ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಲಕ್ಷ ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪ
ಮೈಸೂರು

ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಲಕ್ಷ ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪ

May 3, 2019

ಮೈಸೂರು: ಸರ್ಕಾರಿ ಹಾಗೂ ಬ್ಯಾಂಕ್‍ಗಳಲ್ಲಿ ಉದ್ಯೋಗ ಕೊಡಿಸುವುದಾಗಿ ವಿದ್ಯಾ ವಂತ ಯುವಕರಿಂದ ಹಣ ವಸೂಲಿ ಮಾಡಿ, ವಂಚಿ ಸುವ ಜಾಲವೊಂದು ಮೈಸೂರಲ್ಲಿ ಕಾರ್ಯನಿರತ ವಾಗಿದೆ. 9 ಮಂದಿಯ ತಂಡ ಹಲವರಿಂದ ಲಕ್ಷಾಂ ತರ ರೂ. ವಸೂಲಿ ಮಾಡಿ ತಲೆ ಮರೆಸಿಕೊಂಡಿರುವ ಪ್ರಕರಣ, ತಡವಾಗಿ ಬೆಳಕಿಗೆ ಬಂದಿದೆ.

ವಂಚಕರ ಮಾತಿಗೆ ಮರುಳಾಗಿ ಉದ್ಯೋಗ ಗಿಟ್ಟಿಸಿ ಕೊಳ್ಳುವ ಆಸೆಯಿಂದ ಲಕ್ಷ ಲಕ್ಷ ನೀಡಿ ಮೋಸ ಹೋಗಿ ರುವ ಮಳವಳ್ಳಿ ನಿವಾಸಿ ಪವಿತ್ರ, ವಂಚಕರ ಜಾಲಕ್ಕೆ ಇನ್ನಷ್ಟು ಅಮಾಯಕರು ಬಲಿಯಾಗುವುದನ್ನು ತಪ್ಪಿಸಲು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ. ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಈ 9 ವಂಚಕರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಚಾಮುಂಡಿಪುರಂ ನಿವಾಸಿ ಶಿವಶಂಕರ್ ಎಂಬುವರ ಪತ್ನಿ ರಮಾಮಣಿ, ಕಾವ್ಯ, ಶಿವಶಂಕರ್, ಅಜಯ್, ಮಧುಸೂದನ್, ರಾಜಲಕ್ಷ್ಮಿ, ಭಾಸ್ಕರ್, ಶಾಲಿನಿ, ಗುರುಶಂಕರ್ ಎಂಬುವರ ವಿರುದ್ಧ ಐಪಿಸಿ 1860, 417, 419, 420, 506 ಹಾಗೂ 34ರ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

ಹುಡುಕಿ ಮನೆ ಬಾಗಿಲಿಗೆ ಬರುವ ವಂಚಕರು: ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದು ಕೆಲಸ ಕ್ಕಾಗಿ ಹುಡುಕಾಡುತ್ತಿರುವ ಯುವಕ-ಯುವತಿಯ ರನ್ನೇ ಗುರಿಯಾಗಿಸಿಕೊಂಡು ಈ ವಂಚಕರ ತಂಡ ಅವರಿಂದ ಲಕ್ಷಾಂತರ ರೂ. ವಸೂಲಿ ಮಾಡಿರು ವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಮುಖ ಆರೋಪಿ ಯಾಗಿರುವ ರಮಾಮಣಿ ಪ್ರತಿಷ್ಠಿತ ಬ್ಯಾಂಕ್‍ನಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದಾರೆಂದು ಹೇಳಲಾಗಿದೆ. ಕಾವ್ಯ ಎಂಬುವರನ್ನು ಪರಿಚಯಿಸಿ, ವಿವಿಧ ಬ್ಯಾಂಕ್‍ಗಳಲ್ಲಿ ಪ್ರೊಬೆಷನರಿ ಆಫೀಸರ್ ಹುದ್ದೆ ಕೊಡಿಸುತ್ತಾರೆ. ಈಗಾ ಗಲೇ ಹಲವರಿಗೆ ಉದ್ಯೋಗ ಕೊಡಿಸಿದ್ದಾರೆ ಎಂದು ನಿರುದ್ಯೋಗಿ ಯುವಕ-ಯುವತಿಯರಿಗೆ ಕೆಲಸದ ಆಸೆ ಹುಟ್ಟಿಸಿ, 5 ಲಕ್ಷ ರೂ. ಬೇಡಿಕೆ ಇಡುತ್ತಾರೆ. ಒಮ್ಮೆ ಸಂಪ ರ್ಕಿಸಿದವರ ವಿಳಾಸವನ್ನು ಪಡೆದುಕೊಳ್ಳುವ ಇವರು ಪದೇ ಪದೆ ಕರೆ ಮಾಡಿ, ಕೆಲಸ ಕೊಡಿಸುವುದಾಗಿ ಹೇಳಿ ಅವರನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಪರೀಕ್ಷೆಯಿದೆ: ಹಣ ಪಡೆದವರಿಗೆ ಆರೋಪಿಗಳು ಮುಂದಿನ ತಿಂಗಳು ಪರೀಕ್ಷೆಯಿದೆ. ಪ್ರವೇಶ ಪತ್ರ, ಗುರು ತಿನ ಚೀಟಿ ನಿಮಗೆ ತಲುಪುತ್ತದೆ. ಪರೀಕ್ಷೆಯಲ್ಲಿ ಪಾಸಾ ಗದೇ ಇದ್ದರೂ ಮ್ಯಾನೇಜ್‍ಮೆಂಟ್ ಕೋಟಾದಡಿ ನಿಮಗೆ ಉದ್ಯೋಗ ದೊರೆಯಲಿದೆ ಎಂದು ನಂಬಿಸಿದ್ದಾರೆ. ಅಲ್ಲದೆ ವಾಟ್ಸಾಪ್‍ನಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲ ಸಂದೇಶವನ್ನು ರವಾನಿಸಿದ್ದಾರೆ. ಇದನ್ನು ನಂಬಿ ಕೊಂಡು ಹಣ ನೀಡಿದವರು ಇದೀಗ ಸಂಕಷ್ಟಕ್ಕೆ ಸಿಲುಕಿ ನರಳಾಡುತ್ತಿದ್ದಾರೆ.

2 ವರ್ಷದ ಬಳಿಕ: ಉದ್ಯೋಗ ಕೊಡಿಸುವುದಾಗಿ ಈ ವಂಚಕರು 2017ರ ನವೆಂಬರ್ ತಿಂಗಳಲ್ಲೇ ಹಣ ಪಡೆದಿದ್ದಾರೆ. ಅಲ್ಲದೆ ಬೇರೆ ಬೇರೆಯವರನ್ನು ಪರಿಚಯ ಮಾಡಿಕೊಟ್ಟರೆ ನಿಮಗೆ 50 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೂ ಕಮೀಷನ್ ನೀಡುವುದಾಗಿ ಕೆಲವ ರಿಗೆ ಆಮಿಷವೊಡ್ಡಿದ್ದಾರೆ. ಇವರ ಮಾತನ್ನು ನಂಬಿ ದವರು ತಮಗೆ ಪರಿಚಯವಿರುವ ಉದ್ಯೋಗಾಕಾಂಕ್ಷಿ ಗಳಿಂದ ಹಣ ಕೊಡಿಸಿ, ಈಗ ಪೇಚಿಗೆ ಸಿಲುಕಿದ್ದಾರೆ.

ಮೋಸ ಹೋಗಬೇಡಿ: ಉದ್ಯೋಗ ಸಿಗುವ ನಿರೀಕ್ಷೆ ಯಲ್ಲಿ 5 ಲಕ್ಷ ರೂ. ನೀಡಿ ಮೋಸ ಹೋಗಿ, ವಂಚಕರ ಜಾಲದ ವಿರುದ್ಧ ದೂರು ದಾಖಲಿಸಿರುವ ಮಳವಳ್ಳಿ ನಿವಾಸಿ ಪವಿತ್ರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 2 ವರ್ಷಗಳಿಂದ ಕೆಲಸಕ್ಕಾಗಿ ಕಾಯುತ್ತಿದ್ದೆವು. ಆದರೆ ನಾವು ಮೋಸ ಹೋಗಿರುವುದು ಈಗ ಅರಿವಾಗಿದೆ. 1 ವರ್ಷದಿಂದ ನಾವು ರಮಾಮಣಿ, ಕಾವ್ಯ ಅವರನ್ನು ಸಂಪರ್ಕಿಸಿ ಕೆಲಸದ ಬಗ್ಗೆ ಕೇಳಿದರೆ ಇಲ್ಲಸಲ್ಲದ ಸಬೂಬು ಹೇಳುತ್ತಾ ಬಂದಿ ದ್ದಾರೆ. ಕಳೆದ 6 ತಿಂಗಳ ಹಿಂದೆ ದೂರು ನೀಡಲು ಹೋದಾಗ ಕೆಲಸ ಕೊಡಿಸಲು ಸಾಧ್ಯವಾಗಿಲ್ಲ. ಪಡೆದ ಹಣವನ್ನು ಹಿಂದಿರುಗಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಹಣ ವಾಪಸ್ಸು ನೀಡಲು ಕೇಳಿದ್ದ ಸಮಯ ಮೀರಿ ಸಾಕಷ್ಟು ದಿನವಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆಯೂ ಮತ್ತಷ್ಟು ಮಂದಿ ನಿರುದ್ಯೋಗಿ ಗಳಿಗೆ ವಂಚಿಸುವುದಕ್ಕೆ ಪ್ರಯತ್ನಿಸುತ್ತಲೇ ಇದ್ದಾರೆ. ಆರೋಪಿ ಗಳ ಮನೆ ಬಾಗಿಲಿಗೆ ಫೈಲ್ ಹಿಡಿದುಕೊಂಡು ಹೋಗು ತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಅಮಾಯಕರು ಹಣ ಕಳೆದುಕೊಂಡು ಮೋಸ ಹೋಗುವುದನ್ನು ತಪ್ಪಿಸಲು ದೂರು ನೀಡಿದ್ದೇನೆ ಎಂದರು.

ವಾಮಮಾರ್ಗದಲ್ಲಿ ಕೆಲಸ ಪಡೆದುಕೊಳ್ಳುವುದು ಸರಿಯಲ್ಲ ಎಂದು ಅರಿತು ಮೊದಲು ನಾವು ಆರೋಪಿ ಗಳು ನೀಡಿದ್ದ ಆಫರ್ ಅನ್ನು ನಿರಾಕರಿಸಿದ್ದೆವು. ಆದರೂ ನಮ್ಮ ಮನೆ ವಿಳಾಸ ಪಡೆದು ಬಂದು ಮ್ಯಾನೇಜ್ ಮೆಂಟ್ ಕೋಟಾದಡಿ ಕೆಲಸ ಕೊಡುತ್ತಿರುವುದರಿಂದ ಯಾವುದೇ ತಪ್ಪಾಗುವುದಿಲ್ಲ ಎಂದು ನಮ್ಮನ್ನು ನಂಬಿಸಿ ದರು. ಹಣವಿಲ್ಲ ಎಂದು ಹೇಳಿದರೆ ಸಾಲ ಮಾಡಿ ನಾವೇ ಹಣ ನೀಡುತ್ತೇವೆ. ನೀವು ತಿಂಗಳಿಗೆ ಸರಿಯಾಗಿ ಬಡ್ಡಿಕಟ್ಟಿಕೊಂಡು ಹೋಗಿ ಎಂಬ ಸಲಹೆ ನೀಡುತ್ತಾರೆ. ನಮಗೆ ತಿಳಿದು ಬಂದಿರುವ ಮಾಹಿತಿಯಂತೆ 25ಕ್ಕೂ ಹೆಚ್ಚು ಮಂದಿ ಹಣ ನೀಡಿದ್ದಾರೆ. ಮರ್ಯಾದೆಗೆ ಅಂಜಿ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ವಿಷಾದಿ ಸಿದರು. ಸುದ್ದಿಗೋಷ್ಠಿಯಲ್ಲಿ ವಕೀಲ ಹರೀಶ್‍ಗೌಡ, ಮಹೇಶ್, ಕಾಂತರಾಜು, ಚಿದಂಬರ್ ಇದ್ದರು.

Translate »