆ, ಕಿಕ್ಕೇರಿ, ಅಕ್ಕಿಹೆಬ್ಬಾಳು, ಸಂತೇಬಾಚಹಳ್ಳಿ, ಶೀಳನೆರೆ ಹೋಬಳಿಯ ಕೇಂದ್ರಗಳಲ್ಲಿ ವೀಕೆಂಡ್ ಕಫ್ರ್ಯೂ ಸಂಪೂರ್ಣ ಯಶಸ್ವಿಯಾಯಿತು. ತಹಸೀಲ್ದಾರ್ ಶಿವಮೂರ್ತಿ, ಸರ್ಕಲ್ ಇನ್ಸ್‍ಪೆಕ್ಟರ್ ಎಂ.ಕೆ.ದೀಪಕ್, ಸಬ್‍ಇನ್ಸ್‍ಪೆಕ್ಟರ್ ಬ್ಯಾಟರಾಯಗೌಡ, ಮುಖ್ಯಾ ಧಿಕಾರಿ ಸತೀಶ್‍ಕುಮಾರ್ ಪಟ್ಟಣಾದ್ಯಂತ ಸಂಚರಿಸಿ ಪರಿಸ್ಥಿತಿ ವೀಕ್ಷಿಸಿದರು. ಸದಾ ಸಾವಿರಾರು ಜನ ಜಂಗುಳಿಯಿಂದ ಗಿಜಿಗುಡುತ್ತಿದ್ದ ಪಟ್ಟಣದ ಹೃದಯ ಭಾಗ ಟಿಬಿ ವೃತ್ತ, ಬಸ್ ನಿಲ್ದಾಣ, ದುರ್ಗಾ ಭವನ್ ವೃತ್ತ, ಟೌನ್ ಕ್ಲಬ್ ವೃತ್ತ/ ಹೇಮಾವತಿ ವೃತ್ತ ಸೇರಿದಂತೆ ಎಲ್ಲಾ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಮೆಡಿಕಲ್…
ಪಾಂಡವಪುರದಲ್ಲಿ ಸ್ವಯಂಪ್ರೇರಿತ ಬಂದ್
April 25, 2021ಪಾಂಡವಪುರ, ಏ.24-ವೀಕೆಂಡ್ ಕಫ್ರ್ಯೂನಿಂದ ಪಾಂಡವಪುರದಲ್ಲಿ ವ್ಯಾಪಾರಿ ಗಳು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿದ್ದರು. ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳು ಪಟ್ಟಣದಲ್ಲಿ ಸಂಚರಿಸಿ ಕೊರೊನಾ ನಿಯಮ ಪಾಲಿಸು ವಂತೆ ಜನತೆಯನ್ನು ಎಚ್ಚರಿಸಿದರು. ಪಾಂಡವಪುರ ತಾಲೂಕಿನಾದ್ಯಂತ ಕೊರೊನಾ ಅತಿವೇಗದಲ್ಲಿ ಹರಡುತ್ತಿರು ವುದರಿಂದ ಶುಕ್ರವಾರ ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಬಹುತೇಕ ಎಲ್ಲಾ ಅಂಗಡಿಗಳನ್ನು ಸ್ವತಃ ಮಾಲೀಕರೇ ಮುಚ್ಚುವ ಮೂಲಕ ಕಫ್ರ್ಯೂಗೆ ಬೆಂಬಲ ಸೂಚಿಸಿದರು. ಕೆಲ ಅಂಗಡಿಗಳು ಮಾತ್ರ ಅರ್ಧ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದ ದೃಶ್ಯ ಕಂಡು ಬಂತು. ಸಂಜೆ ವೇಳೆಗೆ…
ವಾರಾಂತ್ಯ ಕಫ್ರ್ಯೂಗೆ ವ್ಯಾಪಕ ಬೆಂಬಲ
April 25, 2021ಭಾರತೀನಗರ,ಏ.24(ಅ.ಸತೀಶ್)-ವಾರಾಂತ್ಯ ಕಫ್ರ್ಯೂ ಹಿನ್ನೆಲೆಯಲ್ಲಿ ಇಂದು ಜನ ಸಂಚಾರ ಬಹುತೇಕ ಸ್ಥಗಿತಗೊಂಡು, ವ್ಯಾಪಾರ-ವಹಿವಾಟು ಭಾರತೀನಗರದಲ್ಲಿ ಸ್ತಬ್ಧವಾಗಿತ್ತು. ಜನರಿಂದ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತಲ್ಲದೆ, ಕಫ್ರ್ಯೂ ಸಂಪೂರ್ಣವಾಗಿ ಯಶಸ್ವಿಯಾಯಿತು. ಕಫ್ರ್ಯೂಗೆ ಬೆಂಬಲ ವ್ಯಕ್ತಪಡಿಸಿ ಸ್ವಯಂ ಪ್ರೇರಿತವಾಗಿ ಸಾರ್ವಜನಿಕರು ಮನೆಯಲ್ಲೇ ಉಳಿದಿದ್ದರು. ಆಸ್ಪತ್ರೆ, ಔಷಧ ಮಳಿಗೆಗಳನ್ನು ಹೊರತುಪಡಿಸಿ ಮತ್ಯಾವುದೇ ಅಂಗಡಿ-ಮುಂಗಟ್ಟುಗಳು ತೆರೆದಿರಲಿಲ್ಲ. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸರಕು ಸಾಗಾಣೆ, ತರಕಾರಿ, ಹಾಲಿನ ವಾಹನಗಳು ಸಹ ಸಂಚರಿಸಲಿಲ್ಲ. ಮಂಡ್ಯ ರಸ್ತೆ, ಹಲಗೂರು ರಸ್ತೆ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಕಂಡು…
ಮಂಡ್ಯದಲ್ಲಿ ಕೊರೊನಾ ಆರ್ಭಟ 688 ಮಂದಿಗೆ ಸೋಂಕು, ಮೂವರ ಸಾವು
April 25, 2021ಮಂಡ್ಯ ಏ.24-ಮಂಡ್ಯ ಜಿಲ್ಲೆಯಲ್ಲಿಂದು ಕೊರೊನಾ ಮಹಾಮಾರಿ ಆರ್ಭಟಿಸಿದ್ದು, ಬರೋಬ್ಬರಿ 688 ಮಂದಿಗೆ ಕೊರೊನಾ ದೃಢಪಟ್ಟಿದೆ. 688 ಮಂದಿ ಪೈಕಿ ಮಂಡ್ಯದಲ್ಲಿ 251 ಮಂದಿಗೆ ಸೋಂಕು ಕಂಡು ಬಂದಿದ್ದರೆ, ನಾಗಮಂಗಲ 121, ಶ್ರೀರಂಗಪಟ್ಟಣ 84, ಕೆ.ಆರ್.ಪೇಟೆ 80, ಮದ್ದೂರು 67, ಮಳವಳ್ಳಿ ಹಾಗೂ ಪಾಂಡವಪುರದಲ್ಲಿ ತಲಾ 38 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಹೊರಜಿಲ್ಲೆಯಿಂದ ಬಂದವರ ಪೈಕಿ 9 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟಾರೇ ಸೋಂಕಿತರ ಸಂಖೆÉ್ಯ 24,760 ಕ್ಕೇರಿದೆ. ಇಂದು 216 ಮಂದಿ ಗುಣಮುಖರಾಗಿ…
ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿದ ಸ್ವಾಮೀಜಿ
April 25, 2021ನಾಗಮಂಗಲ, ಏ.24-ಆದಿಚುಂಚನಗಿರಿ ಆಸ್ಪತ್ರೆಯಲ್ಲಿರುವ ಕೊರೊನಾ ಚಿಕಿತ್ಸಾ ಕೇಂದ್ರಕ್ಕೆ ಇಂದು ಭೇಟಿ ನೀಡಿದ ನಿರ್ಮಲಾನಂದನಾಥ ಶ್ರೀಗಳು ಪಿಪಿಇ ಕಿಟ್ ಧರಿಸಿ, ಸೋಂಕಿತರ ಆರೋಗ್ಯ ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಆದಿಚುಂಚನಗಿರಿ ಮಠದ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡುವ ಕಡೆ ಗಮನ ಹರಿಸಿವೆ. ಆಸ್ಪತ್ರೆಯಲ್ಲಿ 250ಕ್ಕೂ ಹೆಚ್ಚು ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ವೆಂಟಿಲೇಟರ್ ಹಾಗೂ ಆಕ್ಸಿಜನ್ ಕೂಡ ಅಗತ್ಯ ಪ್ರಮಾಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು. ಅಲ್ಲದೆ ತಾವೂ ಕೋವಿಡ್…
ಕೊರೊನಾದಿಂದ ಮಹಿಳೆ ಸಾವು ಶಂಕೆ ಶವದ ಬಳಿ ಸುಳಿಯದ ಸಂಬಂಧಿಕರು
April 25, 2021ತಾಲೂಕು ಆಡಳಿತದಿಂದ ಅಂತ್ಯಕ್ರಿಯೆ 5 ದಿನವಾದರೂ ಬಂದಿಲ್ಲ ಕೊರೊನಾ ಟೆಸ್ಟ್ ವರದಿ ಮಳವಳ್ಳಿ ಏ.24-ಕೋವಿಡ್ ಪರೀಕ್ಷೆಗೆ ಒಳಪಟ್ಟು ವರದಿ ಬರುವ ಮುನ್ನ ಮೃತಪಟ್ಟಿದ್ದ ಮಹಿಳೆಯು ಕೊರೊನಾದಿಂದ ಮೃತಪಟ್ಟಿರಬಹುದೆಂದು ಆತಂಕಗೊಂಡ ಸಂಬಂಧಿಕರು ಹಾಗೂ ಗ್ರಾಮಸ್ಥರು ಅಂತ್ಯ ಸಂಸ್ಕಾರಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಮನೆಯ ಜಗುಲಿ ಮೇಲೆಯೇ ಮಹಿಳೆಯ ಶವ ಅನಾಥವಾಗಿ ಬಿದ್ದಿದ್ದ ದಾರುಣ ಘಟನೆ ಇಂದು ತಾಲೂಕಿನಲ್ಲಿ ವರದಿಯಾಗಿದೆ. ತಾಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದ 55 ವರ್ಷದ ಮಹಿಳೆ ಏ.16ರಂದು ಬೆಂಗ ಳೂರಿನಿಂದ ತಮ್ಮ ಮನೆಗೆ ಬಂದಿದ್ದರು. ಏ.17ರಂದು ಗ್ರಾಮದಲ್ಲಿ ಕೋವಿಡ್…