ಮಂಡ್ಯದಲ್ಲಿ ಕಳೆದ 10 ದಿನಗಳಿಂದ ಬಂದ್ ಆಗಿರುವ ಜೆನರಿಕ್ ಔಷಧ ಮಳಿಗೆ ಮೋದಿ ಜನೌಷಧü ಕೇಂದ್ರಕ್ಕೂ ಸಮಯ ನಿಗದಿ: ಸಾರ್ವಜನಿಕರ ಪರದಾಟ ಮಂಡ್ಯ, ಏ.19(ನಾಗಯ್ಯ)- ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನ ಸಂಜೀ ವಿನಿ ಜೆನರಿಕ್ ಔಷಧಿ ಮಳಿಗೆ ಕಳೆದ 10 ದಿನಗಳಿಂದಲೂ ಬಾಗಿಲು ಮುಚ್ಚಿದ್ದು, ರಿಯಾಯಿತಿ ದರದಲ್ಲಿ ಔಷಧಿ ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಖಾಸಗಿ ಔಷಧಿ ಅಂಗಡಿಗಳು ನಿತ್ಯವೂ ಬೆಳಿಗ್ಗೆಯಿಂದ ರಾತ್ರಿವರೆಗೂ ರೋಗಿಗಳಿಗೆ ಬೇಕಾದ ಅಗತ್ಯ ಔಷಧಿಗಳನ್ನು ಪೂರೈಸು ತ್ತಿವೆ. ಆದರೆ ರಾಜ್ಯ…
ಅಕ್ರಮವಾಗಿ ದಾಸ್ತಾನು ಮಾಡಿದ್ದ 65 ಬಾಕ್ಸ್ ಮದ್ಯ ವಶ: ಇಬ್ಬರ ಬಂಧನ
April 20, 2020ಕೆ.ಆರ್.ಪೇಟೆ, ಏ.19(ಶ್ರೀನಿವಾಸ್)- ತಾಲೂಕಿನ ಕಳ್ಳನಕೆರೆ ಗ್ರಾಮದ 2 ಮನೆಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 10 ಲಕ್ಷ ರೂ. ಮೌಲ್ಯದ 65 ಬಾಕ್ಸ್ ಮದ್ಯ ವಶಪಡಿಸಿ ಕೊಂಡಿರುವ ಕಿಕ್ಕೇರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳ್ಳನಕೆರೆ ಗ್ರಾಮದ ನಿವಾಸಿಗಳಾದ ದೇವರಾಜು ಹಾಗೂ ತಮ್ಮಣ್ಣೇಗೌಡ ಬಂಧಿತ ಆರೋಪಿಗಳು. ವಿವರ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ವೈನ್‍ಸ್ಟೋರ್ ಬಂದ್ ಆಗಿರುವುದನ್ನೇ ನೆಪವಾಗಿಟ್ಟುಕೊಂಡು ಮದ್ಯ ಮಾರಾಟಗಾರರು ಮದ್ಯವನ್ನು ಒಂದಕ್ಕೆ ಮೂರರಷ್ಟು ಬೆಲೆ ನಿಗದಿ ಮಾಡಿ ಅಕ್ರಮವಾಗಿ ಗ್ರಾಹಕರಿಗೆ ಕದ್ದುಮುಚ್ಚಿ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ…
ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್, ಸೀರೆ ವಿತರಣೆ
April 20, 2020ಪಾಂಡವಪುರ, ಏ.19- ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಹಾಗೂ ಕಿರಿಯ ಆರೋಗ್ಯ ಸಹಾಯಕಿಯರಿಗೆ (ಎಎನ್‍ಎಂ) ಶಾಸಕ ಸಿ.ಎಸ್.ಪುಟ್ಟರಾಜು ಆಹಾರ ಕಿಟ್ ಹಾಗೂ ಸೀರೆ ವಿತರಿಸಿದರು. ತಾಲೂಕಿನ ಚಿನಕುರಳಿ ಸಮುದಾಯ ಆರೋಗ್ಯ ಕೇಂದ್ರ, ನಾರಾಯಣಪುರ, ಮೇಲುಕೋಟೆ, ಬೆಳ್ಳಾಳೆ ಹಾಗೂ ಕೆರೆ ತೊಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ತೆರಳಿದ ಶಾಸಕರು, ಆಯಾ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಹಾಗೂ ಕಿರಿಯ ಆರೋಗ್ಯ ಸಹಾಯಕಿ ಯರಿಗೆ ಆಹಾರ ಕಿಟ್ ಹಾಗೂ ಸೀರೆ ವಿತರಿಸಿದರು. ಬಳಿಕ ಮಾತನಾಡಿದ ಶಾಸಕ ಸಿ.ಎಸ್. ಪುಟ್ಟರಾಜು, ಕೊರೊನಾ ನಿಯಂತ್ರಿಸಲು…
ಕೊರೊನಾ ನಿಯಂತ್ರಣಕ್ಕಾಗಿ ಪಿಎಂ ಪರಿಹಾರ ನಿಧಿಗೆ 44.56 ಲಕ್ಷ ರೂ. ದೇಣಿಗೆ
April 18, 2020ಮಂಡ್ಯ, ಏ.17(ನಾಗಯ್ಯ)- ಕೊರೊನಾ ನಿಯಂತ್ರಣ ಕ್ಕಾಗಿ ಸರ್ಕಾರದ ವತಿಯಿಂದ ಕೈಗೊಳ್ಳಲಾಗುತ್ತಿರುವ ಕ್ರಮಗಳಿಗೆ ಸಹಾಯವಾಗುವಂತೆ ಈವರೆಗೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಮಂಡ್ಯದ ಸಾರ್ವ ಜನಿಕರು ಮತ್ತು ಸಂಘ ಸಂಸ್ಥೆಗಳಿಂದ 44,56,270 ರೂ. ದೇಣಿಗೆ ಸಂಗ್ರಹವಾಗಿದೆ. ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ 10 ಲಕ್ಷ, ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಿಂದ 6,78,207 ಲಕ್ಷ ರೂ., ಭಾರತೀನಗರದ ಭಾರತೀ ಶಿಕ್ಷಣ ಸಂಸ್ಥೆಯಿಂದ 5 ಲಕ್ಷ, ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ದತ್ತಿ ಸಂಸ್ಥೆಯಿಂದ 3,56 ಲಕ್ಷ, ಮೈಸೂರು…
ಅಬಕಾರಿ ಅಧಿಕಾರಿಗಳಿಂದ ವಿವಿಧ ಬಾರ್‍ಗಳಲ್ಲಿ ಮದ್ಯ ದಾಸ್ತಾನು ಪರಿಶೀಲನೆ
April 18, 2020ಮಂಡ್ಯ, ಏ.17(ನಾಗಯ್ಯ)- ಅಬಕಾರಿ ಅಧಿಕಾರಿಗಳ ತಂಡ ಶುಕ್ರವಾರ ನಗರದ ವಿವಿಧೆಡೆ ಮದ್ಯದಂಗಡಿಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಿತು. ಬೆಂಗಳೂರು ಅಬಕಾರಿ ಆಯುಕ್ತರ ಸೂಚನೆ ಮೇರೆಗೆ ಮಂಡ್ಯ ಜಿಲ್ಲಾ ಅಬಕಾರಿ ಉಪ ಆಯುಕ್ತ ಶಿವಪ್ರಸಾದ್ ನೇತೃತ್ವದಲ್ಲಿ ದಾಸ್ತಾನು ಪರಿಶೀಲನಾ ಕಾರ್ಯ ನಡೆಯಿತು. ಅಬಕಾರಿ ಎಸ್‍ಐ ಕಾಮಾಕ್ಷಿ ನೇತೃತ್ವದ ತಂಡ ನಗರದ ಗುರುರಾಜ ಕಾಂಟಿ ನೆಂಟಲ್ ಬಳಿಯ ಗುರುರಾಜ ಬಾರ್ & ರೆಸ್ಟೋರೆಂಟ್ ಹಾಗೂ ಶ್ರೀನಿವಾಸ್ ಗೇಟ್ ಬಳಿಯ ಚಾಮುಂಡಿಬಾರ್‍ಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಯಾವುದೇ…
ತಾಲೂಕಿನ ಖಾಸಗಿ ವೈದ್ಯರು ಕ್ಲಿನಿಕ್ ತೆರೆದು ಸೇವೆ ಆರಂಭಿಸಲು ತಹಶೀಲ್ದಾರ್ ಮನವಿ
April 14, 2020ಕೆ.ಆರ್.ಪೇಟೆ, ಏ.13- ತಾಲೂಕಿನ ಖಾಸಗಿ ವೈದ್ಯರು ತಮ್ಮ ಕ್ಲಿನಿಕ್ ತೆರೆದು ಸೇವೆ ಆರಂಭಿಸುವಂತೆ ತಹಸೀಲ್ದಾರ್ ಶಿವಮೂರ್ತಿ ಮನವಿ ಮಾಡಿದರು. ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಸೋಮವಾರ ನಡೆದ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳ ವೈದ್ಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ, ಕೊರೊನಾ ಹಿನ್ನೆಲೆಯಲ್ಲಿ ತಮ್ಮ ಕ್ಲಿನಿಕ್ ತೆರೆದು ಸೇವೆ ಆರಂಭಿಸಲು ಹಿಂಜರಿಯುತ್ತಿರುವ ಖಾಸಗಿ ವೈದ್ಯರ ಸಮಸ್ಯೆ ಆಲಿಸಿ ಮಾತನಾಡಿದ ತಹಸೀಲ್ದಾರ್, ತಾಲೂಕು ಆಡಳಿತ ನಿಮ್ಮ ಸೇವೆಗೆ ಸಂಪೂರ್ಣ ಸಹಕಾರ ನೀಡಲಿದೆ. ಬಹುತೇಕ ರೋಗಿಗಳು ವೈದ್ಯರ ಚಿಕಿತ್ಸೆಗೆ ಮಾನಸಿಕವಾಗಿ ಅಂಟಿ…
ಮಂಡ್ಯ ಜಿಲ್ಲಾಡಳಿತದಿಂದ ಆನ್‍ಲೈನ್ ಎಂ-ಪಾಸ್ ಆ್ಯಪ್ ಬಿಡುಗಡೆ
April 13, 2020ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಲು ಸಾರ್ವಜನಿಕರಿಗೆ ಡಿಸಿ ಸೂಚನೆ ಮಂಡ್ಯ, ಏ.12(ನಾಗಯ್ಯ)- ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಬಳಸಲು ಅನುಕೂಲವಾಗುವಂತೆ ಎಂ-ಪಾಸ್ ಆ್ಯಪ್ ಅನ್ನು ಭಾನುವಾರ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಬಿಡುಗಡೆ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದ್ದು, ಈ ಆ್ಯಪ್ ಮೂಲಕ ತುರ್ತು ಸಂದರ್ಭಗಳಲ್ಲಿ ಬಳಸಲು ಆನ್‍ಲೈನ್ ಮೂಲಕ ಎಂ-ಪಾಸ್ ಅನ್ನು ವಿತರಿಸಲಾಗುವುದು ಎಂದರು. ಒಂದು…
ಸ್ವರ್ಣಸಂದ್ರ ಬಡಾವಣೆಯ ಸೋಂಕಿತನ ಕುಟುಂಬದ ನಾಲ್ವರಿಗೂ ನೆಗೆಟಿವ್
April 13, 2020ಮಂಡ್ಯ ಜಿಲ್ಲೆಯೊಳಗೆ ಎಲ್ಲಿಯೂ ಸೀಲ್‍ಡೌನ್ ಇಲ್ಲ್ಲ: ಡಿಸಿ ಸ್ಪಷ್ಟನೆ ಮಂಡ್ಯ,ಏ.12(ನಾಗಯ್ಯ)- ಇಲ್ಲಿನ ಸ್ವರ್ಣಸಂದ್ರ ಬಡಾ ವಣೆಯ ಕೊರೊನಾ ಸೋಂಕಿತನ ಕುಟುಂಬದ ನಾಲ್ವರ ರಕ್ತಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು ಮಂಡ್ಯದ ಜನತೆ ಯಾವುದೇ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸ್ವರ್ಣಸಂದ್ರದ 32 ವರ್ಷದ ಯುವಕನಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನ ತಂದೆ, ತಾಯಿ, ತಂಗಿ ಹಾಗೂ ತಂಗಿಯ ಮಗಳನ್ನು ಆಸ್ಪತ್ರೆ ಕ್ವಾರಂಟೈನ್ ನಲ್ಲಿ…
ಮಂಡ್ಯದ ಸ್ವರ್ಣಸಂದ್ರಕ್ಕೆ ಡಿಸಿ, ಎಸ್‍ಪಿ ಭೇಟಿ; ಭದ್ರತೆ ಪರಿಶೀಲನೆ
April 10, 2020ಬಡಾವಣೆ ಸುತ್ತ ನಾಕಾಬಂದಿ;ನಿವಾಸಿಗಳಲ್ಲಿ ಮಡುಗಟ್ಟಿದ ಕೊರೊನಾ ಭೀತಿಯ ಕಾರ್ಮೋಡ ಮಂಡ್ಯ ತಾಲೂಕಿನ ಎಲ್ಲಾ ಅಂಗಡಿ ಮುಂಗಟ್ಟು ಬಂದ್;ವಾಹನ ಸಂಚಾರ ಸಂಪೂರ್ಣ ನಿಷೇಧ ಮಂಡ್ಯ, ಏ.9(ನಾಗಯ್ಯ)- ಕೊರೊನಾ ಸೋಂಕು ಕಾಣಿಸಿಕೊಂಡ ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಗೆ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಗುರುವಾರ ಸಂಜೆ ಭೇಟಿ ನೀಡಿ ಭದ್ರತೆ ಮತ್ತು ಸುರಕ್ಷತಾ ಕ್ರಮ ಕುರಿತಂತೆ ಪರಿಶೀಲನೆ ನಡೆಸಿತು. ಚಿಸೋಂಕಿತ ವ್ಯಕ್ತಿ ವಾಸವಾಗಿರುವ ನಗರ ಸಭಾ ವ್ಯಾಪ್ತಿಯ ಸ್ವರ್ಣಸಂದ್ರ ಬಡಾ…
ನನಗೆ ಕೊರೊನಾ ಇದೆ, ಮುಟ್ಟಿದರೆ ನಿಮಗೂ ಬರುತ್ತೆ ಎಂದು ಚೆಕ್‍ಪೋಸ್ಟ್ ಸಿಬ್ಬಂದಿ ಹೆದರಿಸಿದ್ದ ಮೂವರ ಬಂಧನ
April 10, 2020ಕೆ.ಆರ್.ಪೇಟೆ, ಏ.9- ತಾಲೂಕಿನ ತೆಂಡೇಕೆರೆ ಬಳಿ ಕೊರೊನಾ ಸೋಂಕು ತಡೆಯುವ ಹಿನ್ನೆಲೆಯಲ್ಲಿ ತೆರೆಯಲಾಗಿರುವ ಚೆಕ್‍ಪೋಸ್ಟ್ನಲ್ಲಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ನಮಗೆ ಕೊರೊನಾ ಇದೆ ಮುಟ್ಟಿದ್ರೆ ನಿಮಗೂ ಬರುತ್ತದೆ ಎಂದು ಬೆದರಿಸಿ ಆಟೋದಲ್ಲಿ ಪರಾರಿಯಾಗಿದ್ದ ಮೂವರನ್ನು ಕೆ.ಆರ್.ಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಆರ್.ಪೇಟೆ ಸಿಪಿಐ ಕೆ.ಎನ್.ಸುಧಾಕರ್ ಮತ್ತು ಗ್ರಾಮಾಂತರ ಎಸ್‍ಐ ಲಕ್ಷ್ಮಣ್ ನೇತೃತ್ವದಲ್ಲಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ತಾಲೂಕಿನ ಬಳ್ಳೇಕೆರೆ ಗ್ರಾಮದ ಮಹೇಶ್, ಅಭಿಷೇಕ್ ಮತ್ತು ಶ್ರೀನಿವಾಸ್ ಎಂಬ ಯುವಕರನ್ನು ಬಳ್ಳೇಕೆರೆ ಗ್ರಾಮದಲ್ಲಿ ಬಂಧಿಸಿದ್ದಾರೆ. ಇದರಿಂದಾಗಿ ತಾಲೂಕಿನ ಜನತೆಯಲ್ಲಿ…