ಮಂಡ್ಯ

ವಿಜಯದಶಮಿಯಂದು 19 ಮಂದಿ ನಾಮಪತ್ರ ಸಲ್ಲಿಕೆ
ಮಂಡ್ಯ

ವಿಜಯದಶಮಿಯಂದು 19 ಮಂದಿ ನಾಮಪತ್ರ ಸಲ್ಲಿಕೆ

October 27, 2020

ಮಂಡ್ಯ, ಅ.26- ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಆಡಳಿತ ಮಂಡಳಿಯ ನಿರ್ದೇಶಕರ ಒಟ್ಟು 12 ಸ್ಥಾನಗಳಿಗೆ ನವೆಂಬರ್ 5 ರಂದು ನಗರದ ಲಕ್ಷ್ಮೀ ಜನಾರ್ಧನ ಬಾಲಕಿಯರ ಪ್ರೌಢಶಾಲೆಯಲ್ಲಿ ಚುನಾವಣೆ ನಡೆಯಲಿದ್ದು, ನಿರ್ದೇಶಕ ಸ್ಥಾನ ಆಕಾಂಕ್ಷಿಗಳು ನಾಮಪತ್ರಗಳನ್ನು ಸಲ್ಲಿಸಿದ್ದು, ವಿಜಯದಶಮಿಯಂದು 19 ಮಂದಿ ನಾಮಪತ್ರ ಸಲ್ಲಿಸಿದರು. ನ.5 ರಂದು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಈಗಾಗಲೇ ಅ.20 ರಿಂದ ನಾಮಪತ್ರ ಸಲ್ಲಿಸಲು ದಿನಾಂಕ ನಿಗಧಿಯಾಗಿದ್ದು, ಅದರಂತೆ ಅ.28 ರೊಳಗೆ ನಾಮಪತ್ರ ಸಲ್ಲಿಸಲು…

ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯದಶಮಿ ವಿಶೇಷ ಪೂಜೆ
ಮಂಡ್ಯ

ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯದಶಮಿ ವಿಶೇಷ ಪೂಜೆ

October 27, 2020

ಭಾರತೀನಗರ, ಅ.26(ಅ.ಸತೀಶ್)-ನವರಾತ್ರಿ ಹಿನ್ನಲೆಯಲ್ಲಿ ಇಲ್ಲಿನ ಚಾಂಷು ಗರ್ ಕಾರ್ಖಾನೆ ಆವರಣದಲ್ಲಿ ರುವ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿತು. ದೇವಿಗೆ ವಿಶೇಷ ಅಲಂಕಾರ ಮಾಡಿ ಮುಂಜಾನೆ ಯಿಂದ ರಾತ್ರಿವರೆಗೆ ಧಾರ್ಮಿಕ ಕಾರ್ಯ ಕ್ರಮಗಳು ನಡೆದವು. ದೇವಾಲಯ ಮಂಟಪ ದಲ್ಲಿ ವಿವಿಧ ಬಗೆಯ ಬೊಂಬೆಗಳನ್ನು ಕೂರಿಸಿ ವಿಶೇಷ ಪೂಜೆ ನಡೆಸಲಾಯಿತು. ಪ್ರತೀದಿನ ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಅಭಿಷೇಕ, 9 ರೀತಿಯ ಅಲಂಕಾರ, ಸುಹಾಸಿನಿಯ ರಿಂದ ಪ್ರತೀದಿನ ಸಂಜೆ 6 ರಿಂದ…

ಮಂಡ್ಯ ಗಂಗಾಧರೇಶ್ವರಸ್ವಾಮಿ ದೇಗುಲದಲ್ಲಿ ನವರಾತ್ರಿ ಪೂಜೆ
ಮಂಡ್ಯ

ಮಂಡ್ಯ ಗಂಗಾಧರೇಶ್ವರಸ್ವಾಮಿ ದೇಗುಲದಲ್ಲಿ ನವರಾತ್ರಿ ಪೂಜೆ

October 27, 2020

ಮಂಡ್ಯ, ಅ.26- ಶ್ರೀ ಆದಿಚುಂ ಚನಗಿರಿ ಶಾಖಾ ಮಠದ ಸಹಯೋಗ ದಲ್ಲಿ ಮಂಡ್ಯ ನಗರದ ಶಂಕರಪುರದ ಶ್ರೀ ಗಂಗಾಧರೇ ಶ್ವರಸ್ವಾಮಿ ದೇವಾಲಯ ದಲ್ಲಿ ನವರಾತ್ರಿ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಪ್ರತಿ ವರ್ಷವು ಸಹ ಸಂಪ್ರದಾಯದಂತೆ ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕೊರೊನಾ ಹಿನ್ನಲೆಯಲ್ಲಿ ಈ ಬಾರಿ ಅತ್ಯಂತ ಸರಳವಾಗಿ, ಸಾಂಪ್ರದಾಯಕವಾಗಿ ನವರಾತ್ರಿ ಉತ್ಸವವನ್ನು ನಡೆಸಲಾಗುತ್ತಿದೆ. ನವರಾತ್ರಿಯ 9 ದಿನಗಳ ಉತ್ಸವದ ಬಳಿಕ ಸೋಮವಾರ ವಿಜಯ ದಶಮಿ…

ನಾಲೆಗೆ ಕಾರು ಉರುಳಿ ಓರ್ವ ಸಾವು
ಮಂಡ್ಯ

ನಾಲೆಗೆ ಕಾರು ಉರುಳಿ ಓರ್ವ ಸಾವು

October 27, 2020

ಪಾಂಡವಪುರ, ಅ.26- ವಿಶ್ವೇಶ್ವರಯ್ಯ ನಾಲೆಗೆ ಕಾರು ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ. ತಾಲೂಕಿನ ಬನಘಟ್ಟದ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದ ತಿರುವಿನಲ್ಲಿ ಸಂಭವಿಸಿದೆ. ನಾಗಮಂಗಲ ತಾಲೂಕಿನ ಅಲ್ಪಹಳ್ಳಿ ಗ್ರಾಮದ ಧರಣೇಂದ್ರ (35) ಎಂಬಾತ ಮೃತ ವ್ಯಕ್ತಿ. ಉಳಿದಂತೆ ಅದೇ ಗ್ರಾಮದವರಾದ ಕಾರು ಚಾಲಕ ಹಾಳೇಗೌಡ,  ದಿಲೀಪ, ವಿಜಯ ಕುಮಾರ್, ನವೀನಕುಮಾರ್ ಅವರು ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗಮಂಗಲದ ಅಲ್ಪಹಳ್ಳಿ ಗ್ರಾಮದಿಂದ ಮೈಸೂರಿನ ಸಂಬಂಧಿಕರ ಮನೆಗೆ ಟೋಯೋಟಾ…

ವಿದ್ಯುತ್ ತಗುಲಿ ರೈತ ಸಾವು
ಮಂಡ್ಯ

ವಿದ್ಯುತ್ ತಗುಲಿ ರೈತ ಸಾವು

October 27, 2020

ಕೆ.ಆರ್.ಪೇಟೆ, ಅ.26- ಆಯುಧ ಪೂಜೆ ಸಿದ್ದತೆಯಲ್ಲಿ ತೊಡಗಿದ್ದ ರೈತರೊಬ್ಬರಿಗೆ ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ತಾಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ.ಗಂಜಿಗೆರೆ ಗ್ರಾಮದ ಲೋಕೇಶ್ ಅವರ ಹಿರಿಯ ಪುತ್ರ ಜಿ.ಎಲ್.ಸುಖೇಶ್ (34)ಮೃತ ಪಟ್ಟಿರುವ ರೈತ. ಘಟನೆ ವಿವರ: ಸುಖೇಶ್ ಅವರು ಭಾನುವಾರ ಬೆಳಗ್ಗೆ ತಮ್ಮ ಜಮೀನಿನ ಬಳಿ ಇರುವ ತೋಟದ ಮನೆಯಲ್ಲಿ ಆಯುಧ ಪೂಜೆಗೆ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಉಂಟಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ…

ಅಪಾರ ಪ್ರಮಾಣದ ಮರ ಭಸ್ಮ
ಮಂಡ್ಯ

ಅಪಾರ ಪ್ರಮಾಣದ ಮರ ಭಸ್ಮ

October 27, 2020

ಕೆ.ಆರ್.ಪೇಟೆ,ಅ.26- ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ಟಿಂಬರ್‍ನಲ್ಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಉಂಟಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಮುಟ್ಟುಗಳು ಹಾಗೂ ಯಂತ್ರೋಪಕರಣಗಳು ಸುಟ್ಟು ಕರಕಲಾಗಿರುವ ಘಟನೆ ಭಾನುವಾರ ಮಧ್ಯರಾತ್ರಿ ನಡೆದಿದೆ. ಕೆ.ಆರ್.ಪೇಟೆ ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯಲ್ಲಿರುವ ಯುವಕ ಬಣ್ಣನಕೆರೆ ಗಂಗಾಧರ್ ಅವರಿಗೆ ಸೇರಿದ ಶ್ರೀ ಅನ್ನಪೂರ್ಣೇಶ್ವರಿ ಟಿಂಬರ್ ಮತ್ತು ವುಡ್ ಫ್ಲೈನಿಂಗ್ ವಕ್ರ್ಸ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ.ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ….

ಇಂದು ಶ್ರೀರಂಗಪಟ್ಟಣ ದಸರಾ
ಮಂಡ್ಯ

ಇಂದು ಶ್ರೀರಂಗಪಟ್ಟಣ ದಸರಾ

October 23, 2020

ಶ್ರೀರಂಗಪಟ್ಟಣ, ಅ.22(ವಿನಯ್ ಕಾರೇಕುರ)- ಅ.23ರಂದು ನಡೆಯುವ ಶ್ರೀರಂಗಪಟ್ಟಣದ ಸಾಂಪ್ರದಾಯಕ ದಸರಾ ವನ್ನು ಕೊರೊನಾ ವಾರಿಯರ್ಸ್ ಉದ್ಘಾಟಿಸ ಲಿದ್ದು, ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ.ರವಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮ ಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರ ವಾಗುತ್ತೆ ಎಂದು ಶಾಸಕ ಎ.ಎಸ್ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು. ಪಟ್ಟಣದ ಐತಿಹಾಸಿಕ ಬತೇರಿಯ ಮೇಲೆ ಆಯೋಜಿಸಿರುವ ಈ ಬಾರಿಯ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಈ ಬಾರಿ ನಾವು ನಡೆಸುತ್ತಿರುವ ಶ್ರೀರಂಗಪಟ್ಟಣದ…

ಶ್ರೀ ಶಿವಶೈಲದಲ್ಲಿ ಜಿಟಿಡಿಯಿಂದ ಸುದರ್ಶನ ಹೋಮ
ಮಂಡ್ಯ

ಶ್ರೀ ಶಿವಶೈಲದಲ್ಲಿ ಜಿಟಿಡಿಯಿಂದ ಸುದರ್ಶನ ಹೋಮ

October 23, 2020

ಪಾಂಡವಪುರ, ಅ.22- ತಾಲೂಕಿನ ಪಟ್ಟಸೋಮನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಶ್ರೀಶಿವಶೈಲ ದೇವಾ ಲಯದಲ್ಲಿ ಶರನ್ನವರಾತ್ರಿ ಕಾರ್ಯಕ್ರಮ ಗಳು ಆರಂಭಗೊಂಡಿದ್ದು, ಮಾಜಿ ಸಚಿವ, ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಕುಟುಂಬ ಸಮೇತರಾಗಿ ಪಾಲ್ಗೊಂಡು ಸುದರ್ಶನ ಹೋಮ ನೆರವೇರಿಸಿದರು. ಇಲ್ಲಿನ ಕಾಮಾಕ್ಷಿ ಚಂದ್ರಮೌಳೇಶ್ವರ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ಆರನೇ ದಿನವಾದ ಗುರುವಾರ ವಿಶೇಷ ಪೂಜೆ, ಸುದರ್ಶನ ಹೋಮ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಹಲವು ವರ್ಷಗಳಿಂದ ಇಲ್ಲಿ ನಡೆಯುವ ನವರಾತ್ರಿ ಮಹೋತ್ಸವ ದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಈ…

ಅಪ್ರಾಪ್ತ ಬಾಲಕಿ ವಿವಾಹ ಮಾಡಿಸಿದ ಆರೋಪ: ಪೂಜಾರಿ ಸೇರಿ 10 ಮಂದಿ ವಿರುದ್ಧ ಕೇಸ್ ದಾಖಲಿಸಲು ಕೋರ್ಟ್ ಆದೇಶ
ಮಂಡ್ಯ

ಅಪ್ರಾಪ್ತ ಬಾಲಕಿ ವಿವಾಹ ಮಾಡಿಸಿದ ಆರೋಪ: ಪೂಜಾರಿ ಸೇರಿ 10 ಮಂದಿ ವಿರುದ್ಧ ಕೇಸ್ ದಾಖಲಿಸಲು ಕೋರ್ಟ್ ಆದೇಶ

October 23, 2020

ಮಂಡ್ಯ, ಅ.22-ಅಪ್ರಾಪ್ತ ಬಾಲಕಿಯನ್ನು ಮದುವೆ ಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುವೆ ಮಾಡಿಸಿದ ಪೂಜಾರಿ ಸೇರಿದಂತೆ 10 ಮಂದಿ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆ ಯಡಿ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಕೆರಗೋಡು ಠಾಣೆ ಸಬ್ ಇನ್ಸ್‍ಪೆಕ್ಟರ್ ಚಂದ್ರಹಾಸ ನಾಯಕ್ ಅವರಿಗೆ ಮಂಡ್ಯದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಹೆಗಡೆ ಅವರು ಆದೇಶ ನೀಡಿದ್ದಾರೆ. ಅಪ್ರಾಪ್ತ ಬಾಲಕಿ ನಾಪತ್ತೆಯಾಗಿರುವ ಕುರಿತು ಅಪಹರಣ ಪ್ರಕರಣ ದಾಖಲಾಗಿದ್ದರೂ, ಆ…

ಹೈಕೋರ್ಟ್ ನೌಕರಿ ಕೊಡಿಸುವ ವಂಚಕರಿಂದಲೇ ಮೆಡಿಕಲ್ ಸೀಟು ಕೊಡಿಸುವ ಆಮಿಷ ಲಕ್ಷಾಂತರ ರೂ. ವಂಚನೆ, ಸಿಸಿಬಿಯಲ್ಲಿ ದೂರು ದಾಖಲು
ಮಂಡ್ಯ

ಹೈಕೋರ್ಟ್ ನೌಕರಿ ಕೊಡಿಸುವ ವಂಚಕರಿಂದಲೇ ಮೆಡಿಕಲ್ ಸೀಟು ಕೊಡಿಸುವ ಆಮಿಷ ಲಕ್ಷಾಂತರ ರೂ. ವಂಚನೆ, ಸಿಸಿಬಿಯಲ್ಲಿ ದೂರು ದಾಖಲು

October 23, 2020

ಮಂಡ್ಯ, ಅ.22- ಹೈಕೋರ್ಟ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಮಂಡ್ಯ ಮೂಲದ ವ್ಯಕ್ತಿಯೇ ಮೆಡಿಕಲ್ ಸೀಟು ಕೊಡಿಸು ವುದಾಗಿಯೂ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರು ವುದಾಗಿ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ಉದ್ಯಮಿ ದಿನೇಶ್ ನಾಚಪ್ಪ ಎಂಬುವರ ಸ್ನೇಹಿತನ ಮಗಳಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ಮಂಡ್ಯ ನಗರದ ಭೋವಿ ಕಾಲೋನಿ ನಿವಾಸಿ ಸಿ.ಕೆ.ರವಿಕುಮಾರ್ ಮತ್ತು ಸ್ನೇಹಿತರಾದ ಮೋಹನ್‍ಕುಮಾರ್, ಎನ್.ಪಿ.ಶ್ರೀಧರ್ ಹಾಗೂ ಶ್ರೀನಿವಾಸ್ ಎಂಬುವರ ವಿರುದ್ಧ ಬೆಂಗಳೂರಿನ ಕೇಂದ್ರ ಅಪರಾಧ…

1 20 21 22 23 24 108
Translate »