ನಿಯಮಾವಳಿ ಗಾಳಿಗೆ ತೂರಿ ಎಂಪಿಎಡ್ ಕೋರ್ಸ್ ನಡೆಸುತ್ತಿರುವ ಸಂಸ್ಥೆ ವಿರುದ್ಧ ಪ್ರತಿಭಟನೆ
ಮೈಸೂರು

ನಿಯಮಾವಳಿ ಗಾಳಿಗೆ ತೂರಿ ಎಂಪಿಎಡ್ ಕೋರ್ಸ್ ನಡೆಸುತ್ತಿರುವ ಸಂಸ್ಥೆ ವಿರುದ್ಧ ಪ್ರತಿಭಟನೆ

May 3, 2019

ಮೈಸೂರು: ಎಜುಕೇ ಷನ್ ಟ್ರಸ್ಟ್‍ವೊಂದು ನಿಯಮಗಳನ್ನು ಗಾಳಿಗೆ ತೂರಿ ಎಂಪಿಎಡ್ (ದೈಹಿಕ ಶಿಕ್ಷಣ) ಕೋರ್ಸ್ ನಡೆಸುತ್ತಿದೆ ಎಂದು ಆರೋ ಪಿಸಿ ಮೈಸೂರು ವಿಶ್ವವಿದ್ಯಾನಿಲಯದ ಎಂಪಿಎಡ್ ಹಾಗೂ ಬಿಪಿಎಡ್ ವಿದ್ಯಾರ್ಥಿ ಗಳು ಗುರುವಾರ ಪ್ರತಿಭಟನೆ ನಡೆಸಿದರು.

ಮೈಸೂರು ವಿವಿಯ ಕ್ರಾಫರ್ಡ್ ಭವ ನದ ಎದುರು ಜಮಾಯಿಸಿದ ಪ್ರತಿಭಟ ನಾಕಾರರು, ಮಂಡ್ಯ ಜಿಲ್ಲೆಯ ಪಾಂಡವ ಪುರದ ಎಜುಕೇಷನ್ ಟ್ರಸ್ಟ್‍ವೊಂದು ವಿಶ್ವ ವಿದ್ಯಾನಿಲಯದ ನಿಯಮ ಉಲ್ಲಂಘಿಸಿ ಎಂಪಿಎಡ್ ಕೋರ್ಸ್ ನಡೆಸುತ್ತಿದೆ ಎಂದು ಸದರಿ ಟ್ರಸ್ಟ್ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಟ್ರಸ್ಟ್ ಎಂಪಿಎಡ್ ಕೋರ್ಸ್ ಅನ್ನು ನಿಯಮಬಾಹಿರವಾಗಿ ನಡೆಸುವ ಮೂಲಕ ಕೋರ್ಸ್‍ನ ಘನತೆಯನ್ನೇ ಹಾಳು ಮಾಡಿದೆ. ವಯೋಮಿತಿ ಮೀರಿದವರಿಗೆ ಪ್ರವೇಶ ನೀಡಿ ರುವುದು ಮಾತ್ರವಲ್ಲದೆ, ಈಗಾಗಲೇ ಸೇವೆ ಸಲ್ಲಿಸುತ್ತಿರುವವರಿಗೆ ಪ್ರವೇಶ ಕೋಟಾ ಇಲ್ಲದಿದ್ದರೂ ಪ್ರವೇಶ ನೀಡಿದ್ದಾರೆ. ಯುಜಿಸಿ ರಾಜ್ಯದ ಎಲ್ಲಾ ವಿವಿಗಳಲ್ಲಿ ಎಂಪಿಎಡ್ ಸಮ್ಮರ್ ಕೋರ್ಸ್ ನಿಷೇಧಿಸಿರುವುದು ಈ ಸಂಸ್ಥೆಗೆ ವರದಾನವಾಗಿ ಪರಿಣಮಿ ಸಿದೆ ಎಂದು ಕಿಡಿಕಾರಿದರು.
ಇಲ್ಲಿ ಎಂಪಿಎಡ್ ಪ್ರವೇಶ ಪಡೆದಿರುವ ವರು ವಿವಿಧ ಶಾಲಾ-ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ರಜೆ ದಿನಗಳಲ್ಲಿ ತರಗತಿ ನಡೆಸುತ್ತಿದ್ದಾರೆ. ಇದರಿಂದ ಅತ್ಯಂತ ಪ್ರಾಯೋಗಿಕ ಆಧಾರಿತ ಎಂಪಿಎಡ್ ಕೋರ್ಸ್ ಮೌಲ್ಯವನ್ನೇ ಕಳೆದುಕೊಳ್ಳಲಿದೆ. ಅಲ್ಲದೆ, ಇದರಿಂದ ಮೈಸೂರು ವಿವಿ ವ್ಯಾಪ್ತಿಯ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಹಾಗೂ ರಾಜ್ಯದ ಇನ್ನಿ ತರ ವಿವಿಗಳ ವ್ಯಾಪ್ತಿಯಲ್ಲಿ ನಿತ್ಯ ತರಗತಿಗಳಿಗೆ ತೆರಳಿ ವ್ಯಾಸಂಗ ಮಾಡು ತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿ ದರು. ರೆಗ್ಯುಲರ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿರುವ ಈ ಕಾಲೇಜನ್ನು ನಿಷೇ ಧಿಸಿ, ಮೈಸೂರು ವಿವಿ ನೀಡಿರುವ ಸಂಯೋ ಜನೆ ವಾಪಸ್ ಪಡೆಯಬೇಕು ಎಂದು ಆಗ್ರ ಹಿಸಿದರು. ಎಂಪಿಎಡ್ ವಿದ್ಯಾರ್ಥಿಗಳಾದ ಅಮರೇಗೌಡ, ಎನ್.ಆನಂದ್, ಹೆಚ್.ಕೆ. ಅರ್ಪಿತಾ, ಎಂ.ಅಶೋಕ, ಜೆ.ಎಸ್.ಅಶ್ವಿನಿ, ಸಿ.ಜೆ.ದರ್ಶನ್, ಡಿ.ಎಂ.ಅನುಷಾ ಇತ ರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »