ತಿ.ನರಸೀಪುರ, ಏ.2-ಹೋಂ ಕ್ವಾರೆಂಟೈನ್ ಸೀಲ್ ಹಾಕಲಾಗಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಸಂಚರಿಸುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ಪಟ್ಟಣದ ಶ್ರೀರಾಮಪುರ ಬೀದಿಯಲ್ಲಿ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಹೈದರಾಬಾದ್‍ನಿಂದ ಪಟ್ಟಣಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಪುರಸಭೆಯ 20ನೇ ವಾರ್ಡ್‍ನ(ಮಡಿವಾಳರ ಕಾಲೋನಿ)ತನ್ನ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಅವರನ್ನು ಗುರುತಿಸಿದ ತಾಲೂಕು ಆಡಳಿತ ಕ್ವಾರೆಂಟೈನ್ ಸೀಲ್ ಹಾಕಿ ಮನೆಯಿಂದ ಹೊರಹೋಗದಂತೆ ಸೂಚಿಸಿತ್ತು. ಆದರೆ ಆತ ಮನೆಯಿಂದ ಹೊರ ಬಂದು ನಿತ್ಯದ ಕೆಲಸಗಳಲ್ಲಿ ತೊಡಗಿದ್ದ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಸಂಬಂಧಿಸಿದ ಇಲಾಖೆಗಳಿಗೆ ಸುದ್ದಿ ಮುಟ್ಟಿಸಿದ್ದರು. ಆರೋಗ್ಯ ಮತ್ತು ಪೆÇೀಲೀಸ್ ಇಲಾಖಾಧಿಕಾರಿಗಳು ಸ್ಥಳಕ್ಕಾಗಮಿಸಿ ಆತನಿಗೆ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡಿ ಹೋಗಿದ್ದರು. ಎಚ್ಚರಿಕೆ ನಡುವೆಯೂ ಆತ ಗುರುವಾರ ಮತ್ತೆ ಬಡಾವಣೆಯಲ್ಲಿ ಸುತ್ತಾಟ ನಡೆಸಿದ್ದು, ತನ್ನ ಕಾಯಕ ಮುಂದುವರೆಸಿದ್ದಾನೆ ಎನ್ನಲಾಗಿದೆ. ಆತಂಕಗೊಂಡ ಸ್ಥಳೀಯರು ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದರೂ ಪೂರಕ ಸ್ಪಂದನೆ ಸಿಗಲಿಲ್ಲ. ಇದರಿಂದ ಬೇಸತ್ತ 20ನೇ ವಾರ್ಡ್ ಸದಸ್ಯ ಮೋಹನ್ ಇಂದು ತಾಲೂಕು ಕಚೇರಿಗೆ ತೆರಳಿ ಸೂಕ್ತ ಕ್ರಮಕ್ಕೆ ತಹಸೀಲ್ದಾರ್‍ರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ನಾಗೇಶ್, ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಪೆÇೀಲೀಸರಿಗೆ ಮಾಹಿತಿ ನೀಡಲಾಗಿದೆ. ಅವರು ಕೂಡಲೇ ಪರಿಶೀಲಿಸಿ, ಕ್ರಮ ಕೈಗೊಳ್ಳಲಿದ್ದು, ಆತಂಕಕ್ಕೊಳಗಾಗದಂತೆ ಭರವಸೆ ನೀಡಿದ್ದಾರೆ.
ತಿ.ನರಸೀಪುರ ಪುರಸಭಾ 20ನೇ ವಾರ್ಡ್‍ನ ಸದಸ್ಯ ಮೋಹನ್ ತಹಸೀಲ್ದಾರ್ ನಾಗೇಶ್‍ರಿಗೆ ಮನವಿ ಸಲ್ಲಿಸಿದರು.