ಹೈಕೋರ್ಟ್ ನೌಕರಿ ಕೊಡಿಸುವ ವಂಚಕರಿಂದಲೇ ಮೆಡಿಕಲ್ ಸೀಟು ಕೊಡಿಸುವ ಆಮಿಷ ಲಕ್ಷಾಂತರ ರೂ. ವಂಚನೆ, ಸಿಸಿಬಿಯಲ್ಲಿ ದೂರು ದಾಖಲು
ಮಂಡ್ಯ

ಹೈಕೋರ್ಟ್ ನೌಕರಿ ಕೊಡಿಸುವ ವಂಚಕರಿಂದಲೇ ಮೆಡಿಕಲ್ ಸೀಟು ಕೊಡಿಸುವ ಆಮಿಷ ಲಕ್ಷಾಂತರ ರೂ. ವಂಚನೆ, ಸಿಸಿಬಿಯಲ್ಲಿ ದೂರು ದಾಖಲು

October 23, 2020

ಮಂಡ್ಯ, ಅ.22- ಹೈಕೋರ್ಟ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಮಂಡ್ಯ ಮೂಲದ ವ್ಯಕ್ತಿಯೇ ಮೆಡಿಕಲ್ ಸೀಟು ಕೊಡಿಸು ವುದಾಗಿಯೂ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರು ವುದಾಗಿ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರಿನ ಉದ್ಯಮಿ ದಿನೇಶ್ ನಾಚಪ್ಪ ಎಂಬುವರ ಸ್ನೇಹಿತನ ಮಗಳಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ಮಂಡ್ಯ ನಗರದ ಭೋವಿ ಕಾಲೋನಿ ನಿವಾಸಿ ಸಿ.ಕೆ.ರವಿಕುಮಾರ್ ಮತ್ತು ಸ್ನೇಹಿತರಾದ ಮೋಹನ್‍ಕುಮಾರ್, ಎನ್.ಪಿ.ಶ್ರೀಧರ್ ಹಾಗೂ ಶ್ರೀನಿವಾಸ್ ಎಂಬುವರ ವಿರುದ್ಧ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ, ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದಿನೇಶ್ ನಾಚಪ್ಪ ದೂರು ದಾಖಲಿಸಿದ್ದಾರೆ.

ದಿನೇಶ್ ನಾಚಪ್ಪ ಸ್ನೇಹಿತನಾದ ಬಯ್ಯಪ್ಪ ಅವರು ತಮ್ಮ ಮಗಳಿಗೆ ಮೆಡಿಕಲ್‍ಗೆ ಸರ್ಕಾರಿ ಕೋಟಾದಡಿ ಸೀಟು ಸಿಗುವುದು ಕಷ್ಟವಾಗಿದೆ ಎಂದು ಹೇಳುತ್ತಿದ್ದರು. ಇದೇ ಸಮಯಕ್ಕೆ ನನಗೆ ಪರಿಚಯ ವಿದ್ದ ಮಂಡ್ಯದ ಸಿ.ಕೆ.ಕುಮಾರ್, ಮೆಡಿಕಲ್ ಸೀಟು ಕೊಡಿಸುವವರು ಪರಿಚಯವಿದ್ದು, ಈಗಾಗಲೇ ವರ್ಗಾವಣೆ, ಸರ್ಕಾರಿ ಕೆಲಸ ಮತ್ತು ಮೆಡಿಕಲ್ ಸೀಟುಗಳನ್ನು ಕೊಡಿಸಿದ್ದೇವೆ, ನನ್ನ ಸ್ನೇಹಿತರನ್ನು ಕರೆದು ಮಾತನಾಡುತ್ತೇನೆ ಎಂದು ಮೋಹನ್ ಕುಮಾರ್, ಶ್ರೀಧರ್, ಶ್ರೀನಿ ವಾಸ ಅವರನ್ನು 2019 ಜೂನ್ 29 ರಂದು ಮೈಸೂರು ರಸ್ತೆ ಯೂನಿ ವರ್ಸಿಟಿ ಗೇಟ್ ಬಳಿ ಇರುವ ಖಾಸಗಿ ಹೊಟೇಲ್‍ಗೆ ಬರ ಹೇಳಿ ನಮ್ಮನ್ನು ಕರೆಸಿದರು. ಮಾತುಕತೆ ವೇಳೆ ಮೆಡಿಕಲ್ ಸೀಟ್ ಕೊಡಿಸಲು 8 ಲಕ್ಷ ಮತ್ತು ಕೆಲಸವಾದ ಮೇಲೆ 4 ಲಕ್ಷ ಹಣ ನೀಡಲು ಒಪ್ಪಂದ ವಾಗಿತ್ತು. ಒಪ್ಪಂದದಂತೆ ಸಿ.ಕೆ.ಕುಮಾರ್ ಸಮ್ಮುಖದಲ್ಲಿ ಹಣ ನೀಡಿರು ವುದಾಗಿ ದೂರಿನಲ್ಲಿ ದಿನೇಶ್ ನಾಚಪ್ಪ ತಿಳಿಸಿದ್ದಾರೆ.

ಈ ಎಲ್ಲಾ ಹಣದ ವ್ಯವಹಾರ ಮುಗಿದ ಮೇಲೆ, ಸ್ವಲ್ಪ ದಿನಗಳು ಕಳೆದ ನಂತರ ಈ ವರ್ಷ ಮೆಡಿಕಲ್ ಸೀಟು ಕೊಡಿಸಲು ಸಾಧ್ಯವಾಗು ವುದಿಲ್ಲ. ಮುಂದಿನ ವರ್ಷ ಸೀಟು ಕೊಡಿಸುತ್ತೇನೆ ಎಂದು ಹೇಳಿದರು. ಇದರಿಂದ ಅವರ ಮೇಲೆ ಅನುಮಾನ ಮೂಡಿ, ನಮ್ಮ ಹಣ ವಾಪಸ್ಸು ಕೊಡುವಂತೆ ಒತ್ತಾಯಿಸಿದಾಗ ಕಂತಿನ ರೂಪದಲ್ಲಿ 5 ಲಕ್ಷ ಹಣವನ್ನು ವಾಪಸ್ಸು ಕೊಟ್ಟಿದ್ದು, ಉಳಿದ 3 ಲಕ್ಷ ಹಣವನ್ನು ಕೊಟ್ಟಿಲ್ಲ.

ಮೂರು ಲಕ್ಷ ಹಣವನ್ನು ವಾಪಸ್ ಮಾಡುವಂತೆ ಒತ್ತಾಯಿಸಿದಾಗ, ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಪೊಲೀಸರು, ರಾಜ ಕಾರಣಿಗಳು ಹಾಗೂ ರೌಡಿಗಳು ಗೊತ್ತು ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಶ್ರೀಧರ್, ಶ್ರೀನಿವಾಸ್ ಹಾಗೂ ಎಸ್.ಪಿ. ಮೋಹನ್‍ಕುಮಾರ್ ಅವರು ಸಿ.ಕೆ.ಕುಮಾರ್ ಜೊತೆಗೂಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಸಿಸಿಬಿಗೆ ನೀಡಿರುವ ದೂರಿನಲ್ಲಿ ದಿನೇಶ್ ನಾಚಪ್ಪ ತಿಳಿಸಿದ್ದಾರೆ.

Translate »