ತರಾತುರಿಯಲ್ಲಿ ಚಾಮುಲ್ ಪ್ರತ್ಯೇಕಗೊಳಿಸುವ ಪ್ರಕ್ರಿಯೆ ಖಂಡಿಸಿ ನೌಕರರ ಪ್ರತಿಭಟನೆ
ಮೈಸೂರು

ತರಾತುರಿಯಲ್ಲಿ ಚಾಮುಲ್ ಪ್ರತ್ಯೇಕಗೊಳಿಸುವ ಪ್ರಕ್ರಿಯೆ ಖಂಡಿಸಿ ನೌಕರರ ಪ್ರತಿಭಟನೆ

May 3, 2019

ಮೈಸೂರು: ಚಾಮರಾಜನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟವೇ (ಚಾಮುಲ್) ತನ್ನ ಸಿಬ್ಬಂದಿ ವೇತನ ಹಾಗೂ ಅವರ ಇನ್ನಿತರ ಸೌಲಭ್ಯಗಳನ್ನು ನಿರ್ವಹಣೆ ಮಾಡಬೇಕೆಂದು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದು, ಇದರಿಂದ ನೌಕರರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ನಿಯಮಿತ ನೌಕರರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ದಿಂದ (ಮೈಮುಲ್) ಚಾಮುಲ್ ವಿಭಜೀಕರಣ ಹಾಗೂ ಸಿಬ್ಬಂದಿ ಹಂಚಿಕೆ ಪೂರ್ಣವಾಗಿಲ್ಲ. ಹೀಗಿದ್ದರೂ ಚಾಮುಲ್ ಅನ್ನು ಸಂಪೂರ್ಣವಾಗಿ ಪ್ರತ್ಯೇಕಿಸಲು ಮುಂದಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಚಾಮರಾಜನಗರದ ಕುದೇರು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಚಾಮುಲ್ ಡೈರಿಯಲ್ಲಿ ಇನ್ನು ಕಾಮ ಗಾರಿ ಬಾಕಿ ಇದೆ. ಚಾಮುಲ್ ಪೂರ್ಣ ಪ್ರಮಾಣದಲ್ಲಿ ಪ್ರಾರಂಭ ವಾಗುವವರೆಗೆ ಮೈಮುಲ್ ಅದರ ಎಲ್ಲಾ ಲಾಭ ಮತ್ತು ನಷ್ಟಗಳನ್ನು ನೋಡಿಕೊಳ್ಳಬೇಕೆಂಬ ಕರಾರು ಆಗಿದ್ದರೂ ಇದೀಗ ಚಾಮುಲ್ ಅನ್ನು ಪ್ರತ್ಯೇಕಿಸಲು ಹೊರಟಿದ್ದು, ಇದರಿಂದ ಚಾಮುಲ್ ಸಿಬ್ಬಂದಿ ಮಾತ್ರವಲ್ಲದೆ, ಡೈರಿಗೆ ಹಾಲು ನೀಡುವ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಕಿಡಿಕಾರಿದರು.

ಇದೇ ಏ.1ರಿಂದ ಚಾಮುಲ್ ಸ್ವತಂತ್ರವಾಗಿ ಕಾರ್ಯನಿರ್ವ ಹಿಸಲು ಮೈಮುಲ್ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿ ದ್ದಾರೆ. ಆ ಮೂಲಕ ಕೆಎಂಎಫ್, ಸಹಕಾರ ಇಲಾಖೆ ಹಾಗೂ ಮೈಮುಲ್ ನಡುವಿನ ಕರಾರು ಉಲ್ಲಂಘಿಸಿದ್ದಾರೆ. ಕರಾರಿನ ಪ್ರಕಾರ ಚಾಮುಲ್ ಪೂರ್ಣಕಾಲಿಕವಾಗಿ ಆರಂಭಗೊಳ್ಳುವ ತನಕ ಮೈಮುಲ್ ಎಲ್ಲಾ ಜವಾಬ್ದಾರಿ ನಿರ್ವಹಿಸಬೇಕು. ಆದರೆ ಚಾಮುಲ್ ಸ್ವಂತ ಖಾತೆ ತೆರೆದು ಸಿಬ್ಬಂದಿ ವೇತನ ಸೇರಿದಂತೆ ಇನ್ನಿತರ ಸೌಲಭ್ಯ ಗಳನ್ನು ನೋಡಿಕೊಳ್ಳಬೇಕೆಂದು ಮೈಮುಲ್ ವ್ಯವಸ್ಥಾಪಕ ನಿರ್ದೇ ಶಕರು ಆದೇಶಿಸಿದ್ದು, ಇದು ಜವಾಬ್ದಾರಿಯಿಂದ ನುಣುಚಿ ಕೊಳ್ಳುವ ಕ್ರಮವಾಗಿದೆ ಎಂದು ಖಂಡಿಸಿದರು. ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ನಿಯಮಿತ ನೌಕರರ ಸಂಘದ ಉಪಾ ಧ್ಯಕ್ಷ ಎಂ.ನಾಗಭೂಷಣ್, ಪ್ರಧಾನ ಕಾರ್ಯದರ್ಶಿ ಹೆಚ್.ಟಿ. ವೆಂಕಟೇಶ್, ಸಹ ಕಾರ್ಯದರ್ಶಿ ಹೆಚ್.ಪಿ.ಶ್ಯಾಮ್‍ಸುಂದರ್, ಖಜಾಂಚಿ ಸಿದ್ದಲಿಂಗೇಶ ಕೋರಿ, ನಿರ್ದೇಶಕರಾದ ಬಿ.ಚಂದ್ರ, ಕೆ.ಜಿ. ಮಹದೇವಸ್ವಾಮಿ. ಬಿ.ಈರೇಶ್ ಸೇರಿದಂತೆ ಹಲವು ಚಾಮುಲ್ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »