ಮೈಸೂರು ಗ್ರಾಮಾಂತರ

ಮಕ್ಕಳು ಸೇರಿದಂತೆ 20 ಮಂದಿಗೆ ವಾಂತಿ-ಭೇದಿ
ಮೈಸೂರು ಗ್ರಾಮಾಂತರ

ಮಕ್ಕಳು ಸೇರಿದಂತೆ 20 ಮಂದಿಗೆ ವಾಂತಿ-ಭೇದಿ

April 6, 2020

ಮಲ್ಕುಂಡಿ,ಏ.(ಚನ್ನಪ್ಪ)-ಕಲುಷಿತ ನೀರು ಸೇವಿಸಿ ಮಕ್ಕಳು ಸೇರಿದಂತೆ 20 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿರುವ ಘಟನೆ ಸಮೀಪದ ಹುರಾ ಗ್ರಾಪಂ ವ್ಯಾಪ್ತಿಯ ಸಿದ್ದೆಗೌಡನಹುಂಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಓವರ್‍ಹೆಡ್ ಟ್ಯಾಂಕ್‍ನಿಂದ ಶುಕ್ರವಾರ ಸರಬರಾಜಾದ ನೀರು ಸೇವನೆಯಿಂದ ಸುಮಾರು 20 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ವಿಷಯ ತಿಳಿದು ಹುರ ಗ್ರಾಮದ ಆರೋಗ್ಯ ಕೇಂದ್ರದ ಡಾ. ಜಗದೀಶ್ ಗ್ರಾಮದಲ್ಲೇ ತಾತ್ಕಾಲಿಕವಾಗಿ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಿದರು. ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಹುರಾ ಆರೋಗ್ಯ ಸಮುದಾಯದ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗ್ರಾಮದಲ್ಲಿ…

ಮದ್ಯದಂಗಡಿಗೆ ಕನ್ನ ಹಾಕಿದ್ದ ಯುವಕನ ಬಂಧನ
ಮೈಸೂರು ಗ್ರಾಮಾಂತರ

ಮದ್ಯದಂಗಡಿಗೆ ಕನ್ನ ಹಾಕಿದ್ದ ಯುವಕನ ಬಂಧನ

April 6, 2020

ಬೆಟ್ಟದಪುರ, ಏ.5- ಮದ್ಯದಂಗಡಿ ಹಿಂಬದಿ ಗೋಡೆ ಕೊರೆದು ಸುಮಾರು 60 ಸಾವಿರ ಮೌಲ್ಯದ ಮದ್ಯ ಕಳವು ಮಾಡಿದ್ದ ಆರೋಪಿಯನ್ನು ಬೆಟ್ಟದಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಮೀಪದ ಚಪ್ಪರದಹಳ್ಳಿ ಗ್ರಾಮದ ಬಸವರಾಜು(20) ಬಂಧಿತ ಆರೋಪಿ. ಏ.2ರಂದು ಬೆಟ್ಟದಪುರದ ಚಾಮುಂಡೇಶ್ವರಿ ವೈನ್ ಶಾಪ್‍ನ ಹಿಂಬದಿಯ ಗೋಡೆ ಕೊರೆದು 60 ಸಾವಿರ ಮೌಲ್ಯದ ಮದ್ಯ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬೆಟ್ಟದ ಪುರ ಠಾಣೆ ಎಸ್‍ಐ ಲೋಕೇಶ್ ಹಾಗೂ ಸಿಬ್ಬಂದಿ ಪಿರಿಯಾಪಟ್ಟಣ ವೃತ್ತ ನಿರೀಕ್ಷಕ ಬಿ.ಆರ್.ಪ್ರದೀಪ್ ಮಾರ್ಗದರ್ಶನದಲ್ಲಿ ಶೋಧ…

ಪಂಚ ಮಹಾರಥಗಳ ಸದ್ದಿಲ್ಲದೆ ಜರುಗಿದ `ದೊಡ್ಡ ಜಾತ್ರೆ’
ಮೈಸೂರು ಗ್ರಾಮಾಂತರ

ಪಂಚ ಮಹಾರಥಗಳ ಸದ್ದಿಲ್ಲದೆ ಜರುಗಿದ `ದೊಡ್ಡ ಜಾತ್ರೆ’

April 5, 2020

ನಂಜನಗೂಡು, ಏ.4(ರವಿ/ಪವನ್)-ದಕ್ಷಿಣಕಾಶಿ ಪ್ರಸಿದ್ಧ ಗರಳಪುರಿ ಕ್ಷೇತ್ರ, ಪಂಚ ಮಹಾರಥಗಳನ್ನು ಎಳೆಯುವ ಕ್ಷೇತ್ರವೆನಿಸಿರುವ ನಂಜನಗೂಡಿನಲ್ಲಿಂದು ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಗೌತಮ ಪಂಚ ಮಹಾರಥೋತ್ಸವವು ಲಾಕ್‍ಡೌನ್ ಹಿನ್ನೆಲೆ ರದ್ದಾದರೂ ದೇವಾಲಯದ ಒಳಾವರಣದಲ್ಲಿ ಸಂಪ್ರದಾಯಕ್ಕೆ ಚ್ಯುತಿ ಇಲ್ಲದಂತೆ ನೆರವೇರಿತು. ಶನಿವಾರ ಬೆಳಿಗ್ಗೆ 5.25ರಿಂದ 6.30ರೊಳಗೆ ಸಲ್ಲುವ ಶುಭ ಮೀನ ಲಗ್ನ, ಮಘಾ ನಕ್ಷತ್ರದಲ್ಲಿ ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತರು ಹಾಗೂ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದ ನಂತರ ಸಕಲ ಪೂಜಾ ಕೈಂಕರ್ಯ ನೇರವೇರಿಸಲಾಗಿತು. ನಂತರ ದೇವಾಲಯದಲ್ಲೇ ಇರುವ ಚಿಕ್ಕ…

ಕೊರೊನಾ ಕುರಿತು ಸ್ವಯಂ ಅರಿವು ಅಗತ್ಯ: ತಹಸೀಲ್ದಾರ್ ಡಿ.ನಾಗೇಶ್
ಮೈಸೂರು ಗ್ರಾಮಾಂತರ

ಕೊರೊನಾ ಕುರಿತು ಸ್ವಯಂ ಅರಿವು ಅಗತ್ಯ: ತಹಸೀಲ್ದಾರ್ ಡಿ.ನಾಗೇಶ್

April 5, 2020

ತಿ.ನರಸೀಪುರ, ಏ.4(ಎಸ್‍ಕೆ)-ಕೊರೊನಾ ಸೋಂಕು ಕುರಿತು ಸ್ವಯಂ ಅರಿವಿನೊಂದಿಗೆ ಸಾರ್ವಜನಿಕರು ತಾಲೂಕು ಆಡಳಿತದೊಂದಿಗೆ ಸಹಕರಿಸ ಬೇಕು ಎಂದು ತಹಸೀಲ್ದಾರ್ ಡಿ.ನಾಗೇಶ್ ಮನವಿ ಮಾಡಿದರು. ತಾಲೂಕಿನಲ್ಲಿ ಲಾಕ್‍ಡೌನ್‍ಗೆ ಸಾರ್ವ ಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿ ದ್ದರೂ ಕೆಲವರು ಆದೇಶ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸಾರ್ವಜನಿಕರಲ್ಲೇ ಕೊರೊನಾ ಬಗ್ಗೆ ಜಾಗೃತಿ ಮೂಡಿದಾಗ ಮಾತ್ರವೇ ಕಿಲ್ಲರ್ ವೈರಾಣು ಹತ್ತಿರ ಸುಳಿಯುವುದಿಲ್ಲ. ಮೊದಲು ಗ್ರಾಮೀಣ ಪ್ರದೇಶದ ಜನತೆ ಅರಳೀಕಟ್ಟೆಗಳಲ್ಲಿ ಗುಂಪಾಗಿ ಸೇರಿ ಚರ್ಚಿಸು ವುದನ್ನು ಬಿಟ್ಟು ಸಾಮಾಜಿಕ ಅಂತರ ಕಾಯ್ದು ಕೊಳ್ಳುವ…

ಮನೆಯಿಂದ ಹೊರಬಂದು ಆತಂಕ ಸೃಷ್ಟಿಸಿದ ಕೊರೊನಾ ಶಂಕಿತ
ಮೈಸೂರು ಗ್ರಾಮಾಂತರ

ಮನೆಯಿಂದ ಹೊರಬಂದು ಆತಂಕ ಸೃಷ್ಟಿಸಿದ ಕೊರೊನಾ ಶಂಕಿತ

April 3, 2020

ತಿ.ನರಸೀಪುರ, ಏ.2-ಹೋಂ ಕ್ವಾರೆಂಟೈನ್ ಸೀಲ್ ಹಾಕಲಾಗಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಸಂಚರಿಸುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ಪಟ್ಟಣದ ಶ್ರೀರಾಮಪುರ ಬೀದಿಯಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಹೈದರಾಬಾದ್‍ನಿಂದ ಪಟ್ಟಣಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಪುರಸಭೆಯ 20ನೇ ವಾರ್ಡ್‍ನ(ಮಡಿವಾಳರ ಕಾಲೋನಿ)ತನ್ನ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಅವರನ್ನು ಗುರುತಿಸಿದ ತಾಲೂಕು ಆಡಳಿತ ಕ್ವಾರೆಂಟೈನ್ ಸೀಲ್ ಹಾಕಿ ಮನೆಯಿಂದ ಹೊರಹೋಗದಂತೆ ಸೂಚಿಸಿತ್ತು. ಆದರೆ ಆತ ಮನೆಯಿಂದ ಹೊರ ಬಂದು ನಿತ್ಯದ ಕೆಲಸಗಳಲ್ಲಿ ತೊಡಗಿದ್ದ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಸಂಬಂಧಿಸಿದ…

ಕಲ್ಲಂಗಡಿ ಬೆಳೆ ರೈತ ಕಾಂಗಾಲು
ಮೈಸೂರು ಗ್ರಾಮಾಂತರ

ಕಲ್ಲಂಗಡಿ ಬೆಳೆ ರೈತ ಕಾಂಗಾಲು

April 3, 2020

ಮಲ್ಕುಂಡಿ, ಏ.2(ಚನ್ನಪ್ಪ)-ಕೊರೊನಾ ಭೀತಿ ಹಿನ್ನೆಲೆಯಲ್ಲಿ ಎಲ್ಲಡೆ ಲಾಕ್‍ಡೌನ್ ಜಾರಿಯಲ್ಲಿದೆ. ಇದರಿಂದ ಕೊಳ್ಳುವವರಿಲ್ಲದೆ ಕಲ್ಲಂಗಡಿ ಬೆಳೆದ ರೈತ ಕಂಗಾಲಾಗಿದ್ದಾರೆ. ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಲ್ಲಿ ರೈತ ಮಂಜುನಾಥ್ ತಮ್ಮ 2 ಎಕರೆ ಜಮೀನಿನಲ್ಲಿ ಸುಮಾರು ಆರೇಳು ಲಕ್ಷ ರೂ. ಸಾಲ ಸೋಲ ಮಾಡಿ ಕಲ್ಲಂಗಡಿ ಬೇಸಾಯ ಮಾಡಿದ್ದರು. ಸದ್ಯ ಫಸಲು ಕಟಾವಿಗೆ ಬಂದಿದ್ದು, ಕೊರೊನಾ ವೈರಸ್ ಭೀತಿ, ಲಾಕ್‍ಡೌನ್‍ನಿಂದ ಕೊಳ್ಳುವವರಿಲ್ಲದ ಕಾರಣ ಕೋಯ್ಲು ಮಾಡದೆ ಕಲ್ಲಂಗಡಿ ಫಸಲು ಬಿಸಿಲು ತಾಪಕ್ಕೆ ಸಂಪೂರ್ಣ ನಾಶವಾಗುತ್ತಿದ್ದು, ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಇದರಿಂದ…

ಬೆಂಕಿ ಕೆನ್ನಾಲಿಗೆ ಮಾವಿನ ಫಸಲು ಭಸ್ಮ
ಮೈಸೂರು ಗ್ರಾಮಾಂತರ

ಬೆಂಕಿ ಕೆನ್ನಾಲಿಗೆ ಮಾವಿನ ಫಸಲು ಭಸ್ಮ

April 3, 2020

ಹುಣಸೂರು, ಏ.2(ಕೆಕೆ)-ಸಮೀಪದ ಜಮೀನಿನ ರೈತರು ಕಳೆ ನಿಯಂತ್ರಣಕ್ಕೆ ತೆವರಿಗೆ ಇಟ್ಟ ಬೆಂಕಿಗೆ ರೈತರೊಬ್ಬರ ಮಾವಿನ ಫಸಲು ಭಸ್ಮವಾಗಿರುವ ಘಟನೆ ತಾಲೂಕಿನ ಮಾದಹಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮ ಸ್ವಾಮಿನಾಯಕ ಅವರ ಮಾವಿನ ತೋಟದಲ್ಲಿ ಘಟನೆ ನಡೆದಿದ್ದು, ಪಕ್ಕದ ಜಮೀನಿನ ರೈತರು ಕಳೆ ನಿಯಂತ್ರಣಕ್ಕಾಗಿ ಜಮೀನಿನ ತೆವರಿಗೆ ಬೆಂಕಿ ಇಟ್ಟದ್ದರು ಎನ್ನಲಾಗಿದೆ. ಗಾಳಿಗೆ ಹರಡಿದ ಬೆಂಕಿ ಸ್ವಾಮಿನಾಯಕ ಅವರ ಮಾವಿನ ಮರಗಳಿಗೆ ವ್ಯಾಪಿಸಿ ಮರಗಳು ಸೇರಿದಂತೆ ಫಸಲು ಬೆಂಕಿಗಾಹುತಿಯಾಗಿದೆ. ಇದರಿಂದ ಸ್ವಾಮಿನಾಯಕರಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಈ ಸಂಬಂಧ…

ಚುಂಚನಕಟ್ಟೆ ಸಂತೆ ರದ್ದು
ಮೈಸೂರು ಗ್ರಾಮಾಂತರ

ಚುಂಚನಕಟ್ಟೆ ಸಂತೆ ರದ್ದು

March 19, 2020

ಚುಂಚನಕಟ್ಟೆ, ಮಾ.18(ಮಧು)- ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಾತ್ರೆ-ಸಂತೆ, ಸಭೆ-ಸಮಾ ರಂಭಗಳಿಗೆ ನಿಷೇಧ ಹೇರಿ ಆದೇಶ ಹೊರಡಿ ಸಿದೆ. ಆದರೆ ಇದರ ಅರಿವೇ ಇಲ್ಲದೆ ತಮ್ಮ ಜಾನುವಾರು-ಸಾಕುಪ್ರಾಣಿಗಳೊಂದಿಗೆ ಆಗಮಿಸಿದ್ದ ರೈತರು, ವ್ಯಾಪಾರಿಗಳು ಸಂತೆ ರದ್ದುಗೊಂಡಿದ್ದರಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಬೇಕಾಯಿತು. ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚುಂಚನಕಟ್ಟೆ ಗ್ರಾಮದ ಎಪಿಎಂಸಿ ಮಾರು ಕಟ್ಟೆ ಆವರಣದಲ್ಲಿ ಪ್ರತಿ ಬುಧವಾರ ಜಾನುವಾರು ಹಾಗೂ ಕೃಷಿ ಉತ್ಪನ್ನಗಳ ಮಾರಾಟ ಸಂತೆ ನಡೆಯುತ್ತದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗಳು ಹೊರಡಿಸಿರುವ…

ದಕ್ಷಿಣಕಾಶಿಗೂ ತಟ್ಟಿದ ಕೊರೊನಾ ಭೀತಿ
ಮೈಸೂರು ಗ್ರಾಮಾಂತರ

ದಕ್ಷಿಣಕಾಶಿಗೂ ತಟ್ಟಿದ ಕೊರೊನಾ ಭೀತಿ

March 19, 2020

ನಂಜನಗೂಡು, ಮಾ.18(ರವಿ)-ಜಗತ್ತಿನೆಲ್ಲೆಡೆ ತಲ್ಲಣ ಸೃಷ್ಟಿಸಿರುವ ಕೊರೊನಾ ಭೀತಿ ದಕ್ಷಿಣಕಾಶಿ ಪ್ರಸಿದ್ಧಿಯ ನಂಜನಗೂಡಿಗೂ ತಟ್ಟಿದ್ದು, ಇಲ್ಲಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಾ.31ರವರೆಗೆ ಪ್ರವೇಶ ನಿಷೇಧಿಸಿ ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣಾ ಇಲಾಖೆ ಬೆಂಗಳೂರು ವಲಯ ಆದೇಶ ಹೊರಡಿಸಿದೆ. ಪೂಜಾ ಪುನಸ್ಕಾರ, ಧಾರ್ಮಿಕ ಕೈಂಕರ್ಯ ಎಂದಿನಂತೆ ನಡೆಯಲಿದೆ. ಈ ಬಗ್ಗೆ ದೇಗುಲ ಕಾರ್ಯ ನಿರ್ವಾ ಹಕ ಅಧಿಕಾರಿ ಶಿವಕುಮಾರಯ್ಯ ಮಾತ ನಾಡಿ, ಪುರಾತತ್ವ ಇಲಾಖೆಯಿಂದ ಇಂದು ಮಧ್ಯಾಹ್ನ ಭಕ್ತರಿಗೆ ದೇಗುಲ ಪ್ರವೇಶ ನಿಷೇಧ ಹೇರುವ ಕುರಿತ ಆದೇಶದ…

ರಸ್ತೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
ಮೈಸೂರು ಗ್ರಾಮಾಂತರ

ರಸ್ತೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

March 13, 2020

ಬೆಟ್ಟದಪುರ, ಮಾ.12(ಶಿವದೇವ್)- ರಸ್ತೆ ಅವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿ ದೊಡ್ಡ ನೇರಳೆ ಗ್ರಾಮದಲ್ಲಿ ಗುರುವಾರ ಮಹಿಳಾ ಸಂಘಟಣೆಗಳಿಂದ ಪ್ರತಿಭಟನೆ ನಡೆಯಿತು. ಚಿಕ್ಕನೇರಳೆ, ದೊಡ್ಡನೇರಳೆ, ನಿಲವಾಡಿ ಗ್ರಾಮಗಳ ರಸ್ತೆಗಳು 15 ವರ್ಷಗಳಿಂದಲೂ ಹದಗೆಟ್ಟಿದ್ದು, ವಾಹನ ಸವಾರರು ಸಂಚಾರಿಸಲು ಪ್ರತಿನಿತ್ಯ ಪರದಾಡುವಂತಾಗಿದೆ. ಗರ್ಭಿಣಿಯರು ಮತ್ತು ಬಾಣಂತಿಯರನ್ನು ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯಲು ಯಾವುದೇ ಬಾಡಿಗೆ ವಾಹನಗಳು ಬರುವುದಿಲ್ಲ. ಶಾಲಾ- ಕಾಲೇಜು ಮಕ್ಕಳು ಹಾಗೂ ಆರೋಗ್ಯ ಹದಗೆಟ್ಟರೇ ಸುಮಾರು 3, 4 ಕಿ.ಮೀ. ನಡೆದುಕೊಂಡು ಆರೋಗ್ಯ ಕೇಂದ್ರಕ್ಕೆ ಬರಬೇಕಾಗಿದೆ. ಸರ್ಕಾರಿ ಬಸ್‍ಗಳು ರಸ್ತೆ…

1 11 12 13 14 15 18
Translate »