‘ಆಚಾರ್ಯತ್ರಯ ಕಪ್’ ಟೂರ್ನಿಯ ಭಿತ್ತಿಪತ್ರ ಬಿಡುಗಡೆ
ಮಂಡ್ಯ

‘ಆಚಾರ್ಯತ್ರಯ ಕಪ್’ ಟೂರ್ನಿಯ ಭಿತ್ತಿಪತ್ರ ಬಿಡುಗಡೆ

January 9, 2020

ಬೆಂಗಳೂರು, ಜ.8- ಕರ್ನಾಟಕ ವಿಪ್ರ ವೇದಿಕೆಯಿಂದ ಬೆಂಗಳೂರಿನ ಬಸವನ ಗುಡಿಯ ಕೆಂಪೇಗೌಡ ಆಟದ ಮೈದಾನ ದಲ್ಲಿ ಜ. 31ರಿಂದ ಮೂರು ದಿನಗಳ ಕಾಲ ಆಯೋಜಿಸಿರುವ ‘ಆಚಾರ್ಯತ್ರಯ ಕಪ್’ ರಾಜ್ಯಮಟ್ಟದ ಬ್ರಾಹ್ಮಣ ಯುವಕರ ಕ್ರಿಕೆಟ್ ಟೂರ್ನಿಯ ಭಿತ್ತಿಪತ್ರವನ್ನು ಕರ್ನಾಟಕ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ಅವರು ಬೆಂಗಳೂರಿನ ಕುಮಾರ ಕೃಪದಲ್ಲಿ ಬಿಡು ಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಇಂದಿನ ತಾಂತ್ರಿಕ, ಸ್ಪರ್ಧಾತ್ಮಕ ಯುಗದಲ್ಲಿ ಬ್ರಾಹ್ಮಣ ಸಮುದಾಯ ತಳಮಟ್ಟದಿಂದ ಸಂಘಟಿತ ರಾದರೆ ಮಾತ್ರ ಯುವಪೀಳಿಗೆ ಮುಖ್ಯವಾಹಿ ನಿಗೆ ಬರಲು ಸಾಧ್ಯವಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗದಲ್ಲಿ ಸಮಸ್ಯೆಯಾದಾಗ ತೊಂದರೆ ಯನ್ನು ಬಗೆಹರಿಸಲು ಸರ್ಕಾರದಿಂದ ಯೋಜನೆಗಳನ್ನು ರೂಪಿಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಸ್ಥಾಪಿತವಾಗಿರುವ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯೊಂದಿಗೆ ಮುಂದಿನ ದಿನಗಳಲ್ಲಿ ಬ್ರಾಹ್ಮಣ ಸಂಘ ಸಂಸ್ಥೆಯ ಪದಾಧಿಕಾರಿಗಳು ನಿರಂತರ ಸಂಪರ್ಕ ಪಡೆದು ಸಮುದಾಯದ ಶ್ರೆಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ತಲುಪಿಸಲು ಶ್ರಮಿಸ ಬೇಕಿದೆ. ಬ್ರಾಹ್ಮಣ ಸಮುದಾಯದ ಯುವ ಪೀಳಿಗೆ ಆಚಾರ್ಯತ್ರಯ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹೆಚ್ಚಾಗಿ ಭಾಗವಹಿಸಿ ಸಂಘಟನಾತ್ಮಕವಾಗಿ ಚಿಂತಿಸಲು ಮುಂದಾಗಬೇಕು ಎಂದರು.

ಧಾರ್ಮಿಕ ಮುಖಂಡ ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮ ಮಾತನಾಡಿ, ಭಾರತ ಸಂಸ್ಕೃತಿಯಲ್ಲಿ ವೇದ ಆಯುರ್ವೇದ ಪ್ರಮುಖ ಭಾಗವಾಗಿದ್ದು ಪಂಡಿತರು, ಪುರೋಹಿತರು, ಪಾಕಪ್ರವೀಣರು ಸಾವಿರಾರು ವರ್ಷಗಳಿಂದ ಸೇವೆ ಸಲ್ಲಿಸಿ ಸನಾತನ ಧರ್ಮವನ್ನು ಉಳಿ ಸಲು ಶ್ರಮಿಸಿದ್ದಾರೆ. ಧಾರ್ಮಿಕ, ಸಾಮಾ ಜಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಬ್ರಾಹ್ಮಣ ಯುವಕರು ಹೆಚ್ಚಾಗಿ ತೊಡಗಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಆಚಾರ್ಯತ್ರಯ ಕಪ್ ಕ್ರಿಕೆಟ್ ಪಂದ್ಯಾ ವಳಿಯಲ್ಲಿ 20 ಜಿಲ್ಲೆಗಳಿಂದ 32 ತಂಡ ಗಳು ಭಾಗವಹಿಸಲಿದ್ದು ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರಿಗೆ ವಸತಿ ಮತ್ತು ಭೋಜನ ಸೇರಿದಂತೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಮೊದಲ ಬಹುಮಾನ 30 ಸಾವಿರ, ಎರಡನೇ ಬಹುಮಾನ 20 ಸಾವಿರ, ಮೂರನೇ ಬಹುಮಾನ 10 ಸಾವಿರ ಹಾಗೂ ಟ್ರೋಫಿ, ಪ್ರಶಸ್ತಿ ಪ್ರದಾನ ಮಾಡ ಲಾಗುವುದು ಎಂದು ವಿವರಿಸಿದರು.

ಹೆಚ್ಚಿನ ಮಾಹಿತಿಗಾಗಿ ಕ್ರೀಡಾಸಕ್ತರು ಭಾಗವಹಿಸಲು 7829067769 ಸಂಪರ್ಕಿಸ ಬಹುದು. ಈ ವೇಳೆ ಹರಿಹರಪುರ ಮಠದ ಆಡಳಿತಾಧಿಕಾರಿ ಡಾ.ಬಿ.ಎಸ್.ರವಿಶಂಕರ್, ಕರ್ನಾಟಕ ವಿಪ್ರ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ನರಸಿಂಹಮೂರ್ತಿ, ಪದಾಧಿಕಾರಿಗಳಾದ ಶಂಕರ್, ಅಜಯ್ ಶಾಸ್ತ್ರಿ, ಮುರಳಿ ಪ್ರಸಾದ್, ಶ್ರೀನಿವಾಸ್, ನಾಗರಾಜ್ ದೀಕ್ಷಿತ್ ಮುಂತಾದವರು ಇದ್ದರು.

Translate »