ಮೈಸೂರು ಗ್ರಾಮಾಂತರ

ಅಂತೂ ಬೋನಿಗೆ ಬಿದ್ದ ಚಿರತೆ
ಮೈಸೂರು ಗ್ರಾಮಾಂತರ

ಅಂತೂ ಬೋನಿಗೆ ಬಿದ್ದ ಚಿರತೆ

April 13, 2020

ಹಂಪಾಪುರ, ಏ. 12(ರಾಜೇಶ್)- ಹೆಚ್.ಡಿ.ಕೋಟೆ ತಾಲೂಕು, ಕೇತಳ್ಳಿ ಗ್ರಾಮದಲ್ಲಿ ಐದು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಮೀನಾಕ್ಷಿ ಎಂಬವರ ತೋಟದಲ್ಲಿ ಚಿರತೆ ಸೆರೆಗೆ ಐದು ದಿನಗಳ ಹಿಂದೆ ಬೋನಿಡಲಾಗಿತ್ತು. ಭಾನುವಾರ ಬೆಳಗಿನ ಜಾವದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ವಿಷಯ ತಿಳಿದ ಕೂಡಲೇ ಅರಣ್ಯಾಧಿ ಕಾರಿಗಳಾದ ಮಧು, ಡಿಆರ್‍ಎಫ್ ಸುನೀತಾ ಲಾಲಪ್ಪ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಚಿರತೆಯನ್ನು ರಕ್ಷಿಸಿ ನಾಗರಹೊಳೆ ಅರಣ್ಯಕ್ಕೆ ಬಿಡಲಾಯಿತು.

ಹುಣಸೂರಲ್ಲಿ ಮನೆ-ಮನೆ ಸಮೀಕ್ಷಾ ಕಾರ್ಯ
ಮೈಸೂರು ಗ್ರಾಮಾಂತರ

ಹುಣಸೂರಲ್ಲಿ ಮನೆ-ಮನೆ ಸಮೀಕ್ಷಾ ಕಾರ್ಯ

April 13, 2020

ಹುಣಸೂರು, ಏ.12(ಕೆಕೆ)-ಕೊರೊನಾ ವೈರಸ್ ತಡೆಗಟ್ಟಲು ಮನೆ ಮನೆ ಸಮೀಕ್ಷಾ ಕಾರ್ಯದ ಮೊದಲ ದಿನ ತಾಲೂಕಿನಲ್ಲಿ 9,523 ಮನೆಗಳನ್ನು ಆರೋಗ್ಯ ಸಿಬ್ಬಂದಿ ಪೂರ್ಣಗೊಳಿಸಿದ್ದು, 29,187 ಜನರನ್ನು ಪ್ರಾಥಮಿಕ ಹಂತದ ಪರೀಕ್ಷೆಗೆ ಒಳಪಡಿಸ ಲಾಗಿದೆ ಎಂದು ತಾಲೂಕು ಆರೋಗ್ಯಾಧಿ ಕಾರಿ ಡಾ.ಕೀರ್ತಿಕುಮಾರ್ ತಿಳಿಸಿದರು. ತಾಲೂಕಿನಲ್ಲಿ ಇದೂವರೆಗೆ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಒಂದೂ ದಾಖಲಾಗಿಲ್ಲ. ಎರಡು ದಿನಗಳ ಹಿಂದೆ ಜಿಲ್ಲಾಡಳಿತ ಮನೆ ಮನೆಗೆ ತೆರಳಿ ಕೆಮ್ಮು, ನೆಗಡಿ ಮತ್ತು ಜ್ವರ ಬಾಧಿತರನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಈ ಹಿನ್ನಲೆಯಲ್ಲಿ…

ಲಾಕ್‍ಡೌನ್ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ
ಮೈಸೂರು ಗ್ರಾಮಾಂತರ

ಲಾಕ್‍ಡೌನ್ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

April 8, 2020

ನಂಜನಗೂಡು, ಏ.7(ರವಿ)-ಲಾಕ್ ಡೌನ್ ಬಗ್ಗೆ ನಗರದ ಜನತೆ ನಿರ್ಲಕ್ಷ್ಯ ವಹಿಸಿದ್ದು, ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಉಳಿದಿರುವ ಒಂದು ವಾರ ಲಾಕ್‍ಡೌನ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿ, ಅಗತ್ಯಬಿದ್ದರೆ ಲಾಠಿ ಬಳಸಿ ನಿಯಮ ಮೀರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಖಡಕ್ ಸೂಚನೆÀ ನೀಡಿದರು. ಕೊರೊನಾ ಸೋಂಕು ನಿಯಂತ್ರಣ ಹಾಗೂ ಲಾಕ್‍ಡೌನ್ ಕುರಿತು ಕೈಗೊಂಡಿ ರುವ ಕ್ರಮಗಳ ಕುರಿತ ಪರಿಶೀಲನೆ ಹಿನ್ನೆಲೆ ಯಲ್ಲಿ ಮಂಗಳವಾರ ಸಂಜೆ ನಗರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ,…

ಬಿಡಾಡಿ ಬೈಕ್‍ಗಳು ಪೆÇಲೀಸರ ವಶಕ್ಕೆ
ಮೈಸೂರು ಗ್ರಾಮಾಂತರ

ಬಿಡಾಡಿ ಬೈಕ್‍ಗಳು ಪೆÇಲೀಸರ ವಶಕ್ಕೆ

April 8, 2020

ತಿ.ನರಸೀಪುರ, ಏ.7-ಕೋವಿಡ್-19 ನಿಯಂತ್ರಣಕ್ಕಾಗಿ ವಿಧಿಸ ಲಾಗಿರುವ ಲಾಕ್‍ಡೌನ್ ಉಲ್ಲಂಘಿಸಿ ಅನಾವಶ್ಯಕವಾಗಿ ಪಟ್ಟಣ ಸುತ್ತಲು ಬಂದ ಬೈಕ್‍ಗಳನ್ನು ಇಂದು ಪಟ್ಟಣ ಪೆÇಲೀಸರು ವಶಕ್ಕೆ ಪಡೆದರು. ಲಾಕ್‍ಡೌನ್ ವಿಧಿಸಿದ್ದ ದಿನದಿಂದಲೂ ಪಟ್ಟಣದಲ್ಲಿ ಅನಾವಶ್ಯಕ ವಾಗಿ ದ್ವಿಚಕ್ರ ವಾಹನಗಳಲ್ಲಿ ಬಂದು ಸುತ್ತಾಡುತ್ತಿದ್ದವರ ಮೇಲೆ ಕಣ್ಣಿಟ್ಟಿದ್ದ ಪೆÇಲೀಸರು ಇಂದು ಅವರನ್ನು ಗುರುತಿಸಿ ಸುಮಾರು 70ಕ್ಕೂ ಹೆಚ್ಚು ಬೈಕ್‍ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಬೆಳ್ಳಂಬೆಳಿಗ್ಗೆಯೇ ಕಾರ್ಯಾಚರಣೆಗಿಳಿದ ಪೆÇಲೀಸರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಿಂತು ಅನಾವಶ್ಯಕವಾಗಿ ಪಟ್ಟಣ ಸುತ್ತಲು ಬಂದ ಬೈಕ್‍ಗಳನ್ನು ವಶಕ್ಕೆ ಪಡೆಯುವ…

ಮರದಿಂದ ಬಿದ್ದು ಬಾಲಕ ಸಾವು
ಮೈಸೂರು ಗ್ರಾಮಾಂತರ

ಮರದಿಂದ ಬಿದ್ದು ಬಾಲಕ ಸಾವು

April 8, 2020

ಹುಣಸೂರು, ಏ.7(ಕೆಕೆ)- ತೆಂಗಿನ ಮರದಿಂದ ಬಿದ್ದು ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ನಗರದ ಗೋಕುಲ ರಸ್ತೆಯಲ್ಲಿರುವ ರಾಜೇಂದ್ರ ಟ್ರೇಡರ್ಸ್ ಮಾಲೀಕ ಹೆಚ್.ಬಿ.ರಾಜೇಂದ್ರ ಪುತ್ರ ಆರ್.ಮೋಹಿತ್(17) ಮೃತಪಟ್ಟ ಬಾಲಕ. ಈತ ಶನಿವಾರ ಬೆಳಿಗ್ಗೆ ಅಜ್ಜಿ ಮನೆ ಸಮೀಪದÀ ತೆಂಗಿನ ಮರದ ಗರಿ ಕೀಳಲು ಹೋಗಿ ಮಹಡಿ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾನೆ. ಮೃತರ ಅಂತ್ಯಕ್ರಿಯೆಯು ತಾಲೂಕಿನ ಹೊಸೂರು ಗ್ರಾಮದ…

ನರಸೀಪುರದಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಣೆ
ಮೈಸೂರು ಗ್ರಾಮಾಂತರ

ನರಸೀಪುರದಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಣೆ

April 7, 2020

ತಿ.ನರಸೀಪುರ ಏ.6(ಎಸ್‍ಕೆ)-ಕೊರೊನಾ ಸೋಂಕು ನಿಯಂತ್ರಣಕ್ಕೆ ಸ್ವಚ್ಛತಾ ಕಾರ್ಯದ ಮೂಲಕ ಶ್ರಮಿಸುತ್ತಿರುವ ಪೌರಕಾರ್ಮಿಕರನ್ನು ಸನ್ಮಾನಿಸಿ, ಹಿರಿಯ ಖಾಸಗಿ ವೈದ್ಯರನ್ನು ಗೌರವಿಸಿ, ಬಡವರಿಗೆ ಆಹಾರ ಪದಾರ್ಥ ವಿತರಿಸುವ ಮೂಲಕ ಪಟ್ಟಣದಲ್ಲಿ ಸೋಮವಾರ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಬಾಳೆ ಮಂಡಿಯ ಮುಂಭಾಗ ಸರಳವಾಗಿ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಸ್ವಚ್ಛತೆಗೆ ದುಡಿಯುತ್ತಿರುವ ಇಬ್ಬರು ಪೌರ ಕಾರ್ಮಿಕರನ್ನು ಸನ್ಮಾನಿಸಿ, ಹಲವು ಕಾರ್ಮಿಕರಿಗೆ ದವಸ-ಧಾನ್ಯಗಳನ್ನು ವಿತರಿಸಲಾಯಿತು….

ನಿತ್ಯದ ತುತ್ತಿಗೂ ಕಂಟಕವಾದ ಕೊರೊನಾ
ಮೈಸೂರು ಗ್ರಾಮಾಂತರ

ನಿತ್ಯದ ತುತ್ತಿಗೂ ಕಂಟಕವಾದ ಕೊರೊನಾ

April 7, 2020

ನಂಜನಗೂಡು, ಏ.6(ರವಿ/ ಲೋಕೇಶ್)- ಕೊರೊನಾ ಸೋಂಕು ಜನಸಾಮಾನ್ಯರ ಪ್ರಾಣ ಕಸಿದು ಕೊಳ್ಳುವ ಜೊತೆಗೆ ಬಡವರು, ಕೂಲಿ ಕಾರ್ಮಿಕರ ತುತ್ತಿಗೂ ಕಂಟಕಪ್ರಾಯವಾಗಿ ಪರಿಣಮಿಸಿದೆ. ಎರಡೂ ಕಾಲು ಸ್ವಾದೀನವಿಲ್ಲದಿದ್ದರೂ ಕಾಲುಗಳಿ ಲ್ಲದಿದ್ದರೂ ಮನೆ ಬಳಿಯೇ ಪಂಕ್ಚರ್ ಹಾಕುವ ವೃತ್ತಿ ಮೂಲಕ ಸ್ವಾವಲಂಬಿ ಜೀವನ ನಡೆಸು ತ್ತಿದ್ದ ವಿಕಲಚೇತನರೊಬ್ಬರು ಲಾಕ್‍ಡೌನ್ ನಿಂದ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ನಂಜನಗೂಡು ತಾಲೂಕು ಕೋಣನೂರು ಗ್ರಾಮದ ನಿವಾಸಿ ರಮೇಶ್ (40) ಹುಟ್ಟುತ್ತಲೇ ವಿಕಲಾಂಗರಾಗಿದ್ದು, ತನ್ನ ವೃತ್ತಿಯಿಂದ ಬರುವ ಆದಾಯದಲ್ಲೇ ಮಡದಿ ಜಯಮ್ಮರೊಂದಿಗೆ ನೆಮ್ಮದಿ ಯಿಂದಿದ್ದರು. ಕೂಲಿ ಕೆಲಸದೊಂದಿಗೆ…

ವ್ಯಕ್ತಿ ಹತ್ಯೆ ಪ್ರಕರಣ: ಇಬ್ಬರ ಬಂಧನ
ಮೈಸೂರು ಗ್ರಾಮಾಂತರ

ವ್ಯಕ್ತಿ ಹತ್ಯೆ ಪ್ರಕರಣ: ಇಬ್ಬರ ಬಂಧನ

April 7, 2020

ಮಲ್ಕುಂಡಿ, ಏ.6(ಚನ್ನಪ್ಪ)- ಜಮೀನಿಗೆ ದಾರಿ ಬಿಡುವ ವಿಚಾರದಲ್ಲಿ ಹಲ್ಲೆ ನಡೆಸಿ ವ್ಯಕ್ತಿ ಹತ್ಯೆಗೈದಿದ್ದ ಇಬ್ಬರು ಆರೋಪಿ ಗಳನ್ನು ಬಂಧಿಸುವಲ್ಲಿ ಹುಲ್ಲಹಳ್ಳಿ ಪೆÇಲೀಸರು ಯಶಸ್ವಿಯಾ ಗಿದ್ದು, ಮತ್ತೋರ್ವ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ. ನಂಜನಗೂಡು ತಾಲೂಕಿನ ರಾಜೂರು ಗ್ರಾಮದ ಅಶೋಕ್, ಚೇತನ್ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ ಪರಶಿವ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ. ಆರೋಪಿಗಳು ಜಮೀನಿಗೆ ದಾರಿ ಬಿಡುವ ವಿಚಾರದಲ್ಲಿ ಶನಿವಾರ ಆದೇ ಗ್ರಾಮದ, ದಾಯಾದಿಯೂ ಆದ ರಮೇಶ್ ಮೇಲೆ ಹಲ್ಲೆ ನಡೆÀಸಿ ಹತ್ಯೆಗೈದಿದ್ದರು ಎನ್ನಲಾಗಿದ್ದು, ಘಟನೆ…

ತಂಬಾಕು ಬೆಳೆಗಾರರ ಹಿತ ಕಾಯಲು ವಿಶ್ವನಾಥ್ ಆಗ್ರಹ
ಮೈಸೂರು ಗ್ರಾಮಾಂತರ

ತಂಬಾಕು ಬೆಳೆಗಾರರ ಹಿತ ಕಾಯಲು ವಿಶ್ವನಾಥ್ ಆಗ್ರಹ

April 6, 2020

ಹುಣಸೂರು, ಏ.5(ಕೆಕೆ)-ರಾಜ್ಯದಲ್ಲಿ ಪ್ರಸ್ತುತ 3 ಮಿಲಿಯನ್ ತಂಬಾಕು ಮಾರಾಟ ವಾಗದೆ ಉಳಿಕೆಯಾಗಿದ್ದು, ಕೇಂದ್ರ-ರಾಜ್ಯ ಸರ್ಕಾರಗಳು ಹಾಗೂ ರೈತ ಮುಖಂಡರು ಚರ್ಚಿಸಿ ಈ ಬಾರಿ ತಂಬಾಕು ಬೆಳೆ ರಜೆ ನೀಡಿ, ರೈತರಿಗೆ ಪರಿಹಾರ ಘೋಷಿಸು ವಂತೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ. ನಗರದ ಪತ್ರಕರ್ತರ ಸಂಘದ ಕಚೇರಿ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ತಂಬಾಕು ಮಾರುಕಟ್ಟೆ ಮುಗಿದರೂ ಸಹ 3 ಮಿಲಿಯನ್‍ನಷ್ಟು ತಂಬಾಕು ಬಾಕಿ ಉಳಿದು ರೈತರು ಕಂಗಾ ಲಾಗಿದ್ದಾರೆ. ಇದನ್ನು ಮಾರಾಟ ಮಾಡಲು ಅವಕಾಶ…

ಗೂಡ್ಸ್ ವಾಹನ ಪಲ್ಟಿ: ಇಬ್ಬರಿಗೆ ಗಾಯ
ಮೈಸೂರು ಗ್ರಾಮಾಂತರ

ಗೂಡ್ಸ್ ವಾಹನ ಪಲ್ಟಿ: ಇಬ್ಬರಿಗೆ ಗಾಯ

April 6, 2020

ಹುಣಸೂರು, ಏ.5(ಶೇಖರ್/ಕೆಕೆ)- ತರಕಾರಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಗುರುಪುರದ ಬಳಿ ಭಾನುವಾರ ನಡೆದಿದೆ. ಕೇರಳಾ ಮೂಲದ ತರಕಾರಿ ವ್ಯಾಪಾರಿ ಸುಬ್ಬರಾಯ(45) ಹಾಗೂ ಚಾಲಕ ಪ್ರಭಾಕರ್(38) ಗಾಯಗೊಂಡವರಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವ್ಯಾಪಾರಿ ಸುಬ್ಬರಾಯ ಹುಣಸೂರು ಎಪಿಎಂಸಿಯಲ್ಲಿ ತರಕಾರಿ ಖರೀಸಿ ತಮ್ಮ ಟಾಟಾ ಏಸ್(ಕೆಎಲ್58, ಸಿ3419)ನಲ್ಲಿ ಲೋಡ್ ಮಾಡಿಕೊಂಡು ಚಾಲಕ ಪ್ರಭಾಕರ್‍ರೊಂದಿಗೆ ಹುಣಸೂರು-ಎಚ್.ಡಿ.ಕೋಟೆ ಮುಖ್ಯರಸ್ತೆಯ ಮೂಲಕ ಕೇರಳಾಕ್ಕೆ ತೆರಳುತ್ತಿದ್ದರು. ಗುರುಪುರದ ಬಳಿ…

1 10 11 12 13 14 18
Translate »