ಜಿಲ್ಲೆಯಲ್ಲಿ ಎಲ್ಲೂ ಕಾಣದ ‘ಬಂದ್’ ಛಾಯೆ
ಮಂಡ್ಯ

ಜಿಲ್ಲೆಯಲ್ಲಿ ಎಲ್ಲೂ ಕಾಣದ ‘ಬಂದ್’ ಛಾಯೆ

January 9, 2020

ಎಲ್ಲೆಡೆ ಕಾರ್ಮಿಕರಿಂದ ಪ್ರತಿಭಟನೆಕಾರ್ಯನಿರ್ವಹಿಸಿದ ಶಾಲಾ-ಕಾಲೇಜು, ಬ್ಯಾಂಕ್‍ಗಳು ಎಂದಿನಂತೆ ಸಂಚರಿಸಿದ ಆಟೋ, ಬಸ್‍ಗಳು

ಜನ ಜೀವನ ಸಹಜ ಸ್ಥಿತಿ- ಎಲ್ಲೆಡೆ ಭಾರತ್ ಬಂದ್ ನೀರಸ

ಮಂಡ್ಯ, ಜ.8(ನಾಗಯ್ಯ)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಕೈ ಬಿಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಬುಧ ವಾರ ಕರೆ ನೀಡಿದ್ದ ಭಾರತ್ ಬಂದ್ ಜಿಲ್ಲೆ ಯಲ್ಲ್ಲಿ ವಿಫಲವಾಗಿದೆ.

ಸಿಐಟಿಯು, ಜೆಸಿಟಿಯು, ದಲಿತ, ಅಲ್ಪ ಸಂಖ್ಯಾತ, ರೈತ, ಕಾರ್ಮಿಕ, ಕೃಷಿ, ಕೂಲಿಕಾ ರರು, ಪ್ರಗತಿಪರರು ಸೇರಿದಂತೆ ವಿವಿಧ ಸಂಘಟನೆಗಳು ಇಂದಿನ ಭಾರತ್ ಬೆಂಬಲಿಸು ವಂತೆ ಕರೆ ನೀಡಿದ್ದವು. ಆದರೆ, ಯಾವುದೇ ಬೆಂಬಲ ವ್ಯಕ್ತವಾಗದೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದಲೂ ಎಂದಿ ನಂತೆ ಜನಜೀವನ ಸಹಜವಾಗಿತ್ತು. ಮಂಡ್ಯ ನಗರ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಕೆ.ಆರ್.ಪೇಟೆ, ನಾಗಮಂಗಲ ಸೇರಿದಂತೆ ಜಿಲ್ಲಾದ್ಯಂತ ಯಾವುದೇ ಬಂದ್ ವಾತಾ ವರಣ ಕಂಡು ಬರಲಿಲ್ಲ.

ಅಂಗಡಿ ಮುಂಗಟ್ಟುಗಳು, ಹೋಟೆಲ್‍ಗಳು, ಪೆಟ್ರೋಲ್ ಬಂಕ್‍ಗಳು, ಚಿತ್ರಮಂದಿರಗಳು ತೆರೆದಿದ್ದವು. ಬಸ್ ಸಂಚಾರ, ಆಟೋಗಳ ಸಂಚಾರ ಎಂದಿನಂತೆ ಇತ್ತು. ಆದರೆ, ಬಂದ್ ಘೋಷಣೆ ಹಿನ್ನೆಲೆಯಲ್ಲಿ ಜನ ಜೀವನ ಕೊಂಚ ವಿರಳವಾಗಿತ್ತು. ಶಾಲಾ-ಕಾಲೇಜು ಗಳು ಹಾಗೂ ಸರ್ಕಾರಿ ಕಚೇರಿಗಳು ಎಂದಿ ನಂತೆ ಕಾರ್ಯನಿರ್ವಹಿಸಿದವು.

ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ: ಬೆಳಿಗ್ಗೆ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನ ಹಳ್ಳಿ ಸುರೇಶ್, ಕೃಷಿ ಪ್ರಾಂತ ರೈತ ಸಂಘದ ಟಿ.ಎಲ್.ಕೃಷ್ಣೇಗೌಡ, ಸಿಐಟಿಯುನ ಸಿ. ಕುಮಾರಿ, ಪುಟ್ಟಮಾಧು, ಕರವೇ ಜಿಲ್ಲಾ ಧ್ಯಕ್ಷ ಹೆಚ್.ಡಿ.ಜಯರಾಂ, ಚಂದ್ರಶೇಖರ್, ಲತಾಶಂಕರ್, ಪ್ರಮೀಳಾ, ಸಂವಿಧಾನ ರಕ್ಷಣಾ ಸಮಿತಿ ಅಧ್ಯಕ್ಷ ಮುನಾವರ್ ಖಾನ್, ಕಾರ್ಯ ದರ್ಶಿ ಮಹಮ್ಮದ್ ತಾಹೇರ್, ಮುಖಂಡ ರಾದ ನದೀಮ್ ಅಹಮದ್, ಮುಜಾಯಿದ್ ಅಲಿಖಾನ್, ಜಾಕೀರ್ ಪಾಷಾ, ಎಂ.ಬಿ. ಶ್ರೀನಿವಾಸ್, ಜಬೀವುಲ್ಲಾ ಖಾನ್ ಸೇರಿ ದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಬಿಗಿ ಭದ್ರತೆ: ಭಾರತ್‍ಬಂದ್‍ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲಿಯೂ ಅಹಿತಕರ ಘಟನೆಗಳು ನಡೆಯ ದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸ ಲಾಗಿತÀ್ತು. ಮಂಡ್ಯ ನಗರ ಸೇರಿದಂತೆ ಎಲ್ಲಾ ತಾಲೂಕಿನ ವ್ಯಾಪ್ತಿಯ ಸೂಕ್ಷ್ಮ ಪ್ರದೇಶ ಹಾಗೂ ವಿವಿಧ ವೃತ್ತ, ಬಡಾವಣೆ, ಬೀದಿ ಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳ ಲಾಗಿತ್ತು. ಮಂಡ್ಯದ ನಗರದ ಪ್ರಮುಖ ವೃತ್ತಗಳಲ್ಲಿ ಪೆÇಲೀಸರು ಗಸ್ತು ನಡೆಸು ತ್ತಿದ್ದುದು ಕಂಡು ಬಂತು.

ಮದ್ದೂರು ವರದಿ: ಭಾರತ್ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ತಾಲೂಕು ಸಿಐ ಟಿಯು ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಗ್ರಾಪಂ ತಾಲೂಕು ಮಟ್ಟದ ನೌಕರರ ಸಂಘದ ಅಧ್ಯಕ್ಷ ಜಿ.ಆರ್.ರಾಮು, ಸಿಐಟಿಯು ಮುಖಂಡ ಎಂ.ರಾಜು ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಆರಂಭಿ ಸಿದ ಪ್ರತಿಭಟನಾಕಾರರು, ಟಿಬಿ ವೃತ್ತದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ, ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಅಂಗನವಾಡಿ ನೌಕರರ ಸಂಘದ ತನುಜಾ, ಮಂಜುಳಾ ರಾಜ್, ಜಯಶೀಲ, ರಾಮು, ಟಿ.ಯಶವಂತ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕೆ.ಆರ್.ಪೇಟೆ ವರದಿ: ಭಾರತ ಬಂದ್ ಬೆಂಬಲಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘ, ಅಂಗನವಾಡಿ ನೌಕರರ ಸಂಘ, ಸಿಐ ಟಿಯು ಸಂಘಟನೆ ಹಾಗೂ ವಿವಿಧ ಸಂಘ ಟನೆಗಳಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಗ್ರಾಪಂ ತಾಲೂಕು ನೌಕರರ ಸಂಘದ ಅಧ್ಯಕ್ಷರು ಹಾಗೂ ಸಿಐಟಿಯು ಮುಖಂಡ ಮೋದೂರು ನಾಗರಾಜು ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಟಿ.ಬಿ.ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.

ಪ್ರತಿಭಟನೆಯಲ್ಲಿ ತಾಲೂಕು ಅಂಗನವಾಡಿ ನೌಕರರ ಸಂಘ ಸಾವಿತ್ರಿ, ಗೀತಾ, ಸಿಐಟಿಯು ಸಂಚಾಲಕಿ ಕೆ.ಬಿ.ಧನಲಕ್ಷ್ಮಿ, ಅಕ್ಷರ ದಾಸೋಹ ಸಂಘಟನೆಯ ಭಾಗ್ಯಮ್ಮ, ರೈತ ಸಂಘದ ಎಂ.ವಿ.ರಾಜೇಗೌಡ, ಕೆ.ಆರ್.ಜಯರಾಂ, ಎಲ್.ಬಿ.ಜಗದೀಶ್, ಮುದ್ದುಕುಮಾರ್, ನಾಗ ರಿಕ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್. ಎಸ್.ಗಂಗಾಧರ್, ಡಿಎಸ್‍ಎಸ್ ಮುಖಂಡ ಬಂಡಿಹೊಳೆ ರಮೇಶ್, ಗ್ರಾಪಂ ತಾಲೂಕು ನೌಕರರ ಸಂಘದ ಉಪಾಧ್ಯಕ್ಷ ಎಂ.ಕೆ.ಕುಮಾರ್, ಪ್ರಧಾನ ಕಾರ್ಯದರ್ಶಿ ನಂಜಯ್ಯ ಸೇರಿ ದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರತಿಭ ಟನೆಯ ನಂತರ ತಾಲೂಕು ಕಚೇರಿಯ ಮಿನಿವಿಧಾನ ಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ್ ಶಿವ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಶ್ರೀರಂಗಪಟ್ಟಣ ವರದಿ(ವಿನಯ್ ಕಾರೇಕುರ): ಭಾರತ್ ಬಂದ್‍ಗೆ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.

ಬಂದ್‍ಗೆ ಬೆಂಬಲಿಸಿ ವಕೀಲರು ನ್ಯಾಯಾ ಲಯ ಕಲಾಪದಿಂದ ಹೊರಗುಳಿದರು. ಪ್ರತಿ ಭಟನಾಕಾರು ತಹಶೀಲ್ದಾರ್ ರೂಪ ಅವರಿಗೆ ಮನವಿ ಸಲ್ಲಿಸಿದರು. ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಮಳವಳ್ಳಿ ವರದಿ: ಭಾರತ್ ಬಂದ್ ಮಳ ವಳ್ಳಿ ಒತ್ತಾಯದ ಹಿನ್ನೆಲೆಯಲ್ಲಿ ಭಾಗಶಃ ಯಶಸ್ವಿಯಾಯಿತು. ಪಟ್ಟಣದಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ ತೆರೆದಿದ್ದವು, ನಂತರ ಪ್ರತಿಭಟನಕಾರರ ಒತ್ತಾಯದ ಮೇರೆಗೆ ಬಂದ್ ಮಾಡಲಾಯಿತು.

ಕೆಲವು ಕಡೆ ಪ್ರತಿಭಟನಾಕಾರರು ಹೇಳಿದ ತಕ್ಷಣ ವರ್ತಕರು ಅಂಗಡಿ ಬಂದ್ ಮಾಡಿದರೆ, ಮತ್ತೇ ಕೆಲವು ಕಡೆಗಳಲ್ಲಿ ಪ್ರತಿಭಟನಾಕಾ ರರು ಹಾಗೂ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಪಟ್ಟಣದ ಕೊಳ್ಳೇಗಾಲ, ಮದ್ದೂರು, ಮೈಸೂರು ರಸ್ತೆಗಳಲ್ಲಿ ಬಂದ್ ವಾತಾವರಣ ಕಂಡು ಬಂತು. ಉಳಿದಂತೆ ಪಟ್ಟಣದಲ್ಲಿ ಬಂದ್ ಛಾಯೆ ಕಂಡು ಬರಲಿಲ್ಲ.

ಪ್ರತಿಭಟನಾಕಾರರು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ಯಲ್ಲಿ ಮುಖಂಡರಾದ ದೇವಿ, ತಿಮ್ಮೇಗೌಡ, ಮಂಜುಳ, ಸುಶೀಲಾ, ಸುನೀತಾ ಇತರರಿದ್ದರು.

No Bandh in Mandya Distrct-1

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಪಾಂಡವಪುರ, ಜ.8- ಹಲವು ಬೇಡಿಕೆಗೆ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ಬುಧವಾರ ಕರೆಕೊಟ್ಟಿದ್ದ ಭಾರತ್ ಬಂದ್ ಪಟ್ಟಣದಲ್ಲಿ ಸಂಪೂರ್ಣವಾಗಿ ವಿಫಲಗೊಂಡಿತು.

ಎಂದಿನಂತೆಯೇ ಅಂಗಡಿ ಮುಂಗಟ್ಟುಗಳು, ಹೋಟೆಲ್‍ಗಳು, ಚಿತ್ರ ಮಂದಿರಗಳು, ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಬಾಗಿಲು ತೆರೆದು ಕಾರ್ಯನಿರ್ವಹಿಸಿದವು. ಸಾರಿಗೆ, ಖಾಸಗಿ, ಆಟೋಗಳು ಎಂದಿನಂತೆ ಸಂಚರಿಸಿದವು. ಭಾರತ್ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಪಟ್ಟಣದ ಪ್ರತಿಭಟನೆ ನಡೆಸಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಜಮಾಹಿಸಿದ ಸಿಐಟಿಯು ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ರೈತ ಸಂಘ, ವಿಷ್ಣುಸೇನಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಮೆರವಣಿಗೆ ಆರಂಭಿಸಿ ಹಳೇಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಪೊಲೀಸರು ಪ್ರತಿಭಟನಾ ಕಾರರನ್ನು ತಡೆದರು. ಮೆರವಣಿಗೆಗೆ ನಾವು ಅವಕಾಶ ನೀಡಿಲ್ಲ. ಹಾಗಾಗಿ, ಮೆರವಣಿಗೆ ನಡೆಸಬೇಡಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಎಂದು ಮನವಿ ಮಾಡಿದರು. ಬಳಿಕ ಶಾಂತಿ ಯುತವಾಗಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್, ರೈತ ಸಂಘದ ಅಧ್ಯಕ್ಷ ಎಲ್.ಕೆಂಪೂಗೌಡ, ಮುಖಂಡರಾದ ಪ್ರಕಾಶ್, ವಿಷ್ಣುವಿಠಲ್, ಕನ್ನಡ ಸೇನೆ ಅಧ್ಯಕ್ಷ ದೇವು, ಕವರೇ ಕಾಳಪ್ಪ, ಇಂದ್ರಮ್ಮ, ಸ್ವಾಮೀಗೌಡ, ರುಕ್ಮುಣಿ, ಮಂಜುಳ, ಡಿ.ಕೆ.ಅಂಕಯ್ಯ ಸೇರಿದಂತೆ ಹಲವರಿದ್ದರು.

Translate »