ಮಂಡ್ಯ,ಮಾ.29 (ನಾಗಯ್ಯ); ಹಲವಾರು ವರ್ಷಗಳಿಂದ ಕಾರ್ಯನಿಮಿತ್ತ ಮಹಾರಾಷ್ಟ್ರದಲ್ಲಿದ್ದು ಇಂದು ಗ್ರಾಮಕ್ಕೆ ಬಂದ ಇಬ್ಬರಿಗೆ ಗ್ರಾಮಸ್ತರೇ ಕರೆದೊಯ್ದು ಚಿಕಿತ್ಸೆಗೆ ದಾಖಲು ಮಾಡಿಸಿದ ಘಟನೆ ಕೆ.ಎಂ.ದೊಡ್ಡಿ ಸಮೀಪದ ಬಿದರಹೊಸಹಳ್ಳಿಯಲ್ಲಿ ಜರುಗಿದೆ. ಸುಮಾರು 35 ವರ್ಷವಯಸ್ಸಿನವರಾದ ವ್ಯಕ್ತಿಗಳು ಮಹಾರಾಷ್ಟ್ರದಲ್ಲಿ ನೆಲೆಸಿದ್ದು ಗ್ರಾಮಕ್ಕೆ ಆಗಮಿಸಿ ಮನೆಯಲ್ಲಿದ್ದವರನ್ನ ಕರೆದೊಯ್ದು ಆಸ್ಪತ್ರಗೆ ದಾಖಲಿಸಿದ್ದಾರೆ ಎನ್ನಲಾಗಿದೆ. ಕೆ.ಎಂ.ದೊಡ್ಡಿ ಸಮೀಪದ ಬಿದರಹೊಹಳ್ಳಿ ಗ್ರಾಮದ ಇಬ್ಬರು ವ್ಯಕ್ತಿಗಳು ಮಹಾರಾಷ್ಟ್ರದಲ್ಲಿ ಕೆಲಸಮಾಡಿಕೊಂಡಿದ್ದರು ಎನ್ನಲಾಗಿದ್ದು ಅವರು ಕೊರೊನಾ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಆಗಮಿಸಿದ್ದರು.ವಿಷಯ ತಿಳಿದ ಸ್ಥಳೀಯ ಗ್ರಾಮಪಂಚಾಯಿತಿಯವರು ಬೆಳಿಗ್ಗೆ ಕೆ.ಎಂ ದೊಡ್ಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ….
ಕೊರೋನಾ ಭೀತಿಯಿಂದ ಲಾಕ್ ಡೌನ್ : ಸಚಿವ ಶ್ರೀರಾಮುಲು
March 28, 2020ಎಷ್ಟೇ ಹೇಳಿದ್ರು ಜನ ಬೀದಿಗೆ ಬರೋದನ್ನನಿಲ್ಲಿಸ್ತಿಲ್ಲ ಯಾಕಂತ ಅರ್ಥವಾಗ್ತಿಲ್ಲ.? ನಿಮ್ಮ ರಕ್ಷಣೆಗಾಗಿ ಕೆಲಸ ಮಾಡೋರ್ ಮೇಲೆ ದೌರ್ಜನ್ಯ ನಡೆಸೋದು ಸರಿಯೇ.: ಸಚಿವ ಶ್ರೀರಾಮುಲು ಪ್ರಶ್ನೆ. ಮಂಡ್ಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 650 ಬೆಡ್ ಆಸ್ಪತ್ರೆ ಈವರೆಗೆ ರಾಜ್ಯದಲ್ಲಿ 74 ಕೊರೊನಾವೈರಸ್ ಪಾಸಿಟಿವ್ ಕೇಸುಗಳು ಪತ್ತೆ ಕೊರೊನಾ ಸೋಂಕು ಪೀಡಿತರ ತಪಾಸಣಾ ಕೇಂದ್ರಕ್ಕೆ ಭೇಟಿ,ಪರಿಶೀಲನೆ ಮಂಡ್ಯ,ಮಾ.28(ನಾಗಯ್ಯ);ಇಡೀ ದೇಶವನ್ನೇ ಆವರಿಸುತ್ತಿರುವ ಕೊರೋನಾ ಭೀತಿಯಿಂದ ಲಾಕ್ ಡೌನ್ ಆರ್ಡ್ ಮಾಡಲಾಗಿದೆ,ಆದರೆ ಎಷ್ಟೇ ಹೇಳಿದ್ರು ಜನ ಬೀದಿಗೆ ಬರೋದನ್ನ ನಿಲ್ಲಿಸ್ತಿಲ್ಲ,ಯಾಕೆ ಅಂತ ನನಗೂ…
ಕೊರೊನಾ ಜಾಗೃತಿ ಸಭೆಯಲ್ಲೇ ಮಾಸ್ಕ್,ಧರಿಸದ ಸಚಿವ ಕೆ.ಸಿ.ನಾರಾಯಣ್ ಗೌಡ. ಸಾಮಾನ್ಯರಿಗೆ ಪಾಠ ಹೇಳುವ ಅಧಿಕಾರಿಳಿಂದಲೂ ಲೋಪ.!
March 28, 2020ಮಂಡ್ಯ,ಮಾ.28(ನಾಗಯ್ಯ); ಕೊರೊನಾ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡರೇ , ಮಾಸ್ಕ್ ಧರಿಸದೆ ಅಧಿಕಾರಿಗಳೊಂದಿಗೆ ಕೊರೊನಾ ವೈರಸ್ ತಡೆ ಕುರಿತು ಜಾಗೃತಿ ಸಭೆ ನಡೆಸಿದ ಘಟನೆ ಮಂಡ್ಯದಲ್ಲಿಂದು ನಡೆಯಿತು. ಮಂಡ್ಯನಗರದ ಪ್ರವಾಸಿ ಮಂದಿರದಲ್ಲಿಂದು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮತ್ತುಸುದ್ದಿಗೋಷ್ಠಿಯಲ್ಲಿಯೂ ಕೂಡ ಮಾಸ್ಕ್ ಧರಿಸದೆ ಸಚಿವ ಕೆ,ಸಿ.ನಾರಾಯಣಗೌಡ ಮಾತನಾಡಿದರು. ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ವೈರಸ್ ತಡೆಗೆ ಎಲ್ಲರೂ ಮಾಸ್ಕ್ ಧರಿಸುವಂತೆ ಸರ್ಕಾರವೇ ಆದೇಶ ಮಾಡುತ್ತಿದೆ,ಜನಪ್ರತಿನಿಧಿಗಳೂ ಕೂಡ ಉದ್ದುದ್ದ ಭಾಷಣ ಮಾಡುತ್ತಿದ್ದಾರೆ,ಆದರೆ ಇಂದಿನ ಸಭೆಯಲ್ಲಿ ಸಚಿವ…
ಲಾಕ್ ಡೌನ್ ಆರ್ಡರ್;ಎರಡನೇ ದಿನವೂ ಮಂಡ್ಯ ಶ್ತಬ್ಧ.!
March 26, 2020ಅವಶ್ಯವಸ್ತು ಖರೀದಿ ಅಂಗಡಿಗಳ ಬಳಿ ಲಕ್ಷ್ಮಣ ರೇಖೆ ಎಳೆದ ಪೊಲೀಸರು ಮಂಡ್ಯ,ಮಾ.೨೬(ನಾಗಯ್ಯ): ದಿನೇ ದಿನೇ ಹೆಚ್ಚುತ್ತಿರುವ ಮಹಾಮಾರಿ ಕರೋನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಲಾಕ್‌ಡೌನ್ ಆದೇಶದ ೨ ನೇ ದಿನವಾದ ಇಂದು ಕೂಡ ಮಂಡ್ಯಜಿಲ್ಲೆ ಬಹುತೇಕ ಸ್ತಬ್ಧವಾಗಿತ್ತು. ಜಿಲ್ಲಾಕೇಂದ್ರ ಮಂಡ್ಯ,ಮದ್ದೂರು,ಮಳವಳ್ಳಿ,ಪಾAಡವಪುರ,ಶ್ರೀರAಗಪಟ್ಟಣ,ಕೆ.ಆರ್.ಪೇಟೆ,ನಾಗಮAಗಲ ತಾಲ್ಲೂಕು ಕೇಂದ್ರಗಳೂ ಸೇರಿದಂತೆ ಪ್ರಮುಖ ಗ್ರಾಮೀಣ ಭಾಗಗಳಲ್ಲೂ ಜನರು ಮನೆಯಿಂದ ಹೊರ ಬಂದು ಸ್ವೇಚ್ಚೆಯಾಗಿ ಓಡಾಡುವುದು ಸ್ಥಗಿತಗೊಂಡಿತ್ತು. ಎಂದಿನಂತೆ ಇಂದು ಕೂಡ ಜನರಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರು-ಮೈಸೂರು ಹೆದ್ದಾರಿ…
ಪತ್ರಕರ್ತರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೌಡ್ಲೆ ಚನ್ನಪ್ಪ, ಉಪಾಧ್ಯಕ್ಷರಾಗಿ ಚಲುವರಾಜು ಅವಿರೋಧ ಆಯ್ಕೆ
March 26, 2020ಮಂಡ್ಯ,ಮಾ.೨೬(ನಾಗಯ್ಯ): ಜಿಲ್ಲಾ ಪತ್ರಕರ್ತರ ಮತ್ತು ಮುದ್ರಣಕಾರರ ವಿವಿದೋದ್ದೇಶ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಕೌಡ್ಲೆ ಚನ್ನಪ್ಪ, ಉಪಾಧ್ಯಕ್ಷರಾಗಿ ಸಂಜೆ ಇಂಪು ಪತ್ರಿಕೆ ಸಂಪಾದಕ ಚಲುವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಯಾರು ಸ್ಪರ್ಧಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಕೌಡ್ಲೆ ಚನ್ನಪ್ಪ, ಉಪಾಧ್ಯಕ್ಷರಾಗಿ ಚಲುವರಾಜು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರಿ ಇಲಾಖೆಯ ಸಿಡಿಪಿಓ ಪಾರ್ವತಮ್ಮ ಘೋಷಿಸಿದರು. ನಿರ್ದೇಶಕರಾಗಿ ಹಿರಿಯ ಪತ್ರಕರ್ತರಾದ ಕೆ.ಎನ್.ರವಿ,ನಾಗಯ್ಯ,ಎಂ.ಎಸ್.ಶಿವಪ್ರಕಾಶ್, ಎಚ್.ಎ.ರಮೇಶ್,…
ಕೊರೋನಾ ತಡೆಗೆ ಜಿಲ್ಲಾದ್ಯಂತ 144 ಸೆಕ್ಷನ್, ನಿಷೇಧಾಜ್ಞೆ ಜಾರಿ
March 24, 2020ಮಂಡ್ಯ,ಮಾ.23(ನಾಗಯ್ಯ)-ಎಲ್ಲೆಡೆ ದಿನೇ ದಿನೆ ಹೆಚ್ಚುತ್ತಿರುವ ಕೊರೊನಾ ವೈರಸ್‍ನ್ನು ಮಂಡ್ಯ ಜಿಲ್ಲೆಯಲ್ಲಿಯೂ ಬರ ದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಇಂದಿ ನಿಂದ ಒಂದು ವಾರ ಕಾಲ ಜಿಲ್ಲಾದ್ಯಂತ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಕೊವಿಡ್-19 ಸೋಂಕು ಹರಡುವಿಕೆ ತಡೆಗೆ ಈಗಾಗಲೆ ಸರ್ಕಾರ ಹಲವು ಮುನ್ನೆ ಚ್ಚರಿಕಾ ಕ್ರಮಕೈಗೊಂಡಿದೆ, ಶುಚಿತ್ವ,ಸ್ವಚ್ಚತಾ ಕ್ರಮಕೈಗೊಳ್ಳುವಂತೆಯೂ ತಿಳಿಸಿದ್ದರೂ ಸಹ ಜನತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸದೇ ಇರುವುದರಿಂದ ಸಿಆರ್‍ಪಿಸಿ ಸೆ.144(3) ಮತ್ತು ಕರ್ನಾಟಕ ಎಪಿಡಿಕ್ ಡಿಸಿಸ್…
ವಿದೇಶದಿಂದ ಬಂದ ವ್ಯಕ್ತಿಯ ತಿರುಗಾಟ ಕಂಡು ಬೆಚ್ಚಿದ ಅರಕೆರೆ, ಬೆಸಗರಹಳ್ಳಿಯ ಜನತೆ
March 24, 2020ಮಂಡ್ಯ,ಮಾ.23(ನಾಗಯ್ಯ)-ಈಗಾ ಗಲೇ ಕೊರೊನಾ ಸೋಂಕು ಹರಡುವಿಕೆ ಯಿಂದ ಭಯಭೀತರಾಗಿರುವ ಜನತೆ ವಿದೇಶ ಭೇಟಿಯ ಬಳಿಕ ಗ್ರಾಮದಲ್ಲಿ ತಿರು ಗಾಡುತ್ತಿದ್ದ ವ್ಯಕ್ತಿಗಳ ಕಂಡು ಬೆಚ್ಚಿ ಬೀಳುತ್ತಿರುವ ನಿದರ್ಶನಗಳು ಜಿಲ್ಲೆಯ ವಿವಿಧೆಡೆ ಕಂಡು ಬಂದಿದೆ.ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಮತ್ತು ಮದ್ದೂರು ತಾಲ್ಲೂಕಿನ ಬೆಸಗರ ಹಳ್ಳಿಯಲ್ಲಿಂದು ಇಂತಹ ಘಟನೆ ನಡೆದಿದೆ. ಅರಕೆರೆ ಘಟನೆ: ವಿದೇಶಕ್ಕೆ ತೆರಳಿದ್ದ ಅರಕೆರೆಯ ಸುಮಾರು 58 ವರ್ಷದ ವ್ಯಕ್ತಿ 15 ದಿನಗಳ ಹಿಂದೆಯೇ ಮನೆಗೆ ವಾಪ ಸ್ಸಾಗಿದ್ದ, ಸದ್ಯಕ್ಕೆ ಆರೋಗ್ಯವಾಗಿರುವ ಈತ ಇಂದು ಗ್ರಾಮದ ಅಂಗಡಿಗಳ ಬಳಿ…
ವಿದೇಶದಿಂದ ಬಂದ 16 ವಿದ್ಯಾರ್ಥಿಗಳಿಗೂ ಕೊರೊನಾ ವೈರಸ್ ಇಲ್ಲ
March 24, 2020ಕೆ.ಆರ್.ಪೇಟೆ,ಮಾ.23-ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿದ್ದ ಕೆ.ಆರ್.ಪೇಟೆ ತಾಲೂಕಿನ 16 ವಿದ್ಯಾರ್ಥಿ ಗಳು ವಾಪಸ್ ಬಂದಿದ್ದು ಇವರನ್ನು ಪರೀಕ್ಷಿಸಲಾಗಿದ್ದು ಯಾರಿಗೂ ಕೊರೊನಾ ಸೊಂಕು ತಗುಲಿರುವುದಿಲ್ಲ. ಎಲ್ಲರಿಗೂ ಅವರವರ ಮನೆಯಲ್ಲಿ ಪ್ರತ್ಯೇಕವಾಗಿ ಸುರಕ್ಷತೆ ಯಲ್ಲಿ (ಕ್ವಾರಂಟೈನ್) ಇರಿಸಲಾಗಿದೆ ಎಂದು ತಹಸೀಲ್ದಾರ್ ಎಂ.ಶಿವಮೂರ್ತಿ ತಿಳಿಸಿದರು. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಕರೆಯಲಾಗಿದ್ದ ತುರ್ತು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಹೊರ ದೇಶಗ ಳಿಂದ ಹಾಗೂ ಸೊಂಕು ಪೀಡಿತ ರಾಜ್ಯ ಗಳಿಂದ ಬಂದವರ ಬಗ್ಗೆ ಸಾರ್ವಜನಿಕರು ತಾಲೂಕು ಆಡಳಿತಕ್ಕೆ ಮಾಹಿತಿ…
ನೌಕರರ ಪ್ರತಿಭಟನೆಗೆ ಮಣಿದು ಮಾ.31ರವರೆಗೆ ಗಾರ್ಮೆಂಟ್ಸ್‍ಗೆ ರಜೆ
March 24, 2020ಶ್ರೀರಂಗಪಟ್ಟಣ,ಮಾ.23(ವಿನಯ್ ಕಾರೇಕುರ)-ಗಾರ್ಮೆಂಟ್ಸ್ ನೌಕರರ ಪ್ರತಿಭಟನೆಗೆ ಮಣಿದ ಆಡಳಿತ ಮಂಡಳಿ ಮಾ.31ರವರೆಗೆ ರಜೆ ಘೋಷಿಸಿದ ಘಟನೆ ಶ್ರೀರಂಗಪಟ್ಟಣದಿಂದ ವರದಿಯಾಗಿದೆ.ಇಲ್ಲಿನ ಸಾಯಿ ಗಾರ್ಮೆಂಟ್ಸ್‍ನ 700 ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದು, ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ ಭೀತಿ ಉಂಟುಮಾಡಿದ್ದು ಒಂದೇ ಸ್ಥಳದಲ್ಲಿ ನೂರಾರು ಜನ ಕೆಲಸ ನಿರ್ವಹಿಸು ವುದರಿಂದ ಇಂತಹ ಸ್ಥಳಗಳಲ್ಲಿ ಅಧಿಕವಾಗಿ ವೈರಸ್ ಹರಡುವ ಸಾಧ್ಯತೆ ಇದ್ದು ಇಷ್ಟಾಗಿಯೂ ಕೂಡ ಗಾರ್ಮೆಂಟ್ಸ್ ಆಡಳಿತ ಮಂಡಳಿಯು ರಜೆ ನೀಡಲು ಮೀನಮೇಷ ಎಣಿಸುತ್ತಿದೆ ಎಂದು ನೌಕರರು ಕಾರ್ಖಾನೆ ಮುಂಭಾಗ ಪ್ರತಿಭಟನೆ…
ಜನತಾ ಕಫ್ರ್ಯೂಗೆ ಸಕ್ಕರೆ ನಾಡು ಮಂಡ್ಯ ಸ್ತಬ್ಧ
March 23, 2020ಪ್ರಧಾನಿ ಮೋದಿ ಕರೆಗೆ ಜಿಲ್ಲೆಯಾದ್ಯಂತ ಅಭೂತಪೂರ್ವ ಬೆಂಬಲ ಮನೆಯಿಂದ ಹೊರಬಾರದ ಜನ ರಸ್ತೆಗಿಳಿಯದ ವಾಹನಗಳು ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣ, ಮಾರ್ಕೆಟ್,ಪೇಟೆ ಬೀದಿ ರಸ್ತೆಗಳು.! ಮಂಡ್ಯ, ಮಾ.22(ನಾಗಯ್ಯ)-ಇಡೀ ವಿಶ್ವವನ್ನೇ ಆವರಿಸಿರುವ ಕೊರೊನಾ ವೈರಸ್ ಭಾರತದೊಳಗೂ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಭಾನುವಾರದ ಜನತಾ ಕಪ್ರ್ಯೂಗೆ ಮಂಡ್ಯ ಜಿಲ್ಲೆಯಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜಿಲ್ಲಾಕೇಂದ್ರ ಮಂಡ್ಯ ಸಿಟಿ, ಕೆಆರ್ ಪೇಟೆ, ನಾಗಮಂಗಲ, ಪಾಂಡವಪುರ, ಶ್ರೀರಂಗ ಪಟ್ಟಣ, ಮದ್ದೂರು, ಮಳವಳ್ಳಿ ತಾಲೂಕು ಸೇರಿದಂತೆ…