ಕಲ್ಲಂಗಡಿ ಬೆಳೆ ರೈತ ಕಾಂಗಾಲು
ಮೈಸೂರು ಗ್ರಾಮಾಂತರ

ಕಲ್ಲಂಗಡಿ ಬೆಳೆ ರೈತ ಕಾಂಗಾಲು

April 3, 2020

ಮಲ್ಕುಂಡಿ, ಏ.2(ಚನ್ನಪ್ಪ)-ಕೊರೊನಾ ಭೀತಿ ಹಿನ್ನೆಲೆಯಲ್ಲಿ ಎಲ್ಲಡೆ ಲಾಕ್‍ಡೌನ್ ಜಾರಿಯಲ್ಲಿದೆ. ಇದರಿಂದ ಕೊಳ್ಳುವವರಿಲ್ಲದೆ ಕಲ್ಲಂಗಡಿ ಬೆಳೆದ ರೈತ ಕಂಗಾಲಾಗಿದ್ದಾರೆ.

ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಲ್ಲಿ ರೈತ ಮಂಜುನಾಥ್ ತಮ್ಮ 2 ಎಕರೆ ಜಮೀನಿನಲ್ಲಿ ಸುಮಾರು ಆರೇಳು ಲಕ್ಷ ರೂ. ಸಾಲ ಸೋಲ ಮಾಡಿ ಕಲ್ಲಂಗಡಿ ಬೇಸಾಯ ಮಾಡಿದ್ದರು. ಸದ್ಯ ಫಸಲು ಕಟಾವಿಗೆ ಬಂದಿದ್ದು, ಕೊರೊನಾ ವೈರಸ್ ಭೀತಿ, ಲಾಕ್‍ಡೌನ್‍ನಿಂದ ಕೊಳ್ಳುವವರಿಲ್ಲದ ಕಾರಣ ಕೋಯ್ಲು ಮಾಡದೆ ಕಲ್ಲಂಗಡಿ ಫಸಲು ಬಿಸಿಲು ತಾಪಕ್ಕೆ ಸಂಪೂರ್ಣ ನಾಶವಾಗುತ್ತಿದ್ದು, ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಇದರಿಂದ ಬೇಸಾಯಕ್ಕೆ ಮಾಡಿದ್ದ ಸಾಲ ತೀರಿಸಲು ಸಾಧ್ಯವಾಗದೆ ಮಂಜುನಾಥ್ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

Translate »