ಎಲ್ಲೆಡೆ ಕಾರ್ಮಿಕರಿಂದ ಪ್ರತಿಭಟನೆಕಾರ್ಯನಿರ್ವಹಿಸಿದ ಶಾಲಾ-ಕಾಲೇಜು, ಬ್ಯಾಂಕ್‍ಗಳು ಎಂದಿನಂತೆ ಸಂಚರಿಸಿದ ಆಟೋ, ಬಸ್‍ಗಳು ಜನ ಜೀವನ ಸಹಜ ಸ್ಥಿತಿ- ಎಲ್ಲೆಡೆ ಭಾರತ್ ಬಂದ್ ನೀರಸ ಮಂಡ್ಯ, ಜ.8(ನಾಗಯ್ಯ)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಕೈ ಬಿಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಬುಧ ವಾರ ಕರೆ ನೀಡಿದ್ದ ಭಾರತ್ ಬಂದ್ ಜಿಲ್ಲೆ ಯಲ್ಲ್ಲಿ ವಿಫಲವಾಗಿದೆ. ಸಿಐಟಿಯು, ಜೆಸಿಟಿಯು, ದಲಿತ, ಅಲ್ಪ ಸಂಖ್ಯಾತ, ರೈತ, ಕಾರ್ಮಿಕ, ಕೃಷಿ, ಕೂಲಿಕಾ ರರು,…
ಆರೋಗ್ಯವಂತ ಸಮಾಜದಿಂದ ದೇಶದ ಪ್ರಗತಿ ಸಾಧ್ಯ
January 9, 2020ಭಾರತೀನಗರ, ಜ.8(ಅ.ಸತೀಶ್)- ಆರೋಗ್ಯವಂತ ಸಮಾಜದಿಂದ ಮಾತ್ರ ದೇಶದ ಪ್ರಗತಿ ಸಾಧ್ಯವಾಗಿದೆ. ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಾಲಕ್ಕಿಗೌಡ ಸಲಹೆ ನೀಡಿದರು. ಸಮೀಪದ ಅಣ್ಣೂರು ಗ್ರಾಮದಲ್ಲಿ ಬುಧವಾರ ನಡೆದ ವಿಶೇಷ ಮಹಿಳಾ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಆರೋಗ್ಯವಾಗಿದ್ದರೆ ಕುಟುಂಬವೇ ಆರೋಗ್ಯವಾಗಿರುತ್ತದೆ. ಹಾಗೆಯೇ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಅದು ಎಂದಿಗೂ ವ್ಯರ್ಥ ವಾಗುವುದಿಲ್ಲ ಎಂದರು. ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕಾದರೆ ಸೊಪ್ಪು, ತರಕಾರಿ ಸೇವಿಸಬೇಕು. ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಯ…
‘ಆಚಾರ್ಯತ್ರಯ ಕಪ್’ ಟೂರ್ನಿಯ ಭಿತ್ತಿಪತ್ರ ಬಿಡುಗಡೆ
January 9, 2020ಬೆಂಗಳೂರು, ಜ.8- ಕರ್ನಾಟಕ ವಿಪ್ರ ವೇದಿಕೆಯಿಂದ ಬೆಂಗಳೂರಿನ ಬಸವನ ಗುಡಿಯ ಕೆಂಪೇಗೌಡ ಆಟದ ಮೈದಾನ ದಲ್ಲಿ ಜ. 31ರಿಂದ ಮೂರು ದಿನಗಳ ಕಾಲ ಆಯೋಜಿಸಿರುವ ‘ಆಚಾರ್ಯತ್ರಯ ಕಪ್’ ರಾಜ್ಯಮಟ್ಟದ ಬ್ರಾಹ್ಮಣ ಯುವಕರ ಕ್ರಿಕೆಟ್ ಟೂರ್ನಿಯ ಭಿತ್ತಿಪತ್ರವನ್ನು ಕರ್ನಾಟಕ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ಅವರು ಬೆಂಗಳೂರಿನ ಕುಮಾರ ಕೃಪದಲ್ಲಿ ಬಿಡು ಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಇಂದಿನ ತಾಂತ್ರಿಕ, ಸ್ಪರ್ಧಾತ್ಮಕ ಯುಗದಲ್ಲಿ ಬ್ರಾಹ್ಮಣ ಸಮುದಾಯ ತಳಮಟ್ಟದಿಂದ ಸಂಘಟಿತ ರಾದರೆ ಮಾತ್ರ ಯುವಪೀಳಿಗೆ ಮುಖ್ಯವಾಹಿ ನಿಗೆ…
ಶ್ರೀರಂಗಪಟ್ಟಣದಲ್ಲಿ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಹಬ್ಬ
January 8, 2020ಪ್ರಶ್ನೆ ಕೇಳದ ಹೊರತು ಶೋಧನೆ, ಸಂಶೋಧನೆ ಸಾಧ್ಯವಿಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶ್ರೀರಂಗಪಟ್ಟಣ, ಜ.7(ವಿನಯ್ ಕಾರೇಕುರ)- ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರಶ್ನೆ ಕೇಳದ ಹೊರತು ಶೋಧನೆ ಮತ್ತು ಸಂಶೋಧನೆ ಸಾಧ್ಯವಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು. ಸಮಗ್ರ ಶಿಕ್ಷಣ ಕರ್ನಾಟಕ, ಸಾರ್ವ ಜನಿಕ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ-ಕರ್ನಾಟಕ ಬೆಂಗಳೂರು, ಜಿಲ್ಲಾ ಡಳಿತ, ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಮಂಡ್ಯ ಹಾಗೂ ಭಾರತ…
7ನೇ ತರಗತಿಗೆ ಪಬ್ಲಿಕ್ ಬದಲು ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ
January 8, 2020ಮಂಡ್ಯ, ಜ.7(ನಾಗಯ್ಯ)- ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಲಿನಲ್ಲಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬದಲಿಗೆ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಎಸ್‍ಎಸ್‍ಎಲ್‍ಸಿ ಫಲಿತಾಂಶವೃದ್ಧಿ ಹಾಗೂ ಪರೀಕ್ಷೆ ಎದುರಿ ಸುವುದು ಹೇಗೆ ಎಂಬ ವಿಷಯದ ಬಗ್ಗೆ ನಡೆದ ವಿದ್ಯಾರ್ಥಿ ಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲಾಗುವುದು ಎಂದು ಬಿಂಬಿಸಿರುವುದರಿಂದ ವಿದ್ಯಾರ್ಥಿ…
ಟ್ರಾಕ್ಟರ್ ಜಪ್ತಿ: ಬ್ಯಾಂಕ್ ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ
January 8, 2020ಭಾರತೀನಗರ, ಜ.7(ಅ.ಸತೀಶ್)- ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ರೈತನ ಟ್ರಾಕ್ಟರ್ ಜಪ್ತಿ ಮಾಡಿದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿ ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೊರೆಚಾಕನಹಳ್ಳಿ ಗ್ರಾಮದ ರೈತ ಬಸವೇಗೌಡ ಮದ್ದೂರು ಭೂ ಗ್ರಾಮೀಣಾ ಭಿವೃದ್ಧಿ ಬ್ಯಾಂಕ್ (ಪಿಎಲ್‍ಡಿ ಬ್ಯಾಂಕ್) ನಲ್ಲಿ 7.35 ಲಕ್ಷ ರೂ. ಸಾಲ ಪಡೆದು ಟ್ರಾಕ್ಟರ್ ಖರೀದಿಸಿದ್ದರು. ನಿಯಮಿತವಾಗಿ ಸಾಲ ಮರುಪಾವತಿಸುತ್ತಿದ್ದ ಬಸವೇ ಗೌಡರು ಇತ್ತೀಚೆಗೆ ಮೃತಪಟ್ಟಿದ್ದರು. ಬಳಿಕ ಅವರ ಮಕ್ಕಳು ಸಹ ಸಾಲ ಮರು ಪಾವತಿ ಮಾಡುತ್ತಿದ್ದರು. ಆದರೆ ಕೃಷಿ ಯಲ್ಲಿ…
ಶಿಷ್ಟಾಚಾರ ಉಲ್ಲಂಘನೆ ವಿರುದ್ಧ ಕ್ರಮಕ್ಕೆ ಶಾಸಕ ಅನ್ನದಾನಿ ಆಗ್ರಹ
January 8, 2020ಜಿಪಂ ಸದಸ್ಯರ ವಿರುದ್ಧ ಹಕ್ಕುಚ್ಯುತಿ ಮಂಡನೆ ಎಚ್ಚರಿಕೆ ಜ.18, 19ರಂದು ಗಗನಚುಕ್ಕಿ ಜಲಪಾತೋತ್ಸವ ಮಂಡ್ಯ, ಜ.7(ನಾಗಯ್ಯ)- ಮಳವಳ್ಳಿ ತಾಲೂಕಿನ ಬೆಳಕವಾಡಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ವಿವಿಧ ಗ್ರಾಮಗಳ ಕುಡಿಯುವ ನೀರಿನ ಕಾಮ ಗಾರಿ ಉದ್ಘಾಟನೆಯಲ್ಲಿ ಶಿಷ್ಟಾಚಾರ ಪಾಲಿಸ ದಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಶಾಸಕ ಕೆ.ಅನ್ನದಾನಿ ಎಚ್ಚರಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜ.5ರಂದು ಬೆಳಕವಾಡಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಪಂ ಸದಸ್ಯೆ ಜಯಕಾಂತ ಅವರು ಉಪ ವಿಭಾಗಕ್ಕೆ…
ವೈಕುಂಠ ಏಕಾದಶಿ: ಜಿಲ್ಲೆಯ ವಿವಿಧೆಡೆ ವಿಶೇಷ ಪೂಜೆ
January 7, 2020ಮಂಡ್ಯ, ಜ.6(ನಾಗಯ್ಯ)- ವೈಕುಂಠ ಏಕಾದಶಿ ಪ್ರಯುಕ್ತ ಜಿಲ್ಲಾದ್ಯಂತ ವೆಂಕಟೇಶ್ವರ, ಶ್ರೀನಿವಾಸ ಹಾಗೂ ಆಂಜನೇಯ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳÀಲ್ಲಿ ಸೋಮ ವಾರ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗ ಪಟ್ಟಣ, ಪಾಂಡವಪುರ, ನಾಗಮಂಗಲ, ಕೆ.ಆರ್. ಪೇಟೆ ಸೇರಿದಂತೆ ವಿವಿಧೆಡೆ ವೈಕುಂಠ ಏಕಾದಶಿ ಅಂಗವಾಗಿ ದೇವಾಲಯಗಳಲ್ಲಿ ನಿರ್ಮಿಸಲಾಗಿದ್ದ ವಿಶೇಷ ದ್ವಾರದ ಮೂಲಕ ತೆರಳಿ ಸ್ವಾಮಿ ದರ್ಶನ ಪಡೆದ ಬಗ್ಗೆ ವರದಿಯಾಗಿದೆ. ಮಂಡ್ಯ: ಮಂಡ್ಯದ ಹೊಸಹಳ್ಳಿಯ ಶ್ರೀವೆಂಕಟೇಶ್ವರ ದೇವಾಲಯ, ಗಾಂಧಿನಗರದ ರಾಮಮಂದಿರ, ಭೋವಿ ಕಾಲೋನಿಯ ಶ್ರೀನಿ…
ಮತದಾನ ಪ್ರತಿಯೊಬ್ಬರ ಹಕ್ಕು, ಕರ್ತವ್ಯ: ಡಿಸಿ
January 7, 2020ಮಂಡ್ಯ, ಜ.6- ಮತದಾನ ಮಾಡು ವುದು ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯ. ಪ್ರಜಾಪ್ರಭುತ್ವಕ್ಕೆ ನಾವೆಲ್ಲರು ಭದ್ರ ಬುನಾದಿ ಮತ್ತು ಶಕ್ತಿಯಾಗಬೇಕಾದರೇ 18 ವರ್ಷ ತುಂಬಿದ ಭಾರತೀಯ ನಾಗರಿಕ ರೆಲ್ಲರೂ ಮೊದಲು ತಮ್ಮ ಹೆಸರನ್ನು ಮತ ದಾರರ ಪಟ್ಟಿಯಲ್ಲಿ ನೋಂದಾಯಿಸಿ, ಚುನಾವಣಾ ಸಂದರ್ಭ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು. ಜಿಲ್ಲೆಯ ಎಲ್ಲಾ ಪ್ರೌಢಶಾಲೆ/ ಕಾಲೇಜು ಗಳಲ್ಲಿ ಜ.6 ರಿಂದ 8ರವರೆಗೆ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮತದಾನ ನೋಂದಣಿ ಬಗ್ಗೆ ಸಾರ್ವ ಜನಿಕರಲ್ಲಿ…
ನಾಗಮಂಗಲದಲ್ಲಿ ಸ್ನೇಹ ಸಮ್ಮಿಲನ, ಗುರುವಂದನೆ
January 7, 2020ನಾಗಮಂಗಲ, ಜ.6- ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ನಾಗಮಂಗಲ ಸರ್ಕಾರಿ ಪ್ರಶಿಕ್ಷಕರ ಶಿಕ್ಷಣ ಸಂಸ್ಥೆ ಹಿರಿಯ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕ ರಿಸಿ ಮಾತನಾಡಿದ ಬಿಇಓ ಬಿ.ಜಗದೀಶ್, ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿ ಸುವ ಶಿಲ್ಪಿಗಳಾಗಬೇಕು. ಗುರು, ಶಿಷ್ಯರ ಸಂಬಂಧ ಕೇವಲ ಬೋಧನೆ ಸೀಮಿತವಾ ಗಿರದೆ ಜೀವನ ಪರ್ಯಂತ ನೆನಪಿನಲ್ಲಿ ಉಳಿಯುವಂತಹ ಬಾಂಧವ್ಯ ಎಂದರು. ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣಕ್ಕೆ ಮತ್ತು ಗುರುಶಿಷ್ಯರ…