ನಂಜನಗೂಡು, ಏ.21(ರವಿ)-ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೂರಿನ ಮೇರೆಗೆ ಗ್ರಾಮಾಂತರ ಠಾಣಾ ಪೊಲೀಸರು ಬಾಲ್ಯವಿವಾಹಕ್ಕೊ ಳಗಾಗಿದ್ದ ಆಪ್ರಾಪ್ತೆಯನ್ನು ರಕ್ಷಿಸಿ, ವರನ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಮಲ್ಲೇಶನಾಯಕ ಪುತ್ರ ರವಿಕುಮಾರ್ (24) ಎಂಬಾತನಿಗೆ ತಾಲೂಕಿನ ಗ್ರಾಮ ವೊಂದರ 17 ವರ್ಷದ ಆಪ್ರಾಪ್ತೆಯೊಡನೆ ಏ.19ರಂದು ತಾಲೂಕಿನ ಹಲ್ಲರೆ ಗ್ರಾಮದ ಎತ್ತಮ್ಮನ ದೇವಸ್ಥಾನದಲ್ಲಿ ಅರ್ಚಕರ ಸಮ್ಮುಖ ದಲ್ಲಿ ವಿವಾಹ ನೆರವೇರಿಸಲಾಗಿತ್ತು. ಈ ಬಗ್ಗೆ ವಿಷಯ ತಿಳಿದ ತಾಲೂಕು ಶಿಶು ಅಭಿ ವೃದ್ಧಿ ಯೋಜನಾಧಿಕಾರಿ ಕವಿತಾ ಆರೋಪಿಗಳ…
ತಿ.ನರಸೀಪುರದ ವಿವಿಧೆಡೆ ಉಪಹಾರ, ದವಸ-ಧಾನ್ಯ ವಿತರಣೆ
April 20, 2020ತಿ.ನರಸೀಪುರ, ಏ.19(ಎಸ್‍ಕೆ)-ಪಟ್ಟಣದ ವಿಶ್ವಕರ್ಮ ಬೀದಿಯಲ್ಲಿರುವ ರೇಣುಕಾ ಸಭಾ ಭವನದ ಬಳಿ ಶ್ರೀ ಗುಂಜಾನರಸಿಂಹಸ್ವಾಮಿ ಗೆಳೆಯರ ಬಳಗದಿಂದ ಸಾರ್ವ ಜನಿಕರು ಹಾಗೂ ಅಶಕ್ತರಿಗೆ ಏರ್ಪಡಿಸಿದ್ದ ಮಧ್ಯಾಹ್ನದ ಉಪಹಾರ ವಿತರಣೆ ಕಾರ್ಯಕ್ರಮಕ್ಕೆ ಬಳಗದ ಮುಖ್ಯಸ್ಥ ಕುದೇರು ನಾಗೇಂದ್ರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೊರೊನಾ ಹರಡು ವಿಕೆ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಬಡವರು, ಅಶಕ್ತರಿಗೆ ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ. ಪರಿಸ್ಥಿತಿಯ ಅವಲೋಕನದೊಂದಿಗೆ ಗೆಳೆಯರ ಬಳಗವು ಲಾಕ್‍ಡೌನ್ ಮುಗಿಯು ವವರೆಗೂ ನಿರಂತರವಾಗಿ ಮಧ್ಯಾಹ್ನದ ಉಪಹಾರ…
ಈಜಲು ಹೋಗಿದ್ದ ಬಾಲಕರಿಬ್ಬರು ನೀರುಪಾಲು
April 20, 2020ಹೆಚ್.ಡಿ.ಕೋಟೆ, ಏ.19-ಕಬಿನಿ ಹಿನ್ನೀರಿ ನಲ್ಲಿ ಈಜಲು ಹೋದ ಬಾಲಕರಿಬ್ಬರು ನೀರುಪಾಲಾಗಿರುವ ಘಟನೆ ತಾಲೂಕಿನ ಮಳಲಿ ಗ್ರಾಮದ ಬಳಿ ನಡೆದಿದೆ. ಗ್ರಾಮದ ನಿವಾಸಿ ವೆಂಕಟೇಶ್ ಪುತ್ರ ಚಂದು(17), ನಾಗಯ್ಯ ಪುತ್ರ ಸಿದ್ದರಾಜು (15) ಮೃತಪಟ್ಟ ಬಾಲಕರು. ಇವರು ಶನಿ ವಾರ ಮಧ್ಯಾಹ್ನ ಸಹಪಾಠಿಗಳೊಂದಿಗೆ ಕಬಿನಿ ಹಿನ್ನೀರಿನಲ್ಲಿ ಈಜಲು ತೆರಳಿದ್ದರು. ಈ ವೇಳೆ ಚಂದು ಹಾಗೂ ಸಿದ್ದರಾಜು ಸುಳಿಯಲ್ಲಿ ಸಿಲುಕಿ ಅಸುನೀಗಿದ್ದಾರೆ. ಇದ ರಿಂದ ಗಾಬರಿಗೊಂಡ ಮತ್ತಿಬ್ಬರು ಬಾಲಕರು ಪೆÇೀಷಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೆÇೀಷಕರ ಆಕ್ರಂದನ ಮುಗಿಲು…
ಕ್ರಿಕೆಟ್ ಆಡುವ ವಿಚಾರಕ್ಕೆ ಜಗಳ: ಮನನೊಂದ ಯುವಕ ನೇಣಿಗೆ ಶರಣು
April 20, 2020ನಂಜನಗೂಡು, ಏ.19(ರವಿ)-ಕ್ರಿಕೆಟ್ ವಿಚಾರಕ್ಕೆ ಏರ್ಪಟ್ಟ ಜಗಳದಿಂದ ಮನನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗೆಜ್ಜಗನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಐವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗ್ರಾಮದ ಚಿಕ್ಕಬಸವಯ್ಯ ಪುತ್ರ ಚಂದ್ರು(28) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋ¥ದಡಿ ಅದೇ ಗ್ರಾಮದ ಸಂತೋಷ್, ಮಂಜು, ನಾಗರಾಜು, ಮಹದೇವ್ ಹಾಗೂ ರಾಜೇಶ್‍ರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಶನಿವಾರ ಸಂಜೆ ಚಂದ್ರು ಮನೆಯ ಬಳಿ ಸಂತೋಷ್, ಮಂಜು, ನಾಗರಾಜು ಸೇರಿ ದಂತೆ ಯುವಕರ ಗುಂಪು ಕ್ರಿಕೆಟ್…
ದಿನಸಿ ಪದಾರ್ಥಗಳಿಗೆ ಬೆಲೆ ನಿಗದಿಪಡಿಸಲು ಅಶ್ವಿನ್‍ಕುಮಾರ್ ಸೂಚನೆ
April 18, 2020ತಿ.ನರಸೀಪುರ, ಏ.17(ಎಸ್‍ಕೆ)-ಕೋವಿಡ್-19 ಹಿನ್ನೆಲೆಯಲ್ಲಿ ಪಟ್ಟಣದ ದಿನಸಿ ವರ್ತಕರು ಪಡಿತರ ಪದಾರ್ಥ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡು ತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಹೋಲ್‍ಸೇಲ್ ವ್ಯಾಪಾರಿ ಗಳಿಂದ ಮಾಹಿತಿ ಪಡೆದು ನಿಖರ ಬೆಲೆ ನಿಗದಿ ಪಡಿಸುವಂತೆ ಶಾಸಕ ಎಂ.ಅಶ್ವಿನ್ ಕುಮಾರ್ ತಹಸೀಲ್ದಾರ್‍ಗೆ ಸೂಚನೆ ನೀಡಿದರು. ತಾಲೂಕು ನ್ಯಾಯ ಬೆಲೆ ಅಂಗಡಿಗಳ ವಿತರಕರ ವತಿಯಿಂದ ನೀಡುತ್ತಿರುವ ಆಹಾರದ ಕಿಟ್‍ಗಳನ್ನು ತಹಸೀಲ್ದಾರ್ ಮೂಲಕ ಬಡವರಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಟ್ಟಣದ ವರ್ತಕರು…
ಜೇನು ಕಡಿದು ಯುವಕ ಸಾವು
April 18, 2020ತಿ.ನರಸೀಪುರ, ಏ.17(ಎಸ್‍ಕೆ)-ಮದುವೆ ನಿಶ್ಚಯವಾಗಿದ್ದ ಯುವಕನೊಬ್ಬ ಜೇನು ಕಡಿದು ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ತಾಲೂಕಿನ ಕೇತಹಳ್ಳಿ ಗ್ರಾಮದ ಅಂಗಡಿ ಸಿದ್ದಮಲ್ಲಶೆಟ್ಟಿ ಪುತ್ರ ಮಹದೇವಸ್ವಾಮಿ(30) ಮೃತಪಟ್ಟ ಯವಕ. ಈತ ಇಂದು ಬೆಳಿಗ್ಗೆ ವಾಯು ವಿಹಾರ ಮುಗಿಸಿ ತ್ರಿವೇಣಿ ನಗರದ ತಮ್ಮ ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಪಟ್ಟಣದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಬಳಿ ಜೇನು ನೊಣಗಳು ದಾಳಿ ಇಟ್ಟಿವೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಾದೇವಸ್ವಾಮಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತಲೆ ಭಾಗಕ್ಕೆ ತೀವ್ರವಾದ ಗಾಯಗಳಾಗಿದ್ದರಿಂದ ಚಿಕಿತ್ಸೆ…
ಕಪಿಲಾ ನದಿಯಲ್ಲಿ ಚಿರತೆ ಕಳೇಬರ ಪತ್ತೆ
April 18, 2020ಸರಗೂರು, ಏ. 17 (ನಾಗೇಶ್)- ಇಲ್ಲಿಗೆ ಸಮೀಪದ ಹಾಲಗಡ ಬಳಿ ಚಿರತೆ ಕಳೇಬರ ಪತ್ತೆಯಾಗಿದೆ. ಹಾಲಗಡ ಮತ್ತು ಇಟ್ನಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಕಪಿಲಾ ನದಿ ಸಮೀಪ ನಿರ್ಮಾಣ ಹಂತದಲ್ಲಿರುವ ಸೇತುವೆಯ ಪಿಲ್ಲರ್ ಬಳಿ 3ರಿಂದ 4 ವರ್ಷದ ಚಿರತೆ ಕಳೇಬರ ಪತ್ತೆ ಯಾಗಿದೆ. ಪಶುವೈದ್ಯ ಡಾ.ಮಹೇಶ್ ಮರಣೋತ್ತರ ಪರೀಕ್ಷೆ ನಡೆಸಿದರು. ಚಿರತೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಂಗಾಂಗ ಮಾದರಿಯನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಎಸಿಎಫ್ ಪರಮೇಶ್ವರ್, ಸರಗೂರು ಆರ್‍ಎಫ್ ಮಧು ಹಾಗೂ ಅರಣ್ಯ ಸಿಬ್ಬಂದಿ…
ಮನೆ ಮನೆಗೆ ಔಷಧಿ ವಿತರಣೆ
April 13, 2020ತಿ.ನರಸೀಪುರ. ಏ.12(ಎಸ್.ಕೆ)- ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಡವರಿಗೆÉ ಉಚಿತವಾಗಿ ಔಷಧಗಳನ್ನು ಪೂರೈಸಲು ಸ್ಥಳೀಯ ಬಿ.ವೈ.ವಿಜಯೇಂದ್ರ ಅಭಿಮಾನಿ ಗಳ ಬಳಗ ಶ್ರಮಿಸುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಸಹ-ವಕ್ತಾರ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ರಘು ಹೇಳಿದರು. ತಾಲೂಕಿನ ಹೆಳವರಹುಂಡಿ ಗ್ರಾಮದಲ್ಲಿ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗವು ಹಮ್ಮಿಕೊಂಡಿದ್ದ ಮನೆ ಮನೆಗೆ ಔಷಧ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನತೆ ಮನೆಯಿಂದ ಹೊರಬಂದು ಔಷಧಗಳನ್ನು ಪಡೆಯಲು ಸಾಧ್ಯವಿಲ್ಲದ ಕಾರಣ ಹಾಗೂ…
ಭಾರೀ ಮಳೆ : 50 ಎಕರೆ ಬಾಳೆ ನಷ್ಟ
April 13, 2020ಹುಣಸೂರು, ಏ.12(ಕೆಕೆ)-ತಾಲೂ ಕಿನ ವಿವಿಧೆಡೆ ಗುರುವಾರ ಮಧ್ಯರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಹಲವೆಡೆ ಸಾಕಷ್ಟು ಹಾನಿ ಸಂಭವಿಸಿದೆ. ತಾಲೂಕಿನಲ್ಲಿ ಒಟ್ಟಾರೆ ಸರಾಸರಿ 18 ಮಿ.ಮೀ. ಮಳೆಯಾಗಿದ್ದು, ನಗರದಲ್ಲಿ 21 ಮಿ.ಮೀ., ಚಿಲ್ಕುಂದ-10.2, ಬಿಳಿಕೆರೆ- 20.6 ಮಿ.ಮೀ. ಹಾಗೂ ಹನಗೋಡು ಭಾಗಗಳಲ್ಲಿ ಮಳೆ ಸರಾಸರಿ ದಾಖಲಾಗಿದೆ. ಬಿರುಗಾಳಿ ಮಳೆಯಿಂದಾಗಿ ಬಿಳಿಕೆರೆ ಹೋಬಳಿಯ ದೈತ್ಯನಕೆರೆ ಕಾವಲ್, ಅಸ್ವಾಳು, ತರಿಕಲ್‍ಕಾವಲ್ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಸುಮಾರು 50 ಎಕರೆಯಷ್ಟು ಬಾಳೆ ಬೆಳೆ ನಾಶವಾಗಿದೆ. ಹನಗೋಡು ಹೋಬಳಿಯ ದಾಸನಪುರ ಗ್ರಾಮದಲ್ಲಿ…
ವರುಣಾ ಕ್ಷೇತ್ರದ ಜನತೆಗೆ ಪಡಿತರ, ಅವಶ್ಯಕ ಪದಾರ್ಥ ಕಲ್ಪಿಸಿ
April 13, 2020ತಿ.ನರಸೀಪುರ. ಏ. 12(ಎಸ್‍ಕೆ)- ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ ವರುಣಾ ವಿಧಾನಸಭಾ ಕ್ಷೇತ್ರದ ಜನತೆಗೆ ಪಡಿತರ ಸೇರಿದಂತೆ ಅವಶ್ಯಕ ಪದಾರ್ಥಗಳನ್ನು ವಿತರಿಸುವಂತೆ ಇಂದು ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಟ್ಟಣದ ಮರೀಗೌಡ ಸ್ಮಾರಕ ಭವನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕೋವಿಡ್ 19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಅಗತ್ಯವಿರುವ ಪಡಿತರ ಹಾಗೂ ಹಾಲು, ಮಾಸ್ಕ್ ಸೇರಿದಂತೆ ಇನ್ನಿತರ ವಸ್ತುಗಳ ಪಟ್ಟಿ ಮಾಡಿ ಕೆಪಿಸಿಸಿಗೆ ಕಳುಹಿಸಿಕೊಡುವಂತೆ ಪುರಸಭಾ ಸದಸ್ಯರು ವರುಣಾ ಬ್ಲಾಕ್ ಅಧ್ಯಕ್ಷ ರಮೇಶ್ ಮುದ್ದೇಗೌಡರಿಗೆ ಮನವಿ…