ನಾಗಮಂಗಲದಲ್ಲಿ ಸ್ನೇಹ ಸಮ್ಮಿಲನ, ಗುರುವಂದನೆ
ಮಂಡ್ಯ

ನಾಗಮಂಗಲದಲ್ಲಿ ಸ್ನೇಹ ಸಮ್ಮಿಲನ, ಗುರುವಂದನೆ

January 7, 2020

ನಾಗಮಂಗಲ, ಜ.6- ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ನಾಗಮಂಗಲ ಸರ್ಕಾರಿ ಪ್ರಶಿಕ್ಷಕರ ಶಿಕ್ಷಣ ಸಂಸ್ಥೆ ಹಿರಿಯ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕ ರಿಸಿ ಮಾತನಾಡಿದ ಬಿಇಓ ಬಿ.ಜಗದೀಶ್, ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿ ಸುವ ಶಿಲ್ಪಿಗಳಾಗಬೇಕು. ಗುರು, ಶಿಷ್ಯರ ಸಂಬಂಧ ಕೇವಲ ಬೋಧನೆ ಸೀಮಿತವಾ ಗಿರದೆ ಜೀವನ ಪರ್ಯಂತ ನೆನಪಿನಲ್ಲಿ ಉಳಿಯುವಂತಹ ಬಾಂಧವ್ಯ ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣಕ್ಕೆ ಮತ್ತು ಗುರುಶಿಷ್ಯರ ಪರಂಪರೆಗೆ ತನ್ನದೆ ಆದ ಮಹತ್ವವಿದೆ. ಪ್ರಾಚೀನ ಕಾಲದಿಂ ದಲೂ ಶ್ರೇಷ್ಠ ಸ್ಥಾನವಿದೆ. ಅಂತಹ ಪರಂ ಪರೆ ನಿರಂತರವಾಗಿ ಮುಂದುವರಿಯ ಬೇಕು ಎಂದರು.

ವಿದ್ಯಾರ್ಥಿಗಳಿಗೆ ಗುರುಗಳು ನೀಡುವ ಬೋಧನೆ ಕೇವಲ ನೆನಪಿನಲ್ಲಿ ಉಳಿಯದೆ ಅದು ಹೃದಯ ಮುಟ್ಟು ವಂತಿರಬೇಕು. ಅಂತಹ ನೂರಾರು ಶಿಕ್ಷಕರನ್ನು ನಾಡಿಗೆ ಕೊಟ್ಟ ಪ್ರಶಿಕ್ಷಣ ಸಂಸ್ಥೆ ನಮ್ಮ ತಾಲೂಕಿನಲ್ಲಿ ರುವುದು ಹೆಮ್ಮೆಯ ಸಂಗತಿ ಎಂದರು.

ನಾಗಮಂಗಲದಲ್ಲಿ ಕಲಿತ ಎಷ್ಟೋ ಪ್ರ ಶಿಕ್ಷಣಾರ್ಥಿಗಳು ನಮಗಿಂತ ಮೇರು ಹುದ್ದೆ ತಲುಪಿದ್ದನ್ನು ನೋಡಿದಾಗ ನಮ್ಮ ಮನ ತುಂಬಿ ಬರುತ್ತದೆ. ವಿದ್ಯಾರ್ಥಿಗಳು ಬಡತನವಿದ್ದರೂ ಸ್ನೇಹ, ವಿಶ್ವಾಸ, ಪ್ರೀತಿ ಯೊಂದಿಗೆ ವಿಶಾಲ ಮನಸ್ಸನ್ನು ಹೊಂದಿ ದ್ದರು ಎಂದು ತಮ್ಮ ಉಪನ್ಯಾಸ ವೃತ್ತಿಯ ದಿನಗಳನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ 1985 ರಿಂದ 98ನೇ ಸಾಲಿನವರೆಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಸಹಪಾಠಿಗಳನ್ನು ನೋಡಿ ವಿದ್ಯಾರ್ಥಿ ಜೀವನದ ಘಟನೆಗಳನ್ನು ಮೆಲುಕು ಹಾಕಿ ಭಾವುಕರಾದರು.

ಕಾರ್ಯಕ್ರಮವನ್ನು ಶ್ರೀಆದಿಚುಂಚನ ಗಿರಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎ.ಟಿ.ಶಿವರಾಮು ಉದ್ಘಾಟಿಸಿದರು. ಮೈಲಾರ ಪಟ್ಟಣ ಶಾಲೆ ಶಿಕ್ಷಕ ಮಂಜು ನಾಥ್ ಆಶಯ ನುಡಿಗಳನ್ನಾಡಿದರು. ಆದಿ ಚುಂಚನಗಿರಿ ಪದವಿ ಕಾಲೇಜಿನ ಪ್ರಾಂಶು ಪಾಲ ಡಾ.ಬಿ.ಕೆ.ಲೋಕೇಶ್, ಕ್ಷೇತ್ರ ಸಮ ನ್ವಯ ಅಧಿಕಾರಿ ಡಿ.ಕುಮಾರ್, ದೈಹಿಕ ಶಿಕ್ಷಣ ಸಂಯೋಜಕ ಶಿವಣ್ಣಗೌಡ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ವೈ. ಮಂಜುನಾಥ್, ಶಿಕ್ಷಕರಾದ ಸಿ.ವಿ.ಜಯ ರಾಮ್, ನಾಗೇಶ್, ಮಂಜುನಾಥ್ ಹಾಗೂ ಹಿರಿಯ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

 

 

 

 

Translate »