ನಂಜನಗೂಡು ನಗರಸಭೆ, ಕೆ.ಆರ್.ನಗರ, ಬನ್ನೂರು, ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಗುಂಡ್ಲುಪೇಟೆ ಪುರಸಭೆಗೆ ಮೇ 29ಕ್ಕೆ ಚುನಾವಣೆ
ಮೈಸೂರು

ನಂಜನಗೂಡು ನಗರಸಭೆ, ಕೆ.ಆರ್.ನಗರ, ಬನ್ನೂರು, ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಗುಂಡ್ಲುಪೇಟೆ ಪುರಸಭೆಗೆ ಮೇ 29ಕ್ಕೆ ಚುನಾವಣೆ

May 3, 2019

ಮೈಸೂರು: ರಾಜ್ಯ ಚುನಾವಣಾ ಆಯೋಗವು ರಾಜ್ಯದ 63 ಸ್ಥಳೀಯ ಸಂಸ್ಥೆ ಗಳ ಚಾನ್ಸಿಲರ್‍ಗಳ ಆಯ್ಕೆಗಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.

8 ನಗರಸಭೆ, 33 ಪುರಸಭೆ ಮತ್ತು 22 ಪಟ್ಟಣ ಪಂಚಾಯಿತಿಗಳಿಗೆ ಮೇ 29ರಂದು ಚುನಾವಣೆ ನಡೆಯಲಿದೆ. ಆಯಾ ಜಿಲ್ಲಾಧಿ ಕಾರಿಗಳು ಮೇ 9ರಂದು ಅಧಿಸೂಚನೆ ಹೊರಡಿ ಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮೇ 16ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 17ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು, ಮೇ 29ರಂದು ಬೆಳಿಗ್ಗೆ 7 ಗಂಟೆ ಯಿಂದ ಸಂಜೆ 5 ಗಂಟೆವರೆಗೆ ಚುನಾವಣೆ ನಡೆಯಲಿದೆ. ಮೇ 31ರಂದು ಬೆಳಿಗ್ಗೆ 8 ಗಂಟೆಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಘೋಷಣೆಯಾಗ ಲಿದೆ. ಮೈಸೂರು ಜಿಲ್ಲೆಯ ನಂಜನಗೂಡು ನಗರಸಭೆ, ಕೆ.ಆರ್.ನಗರ ಮತ್ತು ಬನ್ನೂರು ಪುರಸಭೆಗಳಿಗೆ ಚುನಾವಣೆ ನಡೆಯಲಿದೆ. ನಂಜನಗೂಡು  ನಗರಸಭೆಯಲ್ಲಿ 31 ವಾರ್ಡ್‍ಗಳಿದ್ದು, 41 ಮತಗಟ್ಟೆ ಸ್ಥಾಪಿಸಲಾಗುತ್ತಿದೆ.21507 ಪುರುಷರು, 20963 ಮಹಿಳೆಯರು ಮತ್ತು ನಾಲ್ವರು ಇತರರು ಸೇರಿ ಒಟ್ಟು 42480 ಮತದಾರರಿದ್ದಾರೆ. ಕೆ.ಆರ್.ನಗರ ಪುರಸಭೆಯಲ್ಲಿ 23 ವಾರ್ಡ್‍ಗಳಿದ್ದು, 23 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. 15117 ಪುರುಷರು, 15373 ಮಹಿಳೆಯರು ಮತ್ತು ಐವರು ಇತರರು ಸೇರಿ ಒಟ್ಟು 30495 ಮತದಾರರಿದ್ದಾರೆ. ಬನ್ನೂರು ಪುರಸಭೆಯಲ್ಲಿ 23 ವಾರ್ಡ್‍ಗಳಿದ್ದು, 23 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. 10054 ಪುರುಷರು, 10236 ಮಹಿಳೆಯರು ಓರ್ವ ಇತರರು ಸೇರಿ ಒಟ್ಟು 20291 ಮತದಾರರಿದ್ದಾರೆ.

ಹಾಸನ ಜಿಲ್ಲೆಯ ಆಲೂರು ಮತ್ತು ಅರಕಲಗೂಡು ಪಪಂಗಳಿಗೆ ಚುನಾವಣೆ ನಡೆಯಲಿದೆ. ಆಲೂರು ಪಪಂನಲ್ಲಿ 11 ವಾರ್ಡ್‍ಗಳಿದ್ದು, 2617 ಪುರುಷರು, 2595 ಮಹಿಳೆಯರು ಸೇರಿ ಒಟ್ಟು 5212 ಮತದಾರರಿದ್ದಾರೆ. ಅರಕಲಗೂಡು ಪಪಂನಲ್ಲಿ 17 ವಾರ್ಡ್‍ಗಳಿದ್ದು, 6528 ಪುರುಷರು, 6332 ಮಹಿಳೆಯರು ಸೇರಿ ಒಟ್ಟು 12860 ಮತದಾರರಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ, ಕೆ.ಆರ್.ಪೇಟೆ ಮತ್ತು ಶ್ರೀರಂಗಪಟ್ಟಣ ಪುರಸಭೆಗಳಿಗೆ ಚುನಾವಣೆ ನಡೆಯಲಿದೆ. ಮಳವಳ್ಳಿ ಪುರಸಭೆಯಲ್ಲಿ 23 ವಾರ್ಡ್‍ಗಳಿದ್ದು, 29 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. 15096 ಪುರುಷರು, 15780 ಮಹಿಳೆಯರು ಮತ್ತು 7 ಇತರರು ಸೇರಿ ಒಟ್ಟು 30883 ಮತದಾರರಿದ್ದಾರೆ. ಕೆ.ಆರ್.ಪೇಟೆ ಪುರಸಭೆಯಲ್ಲಿ 23 ವಾರ್ಡ್‍ಗಳಿದ್ದು, 23 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. 9826 ಪುರುಷರು, 9775 ಮಹಿಳೆಯರು ಸೇರಿ ಒಟ್ಟು 19601 ಮತದಾರರಿದ್ದಾರೆ. ಶ್ರೀರಂಗಪಟ್ಟಣ ಪುರಸಭೆಯಲ್ಲಿ 23 ವಾರ್ಡ್‍ಗಳಿದ್ದು, 23 ಮತಗಟ್ಟೆ ಸ್ಥಾಪಿಸಲಾಗುತ್ತಿದೆ. 9336 ಪುರುಷರು, 9958 ಮಹಿಳೆಯರು ಸೇರಿ ಒಟ್ಟು 19294 ಮತದಾರರಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪುರಸಭೆ, ಯಳಂದೂರು ಮತ್ತು ಹನೂರು ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಗುಂಡ್ಲುಪೇಟೆ ಪುರಸಭೆಯಲ್ಲಿ 23 ವಾರ್ಡ್‍ಗಳಿದ್ದು, 10372 ಪುರುಷರು, 10794 ಮಹಿಳೆಯರು, ನಾಲ್ವರು ಇತರರು ಸೇರಿ ಒಟ್ಟು 21170 ಮತದಾರರಿದ್ದಾರೆ. ಯಳಂದೂರು ಪಪಂನಲ್ಲಿ 11 ವಾರ್ಡ್‍ಗಳಿದ್ದು, 3372 ಪುರುಷರು, 3554 ಮಹಿಳೆಯರು ಸೇರಿ ಒಟ್ಟು 6926 ಮತದಾರರಿದ್ದಾರೆ. ಹನೂರು ಪಪಂನಲ್ಲಿ 13 ವಾರ್ಡ್‍ಗಳಿದ್ದು 4425 ಪುರುಷರು, 4442 ಮಹಿಳೆಯರು ಸೇರಿ ಒಟ್ಟು 8869 ಮತದಾರರಿದ್ದಾರೆ. ನಗರಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 2 ಲಕ್ಷ ರೂ., ಪುರಸಭೆ ಅಭ್ಯರ್ಥಿಗಳಿಗೆ 1.5 ಲಕ್ಷ ರೂ. ಮತ್ತು ಪಪಂ ಅಭ್ಯರ್ಥಿಗಳಿಗೆ 1 ಲಕ್ಷ ರೂ. ಚುನಾವಣಾ ವೆಚ್ಚ ನಿಗದಿಪಡಿಸಲಾಗಿದೆ.

Translate »