ಶ್ರೀರಂಗಪಟ್ಟಣದಲ್ಲಿ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಹಬ್ಬ
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಹಬ್ಬ

January 8, 2020

ಪ್ರಶ್ನೆ ಕೇಳದ ಹೊರತು ಶೋಧನೆ, ಸಂಶೋಧನೆ ಸಾಧ್ಯವಿಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್
ಶ್ರೀರಂಗಪಟ್ಟಣ, ಜ.7(ವಿನಯ್ ಕಾರೇಕುರ)- ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರಶ್ನೆ ಕೇಳದ ಹೊರತು ಶೋಧನೆ ಮತ್ತು ಸಂಶೋಧನೆ ಸಾಧ್ಯವಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.

ಸಮಗ್ರ ಶಿಕ್ಷಣ ಕರ್ನಾಟಕ, ಸಾರ್ವ ಜನಿಕ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ-ಕರ್ನಾಟಕ ಬೆಂಗಳೂರು, ಜಿಲ್ಲಾ ಡಳಿತ, ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಮಂಡ್ಯ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಇವರ ಸಹ ಯೋಗದೊಂದಿಗೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಮಂಗಳವಾರ ಚಾಲನೆಗೊಂಡ 4 ದಿನಗಳ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಉದ್ಘಾ ಟಿಸಿ ಅವರು ಮಾತನಾಡಿದರು.

ಪ್ರಸ್ತುತ ದೇಶದಲ್ಲಿ ವಿಜ್ಞಾನದ ಪಾತ್ರ ಅತೀ ಮುಖ್ಯವಾಗಿದ್ದು, ಮಾರಕ ರೋಗ ಗಳ ನಿವಾರಣೆ, ವಾಯು ಮಾಲಿನ್ಯದ ರಕ್ಷಣೆಯಲ್ಲಿ ವಿಜ್ಞಾನಿಗಳು ಅತೀ ಮುಖ್ಯ ಪಾತ್ರ ವಹಿಸಲಿದ್ದಾರೆ ಎಂದರು.

ಸರ್ ಐಸಾಕ್ ನ್ಯೂಟನ್ ಮರದಿಂದ ಬಿದ್ದ ಹಣ್ಣನ್ನು ಗಮನಿಸಿ ಭೂಮಿಗೆ ಗುರು ತ್ವಾಕರ್ಷಣ ಬಲವಿದೆ ಎಂಬುದನ್ನು ಕಂಡು ಹಿಡಿದ ಹಾಗೆ ಆರ್ಕಿಮಿಡಿಸ್ ಸ್ನಾನ ಮಾಡುವ ಟಬ್‍ನಲ್ಲಿ ನೀರು ಅಚೆ ಬಂದಿ ದನ್ನು ಗಮನಿಸಿ ಸಂಶೋಧನೆಗೆ ಮುಂದಾದ. ನಮ್ಮದೇ ನಾಡಿನ ಸರ್ ಸಿ.ವಿ. ರಾಮನ್, ಎಪಿಜೆ ಅಬ್ದುಲ್ ಕಲಾಂ ವಿಜ್ಞಾನವನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿ ದ್ದಾರೆ ಎಂದರು.

ಮಕ್ಕಳಲ್ಲಿ ಬಹುಮುಖ್ಯವಾಗಿ ಎಲ್ಲಿ?, ಯಾಕೆ?, ಹೇಗೆ? ಯಾವಾಗ? ಎಂಬಿ ತ್ಯಾದಿ ಪ್ರಶ್ನೆಗಳು ಮೇಲಿಂದ ಮೇಲೆ ಮೂಡು ತ್ತಲೇ ಇರಬೇಕು. ಪ್ರಶ್ನೆಗಳು ಮೂಡಿದ ರಷ್ಟೇ ಶೋಧನೆ ಮತ್ತು ಸಂಶೋಧನೆಗಳು ಹೊರ ಬರಲು ಸಾಧ್ಯ ಎಂದು ಸಚಿವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಣ್ಣ-ಪುಟ್ಟ ಪ್ರಯತ್ನಗಳಿಗೆ ಸಿಗುವ ಉತ್ತರವೇ ಸಂಶೋಧನೆ. ಹಿಂದೆ ಟಿಪ್ಪು ಸುಲ್ತಾನ್ ಕಾಲದಲ್ಲಿ ಶ್ರೀರಂಗಪಟ್ಟಣದಲ್ಲಿ ರಾಕೆಟ್ ಉಡಾಯಿಸಿ ತಂತ್ರಜ್ಞಾನ ಎತ್ತಿ ಹಿಡಿದಿರುವ ಬಗ್ಗೆ ಉಲ್ಲೇಖವಿದೆ. ಆ ನಿಟ್ಟಿ ನಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಆಯೋಜಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸು ವುದಾಗಿ ಅವರು ತಿಳಿಸಿದರು.

ಇದೇ ವೇಳೆ ಮಕ್ಕಳ ಹಬ್ಬದಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ 6 ಮತ್ತು 8ನೇ ತರಗತಿಯಲ್ಲಿ ವ್ಯಾಸಂಗ ಮಾಡು ತ್ತಿರುವ ಸುಮಾರು 800ಕ್ಕೂ ಹೆಚ್ಚು ಯುವ ವಿಜ್ಞಾನಿ ವಿದ್ಯಾರ್ಥಿಗಳು ಭಾಗವಹಿಸಿ, ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು, ಮಾರ್ಗ ದರ್ಶಕರು ಹಾಗೂ ಸಾವಿರಾರು ಸಾರ್ವಜ ನಿಕರು ಭಾಗವಹಿಸಿ ಕೋಟೆ ನಾಡಿನಲ್ಲಿ ನಡೆದ ವಿಜ್ಞಾನದ ಹಬ್ಬಕ್ಕೆ ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಯುವ ವಿಜ್ಞಾನಿಗಳಾದ ಡ್ರೋಣ್ ಪ್ರತಾಪ್, ಮಹ ಮದ್ ಸುಹೇಲ್ ಹಾಗೂ ಸೈಯದ್ ಇಖ್ರಾ ಉರೂಜ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನಾ ಇಂದು ಬೆಳಿಗ್ಗೆ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾ ಲಯದ ಆವರಣದಿಂದ ವೇದಿಕೆವರೆಗೆ ನಡೆದ ಜಾಥಾಕ್ಕೆ ಜಿಪಂ ಸದಸ್ಯೆ ಸವಿತಾ ಹಸಿರು ನಿಶಾನೆ ತೋರಿದರು. ಜಾಥಾದಲ್ಲಿ ಶಾಲಾ ಮಕ್ಕಳ ಬ್ಯಾಂಡ್, ವಿಜ್ಞಾನ ಜಾಗೃತಿ ಘೋಷಣಾ ಫಲಕಗಳು, ಡೊಳ್ಳು ಕುಣಿತ, ಪೂಜಾ ಕುಣಿತ, ಬೆದರು ಬೊಂಬೆ ಪ್ರದರ್ಶನ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಶಿಕ್ಷಣ ಇಲಾಖೆ ರಾಜ್ಯ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು, ಭಾರತ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಪ್ರೊ.ಎಂ.ಆರ್. ಎನ್.ಮೂರ್ತಿ, ಜಿಪಂ ಸಿಇಓ ಕೆ.ಯಾಲಕ್ಕಿಗೌಡ, ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಆರ್.ರಘುನಂದನ್, ತಹಸೀಲ್ದಾರ್ ಎಂ.ರೂಪ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ನಾಗವೇಣಿ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ಬಿಇಓ ರುಕ್ಷಾನ ಬೇಗಂ ಸೇರಿದಂತೆ ತಾಪಂ, ಜಿಪಂ ಹಾಗೂ ಪುರಸಭಾ ಸದಸ್ಯರು, ವಿವಿಧ ಪಕ್ಷಗಳ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ಬಾಕ್ಸ್…
ಗೋಲ್ಡ್ ಮೆಡಲ್ ತಂದುಕೊಟ್ಟರೂ, ಬೆನ್ನು ತಟ್ಟದ ದೇಶ: ಬೇಸರ
ಶ್ರೀರಂಗಪಟ್ಟಣ: ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಗೋಲ್ಡ್ ಮೆಡಲ್ ತಂದುಕೊಟ್ಟರೂ ದೇಶವು ನನ್ನ ಬೆನ್ನು ತಟ್ಟಲಿಲ್ಲ ಎಂದು ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಬೇಸರ ವ್ಯಕ್ತಪಡಿಸಿದರು.

ಇಂದಿಗೂ ನಾನು ವಿಜ್ಞಾನಿ ಎನ್ನುವ ಬದಲು ನಾನೊಬ್ಬ ರೈತನ ಮಗ ಎನ್ನುವುದಕ್ಕೆ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದ ಪ್ರತಾಪ್, ನಾನೊಬ್ಬ ಭಾರತೀಯ ಎನ್ನುವ ಮೂಲಕ ದೇಶದ ಸೇವೆಗೆ ನಾನೆಂದಿಗೂ ಮೀಸಲು ಎಂದು ಸಾರಿದರು.

ಬಂಡೆಯ ಮೇಲೊಂದರ ಮೇಲೆ ಮಲಗಿರುವ ವೇಳೆ ಹಾರುತ್ತಿದ್ದ ಹದ್ದನ್ನು ಗಮನಿಸಿ ಡ್ರೋಣ್ ಕ್ಯಾಮೆರಾ ಕಂಡು ಹಿಡಿಯಲು ಮುಂದಾದೆ. ಕಡು ಬಡತನದ ನಡುವೆಯೂ ಸತತ 89ನೇ ವಿಫಲ ಪ್ರಯತ್ನದ ಬಳಿಕ ಯಶ ಸಾಧಿಸಿ ದೇಶಕ್ಕೆ ಕೀರ್ತಿ ತಂದಿದ್ದಾಗಿ ಸಂತಸ ವ್ಯಕ್ತಪಡಿಸಿದರು.

Translate »