ವಿಶ್ವ ಕಾರ್ಮಿಕ ದಿನ: ಮೈಸೂರಲ್ಲಿ ಕೆಂಬಾವುಟಗಳ ಬೃಹತ್ ಮೆರವಣಿಗೆ
ಮೈಸೂರು

ವಿಶ್ವ ಕಾರ್ಮಿಕ ದಿನ: ಮೈಸೂರಲ್ಲಿ ಕೆಂಬಾವುಟಗಳ ಬೃಹತ್ ಮೆರವಣಿಗೆ

May 3, 2019

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬುಧ ವಾರ ವಿವಿಧ ಸಂಘಟನೆಗಳು ಪ್ರತ್ಯೇಕ ವಾಗಿ ವಿಶ್ವ ಕಾರ್ಮಿಕರ ದಿನ ಆಚರಿಸಿದವು.

ಆಲ್ ಇಂಡಿಯಾ ಟ್ರೇಡ್ ಯೂನಿಯನ್ (ಎಐಟಿಯುಸಿ), ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್(ಸಿಐಟಿಯು), ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್(ಎಐಯುಟಿಯುಸಿ), ಬಿಎಸ್‍ಎನ್‍ಎಲ್ ಯೂನಿಯನ್, ಕರ್ನಾ ಟಕ ಸರ್ಕಲ್, ಬ್ಯಾಂಕ್ ಇನ್ಷೂರೆನ್ಸ್, ಬ್ಯಾಂಕ್ ಉದ್ಯೋಗಿಗಳ ಸಂಘಟನೆ, ಅಂಚೆ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಹಾಗೂ ಮೇ ದಿನಾಚರಣೆ ಸಮಿತಿ ಸಹಯೋಗದಲ್ಲಿ ಮೈಸೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ಮೆರ ವಣಿಗೆಯಲ್ಲಿ ನೂರಾರು ಕಾರ್ಮಿಕರು ಕೆಂಪು ಬಾವುಟಗಳನ್ನು ಹಿಡಿದು, ಕೆಂಪು ಟೋಪಿ ಧರಿಸಿ, ಬಂಡವಾಳಶಾಹಿ ವಿರುದ್ಧ ಘೋಷಣೆ ಕೂಗಿದರು. ಪುರಭವನ ಆವ ರಣದಿಂದ ಆರಂಭವಾದ ಮೆರವಣಿಗೆ ನಗರದ ವಿವಿಧೆಡೆ ಸಂಚರಿಸಿ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಮುಕ್ತಾಯವಾಯಿತು. ಬಹಿರಂಗ ಸಮಾ ವೇಶದಲ್ಲಿ ಕಾರ್ಮಿಕರ ಹಕ್ಕೊತ್ತಾಯ ಮಂಡಿಸಲಾಯಿತು.

ಶೇ.92 ಕಾರ್ಮಿಕರಿಗೆ ವಂಚನೆ: ಸರ್ಕಾ ರವೇ ಶೇ.92ರಷ್ಟು ಕಾರ್ಮಿಕರಿಗೆ ವಂಚನೆ ಮಾಡುತ್ತಿದೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ಶೇಷಾದ್ರಿ ಆರೋಪಿಸಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ವಿಶ್ವ ಕಾರ್ಮಿಕರ ದಿನಾ ಚರಣೆ ಅಂಗವಾಗಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಬಹಿರಂಗ ಸಮಾ ವೇಶದಲ್ಲಿ ಮಾತನಾಡಿದ ಅವರು, ಮೇ ದಿನ ಆರಂಭವಾಗಿ 133 ವರ್ಷಗಳೇ ಕಳೆ ದಿವೆ. ಅಂದಿನಿಂದಲೂ ಪ್ರತಿಭಟನೆ, ಮುಷ್ಕರ, ಧರಣಿ ನಡೆಸುತ್ತಾ ಬಂದಿದ್ದೇವೆ. ಕಳೆದ 4 ವರ್ಷಗಳಲ್ಲಿ ರಾಷ್ಟ್ರ ಮಟ್ಟದ 18 ಬೃಹತ್ ಪ್ರತಿಭಟನೆ ನಡೆಸಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ದೇಶದಲ್ಲಿ ರೈತರ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಕಾರ್ಮಿಕರ ಸಮಸ್ಯೆ ದಿನಕ್ಕೊಂದು ಹೊಸ ರೂಪ ಪಡೆದುಕೊಳ್ಳುತ್ತಿದೆ. ಖಾಯಂ ಉದ್ಯೋಗ ತೆಗೆದು, ತಾತ್ಕಾಲಿಕ ಉದ್ಯೋ ಗಕ್ಕೆ ಪರಿವರ್ತಿಸಲಾಗುತ್ತಿದೆ. ಅಲ್ಲದೆ ಸರ್ಕಾರ ಟ್ರೇಡ್ ಯೂನಿಯನ್ ಇರ ಬಾರದು ಎಂಬ ಧೋರಣೆ ತಾಳಿರುವುದು ಆತಂಕಕಾರಿ ಸಂಗತಿ. ಬಂಡವಾಳ ಶಾಹಿಗಳ ಪರವಾಗಿ ಸರ್ಕಾರ ಕಾಯಿದೆ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಶೇ.92ರಷ್ಟು ಕಾರ್ಮಿಕ ರಿಗೆ ಕನಿಷ್ಠ ಕೂಲಿ ನೀಡದೇ ವಂಚಿಸ ಲಾಗುತ್ತಿದೆ ಎಂದು ಆರೋಪಿಸಿದರು.

ಮೇ ದಿನಾಚರಣೆ ಸಮಿತಿ ಮುಖಂಡ ಎನ್.ಕೆ.ಬಾಲಾಜಿರಾವ್, ಅಂಗನವಾಡಿ ನೌಕರರ ಸಂಘದ ಮುಖಂಡ ಜಗನ್ನಾಥ, ಎಐಯುಟಿಯುಸಿ ಮುಖಂಡ ಯಶೋ ಧರ, ಸಿಐಟಿಯು ತಾಲೂಕು ಘಟಕದ ಅಧ್ಯಕ್ಷ ಅಣ್ಣಪ್ಪ, ಕಾರ್ಮಿಕ ಮುಖಂಡ ಚಂದ್ರಶೇಖರ ಮೇಟಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ಕೂಲಿ ಕಾರ್ಮಿಕರಿಗೆ ಸನ್ಮಾನ: ಕಾರ್ಮಿ ಕರ ದಿನಾಚರಣೆ ಪ್ರಯುಕ್ತ ನಗರ ಕಾಂಗ್ರೆಸ್ ಪ್ರಚಾರ ಸಮಿತಿಯು ರೈಲು ನಿಲ್ದಾಣದ ಕೂಲಿ ಕಾರ್ಮಿಕರಿಗೆ ಸನ್ಮಾನ ಕಾರ್ಯ ಕ್ರಮ ಹಮ್ಮಿಕೊಂಡಿತ್ತು. ರೈಲು ನಿಲ್ದಾಣ ದಲ್ಲಿ ಕೂಲಿ ಮಾಡುವವರಿಗೆ ಶಾಲು, ಹಾರ ಹಾಕಿ ಸನ್ಮಾನಿಸಲಾಯಿತು. ಸಿಹಿತಿಂಡಿ ವಿತ ರಿಸಿ ಕಾರ್ಮಿಕರ ದಿನಾಚರಣೆ ಆಚರಿಸಿದರು. ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಎಂ.ಕೆ. ಅಶೋಕ್, ಪ್ರಚಾರ ಸಮಿತಿ ಉಪ ಸಂಯೋಜಕ ಎಸ್.ದಿವಾಕರ್ ಇದ್ದರು.

Translate »