ಮೈಸೂರು

ನಾಳೆ ವೇಲುಕ್ಕುಡಿ ಕೃಷ್ಣನ್ ಸ್ವಾಮಿಯವರಿಂದ ವಿಶೇಷ ಉಪನ್ಯಾಸ
ಮೈಸೂರು

ನಾಳೆ ವೇಲುಕ್ಕುಡಿ ಕೃಷ್ಣನ್ ಸ್ವಾಮಿಯವರಿಂದ ವಿಶೇಷ ಉಪನ್ಯಾಸ

May 3, 2019

ಮೈಸೂರು: ಮೈಸೂರಿನ ನಗರದಜಯಲಕ್ಷ್ಮೀಪುರಂ, ಕಾಳಿದಾಸ ರಸ್ತೆಯ ಲ್ಲಿರುವ ಮೇಲು ಕೋಟೆಯ ಯದು ಗಿರಿಯತಿ ರಾಜ ಶಾಖಾ ಮಠ ದಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೇ 5ರಂದು ಬೆಳಿಗ್ಗೆ 10.30ಕ್ಕೆ ನಾಡಿನ ಪ್ರಖ್ಯಾತ ಉಪನ್ಯಾಸಕ ಶ್ರೀ ವೇಲು ಕ್ಕುಡಿ ಕೃಷ್ಣನ್ ಸ್ವಾಮಿಯವರಿಂz À‘ಯಾದವಾದ್ರಿ ನರಸಿಂಹ ಮಹಾತ್ಮೆ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೆ.ಆರ್. ಯೋಗಾನರಸಿಂಹನ್ (ಮುರುಳಿ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐದು ಕಡೆ ವೃದ್ಧೆಯರ ಸರ ಕಿತ್ತುಕೊಂಡು ಪರಾರಿ
ಮೈಸೂರು

ಐದು ಕಡೆ ವೃದ್ಧೆಯರ ಸರ ಕಿತ್ತುಕೊಂಡು ಪರಾರಿ

May 3, 2019

ಮೈಸೂರು: ಮೈಸೂರು ನಗರದಲ್ಲಿ ಸರಗಳವು ತುಂಬಾ ಆಘಾತಕಾರಿ ಹಂತ ತಲುಪಿದೆ. ಇದು ನಾಗರಿಕರನ್ನು ಆತಂಕಕ್ಕೀಡು ಮಾಡಿದೆ. ಅದರಲ್ಲೂ ಮಹಿಳೆಯರು ಚಿನ್ನದ ಸರ ಧರಿಸಿ ರಸ್ತೆಯಲ್ಲಿ ಹಗಲು ವೇಳೆ ಯಲ್ಲೂ ಓಡಾಡುವುದೇ ಕಷ್ಟ ಎನ್ನುವಂತಾಗಿದೆ. ಅಪರಿಚಿತ ಬೈಕ್ ಸವಾರರಿಬ್ಬರು ಗುರುವಾರ ಬೆಳಿಗ್ಗೆ ಕೇವಲ ಒಂದೂವರೆ ಗಂಟೆ ಯಲ್ಲಿ 5 ಕಡೆ ವಯಸ್ಸಾದ ಮಹಿಳೆಯರ ಕೊರಳಿಂದ ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಐದೂ ಪ್ರಕರಣಗಳಲ್ಲಿ ವೃದ್ಧೆಯರನ್ನೇ ಗುರಿಯಾಗಿಸಿ ಸರಗಳ್ಳರು ಕೈಚಳಕ ತೋರಿರುವುದು ಹಿರಿಯ ನಾಗರಿಕರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಮೈಸೂರಿನ…

ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ
ಮೈಸೂರು

ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ

May 3, 2019

ಬೆಂಗಳೂರು: ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅನಾರೋಗ್ಯದಿಂದ ಇಂದಿಲ್ಲಿ ನಿಧನ ಹೊಂದಿದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಹಿರಣ್ಣಯ್ಯ ಅವರು ಪತ್ನಿ ಹಾಗೂ ಐವರು ಮಕ್ಕಳು, ಅಪಾರ ಬಂಧುವರ್ಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಶ್ರೀನಾಥ್, ದೇವರಾಜ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಶಿವರಾಮ್, ಸುಂದರ್ ರಾಜ್ ಸೇರಿದಂತೆ ಚಿತ್ರೋದ್ಯಮದ ಅನೇಕ ಗಣ್ಯರು ಮಾಸ್ಟರ್ ಹಿರಣ್ಣಯ್ಯ ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಸಕಲ ವಿಧಿ-ವಿಧಾನಗಳೊಂದಿಗೆ ಹಿರಣ್ಣಯ್ಯ ಅವರ…

ನಂಜನಗೂಡು ನಗರಸಭೆ, ಕೆ.ಆರ್.ನಗರ, ಬನ್ನೂರು, ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಗುಂಡ್ಲುಪೇಟೆ ಪುರಸಭೆಗೆ ಮೇ 29ಕ್ಕೆ ಚುನಾವಣೆ
ಮೈಸೂರು

ನಂಜನಗೂಡು ನಗರಸಭೆ, ಕೆ.ಆರ್.ನಗರ, ಬನ್ನೂರು, ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಗುಂಡ್ಲುಪೇಟೆ ಪುರಸಭೆಗೆ ಮೇ 29ಕ್ಕೆ ಚುನಾವಣೆ

May 3, 2019

ಮೈಸೂರು: ರಾಜ್ಯ ಚುನಾವಣಾ ಆಯೋಗವು ರಾಜ್ಯದ 63 ಸ್ಥಳೀಯ ಸಂಸ್ಥೆ ಗಳ ಚಾನ್ಸಿಲರ್‍ಗಳ ಆಯ್ಕೆಗಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. 8 ನಗರಸಭೆ, 33 ಪುರಸಭೆ ಮತ್ತು 22 ಪಟ್ಟಣ ಪಂಚಾಯಿತಿಗಳಿಗೆ ಮೇ 29ರಂದು ಚುನಾವಣೆ ನಡೆಯಲಿದೆ. ಆಯಾ ಜಿಲ್ಲಾಧಿ ಕಾರಿಗಳು ಮೇ 9ರಂದು ಅಧಿಸೂಚನೆ ಹೊರಡಿ ಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮೇ 16ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 17ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು,…

ಆಸ್ತಿ ವಿವರ ಘೋಷಿಸದ 26 ಗ್ರಾಪಂ ಸದಸ್ಯರ ಸದಸ್ಯತ್ವ ರದ್ದು
ಮೈಸೂರು

ಆಸ್ತಿ ವಿವರ ಘೋಷಿಸದ 26 ಗ್ರಾಪಂ ಸದಸ್ಯರ ಸದಸ್ಯತ್ವ ರದ್ದು

May 3, 2019

ಬೆಂಗಳೂರು: ಆಸ್ತಿ ವಿವರ ಘೋಷಣೆ ಮಾಡಿ ಕೊಳ್ಳದ 26 ಗ್ರಾಮ ಪಂಚಾಯತ್ ಸದಸ್ಯರ ಸದಸ್ಯತ್ವ ರದ್ದುಪಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ಇಂದಿಲ್ಲಿ ತಿಳಿಸಿದ್ದಾರೆ. ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಅನ್ವಯ ಪ್ರತಿ ವರ್ಷ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಘೋಷಿಸಿಕೊಳ್ಳಬೇಕಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಕಾಸ್ ನೋಟೀಸ್ ನಂತರವೂ ಆಸ್ತಿ ವಿವರ ನೀಡದ 26 ಮಂದಿ ಸದಸ್ಯತ್ವವನ್ನು ಅನರ್ಹಗೊಳಿಸ ಲಾಗಿದೆ ಎಂದರು. ಕಳೆದ ವರ್ಷ ದಿಂದ ಆನ್‍ಲೈನ್‍ನಲ್ಲೂ ಆಸ್ತಿ ವಿವರ ಘೋಷಿಸಲು…

ಕೊಡವ ಭಾಷೆ ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರ್ಪಡೆ, ಭಾಷಾ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಹೋರಾಟ
ಮೈಸೂರು

ಕೊಡವ ಭಾಷೆ ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರ್ಪಡೆ, ಭಾಷಾ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಹೋರಾಟ

May 3, 2019

ಮೈಸೂರು: ಸಂವಿಧಾನದ 8ನೇ ಪರಿಚ್ಛೇದಕ್ಕೆ ಕೊಡವ ಭಾಷೆ ಸೇರ್ಪಡೆ ಹಾಗೂ ಕೊಡವ ಸಮುದಾಯಕ್ಕೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸುವ ಸಲುವಾಗಿ ಕೊಡವ ತಕ್ಕ್ ಎಳ್ತ್‍ಕಾರಡ ಕೂಟ ನಿರಂತರ ಪ್ರಯತ್ನದಲ್ಲಿದೆ ಎಂದು ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ತಿಳಿಸಿದರು. ಮೈಸೂರು ಕೊಡವ ಸಮಾಜ, ಮಡಿಕೇರಿಯ ಕೊಡವ ತಕ್ಕ್ ಎಳ್ತ್‍ಕಾರಡ ಕೂಟ, ಲೋಪಮುದ್ರೆ ಕೊಡವ ಸಂಘದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ವಿಜಯನಗರದಲ್ಲಿರುವ ಮೈಸೂರು ಕೊಡವ ಸಮಾಜದ ಸಭಾಂಗಣದಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕೊಡವ…

ಮೈತ್ರಿ ಕಾರ್ಯಕರ್ತರಲ್ಲಿ ವ್ಯತ್ಯಾಸವಿದ್ದರೂ ನನ್ನದೇ ಗೆಲುವು: ವಿಜಯಶಂಕರ್ ಸ್ಪಷ್ಟನೆ
ಮೈಸೂರು

ಮೈತ್ರಿ ಕಾರ್ಯಕರ್ತರಲ್ಲಿ ವ್ಯತ್ಯಾಸವಿದ್ದರೂ ನನ್ನದೇ ಗೆಲುವು: ವಿಜಯಶಂಕರ್ ಸ್ಪಷ್ಟನೆ

May 3, 2019

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ವೋಟ್ ಮಾಡಿದ್ದಾರೆ. ಇದರಿಂದ ಮೈತ್ರಿ ಅಭ್ಯರ್ಥಿಗೆ ಹಿನ್ನಡೆ ಯಾಗಿದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಓಟ್ ಹಾಕಿ ದ್ದಾರೆ ಎಂದು ಸಚಿವ ಜಿ.ಟಿ.ದೇವೇಗೌಡ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಮೈತ್ರಿ ಹೇಳಿಕೆ ಯಲ್ಲ. ನಾನು ಈ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ. ಆ ವಿಶ್ವಾಸ…

ಬೀನ್ಸ್ ಕೆಜಿಗೆ ರೂ.80, ಟೊಮೆಟೋ ರೂ.40, ಬಟಾಣಿ ರೂ.120ರಿಂದ 140
ಮೈಸೂರು

ಬೀನ್ಸ್ ಕೆಜಿಗೆ ರೂ.80, ಟೊಮೆಟೋ ರೂ.40, ಬಟಾಣಿ ರೂ.120ರಿಂದ 140

May 3, 2019

ಮೈಸೂರು: ಮೈಸೂರು ಜನತೆಗೆ ಬಿಸಿಲ ತಾಪದ ಜೊತೆಗೆ ತರಕಾರಿಗಳ ದರವೂ ಕೈ ಸುಡುತ್ತಿದೆ. ಒಂದು ವಾರದಿಂದಲೂ ತರಕಾರಿ ಬೆಲೆಗಳಲ್ಲಿ ಏರಿಳಿತ ಕಂಡು ಬರುತ್ತಿದ್ದು, ಇಳಿತಕ್ಕಿಂತ ಏರಿಕೆಯೇ ಹೆಚ್ಚಾಗಿದೆ. ಮೈಸೂರಿನಲ್ಲಿ ಕಳೆದ ವಾರ ಪ್ರತಿ ಕೆಜಿಗೆ ರೂ.100ರ ಗಡಿ ದಾಟಿದ್ದ ಬೀನ್ಸ್ ಇಂದು ರೂ.80ಕ್ಕೆ ಇಳಿದಿದ್ದರೂ ಗ್ರಾಹಕರು ಅನಿವಾರ್ಯವಾಗಿ ಕೊಳ್ಳಲೇ ಬೇಕಾದ ಪರಿಸ್ಥಿತಿಗೆ ಒಳಗಾಗಿದ್ದಾರೆ. ಮೈಸೂರಿನ ಪ್ರಮುಖ ದೇವರಾಜ ಮಾರುಕಟ್ಟೆಯಲ್ಲಿ ಗುರುವಾರ ಬೀನ್ಸ್ ರೂ.80ಕ್ಕೆ ಮಾರಾಟವಾಗುತ್ತಿತ್ತು. ಕಳೆದ ವಾರ ರೂ.50ರ ಗಡಿ ದಾಟಿದ್ದ ಟೊಮೆಟೊ ಇಂದು 30ರಿಂದ 40ರ…

ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಲಕ್ಷ ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪ
ಮೈಸೂರು

ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಲಕ್ಷ ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪ

May 3, 2019

ಮೈಸೂರು: ಸರ್ಕಾರಿ ಹಾಗೂ ಬ್ಯಾಂಕ್‍ಗಳಲ್ಲಿ ಉದ್ಯೋಗ ಕೊಡಿಸುವುದಾಗಿ ವಿದ್ಯಾ ವಂತ ಯುವಕರಿಂದ ಹಣ ವಸೂಲಿ ಮಾಡಿ, ವಂಚಿ ಸುವ ಜಾಲವೊಂದು ಮೈಸೂರಲ್ಲಿ ಕಾರ್ಯನಿರತ ವಾಗಿದೆ. 9 ಮಂದಿಯ ತಂಡ ಹಲವರಿಂದ ಲಕ್ಷಾಂ ತರ ರೂ. ವಸೂಲಿ ಮಾಡಿ ತಲೆ ಮರೆಸಿಕೊಂಡಿರುವ ಪ್ರಕರಣ, ತಡವಾಗಿ ಬೆಳಕಿಗೆ ಬಂದಿದೆ. ವಂಚಕರ ಮಾತಿಗೆ ಮರುಳಾಗಿ ಉದ್ಯೋಗ ಗಿಟ್ಟಿಸಿ ಕೊಳ್ಳುವ ಆಸೆಯಿಂದ ಲಕ್ಷ ಲಕ್ಷ ನೀಡಿ ಮೋಸ ಹೋಗಿ ರುವ ಮಳವಳ್ಳಿ ನಿವಾಸಿ ಪವಿತ್ರ, ವಂಚಕರ ಜಾಲಕ್ಕೆ ಇನ್ನಷ್ಟು ಅಮಾಯಕರು ಬಲಿಯಾಗುವುದನ್ನು ತಪ್ಪಿಸಲು…

ನಿಯಮಾವಳಿ ಗಾಳಿಗೆ ತೂರಿ ಎಂಪಿಎಡ್ ಕೋರ್ಸ್ ನಡೆಸುತ್ತಿರುವ ಸಂಸ್ಥೆ ವಿರುದ್ಧ ಪ್ರತಿಭಟನೆ
ಮೈಸೂರು

ನಿಯಮಾವಳಿ ಗಾಳಿಗೆ ತೂರಿ ಎಂಪಿಎಡ್ ಕೋರ್ಸ್ ನಡೆಸುತ್ತಿರುವ ಸಂಸ್ಥೆ ವಿರುದ್ಧ ಪ್ರತಿಭಟನೆ

May 3, 2019

ಮೈಸೂರು: ಎಜುಕೇ ಷನ್ ಟ್ರಸ್ಟ್‍ವೊಂದು ನಿಯಮಗಳನ್ನು ಗಾಳಿಗೆ ತೂರಿ ಎಂಪಿಎಡ್ (ದೈಹಿಕ ಶಿಕ್ಷಣ) ಕೋರ್ಸ್ ನಡೆಸುತ್ತಿದೆ ಎಂದು ಆರೋ ಪಿಸಿ ಮೈಸೂರು ವಿಶ್ವವಿದ್ಯಾನಿಲಯದ ಎಂಪಿಎಡ್ ಹಾಗೂ ಬಿಪಿಎಡ್ ವಿದ್ಯಾರ್ಥಿ ಗಳು ಗುರುವಾರ ಪ್ರತಿಭಟನೆ ನಡೆಸಿದರು. ಮೈಸೂರು ವಿವಿಯ ಕ್ರಾಫರ್ಡ್ ಭವ ನದ ಎದುರು ಜಮಾಯಿಸಿದ ಪ್ರತಿಭಟ ನಾಕಾರರು, ಮಂಡ್ಯ ಜಿಲ್ಲೆಯ ಪಾಂಡವ ಪುರದ ಎಜುಕೇಷನ್ ಟ್ರಸ್ಟ್‍ವೊಂದು ವಿಶ್ವ ವಿದ್ಯಾನಿಲಯದ ನಿಯಮ ಉಲ್ಲಂಘಿಸಿ ಎಂಪಿಎಡ್ ಕೋರ್ಸ್ ನಡೆಸುತ್ತಿದೆ ಎಂದು ಸದರಿ ಟ್ರಸ್ಟ್ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ…

1 1,012 1,013 1,014 1,015 1,016 1,611
Translate »