ಇಂದು ಶ್ರೀರಂಗಪಟ್ಟಣ ದಸರಾ
ಮಂಡ್ಯ

ಇಂದು ಶ್ರೀರಂಗಪಟ್ಟಣ ದಸರಾ

October 23, 2020

ಶ್ರೀರಂಗಪಟ್ಟಣ, ಅ.22(ವಿನಯ್ ಕಾರೇಕುರ)- ಅ.23ರಂದು ನಡೆಯುವ ಶ್ರೀರಂಗಪಟ್ಟಣದ ಸಾಂಪ್ರದಾಯಕ ದಸರಾ ವನ್ನು ಕೊರೊನಾ ವಾರಿಯರ್ಸ್ ಉದ್ಘಾಟಿಸ ಲಿದ್ದು, ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ.ರವಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮ ಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರ ವಾಗುತ್ತೆ ಎಂದು ಶಾಸಕ ಎ.ಎಸ್ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

ಪಟ್ಟಣದ ಐತಿಹಾಸಿಕ ಬತೇರಿಯ ಮೇಲೆ ಆಯೋಜಿಸಿರುವ ಈ ಬಾರಿಯ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಈ ಬಾರಿ ನಾವು ನಡೆಸುತ್ತಿರುವ ಶ್ರೀರಂಗಪಟ್ಟಣದ ಸರಳ ಹಾಗೂ ಪಾರಂ ಪರಿಕ ದಸರಾದ ಸಾಂಸ್ಕøತಿಕ ಕಾರ್ಯಕ್ರಮ ಗಳು ತುಂಬಾ ವಿಶಿಷ್ಠತೆಯಿಂದ ಕೂಡಿದೆ. ಇಲ್ಲಿಯವರೆಗೂ ಯಾರು ಮಾಡಿರದ ಒಂದು ವಿನೂತನ ಪ್ರಯತ್ನವಿದು ಎಂದರು.

15ನೇ ಶತಮಾನದಿಂದಲೂ ರಾಜ ಮಹ ರಾಜರು ಭದ್ರವಾಗಿ ಕಾಪಾಡಿಕೊಂಡು ಬಂದ. ಶ್ರೀರಂಗಪಟ್ಟಣದ ರಾಜಮನೆತನಗಳ ಹೆಮ್ಮೆಯ ಪ್ರತೀಕವಾದ ರಾಷ್ಟ್ರದ್ವಜವನ್ನು ಹಾರಿಸು ತ್ತಿದ್ದ ಧ್ವಜಕಂಬದ ಸ್ಥಳವಾದ ಭೂಮಿಯಿಂದ ಸುಮಾರು 70 ಅಡಿ ಎತ್ತರದಲ್ಲಿರುವ ಬತೇರಿ ಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮ ಪಟ್ಟಣದ ಜನರನ್ನು ಬೇರೆಯ ಲೋಕಕ್ಕೆ ಕರೆದೊಯ್ಯ ಲಿದೆ. ಸಾರ್ವಜನಿಕರು ಅವರವರ ಮನೆಯ ತಾರಸಿ ಮೇಲೆ ನಿಂತು ಕಾರ್ಯಕ್ರಮ ವೀಕ್ಷಿಸಬಹುದಾಗಿದೆ ಎಂದರು.

ನಂತರ ಬನ್ನಿಮಂಟಪಕ್ಕೆ ತೆರಳಿ ಅಂತಿಮ ಘಟ್ಟದಲ್ಲಿರುವ ತಯಾರಿಗಳ ಬಗ್ಗೆ ಹಾಗೂ ನಾಳೆ ನಡೆಯುವ ಕಾರ್ಯಕ್ರಮಗಳ ರೂಪು ರೇಷೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಪರಶುರಾಮ್ ಹಾಗೂ ಡಿವೈಎಸ್‍ಪಿ ಅರುಣ್‍ನಾಗೇಗೌಡ ಜೊತೆ ಸಮಾ ಲೋಚನೆ ನಡೆಸಿದರು.

ಉಪವಿಭಾಗಾಧಿಕಾರಿ ಡಾ.ಶಿವಾನಂದ ಮೂರ್ತಿ ತಹಸೀಲ್ದಾರ್ ಎಂ.ವಿ ರೂಪಾ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ಪ, ಪುರಸಭೆ ಸದಸ್ಯರಾದ ಎಸಿಸಿ ಪ್ರಕಾಶ್, ಕೃಷ್ಣಪ್ಪ, ಮುಖಂಡರಾದ ನೆಲಮನೆ ದಯಾನಂದ್, ಶ್ರೀನಿವಾಸ ಅಗ್ರಹಾರ, ರಾಮಕೃಷ್ಣ, ಬಿ.ಆರ್ ಕೋಪ್ಪಲ್, ತಿಲಕ್ ಸೇರಿದಂತೆ ಇತರರು ಇದ್ದರು.

 

 

Translate »