ಶ್ರೀ ಶಿವಶೈಲದಲ್ಲಿ ಜಿಟಿಡಿಯಿಂದ ಸುದರ್ಶನ ಹೋಮ
ಮಂಡ್ಯ

ಶ್ರೀ ಶಿವಶೈಲದಲ್ಲಿ ಜಿಟಿಡಿಯಿಂದ ಸುದರ್ಶನ ಹೋಮ

October 23, 2020

ಪಾಂಡವಪುರ, ಅ.22- ತಾಲೂಕಿನ ಪಟ್ಟಸೋಮನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಶ್ರೀಶಿವಶೈಲ ದೇವಾ ಲಯದಲ್ಲಿ ಶರನ್ನವರಾತ್ರಿ ಕಾರ್ಯಕ್ರಮ ಗಳು ಆರಂಭಗೊಂಡಿದ್ದು, ಮಾಜಿ ಸಚಿವ, ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಕುಟುಂಬ ಸಮೇತರಾಗಿ ಪಾಲ್ಗೊಂಡು ಸುದರ್ಶನ ಹೋಮ ನೆರವೇರಿಸಿದರು.

ಇಲ್ಲಿನ ಕಾಮಾಕ್ಷಿ ಚಂದ್ರಮೌಳೇಶ್ವರ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ಆರನೇ ದಿನವಾದ ಗುರುವಾರ ವಿಶೇಷ ಪೂಜೆ, ಸುದರ್ಶನ ಹೋಮ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಹಲವು ವರ್ಷಗಳಿಂದ ಇಲ್ಲಿ ನಡೆಯುವ ನವರಾತ್ರಿ ಮಹೋತ್ಸವ ದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಈ ವರ್ಷ ಅತಿವೃಷ್ಠಿಯಾಗಿ ರಾಜ್ಯದಲ್ಲಿ ಸಾವು ನೋವು ಗಳು ಸಂಭವಿಸಿದ್ದು, ದೇಶದಲ್ಲಿ ಕೊರೊನಾ ಸೋಂಕಿನ ಕರಿಛಾಯೆ ಆವರಿಸಿದೆ. ಆದ್ದರಿಂದ ಕೋವಿಡ್ 19 ನಿಂದ ಮುಕ್ತ ವಾಗಲು ದೇವಿಯಲ್ಲಿ ಪ್ರಾರ್ಥಿಸಿ ಸುದ ರ್ಶನ ಹೋಮ ಸೇರಿದಂತೆ ಇತರೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗಿದೆ ಎಂದರು.

ಈ ಬಾರಿ ದಸರಾ ಸಾಂಪ್ರದಾಯಿಕ ವಾಗಿ ಆಚರಣೆಯಾಗುತ್ತಿದೆ. ಜನರು ಕಡ್ಡಾಯವಾಗಿ ಅಂತರ ಕಾಪಾಡಿಕೊಂಡು ಆರೋಗ್ಯದತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ, ಶಿವಶೈಲ ದತ್ತಿ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥರಾದ ಶಿವಪ್ಪ, ಪುತ್ರ ಡಾ.ಸಿ.ಎಸ್.ರಾಜೇಶ್, ಸೀಮಾ ರಾಜೇಶ್, ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾ ಮಂಡಳಿ ಅಧ್ಯಕ್ಷೆ ಲಲಿತಾ ದೇವೇಗೌಡ, ಮೈಸೂರು- ಚಾಮರಾಜನಾಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡ, ಪತ್ನಿ ವರ್ಷಾ ಹರೀಶ್‍ಗೌಡ, ಬಿಜೆಪಿ ಮುಖಂಡ ರೈಸ್‍ಮಿಲ್ ತಮ್ಮಣ್ಣ, ಯಧುಕುಮಾರ್, ಶಿವಣ್ಣ, ರಮೇಶ್, ಪ್ರಧಾನ ಅರ್ಚಕರಾದ ವಿಶ್ವನಾಥ್‍ಭಟ್, ನಾಗೇಶ್, ವಿಜೇತ, ಸತ್ಯಣ್ಣ, ಸುಬ್ರಹ್ಮಣ್ಯ, ಗಣೇಶ್ ಹಾಗೂ ಶಿವಶೈಲ ಮ್ಯಾನೇಜರ್ ನಂಜುಂಡೇ ಗೌಡ ಹಾಗೂ ಭಕ್ತರು ಪಾಲ್ಗೊಂಡಿದ್ದರು.

 

 

 

Translate »